ಬ್ರೇಕಿಂಗ್ ನ್ಯೂಸ್
22-10-20 11:53 am Headline Karnataka News Network ಕರ್ನಾಟಕ
ಬೆಂಗಳೂರು, ಅಕ್ಟೋಬರ್ 22: ಚಿರಂಜೀವಿ ಸಂರ್ಜಾ ಪತ್ನಿ, ನಟಿ ಮೇಘನಾ ರಾಜ್ ಅವರಿಗೆ ಹೆರಿಗೆಯಾಗಿದ್ದು, ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಇದರಿಂದಾಗಿ ಸರ್ಜಾ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ನಿಶ್ಚಿತಾರ್ಥದ ದಿನವೇ ಮಗುವಿಗೆ ಜನ್ಮ ನೀಡಿರುವುದು ಇನ್ನೂ ವಿಶೇಷವಾಗಿದೆ.
ಜೂನಿಯರ್ ಚಿರು ಕುರಿತು ಅಕ್ಟೋಬರ್ 16ರಂದು ಧ್ರುವ ಸರ್ಜಾ ವಿಡಿಯೋ ಮಾಡುವ ವೆಲ್ ಕಮ್ ಹೇಳಿದ್ದರು. ಅವರ ನಿರೀಕ್ಷೆಯಂತೆ ಚಿರಂಜೀವಿ ಸರ್ಜಾ ಪತ್ನಿ ಮೇಘನಾ ರಾಜ್ ಗಂಡು ಮಗುವಿಗೆ ಜನ್ಮ ನೀಡಿದ್ದು, ಈ ಮೂಲಕ ಜೂನಿಯರ್ ಚಿರು ಆಗಮಿಸಿದಂತಾಗಿದೆ. ಇನ್ನೂ ವಿಶೇಷ ಎಂಬಂತೆ ಚಿರು, ಮೇಘನಾ ನಿಶ್ಚಿತಾರ್ಥದ ದಿನವೇ ಮರಿ ಚಿರು ಆಗಮನ ಸರ್ಜಾ ಕುಟುಂಬಸ್ಥರಲ್ಲಿ ತುಂಬಾ ಸಂತಸವನ್ನುಂಟು ಮಾಡಿದೆ. ಕುಟುಂಬ ಎಲ್ಲ ಸದಸ್ಯರು ಸಂಭ್ರಮಿಸುತ್ತಿದ್ದಾರೆ.
ಚಿರಂಜೀವಿ ಸರ್ಜಾ ಜೂನ್ 7 ರಂದು ಹೃದಯಾಘಾತವಾಗಿ ವಿಧಿವಶರಾಗಿದ್ದಾರೆ. ಅವರು ಸಾವನ್ನಪ್ಪಿದ ದಿನವೇ ಮೆಘನಾ ರಾಜ್ ಸರ್ಜಾ ಗರ್ಭಿಣಿಯಾಗಿರುವ ಕುರಿತ ಸುದ್ದಿ ಹೊರ ಬಿದ್ದಿತ್ತು. ಅದಾದ ಬಳಿಕ ಅವರು ಮನೆಯಲ್ಲೇ ಕಾಲ ಕಳೆಯುವ ಮೂಲಕ ಕಾಳಜಿ ವಹಿಸಿದ್ದರು. ಈ ವೇಳೆ ಸ್ಯಾಂಡಲ್‍ವುಡ್‍ನ ಹಲವು ನಟ, ನಟಿಯರು ಗಣ್ಯರು ಹಾಗೂ ಸ್ನೇಹಿತರು ಮೇಘನಾ ಅವರನ್ನು ಭೇಟಿ ನೀಡಿ ಆರೋಗ್ಯ ವಿಚಾರಿಸಿ ಧೈರ್ಯ ತುಂಬಿದ್ದರು. ಇದೀಗ ಮೇಘನಾ ಅವರಿಗೆ ಮಗು ಹುಟ್ಟಿರುವುದರಿಂದ ಇಡೀ ಸ್ಯಾಂಡಲ್‍ವುಡ್‍ನಲ್ಲೇ ಸಂತಸ ಮನೆ ಮಾಡಿದೆ.


ಈ ಹಿಂದೆ ನಟ ಧ್ರುವ ಸರ್ಜಾ ವಿಡಿಯೋ ಮೂಲಕ ಈ ಬಗ್ಗೆ ಸುಳಿವು ನೀಡಿದ್ದರು. ಜೂನಿಯರ್ ಚಿರು ಆಗಮನದ ಕುರಿತು ತಿಳಿಸಿ, ವಿಡಿಯೋದಲ್ಲಿ ಸರ್ಜಾ ಕುಟುಂಬದ ವಿವಿಧ ಹಿರಿಯರು ಹಾಗೂ ಗಣ್ಯರನ್ನು ಸಹ ತೋರಿಸಲಾಗಿತ್ತು. ಹ್ಯಾಪಿ ವೆಲ್ ಕಮ್ ಚಿರು ಎಂದು ಅರ್ಜುನ್ ಸರ್ಜಾ ಸಹ ಸ್ವಾಗತಿಸಿದ್ದರು. ಈ ವೀಡಿಯೋ ಕುರಿತು ಸಾಕಷ್ಟು ಚರ್ಚೆ ಸಹ ನಡೆದಿತ್ತು.
