Dharmasthala, Lakshmish Tolpady, Mangalore: ಧರ್ಮಸ್ಥಳದಲ್ಲಿ ಅಕೃತ್ಯಗಳು ; 300 ಪುಟಗಳ ಪುಸ್ತಕ ಬಿಡುಗಡೆ, ಏನು ಮಾಡಿದರೂ ದಕ್ಕಿಸಿಕೊಳ್ಳಬಲ್ಲೆವೆನ್ನುವುದು ಅಹಂಕಾರ, ಅಕ್ರಮದ ಸಮಗ್ರ ತನಿಖೆಗೆ ಪ್ರತ್ಯೇಕ ಕಮಿಷನ್ ರಚನೆಗೆ ಚಿಂತಕ ಲಕ್ಷ್ಮೀಶ ತೋಳ್ಪಾಡಿ ಆಗ್ರಹ 

16-09-25 07:48 pm       Mangalore Correspondent   ಕರಾವಳಿ

ಧರ್ಮಸ್ಥಳ ಮತ್ತು ಅಲ್ಲಿನ ಸಂಸ್ಥೆಗಳ ಹೆಸರಲ್ಲಿ ನಡೆದಿರುವ ಅಕೃತ್ಯಗಳ ಬಗ್ಗೆ ಸಮಗ್ರ ತನಿಖೆಯಾಗುವ ನಿಟ್ಟಿನಲ್ಲಿ ರಾಜ್ಯ ಸರಕಾರ ಪ್ರತ್ಯೇಕ ಕಮಿಷನ್ ನೇಮಕ ಮಾಡಬೇಕೆಂದು ಹಿರಿಯ ಚಿಂತಕ ಲಕ್ಷ್ಮೀಶ ತೋಳ್ಪಾಡಿ ಆಗ್ರಹ ಮಾಡಿದ್ದಾರೆ.

ಮಂಗಳೂರು, ಸೆ.16 : ಧರ್ಮಸ್ಥಳ ಮತ್ತು ಅಲ್ಲಿನ ಸಂಸ್ಥೆಗಳ ಹೆಸರಲ್ಲಿ ನಡೆದಿರುವ ಅಕೃತ್ಯಗಳ ಬಗ್ಗೆ ಸಮಗ್ರ ತನಿಖೆಯಾಗುವ ನಿಟ್ಟಿನಲ್ಲಿ ರಾಜ್ಯ ಸರಕಾರ ಪ್ರತ್ಯೇಕ ಕಮಿಷನ್ ನೇಮಕ ಮಾಡಬೇಕೆಂದು ಹಿರಿಯ ಚಿಂತಕ ಲಕ್ಷ್ಮೀಶ ತೋಳ್ಪಾಡಿ ಆಗ್ರಹ ಮಾಡಿದ್ದಾರೆ.

ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ನಾಗರಿಕ ಸೇವಾ ಟ್ರಸ್ಚ್ ಮತ್ತು ಸತ್ಯಮೇವ ಜಯತೇ ಸಂಘಟನೆಗಳ ಒಕ್ಕೂಟದ ವತಿಯಿಂದ ಸುದ್ದಿಗೋಷ್ಟಿ ನಡೆಸಿದ್ದು ಧರ್ಮಸ್ಥಳ ಮತ್ತು ಅಲ್ಲಿನ ಸಂಸ್ಥೆಗಳ ಅಕ್ರಮದ ಬಗ್ಗೆ ಆರ್ಟಿಐ ದಾಖಲೆಗಳೆಂದು 300 ಪುಟದ ಪುಸ್ತಕವನ್ನು ಪತ್ರಕರ್ತರಿಗೆ ಹಂಚಿದ್ದಾರೆ. ಯಾವುದೇ ಅಕ್ರಮ ನಡೆಸಿದರೂ ದಕ್ಕಿಸಿಕೊಳ್ಳಬಲ್ಲೆವು ಎನ್ನುವುದು ಹಣಬಲದ ಅಹಂಕಾರ. ಈ ಹಣದ ಮೂಲ ಎಲ್ಲಿದೆ ಎನ್ನುವುದನ್ನು ತನಿಖೆ ಮಾಡಬೇಕಾಗಿದೆ. ನಾವು ಆರೋಪಗಳನ್ನು ಮಾಡುತ್ತಿಲ್ಲ, ಪ್ರಶ್ನೆಗಳನ್ನು ಕೇಳುತ್ತಿದ್ದೇವೆ. ಹೆಗ್ಗೆಡೆಯವರು ಸಭೆಯನ್ನು ಕರೆಯಲಿ, ನಮ್ಮ ಪ್ರಶ್ನೆಗಳಿಗೆ ಉತ್ತರ ಹೇಳಲಿ. ಉತ್ತರಿಸದೇ ಇದ್ದಲ್ಲಿ ನಮ್ಮ ಪ್ರಶ್ನೆಗಳು ಸತ್ಯ ಎಂದು ಒಪ್ಪಿಕೊಂಡಂತೆ ಆಗುತ್ತದೆ ಎಂದು ತೋಳ್ಪಾಡಿ ಹೇಳಿದರು.  

