ಬ್ರೇಕಿಂಗ್ ನ್ಯೂಸ್
04-06-24 11:14 pm Bangalore Correspondent ಕರ್ನಾಟಕ
ಬೆಂಗಳೂರು, ಜೂ 04: ಇದು ಮಂಜುನಾಥ್ ಅವರ ಗೆಲುವು. ಅವರ ಪಕ್ಷಗಳ ಗೆಲುವಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು. ಸದಾಶಿವನಗರ ನಿವಾಸದಲ್ಲಿಂದು ಲೋಕಸಭೆ ಚುನಾವಣೆ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿ, "ಮಂಜುನಾಥ್ ಅವರನ್ನು ಸ್ಪರ್ಧೆ ಮಾಡಿಸಿದ್ದು ಅವರ ಯಶಸ್ಸಿಗೆ ಕಾರಣ. ಅದನ್ನು ನಾವು ಒಪ್ಪಿದ್ದೇವೆ. ಇದು ಮಂಜುನಾಥ್ ಅವರ ಗೆಲುವು. ಅವರ ಪಕ್ಷಗಳ ಗೆಲುವಲ್ಲ" ಎಂದರು.
ರಾಜ್ಯದಲ್ಲಿ ನಾವು 1 ಸ್ಥಾನದಿಂದ 9 ಸ್ಥಾನಗಳಿಗೆ ಏರಿಕೆ ಕಂಡಿದ್ದೇವೆ. ನಾವು 14 ಸ್ಥಾನಗಳ ನಿರೀಕ್ಷೆಯಲ್ಲಿದ್ದೆವು. ನನ್ನ ಕ್ಷೇತ್ರದಲ್ಲಿ ಡಾ.ಮಂಜುನಾಥ್ ಅವರ ಗೆಲುವಿಗೆ ವೈಯಕ್ತಿಕವಾಗಿ ಅಭಿನಂದಿಸುತ್ತೇನೆ. ಅವರ ಪಕ್ಷ ಗೆಲ್ಲುವುದಕ್ಕಿಂತ ಇಲ್ಲಿ ವ್ಯಕ್ತಿ ಗೆದ್ದಿದ್ದಾರೆ. ಬಹಳ ಲೆಕ್ಕಾಚಾರದಲ್ಲಿ ಅವರನ್ನು ಬಿಜೆಪಿಯಿಂದ ಸ್ಪರ್ಧಿಸುವಂತೆ ಮಾಡಿದ್ದರು. ಇಷ್ಟು ದೊಡ್ಡ ಅಂತರದ ಸೋಲಿನ ನಿರೀಕ್ಷೆ ಮಾಡಿರಲಿಲ್ಲ. ನನ್ನ ತಮ್ಮ ಉತ್ತಮ ಕೆಲಸ ಮಾಡಿದ್ದು, ಆಡಳಿತ ವಿರೋಧಿ ಅಲೆ ಇರಲಿಲ್ಲ. ಆದರೆ ಮಂಜುನಾಥ್ ಅವರಿಗೆ ಅವಕಾಶ ನೀಡಬೇಕು ಎಂದು ಜನ ಅವರನ್ನು ಗೆಲ್ಲಿಸಿದ್ದಾರೆ ಎಂದು ತಿಳಿಸಿದರು.
ನನ್ನ ಕ್ಷೇತ್ರದಲ್ಲಿ 60 ಸಾವಿರ ಮತಗಳ ಮುನ್ನಡೆ ಪಡೆಯುವ ನಿರೀಕ್ಷೆ ಇತ್ತು. ಆದರೆ 26 ಸಾವಿರ ಮಾತ್ರ ಬಂದಿದೆ. ಚನ್ನಪಟ್ಟಣದಲ್ಲಿ ಅವರಿಗೆ ಉಲ್ಟಾ ಬಂದಿದೆ. ಈ ಫಲಿತಾಂಶದ ಮೂಲಕ ಜನ ಕೊಟ್ಟಿರುವ ಸಂದೇಶ ಅರಿಯುತ್ತೇನೆ. ಪ್ರಜ್ಞಾವಂತ ಮತದಾರರ ತೀರ್ಪು ಪ್ರಶ್ನಿಸುವುದಿಲ್ಲ. ನಮಗೆ ಇನ್ನೂ ಹೆಚ್ಚಿನ ಸ್ಥಾನ ಬರಬೇಕಾಗಿತ್ತು. ಯಾಕೆ ಕಡಿಮೆ ಬಂದಿದೆ ಎಂದು ಚಿಂತನೆ ಮಾಡುತ್ತೇವೆ. ಗ್ಯಾರಂಟಿ ಯೋಜನೆಗಳಿಂದ ಹೆಚ್ಚಿನ ಸೀಟು ನಿರೀಕ್ಷೆ ಮಾಡಿದ್ದೆವು. ಜನ ಯಾವ ವಿಚಾರದಲ್ಲಿ ನಮ್ಮನ್ನು ಒಪ್ಪಿಲ್ಲ ಎಂಬುದನ್ನು ಪರಿಶೀಲಿಸಿ ಅದನ್ನು ಮುಂದಿನ ದಿನಗಳಲ್ಲಿ ಸರಿಪಡಿಸಿಕೊಳ್ಳುತ್ತೇವೆ ಎಂದು ಪ್ರತಿಕ್ರಿಯೆ ನೀಡಿದರು.
DK Shivakumar disappointed over DK Suresh defeat, says didn't expect such big defeat. He congratulated Dr Manjunath for his major victory. He said doctor has won for his goodness and not by BJP he slammed.
24-02-25 01:36 pm
HK News Desk
Kumar Bangarappa, BJP President: ಬಿಜೆಪಿ ರಾಜ್ಯ...
23-02-25 06:38 pm
Telangana Model, Pramod Muthalik, CM Siddaram...
21-02-25 10:47 pm
Rohini Sindhuri, Roopa moudgil, latest news:...
21-02-25 10:12 pm
Santosh Lad, Modi, Nitin Gadkari: ಬಿಜೆಪಿ ಅಧಿಕ...
21-02-25 04:36 pm
24-02-25 10:14 pm
HK News Desk
India Pak Match 2025 Live: ಪಾಕ್ ತಂಡವನ್ನು ಚಾಂಪ...
23-02-25 11:22 pm
ಗಂಗಾ ನದಿಗಿದೆ ಸ್ವಯಂ ಶುದ್ಧೀಕರಣದ ಶಕ್ತಿ ; ಕೋಟ್ಯಂತ...
23-02-25 09:52 pm
ದುಬೈನಲ್ಲಿ ಕ್ರಿಮಿನಲ್ ಇನ್ವೆಸ್ಟಿಗೇಶನ್ ಅಧಿಕಾರಿಗಳ...
22-02-25 09:48 pm
ದುಬೈ ಉದ್ಯಮಿ ಬಿ.ಆರ್ ಶೆಟ್ಟಿಗೆ ದುಬೈ ಕೋರ್ಟಿನಿಂದ ಮ...
22-02-25 07:51 pm
25-02-25 02:34 pm
Mangalore Correspondent
Puttur doctor, C Section, Mangalore: ಸಿಸೇರಿಯನ...
25-02-25 12:24 pm
Puttur News, Dr Anil Baipadithaya, hospital:...
24-02-25 02:50 pm
Mangalore accident, Surathkal, Raichur: ಸುರತ್...
23-02-25 03:20 pm
Rani Abbakka, Mamata Ballal, Mangalore: ಐನೂರು...
23-02-25 01:12 pm
25-02-25 08:10 pm
Mangalore Correspondent
Mangalore, Kotekar bank robbery, Bhaskar Belc...
25-02-25 05:18 pm
Kerala Murder, Crime, Affan: ತಿರುವನಂತಪುರ ; ಒಂ...
25-02-25 01:37 pm
Delhi crime, Wife Murder: ತ್ರಿವೇಣಿ ಸಂಗಮದಲ್ಲಿ...
24-02-25 10:51 pm
Illegal drug supply, Mangalore: ಮಂಗಳೂರು ಜೈಲಿಗ...
24-02-25 09:43 pm