ಬ್ರೇಕಿಂಗ್ ನ್ಯೂಸ್
24-03-25 09:24 pm Bangalore Correspondent ಕರ್ನಾಟಕ
ಬೆಂಗಳೂರು, ಮಾ 24: ಲಾಂಗ್ ಹಿಡಿದು ರೀಲ್ಸ್ ಮಾಡಿದ್ದ ‘ಬಿಗ್ ಬಾಸ್’ ಖ್ಯಾತಿಯ ವಿನಯ್ ಗೌಡ ಹಾಗೂ ರಜತ್ ನನ್ನ ಬಸವೇಶ್ವರ ನಗರ ಪೊಲೀಸರು ಬಂಧಿಸಿದ್ದಾರೆ.
ಮಾರಕಾಸ್ತ್ರ ಹಿಡಿದು ರೀಲ್ಸ್ ಮಾಡಿದ್ದ ವಿನಯ್ ಅಂಡ್ ರಜತ್ ಮೇಲೆ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿ ಎಫ್ಐಆರ್ ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಜತ್ ಮತ್ತು ವಿನಯ್ ಬಸವೇಶ್ವರ ನಗರ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗಿದ್ದರು. ವಿಚಾರಣೆಯ ನಂತರ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ರೀಲ್ಸ್ನಲ್ಲಿ ವಿನಯ್ ಗೌಡ ಲಾಂಗ್ ಹಿಡಿದು, ಕಣ್ಣಿಗೆ ಕೂಲಿಂಗ್ ಗ್ಲಾಸ್ ಹಾಕಿಕೊಂಡು ದರ್ಶನ್ ಅವರ ‘ಕರಿಯ’ ಸಿನಿಮಾದ ಸ್ಟೈಲ್ನಲ್ಲಿ ಸ್ಲೋ ಮೋಷನ್ನಲ್ಲಿ ನಡೆಯುತ್ತಿರುತ್ತಾರೆ. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ.
ಇನ್ನು ರಜತ್ ಕಿಶನ್ ಶೂಟಿಂಗ್ನಲ್ಲಿದ್ದ ಕಾರಣ ಪತ್ನಿ ಅಕ್ಷಿತಾ ಪೊಲೀಸರ ಮುಂದೆ ಹಾಜರಾಗಿದ್ರು. ಅಲ್ಲದೇ, ಪತಿ ವಿಚಾರಣೆಗೆ ಹಾಜರಾಗಲು ಸ್ವಲ್ಪ ಟೈಂ ಕೇಳಿ ಹೊರಟ್ರಂತೆ. ಅತ್ತ, ವಿನಯ್ ಗೌಡ ಪೊಲೀಸರಿಗೆ ಪತ್ರದ ಮೂಲಕ ಕ್ಷಮೆಕೊರಿದ್ರು.
ಇಷ್ಟೆಲ್ಲಾ ಆದ್ಮೇಲೆ ಸಂಜೆ ಹೊತ್ತಿಗೆ ವಿನಯ್ ಗೌಡ, ರಜತ್ ಕಿಶನ್ ಇಬ್ಬರೂ ಬಸವೇಶ್ವರನಗರ ಠಾಣೆಗೆ ವಿಚಾರಣೆ ಹಾಜರಾಗಲು ಬಂದಿದ್ರು... ಈ ವೇಳೆ ಪೊಲೀಸರು ರಜತ್ ಹಾಗೂ ವಿನಯ್ ಇಬ್ಬರನ್ನೂ ಅರೆಸ್ಟ್ ಮಾಡಿದ್ದಾರೆ. ಪೊಲೀಸ್ ಠಾಣೆಯಲ್ಲಿ ಗಂಟೆಗಟ್ಟಲೇ ಕೂರಿಸಿ ಖಡಕ್ ವಿಚಾರಣೆಯನ್ನು ನಡೆಸಿದ್ದಾರೆ.
ಈ ಲಾಂಗ್ ರೀಲ್ಸ್ ಗೀಳು ಇಬ್ಬರು ಸ್ಟಾರ್ಸ್ಗಳನ್ನ ಸಂಕಷ್ಟಕ್ಕೆ ತಳ್ಳಿಬಿಟ್ಟಿದೆ. ನಾಳೆ ಇಬ್ಬರನ್ನೂ ಕೋರ್ಟಿಗೆ ಹಾಜರು ಪಡಿಸೋ ಸಾದ್ಯತೆ ಇದೆ. ಸೆಲೆಬ್ರಿಟಿಗಳು ಅಂತ ಕರೆಸಿಕೊಳ್ಳೋ ಇವ್ರ ವಿರುದ್ಧ ಲಾಂಗ್ ಹಿಡಿದು ರೀಲ್ಸ್ ಮಾಡಿದ್ದಕ್ಕೆ ಪೊಲೀಸರು ತೆಗೆದುಕೊಂಡಿರೋ ಕ್ರಮ, ಎಲ್ಲರಿಗೂ ಒಂದು ಪಾಠ. ಮುಂದ್ಯಾರೂ ಇಂಥಾ ಶೋಕಿ ಮಾಡದಂತೆ ಎಚ್ಚರಿಕೆಯ ಗಂಟೆ.
Bigg Boss contestants Vinay Gowda and Rajat were arrested in Bangalore after a video featuring the duo wielding weapons for social media reels went viral. The clip, which raised serious concerns about public safety, prompted the Basaveshwar Nagar police to file an FIR against the two reality stars. When Vinay and Rajat arrived at the police station for questioning, they were promptly taken into custody. Authorities are now looking into the implications of their actions and whether they violated any laws regarding firearm use and public safety.
15-07-25 10:35 am
Bangalore Correspondent
ಧರ್ಮಸ್ಥಳದಲ್ಲಿ 20 ವರ್ಷಗಳಲ್ಲಾದ ಯುವತಿಯರ ನಾಪತ್ತೆ-...
14-07-25 10:44 pm
Shiradi Ghat Accident, Car: ಶಿರಾಡಿ ಘಾಟ್ ; ರಸ್...
14-07-25 01:43 pm
Dr B Saroja Devi Death: 17ನೇ ವಯಸ್ಸಲ್ಲೇ ಚಿತ್ರರ...
14-07-25 12:50 pm
Mantralaya, Tungabhadra River, drowning: ತುಂಬ...
13-07-25 08:37 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
15-07-25 10:32 am
Mangalore Correspondent
ಕಲ್ಲು ಮರಳಿನ ಸಮಸ್ಯೆಯಿಂದ ಜನರ ತಲೆಗೆ ಚಪ್ಪಡಿ ಕಲ್ಲು...
14-07-25 09:55 pm
Mrpl leakgae, Death, Fight: ಅನಿಲ ಸೋರಿಕೆಯಿಂದ ಇ...
14-07-25 07:56 pm
Mangalore, Help: ಅಪಘಾತದಲ್ಲಿ ಬಡ ಮಹಿಳೆಯ ತಲೆಗೆ ತ...
13-07-25 11:13 pm
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
15-07-25 11:38 am
Mangalore Correspondent
ಮ್ಯಾಟ್ರಿಮನಿ ಸೈಟಲ್ಲಿ ಸಿಕ್ಕ ಗೆಳತಿಯಿಂದಲೇ ಮೋಸ ; ಆ...
13-07-25 05:23 pm
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am