ಬ್ರೇಕಿಂಗ್ ನ್ಯೂಸ್
17-07-23 10:32 pm Bangalore Correspondent ಕರ್ನಾಟಕ
ಬೆಂಗಳೂರು, ಜುಲೈ 17: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ವಿಪಕ್ಷಗಳೆಲ್ಲ ಒಟ್ಟು ಸೇರುತ್ತಿದ್ದರೆ, ಇತ್ತ ಬಿಜೆಪಿಯೂ ತನ್ನ ಮಿತ್ರ ಪಕ್ಷಗಳನ್ನು ಕರೆದು ಮಾತುಕತೆಗೆ ಮುಂದಾಗಿವೆ. ದೆಹಲಿಯಲ್ಲಿ ಜುಲೈ 18ರಂದು ಸಭೆ ಕರೆದಿದ್ದು, ಎನ್ ಡಿಎ ಮಿತ್ರ ಪಕ್ಷಗಳ ನಾಯಕರು ಜೊತೆ ಸೇರಲಿದ್ದಾರೆ.
ಶಿವಸೇನೆಯ ಏಕನಾಥ ಶಿಂಧೆ ಬಣ, ಜೊತೆಗೆ ಅಜಿತ್ ಪವಾರ್ ನೇತೃತ್ವದ ಎನ್ ಸಿಪಿ ನಾಯಕರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇದಲ್ಲದೆ, ಬಿಜೆಪಿ ಜೊತೆ ಮುನಿಸಿಕೊಂಡಿರುವ ಪಂಜಾಬಿನ ಅಕಾಲಿದಳ, ತಮಿಳುನಾಡಿನ ಎಐಎಡಿಎಂಕೆ ನಾಯಕರನ್ನೂ ಸಭೆಗೆ ಆಹ್ವಾನಿಸಿದ್ದಾರೆ. ಆಂಧ್ರ ಪ್ರದೇಶದ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿಯನ್ನೂ ಸಭೆಗೆ ಕರೆಯಲಾಗಿದೆ. ಆದರೆ, ಸಭೆಯಲ್ಲಿ ನಾಯ್ಡು ಪಾಲ್ಗೊಳ್ಳುವುದು ಗ್ಯಾರಂಟಿ ಇಲ್ಲ ಎನ್ನಲಾಗುತ್ತಿದೆ. ಜಗನ್ ರೆಡ್ಡಿಯ ವೈಎಸ್ಸಾರ್ ಕಾಂಗ್ರೆಸ್, ಬಿಜೆಪಿ ನಾಯಕರ ಜೊತೆ ಸಖ್ಯ ಹೊಂದಿದ್ದರೂ ಎನ್ ಡಿಎ ಕೂಟದ ಭಾಗವಾಗಿಲ್ಲ.
2019ರಲ್ಲಿ ಬಿಜೆಪಿ ಜೊತೆ ಸೇರಿ ಎನ್ಡಿಎ ಮಿತ್ರ ಪಕ್ಷಗಳು ಚುನಾವಣೆ ಎದುರಿಸಿದ್ದರೂ, ಅಧಿಕಾರಕ್ಕೆ ಬಂದ ಬಳಿಕ ತಮ್ಮನ್ನು ದೂರ ಇಟ್ಟಿರುವುದು ಅವುಗಳನ್ನು ಸಿಟ್ಟಾಗಿಸಿದೆ. ಹಾಗಾಗಿ, ಹೆಚ್ಚಿನ ಪಕ್ಷಗಳ ನಾಯಕರು ಬಿಜೆಪಿ ಜೊತೆಗಿನ ಮೈತ್ರಿಯಲ್ಲಿ ಜೊತೆಗಿದ್ದರೂ ಮಾನಸಿಕವಾಗಿ ಒಮ್ಮತ ಹೊಂದಿಲ್ಲ. ವಿಶೇಷ ಅಂದ್ರೆ, ಎನ್ ಡಿಎ ಮಿತ್ರ ಪಕ್ಷಗಳ ಸಭೆಯಲ್ಲಿ ಈ ಬಾರಿ ಹೊಸತಾಗಿ ಕರ್ನಾಟಕದ ಜೆಡಿಎಸ್ ನಾಯಕರು ಪಾಲ್ಗೊಳ್ಳಲಿದ್ದಾರೆಯೇ ಎನ್ನುವ ಕುತೂಹಲ ಉಂಟಾಗಿದೆ. ಆದರೆ ಬೆಂಗಳೂರಿನಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿರುವ ಜೆಡಿಎಸ್ ವರಿಷ್ಠ, ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ, ನಮಗಿನ್ನೂ ಯಾವುದೇ ಆಹ್ವಾನ ಬಂದಿಲ್ಲ. ಆಹ್ವಾನ ಬಂದರೆ, ಚಿಂತನೆ ನಡೆಸುತ್ತೇವೆ ಎಂದಿದ್ದಾರೆ. ಇದಲ್ಲದೆ, ಮಹಾಘಟಬಂಧನ್ ಸೇರಿರುವ ನಾಯಕರು ಜೆಡಿಎಸ್ ಮುಳುಗಿ ಹೋಗಿದೆ ಎನ್ನುವ ಭ್ರಮೆಯಲ್ಲಿದ್ದಾರೆ. ನೋಡೋಣ, ಏನಾಗುತ್ತೆ ಅಂತ ಹೇಳಿ ಕುತೂಹಲ ಹುಟ್ಟಿಸಿದ್ದಾರೆ.
ಎನ್ಡಿಎ ಒಕ್ಕೂಟ ಸೇರುತ್ತಾ ಜೆಡಿಎಸ್ ?
ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷವಾಗಿರುವ ಜೆಡಿಎಸ್ ಅನ್ನು ಎನ್ ಡಿಎ ಮಿತ್ರ ಕೂಟದಲ್ಲಿ ಸೇರಿಸಲು ಬಿಜೆಪಿ ಪ್ಲಾನ್ ಹಾಕ್ಕೊಂಡಿದೆ. ಇದಕ್ಕಾಗಿ ದೊಡ್ಡ ಮಟ್ಟದ ಕೊಡು –ಕೊಳ್ಳುವಿಕೆಯ ಮಾತುಕತೆ ನಡೆದಿದೆ ಎನ್ನಲಾಗುತ್ತಿದ್ದು ಇದೇ ಕಾರಣಕ್ಕೆ ಬಿಜೆಪಿ ರಾಜ್ಯದಲ್ಲಿ ಶಾಸಕಾಂಗ ಪಕ್ಷದ ನಾಯಕನ ಸ್ಥಾನವನ್ನೂ ತುಂಬದೆ ಬಾಕಿ ಇರಿಸಿಕೊಂಡಿದೆ ಎನ್ನುವ ಮಾತುಗಳಿವೆ. ಜೆಡಿಎಸ್ ಅನ್ನು ಬಿಜೆಪಿ ಜೊತೆಗೆ ವಿಲೀನ ಮಾಡಿದರೆ, ಕರ್ನಾಟಕದಲ್ಲಿ ಪ್ರತಿಪಕ್ಷ ನಾಯಕ ಸ್ಥಾನ ನೀಡಲಾಗುತ್ತೆ ಅನ್ನುವ ಆಫರನ್ನು ಅಮಿತ್ ಷಾ, ಕುಮಾರಸ್ವಾಮಿ ಮುಂದಿಟ್ಟಿದ್ದಾರೆ. ಆದರೆ, ಪಕ್ಷವನ್ನು ಯಾವುದೇ ಕಾರಣಕ್ಕೂ ವಿಲೀನ ಮಾಡುವುದಕ್ಕೆ ಕುಮಾರಸ್ವಾಮಿ ಒಪ್ಪಿಗೆ ನೀಡಿಲ್ಲ. ಬದಲಿಗೆ, ಎನ್ಡಿಎ ಕೂಟಕ್ಕೆ ಪರೋಕ್ಷ ಒಪ್ಪಿಗೆ ನೀಡಿದ್ದಾರೆ ಎನ್ನಲಾಗುತ್ತಿದೆ. ಆದರೆ ಒಕ್ಕೂಟ ಸೇರಿದರೂ, ರಾಜ್ಯದಲ್ಲಿ ಏಳು ಸಂಸದ ಸ್ಥಾನ ಬಿಟ್ಟು ಕೊಡಲು ಎಚ್ಡಿಕೆ ಕೇಳಿಕೊಂಡಿದ್ದಾರೆ. ಅದಕ್ಕೆ ಬಿಜೆಪಿ ನಾಯಕರು ಸಹಮತ ತೋರಿಲ್ಲ. ಇದಲ್ಲದೆ, ಕೇಂದ್ರದಲ್ಲಿ ಸಚಿವ ಸ್ಥಾನ ಕೇಳಿದ್ದು ಅದಕ್ಕೆಲ್ಲ ಅಮಿತ್ ಷಾ ಓಕೆ ಅಂದಿಲ್ಲ ಅನ್ನುವ ಮಾತುಗಳಿವೆ.
