ಬ್ರೇಕಿಂಗ್ ನ್ಯೂಸ್
07-03-24 10:27 pm HK News Desk ಕರ್ನಾಟಕ
ಚಿಕ್ಕಮಗಳೂರು, ಮಾ.7: ರಾಮ ದೇವರಲ್ಲ, ಭಾರತ ದೇಶವೇ ಅಲ್ಲ ಎಂಬ ಡಿಎಂಕೆ ಮುಖಂಡ ಎ. ರಾಜಾ ಹೇಳಿಕೆಗೆ ಬಿಜೆಪಿ ಮುಖಂಡ ಸಿ.ಟಿ.ರವಿ ಕಿಡಿಕಾರಿದ್ದಾರೆ. ನಾಯಿ ಕೂಗಿದರೆ ಭೂಲೋಕ ಕೆಟ್ಟು ಹೋಗುತ್ತಾ.. ಇವರು ಭಾರತದ ಜನರ ಶ್ರದ್ಧೆಯನ್ನ ನಾಶ ಮಾಡಬೇಕು ಎಂದು ಬಯಸೋರು. ಹೀಗೇ ಬಯಸೋರೆಲ್ಲಾ ನಾಶವಾಗಿ ಹೋಗಿದ್ದಾರೆ ಎಂದಿದ್ದಾರೆ.
ಎಲ್ಲಿ ನಿನ್ನ ಹರಿ ಎಂದ ಹಿರಣ್ಯ ಕಶ್ಯಪ ಮನೆಯಲ್ಲೇ ಪ್ರಹ್ಲಾದ ಹುಟ್ದ.. ಈ ಎ.ರಾಜನ ಮನೆಯಲ್ಲೇ ರಾಮಭಕ್ತ ಹುಟ್ಟುತ್ತಾನೆ. ತಮಿಳುನಾಡಲ್ಲಿ ಸಾವಿರಾರು ರಾಮನ ದೇವಾಲಯಗಳಿವೆ, ತಾಕತ್ತಿದ್ದರೆ ಮುಟ್ಟಿ ನೋಡಲಿ. ರಾಮೇಶ್ವರ, ರಾಮನೇ ಪೂಜೆ ಮಾಡಿದ ಈಶ್ವರನಿದ್ದಾನೆ. ಇವರಿಗೆ ರಾಮನ ದೇವಾಲಯದ ಹುಂಡಿ ಬೇಕು, ರಾಮ ಬೇಡಾ. ರಾಮನ ದೇವಸ್ಥಾನದ ಮುಂದೆ ಹುಂಡಿ ಇಟ್ಕೊಂಡು ಹಣ ತಿಂತಾರೆ ನಾಚಿಕೆ ಆಗಲ್ವಾ ಇವರಿಗೆ..
ಇಂತವರು ಆಕಾಶಕ್ಕೆ ಉಗಿದು, ಮೈಮೇಲೆ ಬೀಳಿಸಿಕೊಂಡವರಿದ್ದಾರೆ. ರಾಮನನ್ನ ಟೀಕೆ ಮಾಡೋದು ಆಕಾಶಕ್ಕೆ ಉಗಿದಂತೆ, ಅವರ ಮುಖಕ್ಕೆ ಬೀಳೋದು. ಎ.ರಾಜನ ಮನೆಯಲ್ಲೇ ಮತ್ತೆ ರಾಮಭಕ್ತ ಹುಟ್ಟುತ್ತಾನೆ ಎಂದು ಮಾಜಿ ಸಚಿವ ಸಿ.ಟಿ. ರವಿ ಹೇಳಿದ್ದಾರೆ.
