Rishab Shettys, Kantara, Silver Peacock Award: ಶಂಕರ್ ನಾಗ್ ಬಳಿಕ ಗೋಲ್ಡನ್ ಪಿಕಾಕ್ ಪ್ರಶಸ್ತಿ ಪಡೆದ 2ನೇ ಕನ್ನಡದ ನಟ ರಿಷಬ್ ಶೆಟ್ಟಿ ; 44 ವರ್ಷಗಳ ಬಳಿಕ ಕನ್ನಡ ನಟನಿಗೆ ಗೌರವ 

29-11-23 08:54 pm       Bangalore Correspondent   ಕರ್ನಾಟಕ

ಕನ್ನಡ ಚಿತ್ರರಂಗದಲ್ಲಿ ಭಾರೀ ಹೈ್ ಕ್ರಿಯೇಟ್ ಮಾಡಿದ್ದ ಕಾಂತಾರ ಚಿತ್ರದ ನಟನೆಗಾಗಿ ರಿಷಬ್ ಶೆಟ್ಟಿ ಪ್ರತಿಷ್ಠಿತ ಸಿಲ್ವರ್ ಪಿಕಾಕ್ ಪ್ರಶಸ್ತಿ ಪಡೆದಿದ್ದಾರೆ.

ಬೆಂಗಳೂರು, ನ.29: ಕನ್ನಡ ಚಿತ್ರರಂಗದಲ್ಲಿ ಭಾರೀ ಹೈ್ ಕ್ರಿಯೇಟ್ ಮಾಡಿದ್ದ ಕಾಂತಾರ ಚಿತ್ರದ ನಟನೆಗಾಗಿ ರಿಷಬ್ ಶೆಟ್ಟಿ ಪ್ರತಿಷ್ಠಿತ ಸಿಲ್ವರ್ ಪಿಕಾಕ್ ಪ್ರಶಸ್ತಿ ಪಡೆದಿದ್ದಾರೆ. 1978ರಲ್ಲಿ ಕರಾಟೆ ಕಿಂಗ್ ಪಾತ್ರ ಮಾಡಿದ್ದ ಖ್ಯಾತ ನಟ ಶಂಕರ್ ನಾಗ್ ತಮ್ಮ ನಟನೆಯ "ಒಂದಾನೊಂದು ಕಾಲದಲ್ಲಿ" ಚಿತ್ರಕ್ಕಾಗಿ ಸಿಲ್ವರ್ ಪಿಕಾಕ್ ಪ್ರಶಸ್ತಿ ಪಡೆದಿದ್ದರು. 

ಆನಂತರ ಈ ಪ್ರಶಸ್ತಿ ಪಡೆದ ಕನ್ನಡದ 2ನೇ ನಟ ಎಂಬ ಖ್ಯಾತಿಗೆ ರಿಷಬ್ ಶೆಟ್ಟಿ ಪಾತ್ರರಾಗಿದ್ದಾರೆ. 54ನೇ ಗೋವಾ ಅಂತಾರಾಷ್ಟ್ರೀಯ ಚಿತ್ರೋತ್ಸವ ದಲ್ಲಿ ರಿಷಬ್ ಶೆಟ್ಟಿ ಈ ಗೌರವಕ್ಕೆ ಪಾತ್ರರಾಗಿದ್ದು, ಪ್ರಶಸ್ತಿ ಪ್ರಮಾಣ ಪತ್ರ, ರಜತ ಮಯೂರ ಹಾಗೂ 15 ಲಕ್ಷ ರೂ. ನಗದನ್ನು ಒಳಗೊಂಡಿದೆ. ಗೋವಾ ಮುಖ್ಯಮಂತ್ರಿ ಡಾ.ಪ್ರಮೋದ ಸಾವಂತ್ ಅವರು ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. 

Indian filmmaker Rishab Shetty honored with special jury award for 'Kantara'  at IFFI 54 – Punekar News

ಪ್ರತಿಷ್ಠಿತ ಗೋಲ್ಡನ್ ಪೀಕಾಕ್ ಪ್ರಶಸ್ತಿಗೆ 12 ಅಂತಾರಾಷ್ಟ್ರೀಯ ಮತ್ತು 3 ಭಾರತೀಯ ಸಿನಿಮಾಗಳು ಪ್ರಬಲ ಸ್ಪರ್ಧೆ ನೀಡಿದ್ದವು. ಆದರೆ ಎಂಡ್ಲೆಸ್ ಬಾರ್ಡರ್ಸ್' ಪ್ರಶಸ್ತಿ ಗಿಟ್ಟಿಸಿಕೊಂಡಿದೆ. 'ಮೈಕೆಲ್ ಡಗ್ಲಾಸ್' ಚಿತ್ರ ಸತ್ಯಜಿತ್ ರೇ ಪ್ರಶಸ್ತಿಗೆ ಪಾತ್ರವಾಗಿದೆ.

ಕಳೆದ ವರ್ಷ ಗೋವಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಾಂತಾರ ಚಿತ್ರದ ಪ್ರಚಾರಕ್ಕಾಗಿ ಬಂದಿದ್ದೆವು. ಈ ಬಾರಿ ನಮ್ಮ ಸಿನಿಮಾ ಅಂತಾರಾಷ್ಟ್ರೀಯ ಸ್ಪರ್ಧಾ ವಿಭಾಗದಲ್ಲಿ ಸ್ಪರ್ಧಿಸಿ ತೀರ್ಪುಗಾರರ ವಿಶೇಷ ಪ್ರಶಸ್ತಿ ಗೆದ್ದಿದೆ. ಇದು ನಮ್ಮೆಲ್ಲ ತಂಡದ ಸದಸ್ಯರಿಗೆ ಸಂದ ಗೌರವ ಎಂದು ರಿಷಬ್ ಶೆಟ್ಟಿ ಸಂತಸ ವ್ಯಕ್ತಪಡಿಸಿದ್ದಾರೆ.

Hombale Films is undeniably one of the most prestigious productions in Indian cinema. The production house is serving the audiences with distinctive content, and in recent years they have treated the audiences to two of the biggest blockbusters, “KGF Chapter 2” and “Kantara” The film Kantara is undeniably the film that took the audiences on a divine ride through nature and God.