ಜೆಡಿಎಸ್ ವರಿಷ್ಠ ದೇವೇಗೌಡರು ಬಿಜೆಪಿ ಜೊತೆಗೆ ಸೇರುವುದಕ್ಕೆ ಹಿಂದಿನಿಂದಲೂ ವಿರೋಧ ವ್ಯಕ್ತಪಡಿಸುತ್ತ ಬಂದಿದ್ದರು. ಆದರೆ, ಕಾಂಗ್ರೆಸ್ ಈ ಬಾರಿ ಪೂರ್ಣ ಬಹುಮತ ಪಡೆದಿರುವುದರಿಂದ ಜೆಡಿಎಸ್ ಪಾಲಿಗೆ ಮಾಡು ಇಲ್ಲವೇ ಮಡಿ ಎನ್ನುವಂಥ ಸ್ಥಿತಿ ಎದುರಾಗಿದೆ. ಐದು ವರ್ಷಗಳ ಕಾಲ ಅಧಿಕಾರ ಇಲ್ಲದೆ ಉಳಿದಲ್ಲಿ ಪಕ್ಷದೊಳಗಿನ ಶಾಸಕರೇ ಬಿಟ್ಟು ಹೋಗುವ ಆತಂಕದಲ್ಲಿ ನಾಯಕರಿದ್ದಾರೆ. ಹೀಗಾಗಿ, ಇತ್ತ ಬಿಜೆಪಿಯಾದರೂ ಆದೀತು ಎನ್ನುವ ನೆಲೆಯಲ್ಲಿ ಎನ್ಡಿಎ ಒಕ್ಕೂಟ ಸೇರುವ ಚಿಂತನೆಯಲ್ಲಿ ಕುಮಾರಸ್ವಾಮಿ ಇದ್ದಾರೆ. ಆದರೆ ಪಕ್ಷದಲ್ಲಿಯೇ ಜನತಾದಳ ಜಾತ್ಯತೀತ ಎಂದಿಟ್ಟುಕೊಂಡು ಹಿಂದುತ್ವ ಪ್ರತಿಪಾದಿಸುವ ಬಿಜೆಪಿ ಸೇರಿದರೆ, ಇದ್ದ ಮತಬ್ಯಾಂಕನ್ನೂ ಕಳಕೊಳ್ಳುವ ಸ್ಥಿತಿ ಬರಬಹುದಾ ಅನ್ನುವ ಅಳುಕೂ ಅವರಲ್ಲಿದೆ. ಈ ಕಾರಣದಿಂದ ತೆನೆ ಹೊತ್ತ ಪಕ್ಷದ ನಾಯಕರು ಒಂದೆಡೆ ಇರಿಸು ಮುರಿಸಿನಲ್ಲಿದ್ದರೆ, ಪಕ್ಷದ ಶಾಸಕರು ಏನಾಗುತ್ತೋ ಅನ್ನುವ ಆತಂಕದಲ್ಲಿದ್ದಾರೆ.
The BJP on Monday slammed the scheduled meeting of the opposition parties in Bengaluru calling it a "meeting of opportunists and power-hungry" leaders and said that such an alliance will not do any good for the country at present or in the future.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm