ಬ್ರೇಕಿಂಗ್ ನ್ಯೂಸ್
06-11-20 09:22 pm Headline Karnataka News Network ಕರ್ನಾಟಕ
ಬೆಂಗಳೂರು, ನವೆಂಬರ್ 6: ಮಸೀದಿಗಳಲ್ಲಿ ಮೈಕ್ ಬಳಸುವುದನ್ನು ತಡೆಯಲು ರಾಜ್ಯದ ಡಿಜಿಪಿ ಆದೇಶ ನೀಡಿದ್ದಾರೆಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ಅಲ್ಲದೆ, ಡಿಜಿಪಿ ಹೆಸರಲ್ಲಿ ಅಂಥ ಒಂದು ಜ್ಞಾಪನಾ ಪತ್ರವೂ ಜಾಲತಾಣದಲ್ಲಿ ಬಂದಿತ್ತು. ಆದರೆ, ಡಿಜಿಪಿ ಪ್ರವೀಣ್ ಸೂದ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಅಂಥ ಯಾವುದೇ ಆದೇಶ ಪತ್ರವನ್ನು ತನ್ನ ಕಚೇರಿಯಿಂದ ನೀಡಲಾಗಿಲ್ಲ ಎಂದು ಹೇಳಿದ್ದಾರೆ.
ಹಾಗಾದ್ರೆ ಡಿಜಿಪಿ ಕಚೇರಿಯಿಂದ ಎಲ್ಲ ಜಿಲ್ಲಾಡಳಿತಗಳಿಗೆ ಬರೆದಿದ್ದ ಪತ್ರ ಹೇಗೆ ಬಂತು ಎನ್ನುವುದರ ಬಗ್ಗೆ ಸಾರ್ವಜನಿಕರಲ್ಲಿ ಕುತೂಹಲ ಉಂಟಾಗಿದೆ. ಕೆಲವರ ಪ್ರಕಾರ, ಡಿಜಿಪಿ ಕಚೇರಿಗೆ ಬೆಂಗಳೂರಿನ ಹರ್ಷ ಮುತಾಲಿಕ್ ಎಂಬ ವಕೀಲ ಮಸೀದಿಗಳಲ್ಲಿ ಮೈಕ್ ನಿಷೇಧಿಸಬೇಕೆಂದು ಒತ್ತಾಯಿಸಿ ಮನವಿ ಸಲ್ಲಿಸಿದ್ದರು. ವಿವಿಧ ಕೋರ್ಟ್ ತೀರ್ಪುಗಳನ್ನು ಉಲ್ಲೇಖಿಸಿ, ರಾಜ್ಯಾದ್ಯಂತ ಮೈಕ್ ಬಳಸುವುದನ್ನು ನಿಷೇಧಿಸಲು ಎಲ್ಲ ಜಿಲ್ಲಾಡಳಿತಗಳಿಗೆ ಸೂಚನೆ ನೀಡಬೇಕೆಂದು ಮನವಿಯಲ್ಲಿ ಹೇಳಿದ್ದರು. ಅದರಂತೆ, ಈ ಮನವಿಯನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಡಿಜಿಪಿ ಕಚೇರಿಯಿಂದ ಫಾರ್ವರ್ಡ್ ಮಾಡಲಾಗಿತ್ತು ಎನ್ನಲಾಗುತ್ತಿದೆ. ಆದರೆ, ಹೀಗೆ ಮಾಡಲಾಗಿತ್ತೇ ಇಲ್ಲವೇ ಎನ್ನುವ ಬಗ್ಗೆ ದೃಢತೆ ಇಲ್ಲ.
