ಬ್ರೇಕಿಂಗ್ ನ್ಯೂಸ್
19-11-20 01:16 pm Bangalore Correspondent ಕರ್ನಾಟಕ
ಬೆಂಗಳೂರು, ನವೆಂಬರ್ 19: ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದ ಸಿಎಂ ಬಿಎಸ್ ಯಡಿಯೂರಪ್ಪ ತಂತ್ರಗಾರಿಕೆ ಪದೇ ಪದೇ ಕೈಕೊಡುತ್ತಿದೆ. ಉಪ ಚುನಾವಣೆ ಬಳಿಕ ಸಂಪುಟ ವಿಸ್ತರಣೆ ಪಕ್ಕಾ ಎಂದೇ ಹೇಳಿಕೊಂಡು ತಿರುಗಿದ್ದ ಯಡಿಯೂರಪ್ಪ ನಡೆಗೆ ಹೈಕಮಾಂಡ್ ಮತ್ತೆ ಬ್ರೇಕ್ ಹಾಕಿದೆ. ಸಂಪುಟ ಸೇರುವ ಸಂಭಾವಿತರ ಲಿಸ್ಟ್ ಹಿಡಿದು ದೆಹಲಿಗೆ ತೆರಳಿದ್ದ ಯಡಿಯೂರಪ್ಪ ಬರಿಗೈಲಿ ಹಿಂತಿರುಗಿದ್ದಾರೆ.
ವರ್ಷದ ಹಿಂದೆ ಜೆಡಿಎಸ್ ಮತ್ತು ಕಾಂಗ್ರೆಸಿನ 16 ಮಂದಿಯನ್ನು ಕರೆತಂದು ಯಡಿಯೂರಪ್ಪ ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದಿದ್ದರು. ಈ ವೇಳೆ, ಮಾತು ನೀಡಿದಂತೆ ವಲಸೆ ಬಂದವರಿಗೆ ಸಚಿವ ಸ್ಥಾನ ನೀಡಲು ಯಡಿಯೂರಪ್ಪ ಹೈಕಮಾಂಡ್ ಮೇಲೆ ಒತ್ತಡ ಹೇರುತ್ತಲೇ ಬಂದಿದ್ದಾರೆ. ಆದರೆ, ಯಡಿಯೂರಪ್ಪ ತಂತ್ರಕ್ಕೆ ರಾಜ್ಯದ ಮೂಲ ಬಿಜೆಪಿಗರಿಂದಲೇ ಅಡ್ಡಿ ಎದುರಾಗಿದೆ. ಹೈಕಮಾಂಡ್ ಮಟ್ಟದಲ್ಲಿ ಪ್ರಭಾವ ಬೆಳೆಸಿಕೊಂಡಿರುವ ಕೆಲವು ನಾಯಕರು ಸಿಎಂ ತಂತ್ರಗಾರಿಕೆಗೆ ಅಡ್ಡಗಾಲು ಹಾಕುತ್ತಿದ್ದಾರೆ.
ಈಗಾಗ್ಲೇ ವಲಸಿಗರಿಗೆ ಪ್ರಮುಖ ಖಾತೆಗಳನ್ನು ನೀಡಲಾಗಿದೆ. ಉಳಿದಿರುವ ಏಳು ಸ್ಥಾನಗಳಲ್ಲಿ ಮತ್ತೆ ನಾಲ್ಕು ಮಂದಿ ವಲಸಿಗರಿಗೆ ನೀಡಿದರೆ ಮೂಲ ಬಿಜೆಪಿಗರೇನು ಮಣ್ಣು ಹೊರುವುದಕ್ಕಾ ಎಂದು ಕೆಲವರು ಆಕ್ಷೇಪ ತೆಗೆದಿದ್ದಾರೆ. ಈ ಮಾತನ್ನು ಯಡಿಯೂರಪ್ಪ ಕಿವಿಗೆ ಹಾಕಿದ್ದರೂ, ಅವರು ಅದಕ್ಕೆ ಸೊಪ್ಪು ಹಾಕದೆ ತನ್ನ ಮಾತಿಗೆ ತಕ್ಕಂತೆ ನಡೆದುಕೊಳ್ಳುವುದಾಗಿ ಹೇಳುತ್ತ ಬಂದಿದ್ದಾರೆ. ಭರವಸೆ ಇಟ್ಟುಕೊಂಡು ಬಂದವರಿಗೆ ಅವಕಾಶ ಮಾಡಿಕೊಡಬೇಕೆಂಬ ನಿಲುವಿಗೆ ಸಿಎಂ ಅಂಟಿರುವುದು ಮೂಲ ಬಿಜೆಪಿಗರ ನೋವಿಗೆ ಕಾರಣ. ಹೀಗಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಬಳಿಯೂ ಆಕಾಂಕ್ಷಿತರು ತಮ್ಮ ಆಕ್ಷೇಪ ತೋಡಿಕೊಂಡಿದ್ದಾರೆ.