ಅಕ್ಟೋಬರ್ 17 ಚಿರು ಹುಟ್ಟುಬ್ಬದ ದಿನವಾಗಿದ್ದು, ಇದೇ ದಿನ ಮೇಘನಾ ಜೂನಿಯರ್ ಚಿರುಗೆ ಜನ್ಮ ನೀಡಲಿದ್ದಾರಾ ಎಂಬ ಸುದ್ದಿ ಧ್ರುವ ಹಂಚಿಕೊಂಡ ವಿಡಿಯೋ ಬಳಿಕ ಹರಿದಾಡಿತ್ತು. ವಿಡಿಯೋ ಪೋಸ್ಟ್ ಮಾಡಿ ಸಾಲುಗಳನ್ನು ಬರೆದಿದ್ದ ಧ್ರುವ, ಹ್ಯಾಪಿ ಬರ್ತ್ ಡೇ ಚಿರು ಎಂದು ಹಾರ್ಟ್ ಸಿಂಬಲ್ ಹಾಕಿದ್ದರು. ಮೈ ಲವ್ ಫಾರ್ ಎವರ್, ಜೂನಿಯರ್ ಚಿರು ಕಮಿಂಗ್ ಸೂನ್ ಎಂದು ಬರೆದು ತೋಳುಗಳ ಎಮೋಜಿ ಹಾಕಿದ್ದರು. ಈ ಪೋಸ್ಟ್ ನ್ನು ಸರ್ಜಾ ಕುಟುಂಬದ ಬಹುತೇಕರಿಗೆ ಟ್ಯಾಗ್ ಮಾಡಲಾಗಿತ್ತು. ಕೊನೆಗೆ ಜೈ ಹನುಮಾನ್ ಎಂದಿದ್ದರು.
08-10-26 08:00 pm
HK News Staffer
B.Y. Vijayendra: ಸ್ಟಿಂಗ್, ಡಿಂಗ್ ಆಪರೇಷನ್ ಮಾ...
08-10-26 04:38 pm
ಜನಸಾಮಾನ್ಯರು ಅಪಘಾತದಲ್ಲಿ ಸತ್ತರೆ 5 ಲಕ್ಷ ಕೊಡಕ್ಕಾಗ...
07-10-26 10:45 pm
HD Kumaraswamy, DK Shivakumar: ಡಿಕೆಶಿ ಸಿಎಂ ಆಗ...
07-10-26 09:16 pm
ಬೆಂಗಳೂರು ನಗರದಲ್ಲಿ ಐದು ಕಮಿಷನರೇಟ್ ; ವಿಭಜನೆಗೆ ಸಚ...
06-10-26 10:46 pm
12-10-26 05:22 pm
HK News Staffer
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
ರಿಯಾದ್ ಏರ್ಪೋರ್ಟ್ ಮೇಲೆ ಹೌತಿಗಳಿಂದ ಬಾಂಬ್ ದಾಳಿ ;...
11-10-26 02:34 pm
Elon Musk , Ambani, Modi: ಭಾರತದ ಆತ್ಮೀಯ ಪ್ರಧಾನ...
10-10-26 10:31 pm
12-10-26 10:01 pm
HK News Staffer
St Agnes College: ದಸರಾ ಸಂಭ್ರಮಕ್ಕೆ ಪರೀಕ್ಷೆ ಅಡ್...
12-10-26 11:30 am
Mangalore Dasara 2026: ಮಂಗಳೂರು, ಉಚ್ಚಿಲ ದಸರಾ ಉ...
11-10-26 06:35 pm
Someshwar Beach, Mangalore: ಸೋಮೇಶ್ವರದಲ್ಲಿ ಸಮು...
11-10-26 05:37 pm
Mahesh Shetty Thimarodi, Sowjanya Case: ಸೌಜನ್...
10-10-26 09:27 pm
12-10-26 10:36 pm
HK News Desk
Manglore Crime: ಅನೈತಿಕ ಸಂಬಂಧ ಶಂಕೆ ; ಪತ್ನಿಯನ್ನ...
12-10-26 04:12 pm
ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ನಿರಂತರ ಅತ್ಯ...
12-10-26 03:56 pm
Kochi accident: ಮಿನಿ ಕೂಪರ್ ಅಟ್ಟಹಾಸಕ್ಕೆ ಮಂಗಳೂರ...
12-10-26 10:06 am
Cyber Fraud, Mangalore Doctor: ಮಾಡೆಲಿಂಗ್, ಗೋಲ...
10-10-26 02:27 pm