Shivamogga lightening: ಶಿವಮೊಗ್ಗ ; ಸಿಡಿಲು ಬಡಿದು ಇಬ್ಬರು ಸಹೋದರರ ಸಾವು

29-11-23 12:10 pm       HK News Desk   ಕರ್ನಾಟಕ

ಭದ್ರಾವತಿ ತಾಲ್ಲೂಕಿನ ಹುಣಸೇಕಟ್ಟೆ ಜಂಕ್ಷನ್ ಬಳಿ ಸಿಡಿಲು ಬಡಿದು ಇಬ್ಬರು ಸಹೋದರರು ಮೃತಪಟ್ಟಿರುವ ದಾರುಣ ಘಟನೆ ಮಂಗಳವಾರ ರಾತ್ರಿ ನಡೆದಿದೆ.

ಶಿವಮೊಗ್ಗ, ನ 29: ಭದ್ರಾವತಿ ತಾಲ್ಲೂಕಿನ ಹುಣಸೇಕಟ್ಟೆ ಜಂಕ್ಷನ್ ಬಳಿ ಸಿಡಿಲು ಬಡಿದು ಇಬ್ಬರು ಸಹೋದರರು ಮೃತಪಟ್ಟಿರುವ ದಾರುಣ ಘಟನೆ ಮಂಗಳವಾರ ರಾತ್ರಿ ನಡೆದಿದೆ.

ಗೌಳಿಗರ ಕ್ಯಾಂಪ್ನ ವಿಠ್ಠಲ್ ಎಂಬುವರ ಪುತ್ರರಾದ ಬೀರು (32) ಹಾಗೂ ಸುರೇಶ್ (35) ಮೃತರು.

ಭತ್ತದ ಕಟಾವು ಮಾಡಿ ಗದ್ದೆಯಲ್ಲೆ ಬಿಟ್ಟಿದ್ದು ಮಳೆ ಆರಂಭವಾದ ಹಿನ್ನೆಲೆ ನೀರು ಬಸಿ ತೆಗೆಯಲು ಹೋದ ವೇಳೆ ಸಿಡಿಲು ಬಡಿದು ಮೃತಪಟ್ಟಿದ್ದಾರೆ.

Shivamogga lightening effect, two brothers killed on spot.