ಮನದಲ್ಲಿ ಬಹಳ ಭಾವನೆಗಳಿವೆ, ಹೇಳೋಕು ಬಹಳ ಇದೆ, ಸಮಯ ಇದಲ್ಲ. ಸದ್ಯಕ್ಕೆ ರಾಷ್ಟ್ರದ ಹಿತಕ್ಕಾಗಿ ಮೋದಿ 3ನೇ ಬಾರಿ ಪ್ರಧಾನಿ ಆಗಬೇಕು ಅಷ್ಟೆ. ಪಕ್ಷ-ರಾಷ್ಟ್ರದ ಹಿತಕ್ಕಾಗಿ ಬಹಳ ವಿಷಯಗಳನ್ನ ನುಂಗಿಕೊಂಡಿದ್ದೇನೆ. ಬಹಳ ದಿನ ಹೊಟ್ಟೆಯಲ್ಲಿ ಇಟ್ಟುಕೊಳ್ಳಲು ಆಗಲ್ಲ, ಸಮಯ ಬರಲಿ ಎಲ್ಲಾ ಹೇಳ್ತೀನಿ.
ವೈಯಕ್ತಿಕ ನೆಲೆಯಲ್ಲಿ ರಾಜಕಾರಣ ಮಾಡೋದಾದ್ರು ಲೋಕ ಚುನಾವಣೆ ನಂತರವೇ. ಲೋಕಸಭೆ ಚುಣಾವಣೆ ಬಳಿಕ ಯಾರ್ಯಾರು ವಿಧಾನಸಭೆ ಚುನಾವಣೆಯಲ್ಲಿ ಹೇಗೆ ನಡೆದುಕೊಂಡ್ರು ಅಂತ ಹೇಳ್ತೀನಿ. ಲೋಕಸಭೆ ಚುನಾವಣೆ ಬಳಿಕ ಬಹಳ ವಿಷಯ ಹೇಳಲು ಇದೆ, ಹೇಳ್ತೀನಿ, ಹೇಳಲೇಬೇಕು. ಈಗ ಪ್ರಧಾನಿ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು ಅದೊಂದೇ ಗುರಿ ಇರೋದು. ರಾಜ್ಯದ 28 ಸ್ಥಾನವನ್ನೂ ಬಿಜೆಪಿ ಗೆಲ್ಲಬೇಕು, ಅದಕ್ಕೆ ಅಳಿಲು ಸೇವೆ ಮಾಡೋದಷ್ಟೆ ನಮ್ಮ ಕೆಲಸ ಎಂದು ಸಿ.ಟಿ.ರವಿ ಹೇಳಿದರು.
BJP leader CT Ravi has lashed out at DMK leader A Raja for his remarks that Lord Ram is not God and India is not the country. If a dog calls, the earth will be ruined. They want to destroy the faith of the people of India. All those who want this have been destroyed.
12-01-26 08:20 pm
Mangaluru
ಮನೆ ಕಟ್ಟಲು ಅಡಿಪಾಯ ತೆಗೆಯುವ ವೇಳೆ 1 ಕೆಜಿಯಷ್ಟು ನಿ...
10-01-26 10:28 pm
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
12-01-26 11:00 pm
HK staffer
ಕುಂಬಳೆ ಟೋಲ್ ಗೇಟ್ ವಿರುದ್ಧ ರಸ್ತೆ ತಡೆದು ಪ್ರತಿಭಟನ...
12-01-26 05:01 pm
ಎಕ್ಸ್ ನಲ್ಲಿ ಅಶ್ಲೀಲ ಕಂಟೆಂಟ್ ; ಐಟಿ ಸಚಿವಾಲಯದ ಒತ್...
11-01-26 06:07 pm
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
12-01-26 08:03 pm
Mangaluru Staffer
ಭಾರತ ರಕ್ತಪಾತಕ್ಕೆ ಇನ್ನಷ್ಟು ಸಿದ್ಧವಾಗಬೇಕು ; ಚೀನಾ...
11-01-26 10:39 pm
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
12-01-26 06:28 pm
Mangaluru Staffer
Mangalore Crime: ಬಾಂಗ್ಲಾದವನೆಂದು ಹೇಳಿ ವಲಸೆ ಕಾರ...
12-01-26 01:54 pm
Sharmila Death, Murder, Bangalore: ಮಂಗಳೂರಿನ ಟ...
12-01-26 01:31 pm
ಅಯ್ಯಪ್ಪ ಸ್ವಾಮಿಗಳ ಪೂಜೆ ಸಂದರ್ಭದಲ್ಲಿ ಮುಸ್ಲಿಂ ವ್ಯ...
11-01-26 09:59 pm
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm