ಬ್ರೇಕಿಂಗ್ ನ್ಯೂಸ್
06-03-24 06:19 pm HK News Desk ಕರ್ನಾಟಕ
ಗದಗ, ಮಾ 06: ವಿಧಾನಸೌಧದಲ್ಲಿ `ಪಾಕಿಸ್ತಾನ ಜಿಂದಾಬಾದ್’ ಘೋಷಣೆ ಕೂಗಿದ ಆರೋಪಕ್ಕೆ ಸಂಬಂಧಿಸಿದಂತೆ ಮೂವರನ್ನ ಬಂಧಿಸಿರುವ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಸಚಿವ ಪ್ರಿಯಾಂಕ್ ಖರ್ಗೆ, ಸರ್ಕಾರ ಬಿಡುಗಡೆ ಮಾಡಿರುವ ವಿಧಿವಿಜ್ಞಾನ ಪ್ರಯೋಗಾಲಯ ವರದಿಯನ್ನ ನಾನು ನೋಡಿಯೇ ಇಲ್ಲ ಎಂದು ಜಾರಿಕೊಂಡಿದ್ದಾರೆ.
ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿರುವುದು ಸತ್ಯ ಇದು, ವಿಧಿವಿಜ್ಞಾನ ಪ್ರಯೋಗಾಲಯದ ವರದಿಯಲ್ಲಿ ದೃಢಪಟ್ಟಿದೆ ಎಂದು ಗೃಹಸಚಿವ ಪರಮೇಶ್ವರ್ ಮಂಗಳವಾರ ತಿಳಿಸಿದ್ದಾರೆ. ಈ ಕುರಿತು ಗದಗದಲ್ಲಿ ಮಾಧ್ಯಮಗಳೊಂದಿಗೆ ಮಾನತಾಡಿದ ಅವರು, ಮೂವರನ್ನು ಅರೆಸ್ಟ್ ಮಾಡಲಾಗಿದೆ, ಇಷ್ಟಕ್ಕೆ ಕೇಸ್ ಮುಗಿಯಲ್ಲ. ಇನ್ನೂ ಅವರ ಧ್ವನಿ ಹೋಲಿಕೆಯ ಬಗ್ಗೆ ಪರಿಶೀಲಿಸಬೇಕು. ಆ ಸಂದರ್ಭದಲ್ಲಿ ಅವರು ಅಲ್ಲಿದ್ರಾ ಅನ್ನೋದನ್ನ ದೃಢಪಡಿಸಬೇಕು. ನಂತರ ಮುಂದಿನ ತನಿಖೆಯಾಗುತ್ತದೆ ಎಂದು ತಿಳಿಸಿದ್ದಾರೆ.
ನನಗೆ ಸಿಕ್ಕ ಫೂಟೆಜ್ ಅನ್ನು ಖಾಸಗಿ ಫೋರೆನ್ಸಿಕ್‌ನಲ್ಲಿ ಪರಿಶೀಲಿಸಿದ್ದೆವು. ನಾನು ಸರ್ಕಾರದ ವರದಿ ಫೈನಲ್ ಅಂತ ಹೇಳಿದ್ದೆ. ಬಿಜೆಪಿಯವರು ಖಾಸಗಿ ವರದಿಯನ್ನ ಖಾಸಗಿ ವರದಿಯನ್ನು ಸರ್ಕಾರಿ ವರದಿಯಾಗಿ ಬಿಂಬಿಸುವುದು ತಪ್ಪು. ಈಗಲೂ ನಾನು ಅದನ್ನೇ ಹೇಳುತ್ತೇನೆ ಸರ್ಕಾರದ ವರದಿಯನ್ನ ನಾನು ನೋಡಿಯೇ ಇಲ್ಲ ಎಂದು ಉಲ್ಟಾ ಹೊಡೆದಿದ್ದಾರೆ.
ಆರ್‌ಎಸ್‌ಎಸ್ ವರದಿಗಳನ್ನ ಒಪ್ಪಲ್ಲ:
ಇನ್ನೂ ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತರು ಕೂಗಿದ್ದಾಗ ನಾವು ಮುಚ್ಚಿ ಹಾಕಿದ್ವಾ? ಇನ್ನೂ ತನಿಖೆ ನಡೀತಿದೆ ಅಲ್ವಾ? ಈಗ ಸಿಕ್ಕಿರುವ ಮಾದರಿಯಲ್ಲಿ ಧ್ವನಿ ಇವರದ್ದೇ ಅಂತ ಸ್ಪಷ್ಟವಾಗಿ ಹೇಳಿಲ್ಲ. ಸರ್ಕಾರದ ನಿಲುವು ಅಂತಿಮ ನಿಲುವು. ಆರ್‌ಎಸ್‌ಎಸ್ ವರದಿಗಳನ್ನ ನಾವು ಒಪ್ಪೋಕೆ ಆಗಲ್ಲ ಎಂದಿದ್ದಾರೆ.
