Cobra Shocks, Chikkamagaluru: ಹೊಟೇಲ್‌ಗೆ ನುಗ್ಗಿ 10 ಕೋಳಿ ಮೊಟ್ಟೆ ನುಂಗಿದ ನಾಗರಹಾವು ; ಗಾಬರಿ ಬಿದ್ದ ಗ್ರಾಹಕರು 

01-04-25 10:45 pm       HK News Desk   ಕರ್ನಾಟಕ

10 ಮೊಟ್ಟೆ ನುಂಗಿದ್ದ ನಾಗರ ಹಾವನ್ನು ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಗ್ರಾಮದಲ್ಲಿ ರಕ್ಷಿಸಲಾಗಿದೆ.

ಚಿಕ್ಕಮಗಳೂರು, ಏ 01: 10 ಮೊಟ್ಟೆ ನುಂಗಿದ್ದ ನಾಗರ ಹಾವನ್ನು ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಗ್ರಾಮದಲ್ಲಿ ರಕ್ಷಿಸಲಾಗಿದೆ.

ಕೊಟ್ಟಿಗೆಹಾರದಲ್ಲಿರುವ ಉಡುಪಿ ವೈಭವ್ ಹೋಟೆಲ್ಗೆ ನುಗ್ಗಿದ ಹಾವು, ಕೋಳಿ ಮೊಟ್ಟೆಗಳನ್ನು ನುಂಗಿದೆ. ಹೊಟ್ಟೆ ತುಂಬಿ ಮುಂದೆಯೂ ಹಿಂದೆಯೂ ಹೋಗಲು ಸಾಧ್ಯವಾಗದೆ ನರಳಾಡುತ್ತಿತ್ತು. ಇದನ್ನು ಗಮನಿಸಿದ ಹೋಟೆಲ್ ಮಾಲೀಕ ಉರಗತಜ್ಞ ಆರಿಫ್ ಅವರಿಗೆ ಕರೆ ಮಾಡಿ ಸ್ಥಳಕ್ಕೆ ಬರಹೇಳಿದ್ದಾರೆ.

ಆರೀಫ್‌ ಬಾಲ ಹಿಡಿದು ಮೇಲೆತ್ತುತ್ತಿದ್ದಂತೆ 10 ಮೊಟ್ಟೆಯನ್ನು ಹಾವು ಹೊರಹಾಕಿದೆ. ಸೆರೆಹಿಡಿದ ನಾಗರನಿಗೆ ಹೋಟೆಲ್ ಮಾಲೀಕ ಪೂಜೆ ಮಾಡಿ ಭಕ್ತಿ ಭಾವ ಮೆರೆದರು.

ನಂತರ ನಾಗರಹಾವನ್ನು ಸ್ನೇಕ್ ಆರಿಫ್ ಅವರು ಸುರಕ್ಷಿತವಾಗಿ ಚಾರ್ಮಾಡಿ ಅರಣ್ಯ ಪ್ರದೇಶಕ್ಕೆ ಬಿಟ್ಟು ಬಂದಿದ್ದಾರೆ.

In a bizarre incident that left hotel customers both startled and amused, a cobra slithered into a local hotel and voraciously devoured ten chicken eggs right before the eyes of unsuspecting diners.