ಬ್ರೇಕಿಂಗ್ ನ್ಯೂಸ್
01-11-20 12:20 pm Headline Karnataka ಕರ್ನಾಟಕ
ಬೆಂಗಳೂರು, ನವೆಂಬರ್ 1: ಟ್ರಾಫಿಕ್ ಪೊಲೀಸರು ಹೆಚ್ಚೆಂದರೆ ಎಷ್ಟು ದಂಡ ಹಾಕಬಹುದು. ಸಾವಿರ, ಎರಡು ಸಾವಿರ.. ಅತಿ ಹೆಚ್ಚು ಅಂದ್ರೆ ಐದು ಸಾವಿರ ರೂಪಾಯಿ ಫೈನ್ ಹಾಕಬಹುದು.. ಆದರೆ, ಇಲ್ಲೊಬ್ಬ ಬೈಕ್ ಸವಾರನಿಗೆ 42 ಸಾವಿರ ರೂ. ಫೈನ್ ಹಾಕಿದ್ದಾರೆ. ಇದನ್ನು ಕೇಳಿದ ಸವಾರ ತನ್ನ ಬೈಕನ್ನೇ ಬಿಟ್ಟು ಹೋಗಿದ್ದಾನೆ.
ಮಡಿವಾಳ ಪೊಲೀಸ್ ಠಾಣೆ ಬಳಿಯಲ್ಲಿ ಈ ಘಟನೆ ನಡೆದಿದ್ದು ಸವಾರನನ್ನು ಅರುಣ್ ಕುಮಾರ್ ಎಂದು ಪೊಲೀಸರು ಗುರುತಿಸಿದ್ದಾರೆ. ಹೆಲ್ಮೆಟ್ ಹಾಕಿಲ್ಲ ಮತ್ತು ನಂಬರ್ ಪ್ಲೇಟ್ ಕಟ್ ಆಗಿದೆ ಎಂದು ದ್ವಿಚಕ್ರ ಸವಾರನನ್ನು ಟ್ರಾಫಿಕ್ ಪೊಲೀಸರು ನಿಲ್ಲಿಸಿ ಚೆಕ್ ಮಾಡಿದ್ದಾರೆ. ಪೊಲೀಸರು ತಪಾಸಣೆ ಮಾಡಿದ ವೇಳೆ ಎರಡು ವರ್ಷಗಳಲ್ಲಿ ಆತ 70 ಕ್ಕೂ ಹೆಚ್ಚು ಟ್ರಾಫಿಕ್ ಉಲ್ಲಂಘನೆ ಮಾಡಿರುವುದು ಕಂಡುಬಂದಿದೆ. ಹೀಗಾಗಿ 42,500 ರೂಪಾಯಿ ದಂಡ ಕಟ್ಟುವಂತೆ ಹೇಳಿದ್ದಾರೆ. ಇದನ್ನು ಕೇಳಿದ ಸವಾರ ಶಾಕ್ ಆಗಿದ್ದಾನೆ.
ಎರಡು ವರ್ಷಗಳಿಂದ ಕೇಸ್ ಪೆಂಡಿಂಗ್ ಇದೆ. ಸಿಗ್ನಲ್ ಜಂಪ್, ತ್ರಿಬಲ್ ರೈಡಿಂಗ್ ಹೀಗೆ ಟ್ರಾಫಿಕ್ ನಿಯಮ ಉಲ್ಲಂಘನೆಯ ಹಲವು ಕೇಸುಗಳಿವೆ. ಹೀಗೆ ಎಲ್ಲ ಕೇಸುಗಳ ದಂಡ ಮೊತ್ತವನ್ನು ಹೇಳಿದ್ದೇವೆ. ಆದರೆ, ಆತ ತನ್ನ ಟು ವೀಲರ್ ವಾಹನದ ಮೌಲ್ಯವೇ 30 ಸಾವಿರ ಮೀರಲ್ಲ. ಇನ್ನು 42 ಸಾವಿರ ಯಾಕೆ ಕಟ್ಟಬೇಕು ಎಂದು ಪ್ರಶ್ನೆ ಮಾಡಿದ್ದಾನೆ. ದಂಡ ಕಟ್ಟುವ ಬದಲು ಬೈಕನ್ನೇ ಬಿಟ್ಟು ಹೋಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ದಂಡ ಕಟ್ಟದ ಹಿನ್ನೆಲೆಯಲ್ಲಿ ಪೊಲೀಸರು ದ್ವಿಚಕ್ರ ವಾಹನವನ್ನು ಸೀಜ್ ಮಾಡಿದ್ದಾರೆ.
A biker who was flagged down by the Madivala traffic police left the two-wheeler with them after coming to know that there were 77 violation cases against the vehicle and he has to pay Rs 42,500 penalty to get vehicle back.
08-10-26 08:00 pm
HK News Staffer
B.Y. Vijayendra: ಸ್ಟಿಂಗ್, ಡಿಂಗ್ ಆಪರೇಷನ್ ಮಾ...
08-10-26 04:38 pm
ಜನಸಾಮಾನ್ಯರು ಅಪಘಾತದಲ್ಲಿ ಸತ್ತರೆ 5 ಲಕ್ಷ ಕೊಡಕ್ಕಾಗ...
07-10-26 10:45 pm
HD Kumaraswamy, DK Shivakumar: ಡಿಕೆಶಿ ಸಿಎಂ ಆಗ...
07-10-26 09:16 pm
ಬೆಂಗಳೂರು ನಗರದಲ್ಲಿ ಐದು ಕಮಿಷನರೇಟ್ ; ವಿಭಜನೆಗೆ ಸಚ...
06-10-26 10:46 pm
12-10-26 05:22 pm
HK News Staffer
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
ರಿಯಾದ್ ಏರ್ಪೋರ್ಟ್ ಮೇಲೆ ಹೌತಿಗಳಿಂದ ಬಾಂಬ್ ದಾಳಿ ;...
11-10-26 02:34 pm
Elon Musk , Ambani, Modi: ಭಾರತದ ಆತ್ಮೀಯ ಪ್ರಧಾನ...
10-10-26 10:31 pm
12-10-26 10:01 pm
HK News Staffer
St Agnes College: ದಸರಾ ಸಂಭ್ರಮಕ್ಕೆ ಪರೀಕ್ಷೆ ಅಡ್...
12-10-26 11:30 am
Mangalore Dasara 2026: ಮಂಗಳೂರು, ಉಚ್ಚಿಲ ದಸರಾ ಉ...
11-10-26 06:35 pm
Someshwar Beach, Mangalore: ಸೋಮೇಶ್ವರದಲ್ಲಿ ಸಮು...
11-10-26 05:37 pm
Mahesh Shetty Thimarodi, Sowjanya Case: ಸೌಜನ್...
10-10-26 09:27 pm
12-10-26 10:36 pm
HK News Desk
Manglore Crime: ಅನೈತಿಕ ಸಂಬಂಧ ಶಂಕೆ ; ಪತ್ನಿಯನ್ನ...
12-10-26 04:12 pm
ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ನಿರಂತರ ಅತ್ಯ...
12-10-26 03:56 pm
Kochi accident: ಮಿನಿ ಕೂಪರ್ ಅಟ್ಟಹಾಸಕ್ಕೆ ಮಂಗಳೂರ...
12-10-26 10:06 am
Cyber Fraud, Mangalore Doctor: ಮಾಡೆಲಿಂಗ್, ಗೋಲ...
10-10-26 02:27 pm