ಇದೇ ವಿಚಾರವನ್ನು ರಾಜ್ಯದವರೇ ಆಗಿರುವ ಹೈಕಮಾಂಡ್ ನಲ್ಲಿ ಕುಳಿತಿರುವ ಪ್ರಭಾವಿ ನಾಯಕ ಬಿ.ಎಲ್. ಸಂತೋಷ್ ಕಿವಿಗೂ ತಲುಪಿಸಲಾಗಿದೆ. ಹೀಗಾಗಿ ಸಿಎಂ ಯಡಿಯೂರಪ್ಪ ಪಟ್ಟಿ ಹಿಡಿದು ದೆಹಲಿಗೆ ತೆರಳಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿಯಾಗಿದ್ದರೂ ಪಟ್ಟಿಗೆ ಒಪ್ಪಿಗೆ ಸಿಕ್ಕಿಲ್ಲ. ಪಟ್ಟಿಯ ಪರಿಶೀಲನೆಗೆ ಕಾಲಾವಕಾಶ ಬೇಕೆನ್ನುವ ಮೂಲಕ ಜೆಪಿ ನಡ್ಡಾ ನುಣುಚಿಕೊಂಡಿದ್ದಾರೆ.
ಇದೇ ವೇಳೆ, ಕೆಲವು ಮೂಲದ ಪ್ರಕಾರ ಜೆಪಿ ನಡ್ಡಾ ಡಿಸೆಂಬರ್ ಆರಂಭದಲ್ಲಿ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ ಎನ್ನಲಾಗುತ್ತಿದೆ. ಭೇಟಿ ಸಂದರ್ಭದಲ್ಲಿ ಪಕ್ಷದ ರಾಜ್ಯ ಮುಖಂಡರೊಂದಿಗೆ ಸಮಾಲೋಚಿಸಿ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಮಾಡಲು ಗ್ರೀನ್ ಸಿಗ್ನಲ್ ನೀಡಲಿದ್ದಾರೆ ಎನ್ನಲಾಗುತ್ತಿದೆ. ಆದರೆ, ವಿರೋಧಿ ಬಣದ ನಿಲುವಿನ ಪ್ರಕಾರ ಈ ಸಂದರ್ಭ ಕಡಿಮೆ ಎಂದೇ ಹೇಳಲಾಗುತ್ತಿದೆ. ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಇಳಿಸಿ, ಬಳಿಕವೇ ಸಂಪುಟ ಪುನಾರಚನೆ ಮಾಡಬೇಕು ಎಂಬ ನಿಲುವಿಗೆ ಈ ಬಣ ಅಂಟಿಕೊಂಡಿದೆ. ಇದೇ ಕಾರಣಕ್ಕೆ ಬಸನಗೌಡ ಪಾಟೀಲ್ ಯತ್ನಾಳ್ ಕೂಡ ಪದೇ ಪದೇ ಬದಲಾವಣೆಯ ಭವಿಷ್ಯ ಹೇಳುತ್ತಿದ್ದಾರೆ.
ಸಿಎಂ ಬದಲಾವಣೆಯೇ ಏಕೆ?
ಸಿಎಂ ಯಡಿಯೂರಪ್ಪ ರಾಜ್ಯದ ಮಟ್ಟಿಗೆ ಪ್ರಭಾವಿ ನಾಯಕ. ಲಿಂಗಾಯತ ಸಮುದಾಯ ಮತ್ತು ರಾಜ್ಯ ಬಿಜೆಪಿಯಲ್ಲಿ ತಮ್ಮದೇ ಪ್ರಭಾವಲಯ ಬೆಳೆಸಿಕೊಂಡಿರುವ ವ್ಯಕ್ತಿ. ಆದರೆ, ವಯಸ್ಸಿನ ವಿಚಾರದಲ್ಲಿ ಬಿಜೆಪಿ ಪಕ್ಷದಲ್ಲಿ ಕಠಿಣ ನಿಯಮಗಳನ್ನು ಜಾರಿಗೆ ತರಲಾಗಿದೆ. ಅಂಥ ನಿಯಮಗಳನ್ನು ದೇಶಾದ್ಯಂತ ಸಿಎಂ ಸ್ಥಾನ, ಪಕ್ಷದ ಅಧ್ಯಕ್ಷ , ಜಿಲ್ಲಾಧ್ಯಕ್ಷ ಹೀಗೆ ಎಲ್ಲ ಹಂತಗಳಲ್ಲೂ ಜಾರಿಗೊಳಿಸಲಾಗುತ್ತಿದೆ. ಹೀಗಿದ್ದರೂ, ರಾಜ್ಯದಲ್ಲಿ ಯಡಿಯೂರಪ್ಪರನ್ನು ಬದಲಿಸುವುದು ಮಾತ್ರ ಹೈಕಮಾಂಡ್ ಪಾಲಿಗೂ ಕಗ್ಗಂಟಾಗಿದೆ. ದಿಢೀರ್ ಆಗಿಯಂತೂ ಅವರನ್ನು ಬದಲಿಸುವಂತಿಲ್ಲ ಎನ್ನುವಷ್ಟರ ಮಟ್ಟಿಗೆ ಭಯ ಪಕ್ಷಕ್ಕಿದೆ.
