ಬ್ರೇಕಿಂಗ್ ನ್ಯೂಸ್
31-10-20 04:30 pm Bangalore Correspondent ಕರ್ನಾಟಕ
ಬೆಂಗಳೂರು, ಅಕ್ಟೋಬರ್ 31: ಕೇರಳದ ಮಾಜಿ ಗೃಹ ಸಚಿವ, ಸಿಪಿಎಂ ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಮಗ ಬಿನೀಶ್ ಕೊಡಿಯೇರಿ ಬೆಂಗಳೂರಿನ ಡ್ರಗ್ ಪ್ರಕರಣದಲ್ಲಿ ಬಂಧಿಸಲ್ಪಟ್ಟಿದ್ದಾನೆ. ಡ್ರಗ್ಸ್ ಜಾಲದಲ್ಲಿ ರೇವ್ ಪಾರ್ಟಿಗಳನ್ನು ನಡೆಸಲು ಹಣ ಪೂರೈಸುತ್ತಿದ್ದುದೇ ಬಿನೀಶ್ ಎಂದು ವಿಚಾರಣೆಯಲ್ಲಿ ಬೆಳಕಿಗೆ ಬರುತ್ತಿದ್ದಂತೆ ಇಡಿ ಅಧಿಕಾರಿಗಳು ಬಿನೀಶ್ ನನ್ನು ನಾಲ್ಕು ದಿನಗಳ ಕಾಲ ಕಸ್ಟಡಿಗೆ ಪಡೆದಿದ್ದಾರೆ.
ಬೆಂಗಳೂರಿನ ಡ್ರಗ್ಸ್ ಪ್ರಕರಣದಲ್ಲಿ ಅನೂಪ್ ಮೊಹಮ್ಮದ್ ಎಂಬಾತನನ್ನು ಎನ್ ಸಿಬಿ ಅಧಿಕಾರಿಗಳು ಕಳೆದ ಆಗಸ್ಟ್ ನಲ್ಲಿ ಬಂಧಿಸಿದ್ದರು. ಆಬಳಿಕ ಜೈಲಿನಲ್ಲಿದ್ದ ಅನೂಪ್ ನನ್ನು ಇತ್ತೀಚೆಗೆ ಇಡಿ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಅನೂಪ್ ಬೆಂಗಳೂರಿನಲ್ಲಿ ಬೇನಾಮಿ ಹೆಸರಲ್ಲಿ ವಿವಿಧ ಬ್ಯಾಂಕುಗಳಲ್ಲಿ ಖಾತೆಗಳನ್ನು ಹೊಂದಿರುವುದನ್ನು ಪತ್ತೆ ಮಾಡಿದ್ದ ಅಧಿಕಾರಿಗಳು, ಅದಕ್ಕೆ ಲಕ್ಷಾಂತರ ರೂಪಾಯಿ ಹಣ ವರ್ಗಾವಣೆ ಆಗುತ್ತಿದ್ದ ವಿಚಾರವನ್ನು ಪತ್ತೆ ಮಾಡಿದ್ದಾರೆ. ಅನೂಪ್ ವಿಚಾರಣೆ ವೇಳೆ, ಬಿನೀಶ್ ತನ್ನ ಬೇನಾಮಿ ಖಾತೆಗಳಿಗೆ ಹಣ ವರ್ಗಾಯಿಸುತ್ತಿದ್ದುದನ್ನು ಬಾಯ್ಬಿಟ್ಟಿದ್ದಾನೆ.
ಈ ನಡುವೆ, ಅಕ್ಟೋಬರ್ ಮೊದಲ ವಾರದಲ್ಲಿ ಬಿನೀಶ್ ನನ್ನು ಇಡಿ ಅಧಿಕಾರಿಗಳು ವಿಚಾರಣೆಗೆ ಕರೆದಿದ್ದರು. ಆದರೆ ವಿಚಾರಣೆ ವೇಳೆ, ಬೆಂಗಳೂರಿನಲ್ಲಿ ಹೊಟೇಲ್ ಆರಂಭಿಸಿದ್ದು ಅದಕ್ಕೆ ಹೂಡಿಕೆ ಮಾಡುವ ಸಲುವಾಗಿ ಅನೂಪ್ ಗೆ ಹಣ ನೀಡುತ್ತಿದ್ದೆ ಎಂದು ಹೇಳಿದ್ದ.
ಆದರೆ, ಅನೂಪ್ ಮೊಹಮ್ಮದ್ ರೇವ್ ಪಾರ್ಟಿಗಳಿಗೆ ಲಕ್ಷಾಂತರ ರೂಪಾಯಿ ಹಣ ಹೂಡಿಕೆ ಮಾಡುತ್ತಿದ್ದುದು ಮತ್ತು ಡ್ರಗ್ ಜಾಲದಲ್ಲಿ ಇರುವುದು ಬಯಲಾಗಿತ್ತು. ಈ ಹಿನ್ನೆಲೆಯಲ್ಲಿ ಬಿನೀಶ್ ನನ್ನು ಎರಡು ದಿನಗಳ ಹಿಂದೆ ಮತ್ತೆ ಇಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಸುದೀರ್ಘ ವಿಚಾರಣೆಯಲ್ಲಿ ಬಿನೀಶ್ ಡ್ರಗ್ ವಹಿವಾಟಿನಲ್ಲಿ ತೊಡಗಿರುವುದನ್ನು ಅಧಿಕಾರಿಗಳು ಪತ್ತೆ ಮಾಡಿದ್ದು ಈಗ ಕಂಬಿ ಎಣಿಸುವಂತೆ ಮಾಡಿದ್ದಾರೆ.
ಬಿನೀಶ್ ಕೊಡಿಯೇರಿ ಬಂಧನ ಹಿನ್ನೆಲೆಯಲ್ಲಿ ಕೇರಳದಲ್ಲಿ ಪ್ರತಿಪಕ್ಷ ಕಾಂಗ್ರೆಸ್ ಮತ್ತು ಬಿಜೆಪಿ, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರಾಜಿನಾಮೆ ನೀಡಲು ಒತ್ತಾಯಿಸಿವೆ. ಗೋಲ್ಡ್ ಸ್ಮಗ್ಲಿಂಗ್ ಮತ್ತು ಡ್ರಗ್ ದಂಧೆಯಲ್ಲಿ ಸಿಪಿಎಂ ಪಕ್ಷದ ಪ್ರಭಾವಿಗಳು ಇರುವುದು ಇಡೀ ಮಲಯಾಳಿಗಳನ್ನು ತಲೆತಗ್ಗಿಸುವಂತೆ ಮಾಡಿದೆ. ನೀವು ಅಧಿಕಾರ ನಡೆಸುವ ನೈತಿಕತೆ ಕಳೆದುಕೊಂಡಿದ್ದೀರಿ ಎಂದು ಕಾಂಗ್ರೆಸ್ ಮುಖಂಡ ರಮೇಶ್ ಚೆನ್ನಿತ್ತಲ ಹರಿಹಾಯ್ದಿದ್ದಾರೆ. ಇದೇ ವೇಳೆ, ಬಿಜೆಪಿ ರಾಜ್ಯಾಧ್ಯಕ್ಷ ಸುರೇಂದ್ರನ್, ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ಸಿಪಿಎಂ ಪಕ್ಷದ ಇಬ್ಬರು ಸಚಿವರು ಇದ್ದಾರೆಂದು ಬಾಂಬ್ ಸಿಡಿಸಿದ್ದಾರೆ. ಅಲ್ಲದೆ, ಕಮ್ಯುನಿಸ್ಟರು ತಮ್ಮ ತತ್ವ ಸಿದ್ಧಾಂತವನ್ನು ಗಾಳಿಗೆ ತೂರಿ ಅಕ್ರಮದಲ್ಲಿ ತೊಡಗಿದ್ದಾರೆಂದು ಹೇಳಿದ್ದಾರೆ.