ಅಲ್ಲಿನ ಕರ್ಮಕಾಂಡದ ಕುರಿತ ಈ ಪುಸ್ತಕದಲ್ಲಿ ಎಂಟು ಅಧ್ಯಾಯಗಳಿದ್ದು, ಧರ್ಮಸ್ಥಳ ಮತ್ತು ಅಲ್ಲಿನ ಸಂಸ್ಥೆಗಳ ಭೂ ಕಬಳಿಕೆ, ರುಡ್ ಸೆಟ್ ಅಕ್ರಮ, ಗ್ರಾಮಾಭಿವೃದ್ಧಿ ಯೋಜನೆಯ ಅವ್ಯವಹಾರ, ಸೌಜನ್ಯಾ ಸೇರಿ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ಇತ್ಯಾದಿ ವಿಚಾರಗಳ ಬಗ್ಗೆ ಆರ್ಟಿಐ ಮಾಹಿತಿ ಆಧರಿಸಿ ನೀಡಿದ್ದೇವೆ. ಧರ್ಮಸ್ಥಳಕ್ಕಿದ್ದ 4075 ಎಕ್ರೆ ಭೂಮಿಯನ್ನು ಭೂಸುಧಾರಣೆ ಕಾನೂನು ಬಂದಾಗ 1050 ಎಕ್ರೆ ಭೂಮಿಯನ್ನು ಹೆಗ್ಗಡೆ ಕುಟುಂಬದ್ದು ಎಂದು ನೋಂದಣಿ ಮಾಡಿಸಿದ್ದರು. ಅದರಲ್ಲಿ ಧರ್ಮಸ್ಥಳ ದೇವಸ್ಥಾನ ಇರುವ 1.78 ಸೆಂಟ್ಸ್ ಭೂಮಿಯೂ ಇದೆ. ಹರ್ಷೇಂದ್ರ ಕುಮಾರ್ ತಾನು ಭೂರಹಿತ ಬಡವ ಎಂದು ಅಫಿಡವಿಟ್ ಸಲ್ಲಿಸಿ ಸರ್ಕಾರದಿಂದ 7 ಎಕ್ರೆ ದರ್ಕಾಸು ಭೂಮಿ ಪಡೆದಿದ್ದರು. ಇದನ್ನು ನಾವು ಹೈಕೋರ್ಟಿನಲ್ಲಿ ಪ್ರಶ್ನಿಸಿ, ಇತ್ತೀಚೆಗೆ ಪುತ್ತೂರು ಎಸಿಯವರು ಅಕ್ರಮ ಎಂದು ಆದೇಶ ಮಾಡಿಸಿದ್ದರು ಎಂದು ನಾಗರಿಕ ಸೇವಾ ಟ್ರಸ್ಟಿನ ಸೋಮನಾಥ ನಾಯಕ್ ಹೇಳಿದರು.

ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ವಿಹರಿಸಲು ಎಂದು ಸರಕಾರದಿಂದ ನೀಡಿದ್ದ 14 ಎಕ್ರೆ ಭೂಮಿಯ ದಾಖಲೆಯನ್ನು ತಿದ್ದಿ ಅಲ್ಲಿ ಲಾಭದಾಯಕ ಪ್ರಕೃತಿ ಚಿಕಿತ್ಸಾಲಯ ಮಾಡಿದ್ದಾರೆ. 44 ಎಕ್ರೆ ಡಿಸಿ ಮನ್ನಾ ಭೂಮಿಯಲ್ಲಿ ಶಿಕ್ಷಣ ಸಂಸ್ಥೆಗಳನ್ನು ಮಾಡಿದ್ದಾರೆ. ಡಿಸಿ ಮನ್ನಾ ಭೂಮಿಗೆ ಪರ್ಯಾಯವಾಗಿ ಭೂಮಿ ಕೊಡಬೇಕೆಂದಿದ್ದರೂ ಅದನ್ನು ಕೊಟ್ಟಿಲ್ಲ. ದೇವಸ್ಥಾನದಲ್ಲಿ ಸ್ವಚ್ಛತಾ ಕಾರ್ಮಿಕರಾಗಿ ದುಡಿಯುವವರಿಗೆ ಹಕ್ಕುಪತ್ರ ಕೊಟ್ಟಿಲ್ಲ. ಅವರು ಈಗಲೂ ಗುಡಿಸಲಿನಲ್ಲಿ ಇದ್ದಾರೆ. ಅಲ್ಲಿನ ಹಲವಾರು ಸಂಸ್ಥೆಗಳಲ್ಲಿ ದುಡಿಯುವ ಸಿಬಂದಿಗೆ 2021ರ ವರೆಗೂ ಗ್ರಾಚ್ಯುಟಿ ನೀಡಿಲ್ಲ. ರಂಜನ್ ರಾವ್ ನಿರಂತರ ಹೋರಾಟದ ನಂತರ ಸಿಬಂದಿಗೆ ಪಿಎಫ್, ಗ್ರಾಚ್ಯುಟಿ ನೀಡಲಾಗಿತ್ತು ಎಂದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಎಂದು ದೇವಸ್ಥಾನವನ್ನು ಮುಜರಾಯಿ ಇಲಾಖೆಯಡಿ ನೋಂದಣಿ ಮಾಡಿಲ್ಲ. ಕೋರ್ಟಿನಲ್ಲಿ ನೀಡಿರುವ ದಾಖಲೆಯಲ್ಲಿ ದೇವಸ್ಥಾನವನ್ನು ದಿ ಇನ್ಸ್ ಟಿಟ್ಯೂಟ್ ಆಫ್ ಧರ್ಮಸ್ಥಳ ಎಂಬ ಹೆಸರಲ್ಲಿ ನೋಂದಣಿ ಮಾಡಿರುವುದು ಕಂಡುಬರುತ್ತದೆ. ಸಾರ್ವಜನಿಕರ ದುಡ್ಡು ಆಗಿರುವುದರಿಂದ ಅದಕ್ಕೊಂದು ಲೆಕ್ಕಪತ್ರ, ಆದಾಯದ ಬಗ್ಗೆ ಲೆಕ್ಕ ಇರಬೇಕಾಗುತ್ತದೆ. ಅಲ್ಲಿನ ಆದಾಯ  ಎಷ್ಟಿದೆ ಎಂದು ಹೇಳಲು ಹಿಂಜರಿಕೆ ಏಕೆ ಎಂದು ಪ್ರಶ್ನಿಸಿದರು.

ನೆಲಮಂಗಲದಲ್ಲಿ 40 ಎಕ್ರೆ, ಯಲಹಂಕದಲ್ಲಿ 36 ಎಕ್ರೆ ಭೂಮಿಯನ್ನು ಹೊಂದಿದ್ದು ಬಹುತೇಕ ಅಕ್ರಮವಾಗಿದೆ. ಕೋರ್ಟ್ ಧರ್ಮಸ್ಥಳ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಬಾರದು ಎಂದು ಹೇಳಿದೆ, ನಾವು ಸುಳ್ಳು ಹೇಳುತ್ತಿಲ್ಲ. ದಾಖಲೆ ಸಹಿತವಾಗಿ ಹೇಳುತ್ತಿದ್ದೇವೆ. ನಮ್ಮ ವಾಕ್ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಸಾಧ್ಯವಿಲ್ಲ. ನಾವು ಇದರ ಬಗ್ಗೆ ಸಮಗ್ರ ತನಿಖೆ ಮಾಡಬೇಕೆಂದು ಪ್ರತ್ಯೇಕ ಆಯೋಗವನ್ನು ರಚಿಸಲು ರಾಜ್ಯ ಸರಕಾರಕ್ಕೆ ಕೇಳಿಕೊಳ್ಳುತ್ತೇವೆ. ಸರಕಾರ ಸ್ಪಂದಿಸದೇ ಇದ್ದರೆ ಹೈಕೋರ್ಟಿನಲ್ಲಿ ಕೇಳುತ್ತೇವೆ ಎಂದರು.