ಇಂಥದ್ರಲ್ಲಿ ಇನ್ನೆರಡು ವರ್ಷವೂ ಅವರನ್ನೇ ಮುಂದುವರಿಸಿ, ಮುಂದಿನ ಚುನಾವಣೆಯಲ್ಲಿ ಯಡಿಯೂರಪ್ಪ ಇಲ್ಲದೇ ಚುನಾವಣೆ ಎದುರಿಸಿದರೆ ಕಷ್ಟ ಎನ್ನುವ ಮಾತು ಕೇಳಿಬರುತ್ತಿದೆ. ಅಧಿಕಾರ ಕೇಂದ್ರದಲ್ಲಿದ್ದರೂ ಯಡಿಯೂರಪ್ಪ ಇಲ್ಲದ ಶೂನ್ಯವನ್ನು ಬಿಜೆಪಿಗೆ ತಡೆದುಕೊಳ್ಳುವ ಶಕ್ತಿ ಇಲ್ಲ. ಯಡಿಯೂರಪ್ಪ ಸಿಎಂ ಆಗಿ ಇದ್ದರೆ, ಮುಂದಿನ ಚುನಾವಣೆಯಲ್ಲಿ ತಮ್ಮ ಪುತ್ರ ವಿಜಯೇಂದ್ರನನ್ನು ನಾಯಕ ಸ್ಥಾನಕ್ಕೇರಿಸಲಿದ್ದಾರೆ ಎಂಬ ಭಯವೂ ವಿರೋಧಿ ಬಣಕ್ಕಿದೆ.
ಅದಕ್ಕಾಗಿ ಸಿಎಂ ಆಗಿ ಈಗಲೇ ಬೇರೊಬ್ಬರನ್ನು ಆಯ್ಕೆ ಮಾಡಿ, ಮುಂದಿನ ಚುನಾವಣೆ ವೇಳೆಗೆ ಪ್ರಭಾವಿ ನಾಯಕನಾಗಿ ಹೊರಹೊಮ್ಮಿಸಬಹುದು ಎನ್ನುವ ಲೆಕ್ಕಾಚಾರ ಅದೇ ಬಣದ್ದು. ಇದೇ ವಿಚಾರವನ್ನು ಹೈಕಮಾಂಡ್ ಮಟ್ಟದಲ್ಲಿ ಛೂ ಬಿಟ್ಟಿದ್ದಲ್ಲದೆ, ಯಡಿಯೂರಪ್ಪ ತಂತ್ರಗಾರಿಕೆಗೆ ಅಡ್ಡಿಪಡಿಸಿ ರಾಜ್ಯಕ್ಕೆ ಯಡಿಯೂರಪ್ಪರೇ ಪರಮೋಚ್ಛ ನಾಯಕ ಅಲ್ಲ ಎನ್ನುವ ಸಂದೇಶವನ್ನು ಜನರು ಮತ್ತು ಕಾರ್ಯಕರ್ತರಿಗೆ ರವಾನಿಸಲಾಗುತ್ತಿದೆ ಎಂಬ ಮಾತು ಕೇಳಿಬರುತ್ತಿದೆ.
ಕಳೆದ ಮುಂಗಾರು ಅಧಿವೇಶನ ಸಂದರ್ಭದಲ್ಲೂ ಇದೇ ರೀತಿಯ ಮುಜುಗರ ಅನುಭವಿಸಿದ್ದ ಯಡಿಯೂರಪ್ಪ ಈಗ ಚಳಿಗಾಲದ ಅಧಿವೇಶನಕ್ಕಾದರೂ ಸಂಪುಟ ಭರ್ತಿ ಮಾಡಬೇಕೆಂದ್ಕೊಂಡಿದ್ದರು. ಆದರೆ, ಸಿಎಂ ತಂತ್ರಕ್ಕೆ ಪ್ರತಿ ತಂತ್ರ ಹೂಡುವುದೇ ರಾಜ್ಯ ಬಿಜೆಪಿಯ ಹಳೇ ಚಾಳಿ ಮತ್ತೆ ಮುಂದುವರಿದಿದೆ.
A decision on the expansion of the Karnataka cabinet will be taken in the next two-three days, Chief Minister B S Yediyurappa said after meeting with BJP national president.
13-05-25 09:50 pm
HK News Desk
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
13-05-25 08:47 pm
HK News Desk
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
13-05-25 10:33 pm
Mangalore Correspondent
ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಿ...
13-05-25 07:33 pm
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm