ಬ್ರೇಕಿಂಗ್ ನ್ಯೂಸ್
23-12-23 01:16 pm HK News Desk ಕರ್ನಾಟಕ
ಶಿವಮೊಗ್ಗ, ಡಿ 23: ಬಿಜೆಪಿ ಜೆಡಿಎಸ್ ಒಂದಾಗಿರೋದಕ್ಕೆ ಗಾಬರಿಯಾಗಿದೆ, ಭಯವಾಗಿದೆ. ಕಳೆದ ಬಾರಿ ಕಾಂಗ್ರೆಸ್ ಲೋಕಸಭೆಯಲ್ಲಿ ಒಂದು ಸ್ಥಾನ ಪಡೆದಿತ್ತು. ಈ ಬಾರಿ ಒಂದೇ ಒಂದು ಸ್ಥಾನ ಬರಲ್ಲ. ಹೀಗಾಗಿ ಹಿಜಾಬ್ ನಿಷೇಧಕ್ಕೆ ಕೈ ಹಾಕಿದ್ದಾರೆ. ರಾಜ್ಯದಲ್ಲಿ ಗಲಾಟೆ, ದೊಂಬಿ, ಕೊಲೆಗಳಾದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರಣ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಮ್ಮದ್ ಬಿನ್ ತುಘಲಕ್ ನನ್ನು ಹುಚ್ಚು ದೊರೆ ಎನ್ನುತ್ತಿದ್ದರು. ಸಿದ್ದರಾಮಯ್ಯ ಹುಚ್ಚು ದೊರೆ ಆಗಿದ್ದಾರೆ. ಕೋರ್ಟ್ ನಲ್ಲಿ ಹಿಜಾಬ್ ಬಗ್ಗೆ ಚರ್ಚೆ ಆಗುತ್ತಿದೆ. ಆದರೆ ಮುಸ್ಲಿಮರನ್ನು ತೃಪ್ತಿಪಡಿಸಲು ಇವರಿಗೆ ಕಾನೂನು, ಹೈಕೋರ್ಟ್, ಸಚಿವ ಸಂಪುಟ ಸದಸ್ಯರು ಲೆಕ್ಕಕ್ಕಿಲ್ಲ ಎಂದರು.
ಸರಕಾರಿ ಆದೇಶ ಆಗಿಲ್ಲ. ಬಾಯಲ್ಲಿ ಹೇಳಿ ಬಿಟ್ಟಿದ್ದಾರಂತೆ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಯಾವುದೂ ಬೇಡವೇ? ರಾಜ್ಯದಲ್ಲಿ ಹಿಂದೂ ಮುಸ್ಲಿಂ ಹೊಡೆದಾಟವಾಗಲಿ ಎಂಬುದು ಅವರ ಆಸೆ. ಉಡುಪಿಯಲ್ಲಿ ಹಬ್ಬಿದ ಈ ಕಿಚ್ಚು ಇಡಿ ರಾಜ್ಯಕ್ಕೆ ಹಬ್ಬಿತ್ತು. ನಂತರ ಇದು ನ್ಯಾಯಾಲಯದ ಮೆಟ್ಟಿಲೇರಿತ್ತು ನ್ಯಾಯಾಲಯ ಸಹ ರಾಜ್ಯ ಸರಕಾರ ತೀರ್ಪು ಸರಿ ಇದೆ ಎಂದು ತಿಳಿಸಿತ್ತು. ಸಿದ್ದರಾಮಯ್ಯ ಅವರಿಗೆ ಕೋರ್ಟ್ ಬಗ್ಗೆ ಗೌರವ ಇದೆಯಾ ಎಂದು ಪ್ರಶ್ನಿಸಿದರು
ಜಮೀರ್ ಅಹಮ್ಮದ್ ತೆಲಂಗಾಣದಲ್ಲಿ ಸ್ಪೀಕರ್ ಗೆ ಎಲ್ಲರೂ ತಲೆಬಾಗಬೇಕು ಎಂದು ಹೇಳುತ್ತಾರೆ. ರಾಜ್ಯದಲ್ಲಿ ಹಿಂದೂ ಮುಸ್ಲಿಮರು ಗೊಂದಲಕ್ಕೆ ಬೀಳಬೇಕು. ಮುಸ್ಲಿಂ ಓಟು ಕಾಂಗ್ರೆಸ್ ಗೆ ಬೀಳಬೇಕು ಎಂಬ ಒಂದೇ ಉದ್ದೇಶ ಅವರದ್ದು. ಬರಗಾಲ ಬಂದಿರುವ ಈ ಸಮಯದಲ್ಲಿ ಒಬ್ಬರಿಗೂ ಬೆಳೆ ಪರಿಹಾರ ಬಂದಿಲ್ಲ. ಆದರೆ 10 ಸಾವಿರ ಕೋಟಿ ಮುಸ್ಲಿಂರಿಗೆ ಕೊಡುತ್ತೇವೆ ಎನ್ನುತ್ತಾರೆ. ಮಹಮ್ಮದ್ ಬಿನ್ ತೊಘಲಕ್ ಸರಕಾರವನ್ನು ರಾಜ್ಯದ ಜನ ತೆಗೆದು ಹಾಕಲಿದ್ದಾರೆ. ಪಿಎಫ್ ಐ ಆಸೆ ಈಡೇರಿಸಲು ಕುತಂತ್ರ ರಾಜಕಾರಣಕ್ಕೆ ಸಿದ್ದರಾಮಯ್ಯ ಕೈ ಹಾಕಿದ್ದಾರೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಶಾಲೆಯಲ್ಲಿ ಸಮವಸ್ತ್ರವಿದೆ. ಹಿಜಾಬ್ ಹಾಕಿಕೊಂಡು ಬಂದರೆ ಒಂದು ರೂಮಲ್ಲಿ ಹೋಗಿ ಬಿಚ್ಚಿಡುತ್ತಿದ್ದರು. ಈ ಶಿಸ್ತಿಗೆ ಸಿದ್ದರಾಮಯ್ಯ, ಕಾಂಗ್ರೆಸ್ ಏಕೆ ಅಡ್ಡ ಬರುತ್ತಿದ್ದಾರೆ? ಕಾನೂನು ಸಚಿವರು ಈಗಲಾದರೂ ನಾನು ಇದ್ದೀನೆಂದು ತೋರಿಸಬೇಕು. ಕಾನೂನು ಸಚಿವ ಕಾನೂನು ಓದಿದ್ದರೆ ಇದನ್ನು ಸಿದ್ದರಾಮಯ್ಯ ಅವರಿಗೆ ತಿಳಿಸಬೇಕು. ಈ ಆದೇಶ ಜಾರಿಗೆ ತರಲು ಅವಕಾಶ ಕೊಡಬಾರದು. ಇದು ಒಂದು ವೇಳೆ ಜಾರಿಯಾದರೆ ಕಾನೂನು ಸಚಿವರಾಗಿ ಮುಂದುವರಿಯಬಾರದು. ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು. ಪಕ್ಷದ ವತಿಯಿಂದ ನಾವು ಕಾನೂನು ಹೋರಾಟ ಮಾಡುತ್ತೇವೆ. ಯಾವುದೇ ಕಾರಣಕ್ಕೂ ಕಾನೂನು ಹೋರಾಟ ಬಿಡುವುದಿಲ್ಲ ಎಂದು ಈಶ್ವರಪ್ಪ ಹೇಳಿದರು.
