ಬ್ರೇಕಿಂಗ್ ನ್ಯೂಸ್
19-01-25 08:30 pm Bangalore Correspondent ಕರ್ನಾಟಕ
ಬೆಂಗಳೂರು, ಜ.19: ಕೇಸರಿ ಮನೆಯಲ್ಲಿನ ಬಣ ಬಡಿದಾಟಕ್ಕೆ ಮೇಜರ್ ಹೊಸ ಟ್ವಿಸ್ಟ್ ಸಿಕ್ಕಿದ್ದು, ಕಾರ್ಕಳ ಶಾಸಕ ಸುನಿಲ್ ಕುಮಾರ್ ಅವರು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜಿನಾಮೆ ನೀಡಲು ಮುಂದಾಗಿದ್ದಾರೆ. ಈ ಬಗ್ಗೆ ಸ್ವತಃ ಅವರೇ ತಮ್ಮನ್ನು ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಮುಕ್ತಗೊಳಿಸುವಂತೆ ಹೈಕಮಾಂಡ್ಗೆ ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ರಾಜ್ಯಾಧ್ಯಕ್ಷ ವಿಜಯೇಂದ್ರ ಬದಲಾವಣೆಗೆ ಯತ್ನಾಳ್ ಮತ್ತು ರಮೇಶ ಜಾರಕಿಹೊಳಿ ಬಹಿರಂಗ ಕೂಗು ಹಾಕುತ್ತಿರುವಾಗಲೇ ವಿಜಯೇಂದ್ರ ತಂಡದಲ್ಲಿ ಎರಡನೇ ಸ್ಥಾನದಲ್ಲಿದ್ದ ಸುನಿಲ್ ಕುಮಾರ್ ಭಿನ್ನ ರಾಗ ಹಾಡಿದ್ದು ಅಚ್ಚರಿಗೆ ಕಾರಣವಾಗಿದೆ. ಕರಾವಳಿ ಮೂಲದ ನಳಿನ್ ಕುಮಾರ್ ಕಟೀಲ್ ರಾಜ್ಯಾಧ್ಯಕ್ಷ ಹುದ್ದೆ ತೆರವಾದ ಕೂಡಲೇ ಹೈಕಮಾಂಡ್ ವಿಜಯೇಂದ್ರ ಅವರಿಗೆ ಪಟ್ಟ ಕಟ್ಟಿತ್ತು. ಆ ಸಂದರ್ಭದಲ್ಲಿ ಸುನಿಲ್ ಕುಮಾರ್ ಕೂಡ ರಾಜ್ಯಾಧ್ಯಕ್ಷ ಹುದ್ದೆಯ ಆಕಾಂಕ್ಷಿ ಆಗಿದ್ದರು. ಆದರೆ ವಿಜಯೇಂದ್ರ ತಂಡದಲ್ಲಿ ಸುನಿಲ್ ಮಹತ್ವದ ಸ್ಥಾನ ಅಲಂಕರಿಸಿದ್ದರು. ಇದೀಗ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಒಂದು ವರ್ಷ ಪೂರೈಸುತ್ತಿದ್ದಂತೆ ಸುನಿಲ್ ಭಿನ್ನ ನಡೆ ಇಟ್ಟಿದ್ದಾರೆ.
ಎರಡು ದಿನಗಳ ಹಿಂದಷ್ಟೇ ರಾಜ್ಯಕ್ಕೆ ಬಂದಿದ್ದ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್, ರಾಜ್ಯಾಧ್ಯಕ್ಷ ಹುದ್ದೆಗೆ ಚುನಾವಣೆ ನಡೆಸಲಾಗುತ್ತದೆ ಎಂದು ಹೇಳಿದ್ದರು. ಇತ್ತೀಚೆಗೆ ಸಚಿವ ಪ್ರಹ್ಲಾದ ಜೋಷಿ ಕೂಡ ಎಲ್ಲ ಪದಾಧಿಕಾರಿ ಸ್ಥಾನಕ್ಕೂ ಕಾಲ ಕಾಲಕ್ಕೆ ಚುನಾವಣೆ ನಡೆಸಲಾಗುವುದು ಎಂದಿದ್ದರು. ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯೋದು ಪಕ್ಕಾ ಆಗಿದೆ. ಇದರ ನಡುವೆಯೇ, ಸುನಿಲ್ ಕುಮಾರ್ ತಮ್ಮನ್ನು ಹುದ್ದೆಯಿಂದ ಹೊರಗಿಡಲು ಮನವಿ ಮಾಡಿದ್ದಾರೆ. ಹೀಗಾಗಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡುತ್ತಾರೆಯೇ ಎಂಬ ಕುತೂಹಲದ ನೋಟ ಬೀರುವಂತಾಗಿದೆ.
ಇದೇ ವೇಳೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಬಂಡೆದ್ದಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮತ್ತು ರಮೇಶ್ ಜಾರಕಿಹೊಳಿ ಬಣದ ನಾಯಕರು ನೇರ ಠಕ್ಕರ್ ನೀಡುತ್ತಿದ್ದಾರೆ. ಯಡಿಯೂರಪ್ಪ ಮತ್ತು ಪುತ್ರ ವಿಜಯೇಂದ್ರ ವಿರುದ್ಧ ಏಕವಚನದಲ್ಲಿಯೇ ವಾಗ್ದಾಳಿ ನಡೆಸುತ್ತಿದ್ದಾರೆ. ಆಮೂಲಕ ರಾಜ್ಯಾಧ್ಯಕ್ಷ ಹುದ್ದೆಯ ಮೇಲೆ ಚುನಾವಣೆ ನಡೆದರೆ, ಯತ್ನಾಳ್ ಅವರನ್ನೇ ಅಭ್ಯರ್ಥಿಯಾಗಿಸಲು ಚಿಂತನೆ ನಡೆಸಿದ್ದಾರೆ.
ಇತ್ತ ಸುನಿಲ್ ಕುಮಾರ್ ಮೌನ ತಾಳಿದರೆ ಅಥವಾ ಯತ್ನಾಳ್ ಬಣಕ್ಕೆ ಪರೋಕ್ಷ ಬೆಂಬಲ ನೀಡಿದರೂ, ಫಲಿತಾಂಶ ಬದಲಾಗಬಹುದು ಎನ್ನುವ ಲೆಕ್ಕಾಚಾರ ಅವರಲ್ಲಿ ಇರುವಂತಿದೆ. ಈ ಬಗ್ಗೆ ಯತ್ನಾಳ ಬಣದಲ್ಲಿ ಬಿರುಸಿನ ಚಟುವಟಿಕೆ ನಡೆಯುತ್ತಿರುವಾಗಲೇ ಸುನಿಲ್ ತಮ್ಮನ್ನು ಸಂಘಟನಾ ಕಾರ್ಯದಿಂದ ಹೊರಗಿಡಲು ಮನವಿ ಮಾಡಿದ್ದಾರೆ. ಆಮೂಲಕ ವಿಜಯೇಂದ್ರ ನಾಯಕತ್ವದ ಬಗ್ಗೆ ಪರೋಕ್ಷ ಅಸಮ್ಮತಿ ತೋರಿದಂತೆ ಕಾಣುತ್ತಿದೆ.
Amid growing factionalism within the Karnataka BJP, Karkala MLA V. Sunil Kumar has reportedly requested to be relieved from his position as the party's state general secretary. According to sources, Sunil Kumar has made a verbal appeal to the party high command, asking to be relieved of his responsibilities as the general secretary.
13-03-25 02:56 pm
HK News Desk
Karwar, Honnavar, Cow Slaughter, Crime; ಗರ್ಭ...
13-03-25 12:32 pm
Madikeri Earthquake: ಮಡಿಕೇರಿಯಲ್ಲಿ ಲಘು ಭೂಕಂಪನ...
13-03-25 11:57 am
Pramod Muthalik, Love Jihad: ವೇಶ್ಯಾವಾಟಿಕೆ, ಭಯ...
12-03-25 03:51 pm
Mangalore Chakravarti Sulibele, Prakash Raj:...
11-03-25 06:19 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
14-03-25 11:02 am
Mangalore Correspondent
Mangalore Accident, Kapikad, Murder: ನೆರೆಮನೆ...
13-03-25 09:20 pm
PFI, Mangalore Crime, Police: ಪಿಎಫ್ಐ ಮುಖಂಡರಿಗ...
13-03-25 08:46 pm
Mangalore News, crime, Suicide: ಉತ್ತರ ಪ್ರದೇಶ...
13-03-25 10:08 am
Mangalore rain, Heat wave: ಮಂಗಳೂರು ನಗರಕ್ಕೆ ಸಿ...
12-03-25 11:10 pm
13-03-25 06:44 pm
Mangalore Correspondent
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm
Bangalore Suicide, Bank Staff, Crime; ಹಿರಿಯ ಅ...
09-03-25 03:06 pm