ಕೋರ್ಟ್ ಆದೇಶ ಉಲ್ಲಂಘನೆ ಮಾಡಿದ್ದಾಗಿ ಹೇಳಿ ನನ್ನನ್ನು ಮೂರು ತಿಂಗಳು ಜೈಲಿಗೆ ಹಾಕಿದ್ದರು. ಆದರೆ ನಿರಾಧಾರ ಆರೋಪ ಮಾಡಿದ್ದೇನೆಂದು ಕೋರ್ಟ್ ನನಗೆ ಶಿಕ್ಷೆ ವಿಧಿಸಿಲ್ಲ. ನಾವು ಮಾಡಿರುವ ಒಂದೇ ಒಂದು ಆರೋಪ ಸುಳ್ಳೆಂದು ಮಾಡಿದರೆ ಹೆಗ್ಗಡೆಯವರ ಕಾಲಿಗೆ ಬಿದ್ದು ಶರಣಾಗುತ್ತೇವೆ. ಈ ಬಗ್ಗೆ ರಿಜಿಸ್ಟರ್ ಪೋಸ್ಟ್ ನಲ್ಲಿ ಹೆಗ್ಗಡೆ ಅವರಿಗೂ ಕಳಿಸಿದ್ದೇವೆ ಎಂದರು. ಎಸ್ಡಿಎಂ ಶಿಕ್ಷಣ ಸಂಸ್ಥೆಗಳಲ್ಲಿ ಸರಕಾರದಿಂದ ಗ್ರಾಂಟ್ ಪಡೆಯುತ್ತಿರುವುದರಿಂದ 18 ಪರ್ಸೆಂಟ್ ಮೀಸಲಾತಿ ಕೊಡಬೇಕು. ಆದರೆ ಪ್ರಸ್ತುತ ಬೋಧಕೇತರ (ಅಟೆಂಡರ್) ಒಂದು ಹುದ್ದೆ ಮಾತ್ರ ಮೀಸಲಾತಿಯಲ್ಲಿದೆ. ಇದು ದಲಿತರಿಗೆ ಮಾಡಿರುವ ಅನ್ಯಾಯ, ಕಾನೂನು ಉಲ್ಲಂಘನೆ ಎಂದು ಸೋಮನಾಥ ನಾಯಕ್ ಹೇಳಿದರು. 

ಈ ಬಗ್ಗೆ 13 ವರ್ಷಗಳ ಹಿಂದೆ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಬರೆದು ತನಿಖೆಗೆ ಆದೇಶ ಮಾಡಿದ್ದರು. 2014ರಲ್ಲಿ ಸಚಿವ ಶ್ರೀನಿವಾಸ ಪ್ರಸಾದ್ ಕೂಡ ತನಿಖೆಗೆ ಬರೆದಿದ್ದರು. ಮುಖ್ಯಮಂತ್ರಿಯೂ ತನಿಖೆಗೆ ಬರೆದರೂ ಇಲ್ಲಿನ ಜಿಲ್ಲಾಧಿಕಾರಿ ಕ್ರಮ ಕೈಗೊಂಡಿಲ್ಲ ಎಂದರೆ ಏನರ್ಥ. ಯಲಹಂಕದಲ್ಲಿ 36 ಎಕ್ರೆ ಮೋಸ ಆಗಿರುವ ಬಗ್ಗೆ ಸರಕಾರದ ಅಟಾರ್ನಿ ಜನರಲ್ ಅವರೇ ವರದಿ ಕೊಟ್ಟಿದ್ದಾರೆ. ಆದರೂ ಕ್ರಮ ಜರುಗಿಸುತ್ತಿಲ್ಲ ಎಂದರೆ ಇವರು ಕಾನೂನಿನಿಂದ ಅತೀತರೇ ಎಂದು ಪ್ರಶ್ನೆ ಮಾಡಬೇಕಾಗಿದೆ. ಧರ್ಮ ಸಂರಕ್ಷಣೆ ಯಾತ್ರೆ ಮಾಡುವವರು ಈ ಪ್ರಶ್ನೆಯನ್ನು ಯಾಕೆ ಕೇಳಲ್ಲ ಎಂದು ಕೇಳಿದರು.

ಸುದ್ದಿಗೋಷ್ಟಿಯಲ್ಲಿ ವಿಚಾರವಾದಿಗಳ ಸಂಘದ ಅಧ್ಯಕ್ಷ ನರೇಂದ್ರ ನಾಯಕ್, ಎಂಬಿ ಕರಿಯ, ಹಿರಿಯ ವಕೀಲ ರಂಜನ್ ರಾವ್ ಎರ್ಡೂರು, ಬಿಎಂಎಸ್ ಮಾಜಿ ಜಿಲ್ಲಾಧ್ಯಕ್ಷ ವಿಶ್ವನಾಥ ಶೆಟ್ಟಿ ಮತ್ತಿತರರಿದ್ದರು.

Renowned scholar Lakshmish Tolpady has called for the Karnataka government to establish an independent judicial commission to investigate alleged irregularities involving the Dharmasthala temple and its associated institutions. Speaking at a press conference organized by the Citizens’ Service Trust