Bangalore RTO, Luxury car tax: ತೆರಿಗೆ ಪಾವತಿಸದೆ ಬೆಂಗಳೂರಿನಲ್ಲಿ ದುಬಾರಿ ಕಾರುಗಳ ಸಂಚಾರ ; 30 ಐಷಾರಾಮಿ ಕಾರುಗಳು ವಶಕ್ಕೆ , 3 ಕೋಟಿ ರೂ. ತೆರಿಗೆ ವಸೂಲಿಗೆ ನೋಟಿಸ್, ಫೆರಾರಿ ಕಾರು ಮಾಲೀಕನಿಗೆ 1.45 ಕೋಟಿ ರೂ.ದಂಡ

04-02-25 11:04 pm       Bangalore Correspondent   ಕರ್ನಾಟಕ

ತೆರಿಗೆ ಪಾವತಿಸದೆ ಓಡಾಡುತ್ತಿದ್ದ ದುಬಾರಿ ಕಾರುಗಳ ಮಾಲೀಕರಿಗೆ ಬಿಸಿ ಮುಟ್ಟಿಸಿರುವ ಸಾರಿಗೆ ಇಲಾಖೆ ಅಧಿಕಾರಿಗಳು 30 ಕಾರುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬೆಂಗಳೂರು ಮಾತ್ರವಲ್ಲದೆ, ವಿವಿಧ ಜಿಲ್ಲೆಗಳಲ್ಲಿ ತೆರಿಗೆ ಪಾವತಿಸದೆ ಸಂಚರಿಸುತ್ತಿದ್ದ ಫೆರಾರಿ, ಪೋರ್ಶೆ, ಬಿಎಂಡಬ್ಲ್ಯೂ, ಬೆಂಜ್ ಹಾಗೂ ರೇಂಜ್ ರೋವರ್ ಕಾರು ಸೇರಿ ವಿವಿಧ ಕಂಪೆನಿಗಳ 30ಕ್ಕೂ ಹೆಚ್ಚು ಕಾರುಗಳನ್ನು ವಶಕ್ಕೆ ಪಡೆದು ಮಾಲೀಕರಿಗೆ ದಂಡ ಹಾಕಿದ್ದಾರೆ.

ಬೆಂಗಳೂರು, ಫೆ 04: ತೆರಿಗೆ ಪಾವತಿಸದೆ ಓಡಾಡುತ್ತಿದ್ದ ದುಬಾರಿ ಕಾರುಗಳ ಮಾಲೀಕರಿಗೆ ಬಿಸಿ ಮುಟ್ಟಿಸಿರುವ ಸಾರಿಗೆ ಇಲಾಖೆ ಅಧಿಕಾರಿಗಳು 30 ಕಾರುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬೆಂಗಳೂರು ಮಾತ್ರವಲ್ಲದೆ, ವಿವಿಧ ಜಿಲ್ಲೆಗಳಲ್ಲಿ ತೆರಿಗೆ ಪಾವತಿಸದೆ ಸಂಚರಿಸುತ್ತಿದ್ದ ಫೆರಾರಿ, ಪೋರ್ಶೆ, ಬಿಎಂಡಬ್ಲ್ಯೂ, ಬೆಂಜ್ ಹಾಗೂ ರೇಂಜ್ ರೋವರ್ ಕಾರು ಸೇರಿ ವಿವಿಧ ಕಂಪೆನಿಗಳ 30ಕ್ಕೂ ಹೆಚ್ಚು ಕಾರುಗಳನ್ನು ವಶಕ್ಕೆ ಪಡೆದು ಮಾಲೀಕರಿಗೆ ದಂಡ ಹಾಕಿದ್ದಾರೆ.

ಸಾರಿಗೆ ಉಪ ಆಯುಕ್ತ ಸಿ.ಮಲ್ಲಿಕಾರ್ಜುನ್‌ ನೇತೃತ್ವದಲ್ಲಿ ಆರ್​ಟಿಒ ಅಧಿಕಾರಿಗಳಾದ ಬಿ.ಶ್ರೀನಿವಾಸ್‌ ಪ್ರಸಾದ್, ದೀಪಕ್‌, ಶ್ರೀನಿವಾಸಪ್ಪ ಮತ್ತು ರಂಜಿತ್‌ ಸೇರಿದಂತೆ 41 ಅಧಿಕಾರಿಗಳ ತಂಡ ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ವಶಪಡಿಸಿಕೊಂಡಿರುವ ಕಾರುಗಳಿಂದ ಸುಮಾರು 3 ಕೋಟಿ ರೂ. ತೆರಿಗೆ ವಸೂಲಿಗೆ ನೋಟಿಸ್ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಫೆರಾರಿ ಕಾರಿನ ಮಾಲೀಕರಿಂದ 1.45 ಕೋಟಿ ರೂ ದಂಡ ವಸೂಲಿ:

ಕಾರ್ಯಾಚರಣೆಯಲ್ಲಿ ತೆರಿಗೆ ಪಾವತಿಸದೆ ವಂಚಿಸಿದ್ದ ಪೆರಾರಿ ಮಾಲೀಕರಿಗೆ 1.45 ಕೋಟಿ ದಂಡ ವಿಧಿಸಲಾಗಿದೆ. ದುಬಾರಿ ಮೌಲ್ಯದ ಕಾರು ಮಹಾರಾಷ್ಟ್ರದಲ್ಲಿ 2023ರಲ್ಲಿ ನೋಂದಣಿಯಾಗಿರುವುದು ಕಂಡುಬಂದಿದ್ದು, ಮಾಲೀಕರು ತೆರಿಗೆ ಕಟ್ಟದೆ ಅನಧಿಕೃತವಾಗಿ ರಾಜ್ಯದಲ್ಲಿ ಸಂಚಾರ ನಡೆಸುತ್ತಿರುವುದು ಆರ್​ಟಿಒ ಅಧಿಕಾರಿಗಳ ಗಮನಕ್ಕೆ ಬಂದಿತ್ತು. ಈ ಸಂಬಂಧ ವಿಶೇಷ ಕಾರ್ಯಾಚರಣೆ ನಡೆಸಿ ದಂಡ ವಸೂಲಿ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

In a major crackdown on tax evasion, the Karnataka Transport Department launched a special drive to identify luxury car owners who haven’t paid road taxes. During a single-day operation recently, officials seized 30 high-end cars and recovered approximately ₹3 crore in unpaid taxes.