CM Siddaramaiah, no more hijab ban; Eshwarappa in Shivamogga says murders, riots, and fights in Karnataka; we are not responsible hearafter; CM is doing all this to please the PFI. The Karnataka government said on Friday it will withdraw the ban on the wearing of hijab in educational institutions that was imposed under the previous BJP rule. Chief Minister Siddaramaiah said that he has directed officials to withdraw the order, saying that women are free to wear hijab (head covering) and go anywhere.
21-05-25 09:16 pm
Bangalore Correspondent
CM Siddaramaiah, Rain, Visit: ಮಳೆ ಹಾನಿ ಪ್ರದೇಶ...
21-05-25 05:42 pm
Kumki elephants, Pawan Kalyan, Cm Siddaramaia...
21-05-25 02:35 pm
ED Raids, Parameshwar College, Ranya Rao: ಹೋಂ...
21-05-25 01:50 pm
KG Halli Police Sub inspector Nagraj, Wife su...
21-05-25 12:12 pm
21-05-25 12:57 pm
HK News Desk
ಅಕ್ರಮ ಬಾಂಗ್ಲಾ ವಲಸಿಗರ ಪತ್ತೆಗೆ ಪ್ರತಿ ಜಿಲ್ಲೆಯಲ್ಲ...
20-05-25 02:36 pm
Operation Sindhoor, Rahul Gandhi,.Pakistan: ಆ...
20-05-25 01:42 pm
ಆಡಲು ಹೋಗಿದ್ದಾಗ ಮಳೆ ಬಂತೆಂದು ನಿಲ್ಲಿಸಿದ್ದ ಕಾರಿನ...
19-05-25 02:25 pm
ಚಾರ್ಮಿನಾರ್ ಬಳಿಯ ಗುಲ್ಜಾರ್ ಹೌಸ್ನಲ್ಲಿ ಬೆಂಕಿ ಅವ...
19-05-25 01:46 pm
21-05-25 11:09 pm
HK News Desk
Mangalore Beltangady, Akanksha Suicide, Updat...
21-05-25 10:45 pm
MP Kota Srinivas Poojary, Mangalore: ಇಂದಿರಾ ಗ...
21-05-25 09:30 pm
Dr M A Saleem New DG&IGP: ಡಿಜಿಪಿ ಅಲೋಕ್ ಮೋಹನ್...
21-05-25 07:17 pm
Tiranga Yatra, Mangalore: ಮಂಗಳೂರಿನಲ್ಲಿ ತಿರಂಗಾ...
20-05-25 11:12 pm
19-05-25 09:38 pm
Mangalore Correspondent
Belagavi Murder, Mother in law: ಸೊಸೆಗೆ ಮಕ್ಕಳಾ...
19-05-25 03:35 pm
Reshma Bariga, FIR, Mangalore; ಆಪರೇಶನ್ ಸಿಂಧೂರ...
18-05-25 07:45 pm
Suhas Shetty, BJP Corporator Shweta Poojary,...
18-05-25 07:35 pm
Bangalore Cigarette Murder, Video Viral: ಕಾರಿ...
17-05-25 05:00 pm