D. V. Sadananda Gowda: ಕಾಂಗ್ರೆಸ್​ನವರು ಅಮಲಿನಲ್ಲಿದ್ದಾರೆ, ಗ್ಯಾರಂಟಿ ನೀಡಿ ನಾವು ಗೆದ್ದಿದ್ದು ಅಂತ ಅವ್ರಿಗೆ ಭ್ರಮೆ, ಹಣ ಲೂಟಿ ಮಾಡಿ ತೆಲಂಗಾಣದ ಚುನಾವಣೆಗೆ ಖರ್ಚು ಮಾಡ್ತಿದ್ದಾರೆ ;  ಸದಾನಂದಗೌಡ ಕಿಡಿ 

28-11-23 07:28 pm       Bangalore Correspondent   ಕರ್ನಾಟಕ

ರಾಜ್ಯದ ಕಾಂಗ್ರೆಸ್​ನವರು ಅಮಲಿನಲ್ಲಿದ್ದಾರೆ. ಗ್ಯಾರಂಟಿ ನೀಡಿ ನಾವು ಗೆದ್ದಿದ್ದು ಅಂತ ಭ್ರಮೆಯಲ್ಲಿದ್ದಾರೆ ಎಂದು ಸಂಸದ ಡಿ.ವಿ. ಸದಾನಂದಗೌಡ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರು, ನ 28: ರಾಜ್ಯದ ಕಾಂಗ್ರೆಸ್​ನವರು ಅಮಲಿನಲ್ಲಿದ್ದಾರೆ. ಗ್ಯಾರಂಟಿ ನೀಡಿ ನಾವು ಗೆದ್ದಿದ್ದು ಅಂತ ಭ್ರಮೆಯಲ್ಲಿದ್ದಾರೆ ಎಂದು ಸಂಸದ ಡಿ.ವಿ. ಸದಾನಂದಗೌಡ ವಾಗ್ದಾಳಿ ನಡೆಸಿದ್ದಾರೆ.

ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಬಿಜೆಪಿಯವರ ಆಂತರಿಕ ಸಮಸ್ಯೆ, ಮತ್ತಿತರ ಕಾರಣಗಳಿಂದ ಕಾಂಗ್ರೆಸ್ ರಾಜ್ಯದಲ್ಲಿ ಗೆದ್ದಿದೆ ಅಷ್ಟೇ. ಗ್ಯಾರಂಟಿಗಳನ್ನು ಕೊಡುತ್ತೇವೆಂದು ಹೇಳಿದ್ದ ಕಾಂಗ್ರೆಸ್, ಈಗ ಸಮರ್ಪಕವಾಗಿ ಜನರಿಗೆ ಪೂರೈಸುತ್ತಿಲ್ಲ ಎಂದು ಆರೋಪಿಸಿದರು.

ಕರ್ನಾಟಕ ಸರ್ಕಾರದ ಜಾಹೀರಾತುಗಳು ತೆಲಂಗಾಣದಲ್ಲಿ: ತೆಲಂಗಾಣದಲ್ಲಿ ಜಾಹೀರಾತು ಕೊಟ್ಟಿರುವ ರಾಜ್ಯ ಸರ್ಕಾರಕ್ಕೆ ಚುನಾವಣಾ ಆಯೋಗದ ನೋಟಿಸ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕರ್ನಾಟಕದ ಜಾಹೀರಾತುಗಳು ಎಲ್ಲಿರಬೇಕಿತ್ತೋ ಅಲ್ಲಿ ಇಲ್ಲ. ತೆಲಂಗಾಣದಲ್ಲಿ ಕಾಂಗ್ರೆಸ್​ನವ್ರು ತಮ್ಮ ಫ್ರಿಬೀಸ್​ಗಳ ಜಾಹೀರಾತು ಕೊಟ್ಟಿದ್ದಾರೆ. ಕಾಂಗ್ರೆಸ್ ರಾಜ್ಯದ ಜನರ ತೆರಿಗೆ ಹಣ ಪೋಲು ಮಾಡಿದೆ. ಹೀಗಾಗಿ ಚುನಾವಣಾ ಆಯೋಗ ರಾಜ್ಯ ಸರ್ಕಾರಕ್ಕೆ ನೋಟಿಸ್​ ಕೊಟ್ಟಿದೆ. ಆಯೋಗ ಖಂಡಿತ ಈ ಸರ್ಕಾರದ ವಿರುದ್ಧ ಕ್ರಮ ತೆಗೆದುಕೊಳ್ಳುತ್ತದೆ ಎಂದು ಡಿವಿಎಸ್​ ಹೇಳಿದರು.

ಫ್ರೀ ಬೀಸ್ ಜಾಹೀರಾತು:ತೆಲಂಗಾಣದಲ್ಲಿ ಫ್ರೀ ಬೀಸ್ ಜಾಹೀರಾತು ಹಾಕಿ, ಕರ್ನಾಟಕದ ಹಣ ದುರುಪಯೋಗ ಮಾಡುತ್ತಿರುವುದು ಕಂಡುಬಂದಿದೆ. ರಾಜ್ಯದ ಖಜಾನೆ ಬರ್ಬಾದ್ ಮಾಡಲು ಹೊರಟಿದ್ದಾರೆ. ರಾಜ್ಯದ ವಿಚಾರ ಜಾಹೀರಾತು ಮಾಡಬಾರದು ಅಂತಿಲ್ಲ. ಅದಕ್ಕೆ ಕಾಲ ಸನ್ನಿವೇಶ ಇದೆ. ಕರ್ನಾಟಕ ಕುಲಗೆಡಿಸಿರುವಂತೆ, ತೆಲಂಗಾಣ ರಾಜ್ಯ ಕುಲಗೆಡಿಸಲು ಹೊರಟಿದೆ. ಕರ್ನಾಟಕದ ಹಣ ಲೂಟಿ ಮಾಡಿ ಚುನಾವಣೆ ಮಾಡುವ ಕೆಲಸ‌ ಕಾಂಗ್ರೆಸ್ ಮಾಡುತ್ತಿದೆ. ಅಲ್ಲಿ ಖರ್ಚು ಮಾಡಿದ ಹಣ ಕಾಂಗ್ರೆಸ್ ನವರಿಗೆ ಎಲ್ಲಿಂದ ಬಂತು?. ಇದರ ಬಗ್ಗೆ ಕಾಂಗ್ರೆಸ್ ಸ್ಪಷ್ಟನೆ ಕೊಡಬೇಕಿದೆ. ಜನ ದುರುಪಯೋಗ ಮಾಡುವುದರ ವಿರುದ್ಧ ನಿಲ್ಲಬೇಕು. ಮುಂದಿನ ದಿನಗಳಲ್ಲಿ ಜನ ತೀರ್ಮಾನ ಮಾಡಬೇಕು ಎಂದರು.

D. V. Sadananda Gowda slams Congress in Bangalore over telagana elections.