ಕುಕ್ಕರ್ ಬ್ಲಾಸ್ ಆರೋಪಿ ತರಬೇತಿ ಪಡೆದಿದ್ದೆಲ್ಲಿ?
ಇದೇ ವಳೆ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ವಿಚಾರಕ್ಕೆ ಪ್ರತಿಕ್ರಿಯಿಸಿ, ಬಿಜೆಪಿನವರಿಗೆ ನಿಜವಾಗಿಯೂ ನೈತಿಕತೆ ಇದೆಯಾ? ರಾಮೇಶ್ವರಂ ಕೆಫೆ ಬ್ಲಾಸ್ಟ್ ಬಗ್ಗೆ ಬಿಜೆಪಿ ನಾಯಕರು ಯಾಕೆ ಇಷ್ಟೊಂದು ಮಾತಾಡ್ತಿದ್ದಾರೆ. ಮಂಗಳೂರು ಕುಕ್ಕರ್ ಬ್ಲಾಸ್ಟ್ ಯಾರ ಅವಧಿಯಲ್ಲಿ ಆಯ್ತು? ಕುಕ್ಕರ್ ಬ್ಲಾಸ್ಟ್ ಆರೋಪಿ ತರಬೇತಿ ಪಡೆದಿದ್ದು ಎಲ್ಲಿ ಗೋತ್ತಾ? ಅಂದಿನ ಬಿಜೆಪಿ ಸರ್ಕಾರದ ಗೃಹಸಚಿವರಾಗಿದ್ದ ಆರಗ ಜ್ಞಾನೇಂದ್ರ ಅವರ ಕ್ಷೇತ್ರ ತೀರ್ಥಹಳ್ಳಿಯಲ್ಲಿ. ಅಲ್ಲಿ ತರಬೇತಿ ಪಡೆದು ಮಂಗಳೂರು ಆರ್‌ಎಸ್‌ಎಸ್ ಪ್ರಯೋಗಾಲಯದಲ್ಲಿ ಬ್ಲಾಸ್ಟ್ ಮಾಡಿದ್ದ. ಆಗ ಇವ್ರು ರಾಜಿನಾಮೆ ಕೊಟ್ಟಿದ್ರಾ? ಉಸಿರಾದ್ರೂ ಬಿಟ್ಟಿದ್ರಾ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Priyank Kharge slams BJP in Gadag over blast case, says where were they during cooker blast in Mangalore. In whose government was there such a major blast in Mangalore. Even the accused belonged to the former home Ministers native Thirthahalli.
24-02-25 01:36 pm
HK News Desk
Kumar Bangarappa, BJP President: ಬಿಜೆಪಿ ರಾಜ್ಯ...
23-02-25 06:38 pm
Telangana Model, Pramod Muthalik, CM Siddaram...
21-02-25 10:47 pm
Rohini Sindhuri, Roopa moudgil, latest news:...
21-02-25 10:12 pm
Santosh Lad, Modi, Nitin Gadkari: ಬಿಜೆಪಿ ಅಧಿಕ...
21-02-25 04:36 pm
23-02-25 11:22 pm
HK News Desk
ಗಂಗಾ ನದಿಗಿದೆ ಸ್ವಯಂ ಶುದ್ಧೀಕರಣದ ಶಕ್ತಿ ; ಕೋಟ್ಯಂತ...
23-02-25 09:52 pm
ದುಬೈನಲ್ಲಿ ಕ್ರಿಮಿನಲ್ ಇನ್ವೆಸ್ಟಿಗೇಶನ್ ಅಧಿಕಾರಿಗಳ...
22-02-25 09:48 pm
ದುಬೈ ಉದ್ಯಮಿ ಬಿ.ಆರ್ ಶೆಟ್ಟಿಗೆ ದುಬೈ ಕೋರ್ಟಿನಿಂದ ಮ...
22-02-25 07:51 pm
Kerala school teacher suicide, catholic Churc...
22-02-25 03:53 pm
24-02-25 02:50 pm
Mangalore Correspondent
Mangalore accident, Surathkal, Raichur: ಸುರತ್...
23-02-25 03:20 pm
Rani Abbakka, Mamata Ballal, Mangalore: ಐನೂರು...
23-02-25 01:12 pm
Siddaramaiah, Priyank Kharge Mangalore, D K S...
22-02-25 05:21 pm
Singari Beedi Robbery, IPS, crime: ಸಿಂಗಾರಿ ಬೀ...
21-02-25 08:22 pm
23-02-25 03:42 pm
HK News Desk
Visa fraud, Bangalore crime, Arrest: ವಿದೇಶಿ ವ...
22-02-25 10:36 pm
Ankola Car Robbery, Rajendra Pawar, Gold Smug...
20-02-25 01:22 pm
Mangalore, Puttur, Cheating, paras traders: ಲ...
19-02-25 09:26 pm
Mangalore CCB police, 119 kg ganja, Crime: ಮೀ...
18-02-25 07:19 pm