Mandya Mysuru Bangalore Accident, KSRTC, Car: ಮೈಸೂರು - ಬೆಂಗಳೂರು ಎಕ್ಸ್‌ಪ್ರೆಸ್‌ ವೇನಲ್ಲಿ ಭೀಕರ  ಅಪಘಾತ ; ಕಾರಿಗೆ ಡಿಕ್ಕಿ ಹೊಡೆದ KSRTC ಗಾಡಿ, ನಾಲ್ವರ ಬಲಿ, ಮಾವನ ಮಣ್ಣಿಗೆ ಹೊರಟವರು ಮಣ್ಣಾದರೂ ! 

03-04-25 09:44 pm       Bangalore Correspondent   ಕರ್ನಾಟಕ

ಮೈಸೂರು - ಬೆಂಗಳೂರು ಎಕ್ಸ್‌ಪ್ರೆಸ್‌ ವೇನಲ್ಲಿ ಮಂಡ್ಯ ಸಮೀಪ ಕೆಎಸ್‌ಆರ್‌ಟಿಸಿ ಬಸ್‌ ಹಾಗೂ ಕಾರಿನ ನಡುವೆ ಅಪಘಾತ ಸಂಭವಿಸಿದೆ. ಈ ಘಟನೆಯಲ್ಲಿ ವಿಜಯಕರ್ನಾಟಕ ಬೆಂಗಳೂರು ಕಚೇರಿಯ ಉದ್ಯೋಗಿ ನಿಶ್ಚಿತಾ ಅರಸ್ ಹಾಗೂ ಅವರ ಪತಿ ಸೇರಿ 4 ಮಂದಿ ಮೃತಪಟ್ಟಿದ್ದಾರೆ

ಬೆಂಗಳೂರು, ಎ.3: ಮೈಸೂರು - ಬೆಂಗಳೂರು ಎಕ್ಸ್‌ಪ್ರೆಸ್‌ ವೇನಲ್ಲಿ ಮಂಡ್ಯ ಸಮೀಪ ಕೆಎಸ್‌ಆರ್‌ಟಿಸಿ ಬಸ್‌ ಹಾಗೂ ಕಾರಿನ ನಡುವೆ ಅಪಘಾತ ಸಂಭವಿಸಿದೆ. ಈ ಘಟನೆಯಲ್ಲಿ ವಿಜಯಕರ್ನಾಟಕ ಬೆಂಗಳೂರು ಕಚೇರಿಯ ಉದ್ಯೋಗಿ ನಿಶ್ಚಿತಾ ಅರಸ್ ಹಾಗೂ ಅವರ ಪತಿ ಸೇರಿ 4 ಮಂದಿ ಮೃತಪಟ್ಟಿದ್ದಾರೆ

ಗುರುವಾರ ಮಧ್ಯಾಹ್ನ ಮಂಡ್ಯ ತಾಲೂಕಿನ ತೂಬಿನಕೆರೆ ಗ್ರಾಮದ ಬಳಿ ಎಕ್ಸ್‌ಪ್ರೆಸ್‌ ವೇ ಎಕ್ಸಿಟ್‌ನಲ್ಲಿ ಈ ಅಪಘಾತ ನಡೆದಿದೆ. ಮೃತರು ಸತ್ಯಾನಂದ ರಾಜೇ ಅರಸ್ (51), ವಿಜಯ ಕರ್ನಾಟಕ ದಿನಪತ್ರಿಕೆ ಪತ್ರಕರ್ತೆ ನಿಶ್ಚಿತಾ (45), ಚಂದ್ರಶೇಖರ್‌ (62), ಸುವೇದಿನಿ ರಾಣಿ (50) ಮೃತರು ಎಂದು ಪತ್ತೆಯಾಗಿದೆ. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಮೈಸೂರು ಬೆಂಗಳೂರು ಎಕ್ಸ್‌ಪ್ರೆಸ್‌ ವೇಯಿಂದ ಟಾಟಾ ಪಂಚ್‌ ಕಾರು ಎಕ್ಸಿಟ್ ಆಗುವಾಗ ಈ ಘಟನೆ ನಡೆದಿದೆ. ಕಾರು ಬೆಂಗಳೂರಿನಿಂದ ಮೈಸೂರಿಗೆ ತೆರಳುತ್ತಿತ್ತು. ಈ ಸಂದರ್ಭದಲ್ಲಿ ಕಾರು ಚಾಲಕನಿಗೆ ಎಕ್ಸಿಟ್‌ ಕುರಿತು ಗೊಂದಲವಾಗಿದೆ. ಮೊದಲು ಎಕ್ಸಿಟ್‌ ಆಗಲು ಹೋಗಿ ಆ ನಂತರ ಎಕ್ಸ್‌ಪ್ರೆಸ್‌ ವೇಗೆ ಕಾರನ್ನು ತಿರುಗಿಸಿದ್ದಾರೆ. ಈ ವೇಳೆ ಹಿಂದಿನಿಂದ ವೇಗವಾಗಿ ಬಂದ ಕೆಎಸ್ಆರ್‌ಟಿಸಿ ಐರಾವತ ಬಸ್ ಡಿಕ್ಕಿ ಹೊಡೆದಿದೆ. ಅಪಘಾತ ರಭಸಕ್ಕೆ ಸಂಪೂರ್ಣ ನಜ್ಜುಗುಜ್ಜಾಗಿದೆ.

ಅಪಘಾತಕ್ಕೆ ಕಾರ್‌ ಚಾಲಕನ ನಿರ್ಲಕ್ಷ್ಯವೇ ಕಾರಣ ಎಂದು ಮೇಲ್ನೋಟಕ್ಕೆ ತಿಳಿದುಬಂದಿದೆ.ಸ್ಥಳಕ್ಕೆ ದಕ್ಷಿಣ ವಲಯ ಡಿಐಜಿ ಬೋರಲಿಂಗಯ್ಯ, ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಂಡ್ಯ ಜಿಲ್ಲಾಸ್ಪತ್ರೆಗೆ ಮೃತದೇಹಗಳಲ್ಲಿ ರವಾನೆ ಮಾಡಲಾಗಿದೆ.

ಪಿರಿಯಾಪಟ್ಟಣ ತಾಲೂಕಿನ ಸಿಗೂರು ಗ್ರಾಮದಲ್ಲಿ ಸತ್ಯಾನಂದ ರಾಜೇ ಅರಸ್ ಅವರ ಮಾವ ನಿಧನರಾಗಿದ್ದರು. ಅವರ ಅಂತ್ಯಕ್ರಿಯೆಗೆಂದು ಸತ್ಯಾನಂದ ರಾಜೇ ಅರಸ್‌ ಕುಟುಂಬ 4 ಮಂದಿ ಕಾರಿನಲ್ಲಿ ಬೆಂಗಳೂರಿನಿಂದ ಪಿರಿಯಾಪಟ್ಟಣ ತಾಲೂಕಿನ ಸಿಗೂರು ಗ್ರಾಮಕ್ಕೆ ಹೋಗುತ್ತಿದ್ದರು. ಈ ವೇಳೆ ಅಪಘಾತವಾಗಿದೆ.

ಇನ್ನು ಟೋಲ್‌ ತಪ್ಪಿಸಲು ಕಾರನ್ನು ದಿಢೀರ್‌ ನಿಧಾನ ಮಾಡಿದ್ದರಿಂದ ಈ ಅಪಘಾತ ಸಂಭವಿಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಗಣಂಗೂರು ಟೋಲ್ ಹಿಂದೆಯೇ ಎಕ್ಸ್‌ಪ್ರೆಸ್‌ ವೇ‌ನಿಂದ ಎಕ್ಸಿಟ್ ಆಗಲು ಚಂದ್ರರಾಜೇ ಅರಸ್ ಅವರು ನೆಕ್ಸಾನ್‌ ಕಾರನ್ನು ಸ್ಲೋ ಮಾಡಿದ್ದಾರೆ. ಇದರಿಂದಾಗಿ ಹಿಂದಿನಿಂದ ವೇಗದಲ್ಲಿ ಬರುತ್ತಿದ್ದ ಐರಾವತ ಬಸ್ಸು ಗುದ್ದಿದೆ. ಟೋಲ್ ಸುಂಕ‌ 180 ರೂ. ಉಳಿಸಲು ತೂಬಿನಕೆರೆ ಬಳಿ ಎಕ್ಸಿಟ್ ಆಗಲು ಕಾರು ಸ್ಲೋ ಮಾಡಿರಬಹುದು ಎಂಬ ಶಂಕೆ ಎದ್ದಿದೆ.

Family of Four die in accident near Mandya mysuru bangalore  highway after KSRTC scania bus rams car. Four persons, including two women, died after their car was hit by a KSRTC Airavat bus, at Tubinakere, near Mandya, on Thursday. The police gave the names of the deceased as Satyanandaraje Urs, Suvedini Rani, Nischita, and Chandrashekhar Raje Urs, all from Bengaluru. The accident occurred when they were proceeding towards Mysuru, they said