ಬ್ರೇಕಿಂಗ್ ನ್ಯೂಸ್
08-11-20 11:07 am Headline Karnataka News Network ಕರ್ನಾಟಕ
ಬೆಂಗಳೂರು, ನವೆಂಬರ್ 8: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ ರವಿ ವಿರುದ್ಧ ದಾಖಲಾಗಿದ್ದ ಅಕ್ರಮ ಆಸ್ತಿ ಗಳಿಕೆ ಪ್ರಕರಣದ ತನಿಖೆಯನ್ನು ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ಕ್ಕೆ ಉಲ್ಲೇಖಿಸಿದ್ದ ಹೊರತಾಗ್ಯೂ ಅದನ್ನು ಬದಿಗೊತ್ತಿ ಕೇಸನ್ನು ವಿಶೇಷ ನ್ಯಾಯಾಲಯಕ್ಕೆ ರಾಜ್ಯ ಹೈಕೋರ್ಟ್ ಹಿಂತಿರುಗಿಸಿದೆ.
ಅಲ್ಲದೆ, ಸಚಿವ ಸಿ ಟಿ ರವಿ ವಿರುದ್ಧ ಎ.ಸಿ ಕುಮಾರ್ ಎಂಬುವವರು ಸಲ್ಲಿಸಿದ್ದ ದೂರಿಗೆ ಪೂರಕವಾಗಿ ಆರೋಪಕ್ಕೆ ಸಂಬಂಧಪಟ್ಟು ಹೆಚ್ಚುವರಿ ಅಫಿಡವಿಟ್ಟು ಸಲ್ಲಿಸುವಂತೆ ಹೈಕೋರ್ಟ್ ಸೂಚನೆ ನೀಡಿದೆ. ಚಿಕ್ಕಮಗಳೂರು ನಿವಾಸಿಯಾಗಿರುವ ಎ.ಸಿ ಕುಮಾರ್ ಅವರು ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ದೂರು ನೀಡಿದ್ದರು. ಇದರಿಂದಾಗಿ ಎಸಿಬಿಗೂ ಈ ಬಗ್ಗೆ ಪ್ರತ್ಯೇಕ ದೂರು ಸಲ್ಲಿಸಲು ನ್ಯಾಯಾಲಯ ಅವಕಾಶ ನೀಡಿದೆ.
ಎ.ಸಿ ಕುಮಾರ್ ಅವರು, ಸಿ.ಟಿ ರವಿ ವಿರುದ್ಧ 2012ರಲ್ಲಿ ಖಾಸಗಿ ದೂರು ನೀಡಿ 2004ರಿಂದ 2010ರ ಮಧ್ಯೆ ಬಲ್ಲ ಮೂಲಗಳ ಆದಾಯದ ಹೊರತಾಗಿ ಅಕ್ರಮ ಆಸ್ತಿ ಗಳಿಸಿದ್ದಾರೆ ಎಂದು ಆರೋಪಿಸಿದ್ದರು. ಈ ಸಮಯದಲ್ಲಿ ಅವರ ಬಲ್ಲ ಆದಾಯದ ಮೂಲ 49 ಲಕ್ಷ ರೂಪಾಯಿ ಆಗಿದ್ದರೆ ಅವರ ಆಸ್ತಿ ಗಳಿಕೆ 3.18 ಕೋಟಿಯಷ್ಟಿದೆ. ಇಷ್ಟೊಂದು ಗಳಿಕೆ ಹೊಂದಲು ಹೇಗೆ ಸಾಧ್ಯ ಎಂದು ಎ ಸಿ ಕುಮಾರ್ ಪ್ರಶ್ನಿಸಿದ್ದರು.
ಈ ನಡುವೆ, 2015ರಲ್ಲಿ ಸುಪ್ರೀಂ ಕೋರ್ಟ್, ದೂರು ನೀಡಿದವರು ಕಡ್ಡಾಯವಾಗಿ ದೂರಿಗೆ ಪೂರಕವಾಗಿ ಅಫಿಡವಿಟ್ಟು ಸಲ್ಲಿಸಬೇಕೆಂದು ಆದೇಶ ನೀಡಿತ್ತು. ಈ ಆದೇಶ ಹಿನ್ನೆಲೆಯಲ್ಲಿ ಸಿಟಿ ರವಿ ಪರ ವಕೀಲರು, ದೂರು ನೀಡಿದವರು ಅದಕ್ಕೆ ಪೂರಕವಾಗಿ ಅಫಿಡವಿಟ್ಟು ಸಲ್ಲಿಸಿಲ್ಲ, ಹಾಗಾಗಿ ಇಡೀ ಪ್ರಕರಣವನ್ನು ಕೈಬಿಡಬೇಕೆಂದು ಹೈಕೋರ್ಟ್ ಮೊರೆ ಹೋಗಿದ್ದರು.
In a partial relief to BJP national general secretary C.T. Ravi, the High Court of Karnataka has set aside a 2016 special court order directing the Anti-Corruption Bureau (ACB) to probe a disproportionate assets allegation made against him in a private complaint.
08-10-26 08:00 pm
HK News Staffer
B.Y. Vijayendra: ಸ್ಟಿಂಗ್, ಡಿಂಗ್ ಆಪರೇಷನ್ ಮಾ...
08-10-26 04:38 pm
ಜನಸಾಮಾನ್ಯರು ಅಪಘಾತದಲ್ಲಿ ಸತ್ತರೆ 5 ಲಕ್ಷ ಕೊಡಕ್ಕಾಗ...
07-10-26 10:45 pm
HD Kumaraswamy, DK Shivakumar: ಡಿಕೆಶಿ ಸಿಎಂ ಆಗ...
07-10-26 09:16 pm
ಬೆಂಗಳೂರು ನಗರದಲ್ಲಿ ಐದು ಕಮಿಷನರೇಟ್ ; ವಿಭಜನೆಗೆ ಸಚ...
06-10-26 10:46 pm
12-10-26 05:22 pm
HK News Staffer
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
ರಿಯಾದ್ ಏರ್ಪೋರ್ಟ್ ಮೇಲೆ ಹೌತಿಗಳಿಂದ ಬಾಂಬ್ ದಾಳಿ ;...
11-10-26 02:34 pm
Elon Musk , Ambani, Modi: ಭಾರತದ ಆತ್ಮೀಯ ಪ್ರಧಾನ...
10-10-26 10:31 pm
12-10-26 10:01 pm
HK News Staffer
St Agnes College: ದಸರಾ ಸಂಭ್ರಮಕ್ಕೆ ಪರೀಕ್ಷೆ ಅಡ್...
12-10-26 11:30 am
Mangalore Dasara 2026: ಮಂಗಳೂರು, ಉಚ್ಚಿಲ ದಸರಾ ಉ...
11-10-26 06:35 pm
Someshwar Beach, Mangalore: ಸೋಮೇಶ್ವರದಲ್ಲಿ ಸಮು...
11-10-26 05:37 pm
Mahesh Shetty Thimarodi, Sowjanya Case: ಸೌಜನ್...
10-10-26 09:27 pm
12-10-26 10:36 pm
HK News Desk
Manglore Crime: ಅನೈತಿಕ ಸಂಬಂಧ ಶಂಕೆ ; ಪತ್ನಿಯನ್ನ...
12-10-26 04:12 pm
ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ನಿರಂತರ ಅತ್ಯ...
12-10-26 03:56 pm
Kochi accident: ಮಿನಿ ಕೂಪರ್ ಅಟ್ಟಹಾಸಕ್ಕೆ ಮಂಗಳೂರ...
12-10-26 10:06 am
Cyber Fraud, Mangalore Doctor: ಮಾಡೆಲಿಂಗ್, ಗೋಲ...
10-10-26 02:27 pm