ಅಂದಹಾಗೆ, ಕೊಡಿಯೇರಿ ಬಾಲಕೃಷ್ಣನ್ ಮಗ ಬಿನೀಶ್ ಮೊದಲ ಬಾರಿಗೆ ಅರೆಸ್ಟ್ ಆಗುವುದಲ್ಲ. ಈಗಾಗ್ಲೇ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿಯೂ ಕೇರಳದ ಇಡ ಅಧಿಕಾರಿಗಳು ಬಿನೀಶ್ ಪಾತ್ರದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. 2014ರಲ್ಲಿ ನಕಲಿ ಪಾಸ್ ಪೋರ್ಟ್ ಜಾಲದಲ್ಲಿ ಸಿಕ್ಕಿಬಿದ್ದು ಆತನ ವಿರುದ್ಧ ಪ್ರಕರಣ ದಾಖಲಾಗಿತ್ತು. ಕೊಡಿಯೇರಿ ಗೃಹ ಸಚಿವರಾಗಿದ್ದ ವೇಳೆ ಬಿನೀಶ್ ವಿರುದ್ಧ ಆರು ಕ್ರಿಮಿನಲ್ ಪ್ರಕರಣಗಳಿದ್ದವು. ತಂದೆ ಗೃಹ ಸಚಿವರಾದ ವೇಳೆ ಪ್ರಭಾವ ಬೀರಿ ಎಲ್ಲ ಕೇಸುಗಳನ್ನು ವಜಾಗೊಳಿಸುವಂತೆ ಮಾಡಿದ್ದ.
The Enforcement Directorate (ED) Thursday arrested Bineesh Kodiyeri, son of Kerala CPI(M) secretary Kodiyeri Balakrishnan, in connection with alleged financial transactions he had with a suspect arrested by the NCB for peddling drugs in Bengaluru.
23-02-25 06:38 pm
Bangalore Correspondent
Telangana Model, Pramod Muthalik, CM Siddaram...
21-02-25 10:47 pm
Rohini Sindhuri, Roopa moudgil, latest news:...
21-02-25 10:12 pm
Santosh Lad, Modi, Nitin Gadkari: ಬಿಜೆಪಿ ಅಧಿಕ...
21-02-25 04:36 pm
Bidar accident, Prayagraj, five killed; ಬೀದರ್...
21-02-25 02:00 pm
23-02-25 11:22 pm
HK News Desk
ಗಂಗಾ ನದಿಗಿದೆ ಸ್ವಯಂ ಶುದ್ಧೀಕರಣದ ಶಕ್ತಿ ; ಕೋಟ್ಯಂತ...
23-02-25 09:52 pm
ದುಬೈನಲ್ಲಿ ಕ್ರಿಮಿನಲ್ ಇನ್ವೆಸ್ಟಿಗೇಶನ್ ಅಧಿಕಾರಿಗಳ...
22-02-25 09:48 pm
ದುಬೈ ಉದ್ಯಮಿ ಬಿ.ಆರ್ ಶೆಟ್ಟಿಗೆ ದುಬೈ ಕೋರ್ಟಿನಿಂದ ಮ...
22-02-25 07:51 pm
Kerala school teacher suicide, catholic Churc...
22-02-25 03:53 pm
23-02-25 03:20 pm
Mangalore Correspondent
Rani Abbakka, Mamata Ballal, Mangalore: ಐನೂರು...
23-02-25 01:12 pm
Siddaramaiah, Priyank Kharge Mangalore, D K S...
22-02-25 05:21 pm
Singari Beedi Robbery, IPS, crime: ಸಿಂಗಾರಿ ಬೀ...
21-02-25 08:22 pm
Thumbay Group, Fergana College, Uzbekistan: ಉ...
21-02-25 07:54 pm
23-02-25 03:42 pm
HK News Desk
Visa fraud, Bangalore crime, Arrest: ವಿದೇಶಿ ವ...
22-02-25 10:36 pm
Ankola Car Robbery, Rajendra Pawar, Gold Smug...
20-02-25 01:22 pm
Mangalore, Puttur, Cheating, paras traders: ಲ...
19-02-25 09:26 pm
Mangalore CCB police, 119 kg ganja, Crime: ಮೀ...
18-02-25 07:19 pm