ಬ್ರೇಕಿಂಗ್ ನ್ಯೂಸ್
26-07-20 09:00 am ಕರ್ನಾಟಕ
ಬೆಂಗಳೂರು(ಜುಲೈ 26): ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದು ಒಂದು ವರ್ಷವಾಗಿದೆ. ಸಿಎಂ ಸೇರಿ ಸಚಿವರು ಎಷ್ಟರಮಟ್ಟಿಗೆ ಜವಾಬ್ದಾರಿ ನಿಭಾಯಿಸಿದ್ಧಾರೆ ಎಂಬುದು ಪ್ರಶ್ನೆ. ಸರಳಗೊಳಿಸುವ ಉದ್ದೇಶದಿಂದ ಸಂಪುಟದಲ್ಲಿ ಮೂಲ ಬಿಜೆಪಿಗರು ಮತ್ತು ವಲಸಿಗರೆಂದು ವಿಭಜಿಸಿ ಇಲ್ಲಿ ಪ್ರತ್ಯೇಕವಾಗಿ ವಿಶ್ಲೇಷಣೆ ಮಾಡಲಾಗಿದೆ. ಗೃಹ ಸಚಿವ ಬಸವರಾಜ ಬೊಮ್ಮಾಯಿ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್, ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ ನಾರಾಯಣ, ಕಂದಾಯ ಸಚಿವ ಆರ್ ಅಶೋಕ್, ಬೃಹತ್ ಕೈಗಾರಿಕೆಗಳ ಸಚಿವ ಜಗದೀಶ್ ಶೆಟ್ಟರ್, ಗ್ರಾಮೀಣಾಭಿವೃದ್ಧಿ ಸಚಿವ ಕೆಎಸ್ ಈಶ್ವರಪ್ಪ ಅವರ ಕಾರ್ಯಸಾಧನೆಗಳನ್ನ ವಿಶ್ಲೇಷಿಸಲಾಗಿದೆ.
ಪ್ರಮುಖ ಬೆಳವಣಿಗೆಗಳು:
* ಔರಾದ್ಕರ್ ವರದಿ ಜಾರಿಯಿಂದ ಹೊಸದಾಗಿ ನೇಮಕವಾಗುವ ಪೊಲೀಸ್ ಸಿಬ್ಬಂದಿಗೆ ಅನುಕೂಲ
* ಕೋವಿಡ್ ವೇಳೆ ಪಾದರಾಯನಪುರ ಗಲಾಟೆ
* ವರ್ಷದ ಆರು ತಿಂಗಳು ಲಾಕ್ ಡೌನ್ ಬಂದೋಬಸ್ತ್ ನಲ್ಲೇ ಕಳೆಯಿತು ಸಮಯ
* ಮೈತ್ರಿ ಸರ್ಕಾರದಲ್ಲಿ ನೇಮಕವಾಗಿದ್ದ ಬೆಂಗಳೂರು ಪೊಲೀಸ್ ಆಯುಕ್ತ ಅಲೋಕಕುಮಾರ ಸ್ಥಾನಕ್ಕೆ ಭಾಸ್ಕರ್ ರಾವ್ ನೇಮಕ* ಲಾಕ್ ಡೌನ್ ವೇಳೆ ಹೆಚ್ಚು ಸವಾಲಾಗಿದ್ದ ಬಂದೋಬಸ್ತ್ ವ್ಯವಸ್ಥೆಯನ್ನು ಸೂಕ್ತವಾಗಿ ನಿಭಾಯಿಸಿದ್ದು ಹೆಚ್ಚುಗಾರಿಕೆ
* ಟಾಸ್ಕ್ ಪೋರ್ಸ್ ಸಭೆಯಲ್ಲಿ ಡಿಸಿಎಂ ಅಶ್ವಥನಾರಾಯಣ ಜೊತೆ ಮಾತಿನ ಚಕಮಕಿ ವೇಳೆ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಕಣ್ಣೀರು ಹಾಕಿದ್ದು
* ಇಲಾಖೆ ನೇಮಕಾತಿಯಲ್ಲಿ ಮೀಸಲಾತಿ ಜಾರಿ
ಮೈನಸ್ ಪಾಯಿಂಟ್ಸ್:
* ಔರಾದ್ಕರ್ ವರದಿ ಜಾರಿಯಿಂದ ಸೇವೆಯಲ್ಲಿರೋ ಪೊಲೀಸ್ ಸಿಬ್ಬಂದಿಗೆ ಅನ್ಯಾಯ
* ಕಾನೂನು ಸುವವ್ಯಸ್ಥೆ ಕಾಪಾಡುವಲ್ಲಿ ವಿಫಲ
* ಗೃಹ ಸಚಿವರಿಗೆ ಇಲಾಖೆಗೆ ಬೇಕಾದ ಗತ್ತು ಇಲ್ಲ ಅನ್ನೋ ಆರೋಪ
* ಕೊರೋನಾ ವೇಳೆ ಪಾದರಾಯನಪುರ ಗಲಾಟೆ ನಿಭಾಯಿಸುವಲ್ಲಿ ಗೊಂದಲ ಮೂಡಿಸಿದ್ದು
* ಗಲಭೆಕೋರರನ್ನ ಎಲ್ಲಿ ಇಡಬೇಕು ಅನ್ನೋ ವಿಚಾರದಲ್ಲಿ ಸಾಕಷ್ಟು ಗೊಂದಲ (ರಾಮನಗರ ಜೈಲಿನಲ್ಲಿ ಇಟ್ಟ ಘಟನೆ)
* ಖಾತೆಯನ್ನ ಸ್ವತಂತ್ರವಾಗಿ ನಿಭಾಯಿಸುವಲ್ಲಿ ಸಚಿವರು ವಿಫಲ
ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ (ಸುರೇಶಕುಮಾರ್) ಮತ್ತು ಉನ್ನತ ಶಿಕ್ಷಣ (ಡಿಸಿಎಂ ಅಶ್ವತ್ಥ ನಾರಾಯಣ) ಇಲಾಖೆಗಳ ಸಾಧನೆಗಳು:
ಸಾಧನೆಗಳು:
* ಕೋವಿಡ್ ಸಮಯದಲ್ಲೂ ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ಸಕ್ಸಸ್ ಆಗಿ ನಡೆಸಿದ್ದು ಗರಿಮೆ
* ತಾಂತ್ರಿಕ ಹಾಗೂ ಮೆಡಿಕಲ್ ಫೈನಲ್ ಪದವಿ ಪರೀಕ್ಷೆ ಯಶಸ್ವಿಯಾಗಿ ನಡೆಸಿದ್ದು
* ಸರ್ಕಾರಿ ಕನ್ನಡ ಶಾಲೆಗಳಿಗೆ ಉತ್ತೇಜನ
* SSLC ಮತ್ತು PUC ಯಲ್ಲಿ ಉತ್ತಮ ಫಲಿತಾಂಶ ದೊಡ್ಡ ಸಾಧನೆ
* ಶಾಸಕರ ಅನುದಾನದಲ್ಲಿ ಮೂರು ಶಾಲೆಗಳನ್ನ ದತ್ತು ಪಡೆದು ಅಭಿವೃದ್ಧಿ ಪಡಿಸುವ ಯೋಜನೆ
ನೆಗೆಟಿವ್ ಪಾಯಿಂಟ್ಸ್:
* ಇದೂವರೆಗೂ ಜಾರಿಯಾಗದ ಶಾಸಕರ ಅನುದಾನದಲ್ಲಿ ಶಾಲೆಗಳ ಅಭಿವೃದ್ಧಿ ಕಾರ್ಯಕ್ರಮ
* ಆನ್ ಲೈನ್ ತರಗತಿ ವಿಚಾರದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಲಾಬಿ ಮಣಿದ ಸರ್ಕಾರ ಅನ್ನೋ ಆರೋಪ ಕೇಳಿ ಬಂದಿತ್ತು
* ಶಾಲಾ ಆರಂಭದ ಬಗ್ಗೆ ಬಗೆಹರಿಯದ ಗೊಂದಲ
* ಪಠ್ಯ ಪುಸ್ತಕದಲ್ಲಿ ಟಿಪ್ಪು ಸುಲ್ತಾನ ಪಠ್ಯವನ್ನ ತೆಗೆದು ಹಾಕಬೇಕನ್ನುವ ವಿಚಾರ ವಿವಾದ ಸೃಷ್ಟಿಸಿತ್ತು
* ಇಂಜಿನಿಯರಿಂಗ್ ಪೂರೈಸಿದ ವಿದ್ಯಾರ್ಥಿಗಳಿಗೆ ಭವಿಷ್ಯದ ಆತಂಕ, ನಿರುದ್ಯೋಗದ ಭೀತಿ
* ಐಟಿ, ಬಿಟಿ ಸಚಿವರು, ಉನ್ನತ ಶಿಕ್ಷಣ ಸಚಿವರೂ ಒಬ್ಬರೆ ಆದ್ರೆ, ಎರಡು ಇಲಾಖೆಲಿ ಸಮನ್ವಯತೆ ತಂದು ಉದ್ಯೋಗ ಸೃಷ್ಟಿಯಲ್ಲಿ ವೈಫಲ್ಯ.
18-09-25 05:34 pm
Bangalore Correspondent
Ksrtc Bus, Driver, Heart Attack: ಬಸ್ ಓಡಿಸುವಾಗ...
17-09-25 06:02 pm
Sadananda Gowda, Cyber Fraud: ಮಾಜಿ ಸಿಎಂ ಡಿವಿಎ...
17-09-25 05:45 pm
Lokayukta, Dinesh Gundu Rao: ಜಮೀರ್ ಅಹ್ಮದ್ ಅಕ್...
16-09-25 11:00 pm
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
18-09-25 08:14 pm
HK News Desk
ಎರಡು ಬಾರಿ ಕಚ್ಚಿದ್ರೆ ಬೀದಿ ನಾಯಿಗೆ ಜೀವಾವಧಿ ಶಿಕ್ಷ...
16-09-25 10:11 pm
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
18-09-25 11:11 pm
Mangalore Correspondent
Mangalore, UT Khader: ಹಿಂದುಳಿದ ವರ್ಗಗಳ ಆಯೋಗ ಸ್...
18-09-25 09:12 pm
ಮಾಜಿ ಸೈನಿಕರಿಗೆ ಸರ್ಕಾರಿ ಸವಲತ್ತು ನೀಡದೆ ನಿರ್ಲಕ್ಷ...
18-09-25 09:09 pm
Banglegudde, Dharmasthala, SIT: ಬಂಗ್ಲೆಗುಡ್ಡೆ...
18-09-25 07:40 pm
Ajith Kumar Rai, Mangalore: ಬಂಟ- ನಾಡವರು ಒಂದೇ,...
18-09-25 06:11 pm
18-09-25 11:44 am
HK News Desk
Vijayapura Bank Robbery: SBI ಬ್ಯಾಂಕ್ ದರೋಡೆ ;...
17-09-25 09:44 pm
Mangalore Crime, Cattle Theft: ಅಡ್ಯಾರ್ ನಲ್ಲಿ...
17-09-25 06:04 pm
Udupi, Job Fraud, Scam: ವಿದೇಶದಲ್ಲಿ ಕೆಲಸ ಕೊಡಿಸ...
17-09-25 02:46 pm
ಫುಡ್ ಡೆಲಿವರಿ ನೆಪದಲ್ಲಿ ಬಾಗಿಲು ತಟ್ಟಿದ ಕಳ್ಳ ; ವೃ...
17-09-25 12:25 pm