ಡಿಜಿಪಿ ಕಚೇರಿಯದ್ದು ಎನ್ನಲಾಗುವ ಸೀಲ್ ಮತ್ತು ಸಹಿ ಇರುವ ಆದೇಶದ ಪ್ರತಿ ರಾಜ್ಯಾದ್ಯಂತ ಹರಿದಾಡಿತ್ತಲ್ಲದೆ, ಕೆಲವು ವೆಬ್ ಮಾಧ್ಯಮಗಳಲ್ಲಿ ಮಸೀದಿಯಲ್ಲಿ ಮೈಕ್ ನಿಷೇಧವೆಂದು ಸುದ್ದಿಗಳೂ ಬಂದಿದ್ದವು. ಆದರೆ, ಈ ವಿಚಾರ ರಾಜ್ಯದಲ್ಲಿ ಚರ್ಚೆಗೆ ಕಾರಣವಾಗುತ್ತಿದ್ದಂತೆ ಪೊಲೀಸ್ ಇಲಾಖೆಯಿಂದ ಇಂದು ಸ್ಪಷ್ಟನೆ ನೀಡಲಾಗಿದೆ. ಅಂಥಹ ಆದೇಶ ಪತ್ರವನ್ನು ಡಿಜಿಪಿ ಕಚೇರಿಯಿಂದ ನೀಡಲಾಗಿಲ್ಲ. ಪತ್ರ ಬಂದಿರುವ ಬಗ್ಗೆ ತನಿಖೆ ನಡೆಸುತ್ತೇವೆಂದು ಹೇಳಿಕೆ ನೀಡಲಾಗಿದೆ.
ಈ ಬಗ್ಗೆ ಕೊಡಗು ಪ್ರವಾಸದಲ್ಲಿದ್ದ ಗೃಹ ಸಚಿವರಲ್ಲಿ ಪ್ರಶ್ನೆ ಮಾಡಿದಾಗ, ಅಂಥದ್ದೇನೂ ನನಗೆ ಗೊತ್ತಿಲ್ಲ. ಬೆಂಗಳೂರಿಗೆ ಹೋದ ಬಳಿಕ ತಿಳಿದುಕೊಂದು ಮಾತಾಡುತ್ತೇನೆ ಎಂದಿದ್ದಾರೆ. ಹಾಗೊಂದ್ವೇಳೆ ಆದೇಶ ಬರುತ್ತಿದ್ದರೆ ರಾಜ್ಯದ ಗೃಹ ಸಚಿವರಿಗೆ ತಿಳಿಯದೇ ಇರಲಿಕ್ಕಿಲ್ಲ. ಇದೇನಿದ್ದರೂ ಮಸೀದಿ ಮೈಕ್ ನಿಷೇಧದ ಸುದ್ದಿಯಂತೂ ರಾಜ್ಯದಲ್ಲಿ ಭಾರೀ ಕುತೂಹಲಕ್ಕೀಡಾಗಿತ್ತು. ಹಾಗಾಗಿ, ಪತ್ರ ವೈರಲ್ ಆಗಿರುವ ವಿಚಾರದಲ್ಲಂತೂ ಪೊಲೀಸರು ತನಿಖೆ ನಡೆಸಿ ಸತ್ಯಾಂಶ ತಿಳಿಸಬೇಕಾಗಿದೆ.
ಅಲಹಾಬಾದ್ ಹೈಕೋರ್ಟ್ ಏನು ಹೇಳಿತ್ತು ?
ಕಳೆದ ಮೇ ತಿಂಗಳಲ್ಲಿ ಅಲಹಾಬಾದ್ ಹೈಕೋರ್ಟ್ ಒಂದು ತೀರ್ಪು ನೀಡಿತ್ತು. ಉತ್ತರ ಪ್ರದೇಶದ ಗಾಝೀಪುರ್ ಜಿಲ್ಲೆಯಲ್ಲಿ ಮಸೀದಿಗಳಲ್ಲಿ ಮೈಕ್ ಬಳಸದಂತೆ ಅಲ್ಲಿನ ಜಿಲ್ಲಾಡಳಿತ ಕೊರೊನಾ ಸಂದರ್ಭದಲ್ಲಿ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಬಿಎಸ್ಪಿ ಸಂಸದ ಅಫ್ಜಲ್ ಅನ್ಸಾರಿ ರಿಟ್ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಸ್ಥಳೀಯಾಡಳಿತದ ಲಿಖಿತ ಅನುಮತಿ ಇಲ್ಲದೆ ಮಸೀದಿ ಅಥವಾ ಯಾವುದೇ ಧಾರ್ಮಿಕ ಆಚರಣೆಗಳಲ್ಲಿ ಮೈಕ್ ಬಳಸುವಂತಿಲ್ಲ ಎಂದು ಅಭಿಪ್ರಾಯ ಪಟ್ಟಿತ್ತು. ಅಲ್ಲದೆ, ಇಸ್ಲಾಂನಲ್ಲಿ ಆಜಾನ್ ಕೂಗುವುದು ಸಂಪ್ರದಾಯ ಮತ್ತು ಆಂತರಿಕ ವಿಚಾರ. ಅದನ್ನು ಧ್ವನಿವರ್ಧಕ ಬಳಸಿ ಕೂಗಬೇಕೆಂದು ಇಸ್ಲಾಂ ಹೇಳುವುದಿಲ್ಲ. ಆರ್ಟಿಕಲ್ 25ರ ಪ್ರಕಾರ, ಯಾವುದೇ ವ್ಯಕ್ತಿಯ ಸ್ವಾತಂತ್ರ್ಯಕ್ಕೆ ಧಕ್ಕೆ ಬರದಂತೆ ಸಾರ್ವಜನಿಕವಾಗಿ ವರ್ತಿಸಬೇಕಾಗಿದೆ ಎಂದು ಹೇಳಿ ಅರ್ಜಿಯನ್ನು ವಜಾಗೊಳಿಸಿತ್ತು.
ಕಳೆದ ಜೂನ್ ತಿಂಗಳಲ್ಲಿ ಅಲಹಾಬಾದ್ ಹೈಕೋರ್ಟ್ ಅಭಿಪ್ರಾಯ ಉಲ್ಲೇಖಿಸಿ, ಗುಜರಾತ್ ಹೈಕೋರ್ಟಿನಲ್ಲಿ ಪಿಐಎಲ್ ಅರ್ಜಿ ಸಲ್ಲಿಕೆಯಾಗಿದೆ. ಮಸೀದಿ ಆಜಾನ್ ಗಳಿಗೆ ಧ್ವನಿವರ್ಧಕ ಬಳಸುವುದರಿಂದ ಖಾಸಗಿತನಕ್ಕೆ ಧಕ್ಕೆಯಾಗುತ್ತದೆ, ಮೈಕ್ ಬಳಸುವುದಕ್ಕೆ ತಡೆ ಕೋರಬೇಕೆಂದು ವೈದ್ಯರೊಬ್ಬರು ಅರ್ಜಿ ಸಲ್ಲಿಸಿದ್ದರು. ಅದರ ವಿಚಾರಣೆ ಇನ್ನೂ ಪೂರ್ತಿಯಾಗಿಲ್ಲ.
State home minister Basavaraj Bommai and DGP confirm that no orders have been issued on Ban on the use of loudspeakers in Mosques by the letter addressed by Advocate Harsh Mutalik.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
11-05-25 11:02 pm
HK News Desk
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
ಜಮ್ಮು ಗಡಿಯಲ್ಲಿ ಪಾಕ್ ಶೆಲ್ ದಾಳಿ ; ಬಿಎಸ್ಎಫ್ ಯೋಧ,...
11-05-25 01:43 pm
India Pak War: ಪೆಟ್ಟು ತಿಂದರೂ ಬಿಡದ ಪಾಕ್ ನರಿಬುದ...
10-05-25 11:05 pm
11-05-25 05:01 pm
Mangalore Correspondent
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm