ಬ್ರೇಕಿಂಗ್ ನ್ಯೂಸ್
11-12-24 10:48 pm Bangalore Correspondent ಕರ್ನಾಟಕ
ಬೆಂಗಳೂರು, ಡಿ.11: ಉತ್ತರ ಪ್ರದೇಶ ಮೂಲದ ಟೆಕ್ಕಿ ಅತುಲ್ ಸುಭಾಷ್ ಬೆಂಗಳೂರಿನ ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದು ಮತ್ತು ತನ್ನ ಸಾವಿಗೆ ಪತ್ನಿಯ ಕಿರುಕುಳ ಕಾರಣ ಎಂದು ಸುದೀರ್ಘ ಡೆತ್ ನೋಟ್ ಬರೆದಿಟ್ಟ ವಿಚಾರ ಜಾಲತಾಣದಲ್ಲಿ ತೀವ್ರ ಚರ್ಚೆಗೆ ಗುರಿಯಾಗಿದೆ. ರಾಷ್ಟ್ರೀಯ ಮಾಧ್ಯಮಗಳು ಇದೇ ವಿಚಾರವನ್ನು ಚರ್ಚೆಗೆತ್ತಿಕೊಂಡರೆ, ಸುಪ್ರೀಂ ಕೋರ್ಟ್ ಕೂಡ ಘಟನೆ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಮಹಿಳೆಯರು ಕಾನೂನು ದುರುಪಯೋಗ ಮಾಡುವುದನ್ನು ತಡೆಯಬೇಕು, ವರದಕ್ಷಿಣೆ ಕಿರುಕುಳ ಪ್ರಕರಣದಲ್ಲಿ ತೀರ್ಪು ನೀಡುವಾಗ ಜಾಗ್ರತೆ ವಹಿಸಬೇಕೆಂದು ಬೆಂಗಳೂರಿನ ಪ್ರಕರಣ ಉಲ್ಲೇಖಿಸಿ ಹೇಳಿದೆ.
ಅತುಲ್ ಸುಭಾಷ್ ಸಾವಿಗೂ ಮುನ್ನ 80 ನಿಮಿಷಗಳ ಸಾಮಾಜಿಕ ಜಾಲತಾಣದಲ್ಲಿ ಲೈವ್ ಆಗಿ ಮಾತನಾಡಿದ್ದು, ತನ್ನ ಸಾವಿನ ಬಗ್ಗೆ ಹೇಳಿಕೊಂಡಿದ್ದಾನೆ. ನನ್ನ ಗಳಿಕೆಯ ಹಣವೆಲ್ಲಾ ನನ್ನ ಶತ್ರುಗಳ ಪಾಲಾಗುತ್ತಿದ್ದು, ಅವರನ್ನು ಗಟ್ಟಿಯಾಗಿಸುತ್ತಿದೆ. ಅದೇ ಹಣವನ್ನು ನನ್ನ ವಿರುದ್ಧ ಬಳಕೆ ಮಾಡುತ್ತಿದ್ದು, ಈ ರೀತಿಯ ಸೈಕಲ್ ಸಾಗುತ್ತಲೇ ಇದೆ. ಈ ದೇಶದ ಕಾನೂನು, ವ್ಯವಸ್ಥೆ ಪುರುಷರ ಪರವಾಗಿಲ್ಲ. ನಮ್ಮನ್ನು ಬದುಕಿಸುವ ಕಾನೂನು ಇಲ್ಲ. ನಾವು ಕಟ್ಟಿದ ತೆರಿಗೆಯ ಹಣದಿಂದ ಪೊಲೀಸ್ ಮತ್ತು ಕೋರ್ಟ್ ವ್ಯವಸ್ಥೆ ನಮಗೆ ಕಿರುಕುಳ ಕೊಡುತ್ತಿದೆ. ಇದಕ್ಕಾಗಿ ನನ್ನ ದುಡಿಮೆ, ಗಳಿಕೆಯನ್ನೇ ಕೊನೆಗೊಳಿಸುತ್ತೇನೆ. ಆದರೆ ನನಗೆ ಈ ಅವಸ್ಥೆ ತಂದವರಿಗೆ ತಕ್ಕ ಶಾಸ್ತಿಯಾಗಬೇಕು. ನನ್ನ ಸಾವಿನ ಬಳಿಕ ಶವ ಮುಟ್ಟುವುದಕ್ಕೂ ಪತ್ನಿಗಾಗಲೀ, ಕುಟುಂಬಸ್ಥರಿಗಾಗಲೀ ಬಿಡಬಾರದು. ಅವರಿಗೆ ನನ್ನ ಬೂದಿಯನ್ನೂ ಮುಟ್ಟಲು ಬಿಡಬಾರದೆಂದು ಕುಟುಂಬಕ್ಕೆ ಕೇಳಿಕೊಳ್ಳುತ್ತೇನೆ. ಒಂದ್ವೇಳೆ, ಇಷ್ಟಾಗಿಯೂ ನನಗೆ ಈ ಸ್ಥಿತಿ ತಂದವರಿಗೆ ಶಿಕ್ಷೆಯಾಗದೇ ಇದ್ದರೆ, ನನ್ನ ಬೂದಿಯನ್ನು ಕೋರ್ಟ್ ಕಟ್ಟಡದ ಬಳಿಯ ಗಟಾರಕ್ಕೆ ಎಸೆದು ಬಿಡಿ ಎಂದು ಹೇಳಿದ್ದು ಈ ವಿಡಿಯೋ ಈಗ ಟ್ವಿಟರ್, ಫೇಸ್ಬುಕ್ ಜಾಲತಾಣದಲ್ಲಿ ವೈರಲ್ ಆಗಿದೆ.
ಇದಲ್ಲದೆ, ಬೆಂಗಳೂರಿನ ಮಂಜುನಾಥ ನಗರದ ತನ್ನ ಮನೆಯ ಕೊಠಡಿಯಲ್ಲಿ ಸಾವಿಗೆ ಶರಣಾಗುವುದಕ್ಕೂ ಮುನ್ನ 24 ಪುಟಗಳ ಸುದೀರ್ಘ ಡೆತ್ ನೋಟ್ ಬರೆದಿದ್ದು, ಅದನ್ನು ಪೊಲೀಸರು, ಸರಕಾರ, ಅಧಿಕಾರಿಗಳು, ಎನ್ ಜಿಓಗಳಿಗೆ ಇಮೇಲ್ ಮಾಡಿದ್ದಾನೆ. ಅತುಲ್ ಸುಭಾಷ್ ಸೋದರ ಬಿಕಾಸ್ ಕುಮಾರ್ ನೀಡಿದ ದೂರಿನಂತೆ ಮಾರತ್ ಹಳ್ಳಿ ಠಾಣೆಯಲ್ಲಿ ಪತ್ನಿ ನಿಕಿತಾ ಸಿಂಘಾನಿಯಾ, ಆಕೆಯ ತಾಯಿ ನಿಶಾ ಸಿಂಘಾನಿಯಾ, ಪತ್ನಿಯ ಸೋದರ ಅನುರಾಗ್ ಸಿಂಘಾನಿಯಾ ಮತ್ತು ಪತ್ನಿಯ ಮಾವ ಸುಶೀಲ್ ಸಿಂಘಾನಿಯಾ ವಿರುದ್ಧ ಸಾವಿಗೆ ಪ್ರಚೋದನೆ ಮಾಡಿರುವ ಪ್ರಕರಣ ದಾಖಲಾಗಿದೆ.
ಡೈವರ್ಸ್ ಪಡೆಯಲು 3 ಕೋಟಿ ಕೇಳಿದ್ದ ಪತ್ನಿ
ಬೆಂಗಳೂರಿನ ಖಾಸಗಿ ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಅತುಲ್ ಮತ್ತು ನಿಕಿತಾ 2019ರಲ್ಲಿ ಮದುವೆಯಾಗಿದ್ದರು. ಇವರಿಗೆ ಮಗುವೂ ಆಗಿದ್ದು, ಆನಂತರ ಇವರೊಳಗೆ ಹಣಕಾಸು ವಿಚಾರದಲ್ಲಿ ಜಗಳವುಂಟಾಗಿ ಬೇರೆಯಾಗಿದ್ದರು. ಈ ನಡುವೆ, ಡೈವರ್ಸ್ ಕೂಡ ಆಗಿದ್ದು, ಅದಕ್ಕೊಪ್ಪದ ನಿಕಿತಾ ತನ್ನನ್ನು ಬಿಟ್ಟು ಹೋಗುವುದಿದ್ದರೆ 3 ಕೋಟಿ ರೂಪಾಯಿ ನೀಡಬೇಕೆಂದು ಡಿಮ್ಯಾಂಡ್ ಮಾಡಿದ್ದಳು. ಅಲ್ಲದೆ, ತಿಂಗಳಿಗೆ 30 ಲಕ್ಷ ರೂ. ಕೊಡಬೇಕೆಂದು ಹೇಳಿದ್ದಳು. ಈಕೆಯ ಕುಟುಂಬಕ್ಕೆ ಉತ್ತರ ಪ್ರದೇಶದಲ್ಲಿ ಜಡ್ಜ್ ಆಗಿರುವ ಒಬ್ಬ ಸಂಬಂಧಿಕ ವ್ಯಕ್ತಿಯೊಬ್ಬರು ಬೆಂಬಲಕ್ಕಿದ್ದರು. ಅತುಲ್ ತಂದೆ ಹೇಳುವ ಪ್ರಕಾರ, ಕೌಟುಂಬಿಕ ಕೋರ್ಟಿನಲ್ಲಿ ತೀರಾ ಹಿಂಸೆ ನೀಡುತ್ತಿದ್ದರು. ಅದೇ ಕಾರಣಕ್ಕೆ ಬೆಂಗಳೂರಿನಿಂದ ಉತ್ತರ ಪ್ರದೇಶದ ಜಾನ್ ಪುರಕ್ಕೆ ಕಡಿಮೆ ಎಂದರೂ 40 ಬಾರಿ ಬಂದಿದ್ದ. ಬೇರೆ ಬೇರೆ ರೀತಿಯಲ್ಲಿ ಕಿರುಕುಳ ಪ್ರಕರಣವನ್ನು ದಾಖಲಿಸುತ್ತಿದ್ದರು ಎಂದು ಹೇಳಿದ್ದಾರೆ.
ವರದಕ್ಷಿಣೆ ಕಿರುಕುಳ ದೂರು ನೀಡಿದ್ದ ಪತ್ನಿ
ಪಾಟ್ನಾ ಏರ್ಪೋರ್ಟಿನಲ್ಲಿ ಅತುಲ್ ಸಾವನ್ನಪ್ಪಿದ ಬಗ್ಗೆ ಆತನ ತಂದೆ ಮತ್ತು ತಾಯಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡುತ್ತಾ ಕಣ್ಣೀರು ಹಾಕಿದ್ದಾರೆ. ಈ ವೇಳೆ, ತಾಯಿ ಪ್ರಜ್ಞೆ ತಪ್ಪಿ ಬಿದ್ದಿದ್ದು, ಇದರ ವಿಡಿಯೋ ರಾಷ್ಟ್ರೀಯ ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದು, ಇಡೀ ದೇಶದ ಗಮನಸೆಳೆದಿದೆ. 2022ರ ಎಪ್ರಿಲ್ 24ರಂದು ನಿಕಿತಾ ಮತ್ತು ಆಕೆಯ ಮನೆಯವರು ಅತುಲ್ ವಿರುದ್ಧ ವರದಕ್ಷಿಣೆ ಕಿರುಕುಳ ಬಗ್ಗೆ ದೂರು ದಾಖಲಿಸಿದ್ದರು. ಜಾನ್ ಪುರದ ಕೊತ್ವಾಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆನಂತರ, ನಿಕಿತಾ ಮತ್ತು ಆಕೆಯ ಮಗು ದೆಹಲಿಯಲ್ಲಿ ಪ್ರತ್ಯೇಕವಾಗಿ ವಾಸವಿದ್ದರು. ಆದರೆ, ಜೀವನಕ್ಕಾಗಿ ಹಣ ಕೊಡಬೇಕೆಂದು ನಿರಂತರ ಕಿರುಕುಳ ನೀಡುತ್ತಿದ್ದರು.
ಸುದೀರ್ಘ ಡೆತ್ ನೋಟಲ್ಲೇನಿದೆ ?
ಪತ್ನಿ ಮತ್ತು ಅತ್ತೆ ಮನೆಯಲ್ಲಾಗುತ್ತಿದ್ದ ಪ್ರತಿ ಪೂಜೆ, ಹಬ್ಬಗಳಿಗೂ ಸೀರೆ, ಒಡವೆ ಅಂತ ಹತ್ತು ಲಕ್ಷ ರೂ. ಮೌಲ್ಯದ ಸಾಮಗ್ರಿಗಳನ್ನು ಖರೀದಿಸುತ್ತಿದ್ದರು. ಮನೆಯಲ್ಲಿ ಕ್ಲೀನ್ ಮಾಡುವುದು, ಮಗುವನ್ನು ನೋಡಿಕೊಳ್ಳುವುದು, ಅಡುಗೆ ಮಾಡುವುದನ್ನೇ ನಾನೇ ಮಾಡಬೇಕಿತ್ತು. ಈ ವೇಳೆ, ಪತ್ನಿ ಟಿವಿ ನೋಡುತ್ತ ಕುಳಿತುಕೊಳ್ಳುತ್ತಿದ್ದಳು. ನನ್ನ ಕೆಲಸದ ನಡುವೆಯೇ ಮನೆಯ ಕೆಲಸವನ್ನೂ ಮಾಡಬೇಕಿತ್ತು. 2020ರಲ್ಲಿಯೇ ಪತ್ನಿ ಮತ್ತು ಅತ್ತೆ ಹಣಕ್ಕಾಗಿ ಪೀಡಿಸತೊಡಗಿದ್ದರು. 2020ರ ಮೇ ತಿಂಗಳಲ್ಲಿ 3 ಲಕ್ಷ ಕೊಟ್ಟಿದ್ದೆ. ಆದರೆ ಅತ್ತೆಗೆ ಹಣ ಕೊಡದಿದ್ದರೆ ಪತ್ನಿ ಮನೆ ಬಿಟ್ಟು ಹೋಗುವುದಾಗಿ ಹೆದರಿಸಿದ್ದಳು. 2021ರ ಮಾರ್ಚ್ ನಲ್ಲಿ 15 ಲಕ್ಷ ಕೊಡಬೇಕೆಂದು ಡಿಮ್ಯಾಂಡ್ ಮಾಡಿದ್ದರು. ಆನಂತರ, 9 ಲಕ್ಷ ರೂ. ಆಗಲೇ ಕೊಟ್ಟಿದ್ದೆ. ಆನಂತರ, ಒತ್ತಡ ತಾಳಲಾರದೆ ಎಪ್ರಿಲ್ ತಿಂಗಳಲ್ಲಿ ಮತ್ತೆ ನಾಲ್ಕು ಲಕ್ಷ ಹಾಕಿದ್ದೆ. ಹಣದ ಬಗ್ಗೆ ಕೇಳಿದಾಗ, ಪತ್ನಿ ಮನೆಯವರು ಒಂದು ಕೋಟಿಯ ಮನೆ ಖರೀದಿಸುವ ವಿಚಾರ ಗೊತ್ತಾಗಿತ್ತು. ಆನಂತರ 50 ಲಕ್ಷ ಕೊಡಬೇಕೆಂದು ಕೇಳಿದ್ದರು. ಅಲ್ಲದೆ, ಪತ್ನಿಯ ಸ್ಯಾಲರಿ ಹಣವನ್ನೂ ಬ್ಯಾಂಕಿಗೆ ಗ್ಯಾರಂಟಿ ಕೊಡುವುದಕ್ಕೆ ಕೇಳಿದಾಗ, ವಿರೋಧಿಸಿದ್ದೆ. ಕೊರೊನಾ ಸಂದರ್ಭದಲ್ಲಿ ಅತ್ತೆಯನ್ನು ಬೆಂಗಳೂರಿನ ಮನೆಗೆ ಕರೆಸಿಕೊಂಡಾಗಲೂ ವಿರೋಧ ಮಾಡಿದ್ದೆ.
ಇದಲ್ಲದೆ, ನಮ್ಮ ಊರು ಜಾನ್ ಪುರದಲ್ಲಿದ್ದ ಭೂಮಿಯನ್ನು ಮಾರಾಟಕ್ಕೆ ಮುಂದಾಗಿದ್ದರು. ಅದಕ್ಕೂ ವಿರೋಧಿಸಿದ್ದಕ್ಕೆ ಜಗಳ ಮಾಡಿದ್ದರು. ಅದನ್ನು ಅಡವಿಟ್ಟು 30 ಲಕ್ಷ ಹಣ ಪಡೆದಿದ್ದರು. ಮಗುವನ್ನೂ ದೂರ ಮಾಡಿದ್ದು, ತನಗೆ ಮಗು ನೋಡಬೇಕಿದ್ದರೆ ತಿಂಗಳಿಗೆ 3 ಲಕ್ಷ ರೂ. ಕೊಡಬೇಕೆಂದು ಷರತ್ತು ಹಾಕಿದ್ದರು. ಇದರಿಂದ ತೀವ್ರ ನೊಂದುಕೊಂಡಿದ್ದೆ ಎಂದು ಹಲವು ವಿಚಾರಗಳನ್ನು ಅತುಲ್ ಬರೆದುಕೊಂಡಿದ್ದಾರೆ.
Atul Subhash, who worked for a private firm in the city, had left behind a 24-page purported death note, giving extensive details of what he alleged was years-long emotional distress of marital issues; multiple cases filed against him and harassment
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am