ಬ್ರೇಕಿಂಗ್ ನ್ಯೂಸ್
04-04-25 10:28 am HK News Desk ಕರ್ನಾಟಕ
ಮೈಸೂರು, ಏ 04: ರಾಜ್ಯದ ಆರ್ಥಿಕ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದೆ. ಸಿದ್ದರಾಮಯ್ಯ 16 ಬಾರಿ ಬಜೆಟ್ ಮಂಡನೆ ಮಾಡಿದ್ದಾರೆ. ಫ್ರೀ ಬಸ್ ನಿಂದಾಗಿ ಮನೆಗಳಲ್ಲಿ ಒಡಕುಂಟಾಗಿದೆ. ಗಂಡನ ಮಾತು ಹೆಂಡತಿ ಕೇಳದ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ಯಾರಂಟಿ ಯೋಜನೆಗಳ ಜಾರಿಯಿಂದಾಗಿರುವ ಸಾಧಕ ಬಾಧಕಗಳ ಬಗ್ಗೆ ಅಧ್ಯಯನ ನಡೆಸಲಿ ಎಂದು ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಡಿ ಕೆ ಶಿವಕುಮಾರ್ ಏಕೆ ಸಿಎಂ ಆಗಬಾರದು?
ಈ ಸರ್ಕಾರ ಬರಲು ಡಿ ಕೆ ಶಿವಕುಮಾರ್ ಕೊಡುಗೆ ಇಲ್ವಾ? ಡಿಕೆಶಿ ಈ ಸರ್ಕಾರ ಬರಲು ದುಡಿದಿಲ್ವಾ? ಸಿದ್ದರಾಮಯ್ಯ ಕಾಂಗ್ರೆಸ್ ಕಟ್ಟಲೇ ಇಲ್ಲ. ಬೇರೆಯವರು ಕಟ್ಟಿದ ಕಾಂಗ್ರೆಸ್ ಪಕ್ಷಕ್ಕೆ ಸಿದ್ದರಾಮಯ್ಯ ಬಂದು ಸೇರಿ ಕೊಂಡಿದ್ದಾರೆ ಅಷ್ಟೇ ಎಂದು ಕುಟುಕಿದ್ದಾರೆ. ಕುಳಿತುಕೊಂಡು ರಾಜ್ಯದ ಆಡಳಿತ ನಡೆಸಲು ಆಗೋದಿಲ್ಲ. ನೀವು ಕುಳಿತುಕೊಂಡ ತಕ್ಷಣವೇ ಆಡಳಿತ ನಿಂತು ಹೋಗಿದೆ. ಮೊದಲು ವಿಧಾನಸಭೆ ಅಧಿವೇಶನಕ್ಕೆ ಯು ಸರ್ಟಿಫಿಕೇಟ್ ಇತ್ತು. ಈಗ ಎ ಸರ್ಟಿಫಿಕೇಟ್ ಕೊಡಬೇಕಿದೆ. ಇಂತಹ ಸ್ಥಿತಿ ಬರಬಾರದಿತ್ತು ಎಂದರು.
ಜಾತಿಗಣತಿ ವರದಿ ಆಧಾರದ ಮೇಲೆ ಬಜೆಟ್ ಮಂಡನೆಯಾಗಬೇಕಿತ್ತು. ಸಾಲ ಮಾಡಿ ಗ್ಯಾರಂಟಿ ಯೋಜನೆ ಕೊಡುತ್ತಿರುವ ನೀವೆಂತಹ ಆರ್ಥಿಕ ತಜ್ಞರು? ಗೃಹಲಕ್ಷ್ಮಿ ಯೋಜನೆಗೆ ಯಾವುದೇ ಮಾನದಂಡವಿಲ್ಲದಂತಾಗಿದೆ. ಯಾವುದೇ ಸರ್ಕಾರ ಈ ರೀತಿ ಮಾಡಿರಲಿಲ್ಲ. ನೀರಾವರಿ ಸೇರಿದಂತೆ ಯಾವುದೇ ಯೋಜನೆಗಳಿಗೆ ಸರ್ಕಾರ ಅನುದಾನ ಕೊಡುತ್ತಿಲ್ಲ. ನಿಮ್ಮ ವೈಯುಕ್ತಿಕ ತೆವಲಿಗಾಗಿ ಗ್ಯಾರಂಟಿ ಯೋಜನೆ ಜಾರಿಗೊಳಿಸಿದ್ದೀರಾ? ಬಹುತೇಕ ಆರ್ಥಿಕ ತಜ್ಞರು ಉಚಿತ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸರಿಯಾಗಿಲ್ಲ ಎಂದಿದ್ದಾರೆ. ರಾಜ್ಯದಲ್ಲಿ ಆರ್ಥಿಕ ಪರಿಸ್ಥಿತಿ ಸರಿಯಾಗಿಲ್ಲ. ಇವರಿಗೆ ಜಾತಿಗಣತಿ ವರದಿ ಜಾರಿಗೊಳಿಸಲು ಧೈರ್ಯವಿಲ್ಲ. ರಾಜ್ಯ ಆಳುವುದು ಸಂಸಾರ ನಡೆಸಿದಂತೆಯೇ. ಸಂಸಾರ ಹೇಗೆ ನಡೆಸುತ್ತಾರೆಂದು ಹೆಣ್ಣು ಮಕ್ಕಳಿಂದ ಸಿದ್ದರಾಮಯ್ಯಗೆ ಪಾಠ ಮಾಡಿಸಬೇಕು ಎಂದರು.
'ಕುಳಿತು ಮಾತನಾಡಲು ನಿಮಗೆ ಅಧಿಕಾರ ಕೊಟ್ಟಿಲ್ಲ '
ಸಿದ್ದರಾಮಯ್ಯರಿಂದ ಇಂತಹದ್ದನ್ನು ನಿರೀಕ್ಷೆ ಮಾಡಿರಲಿಲ್ಲ. ಆರ್ಥಿಕ, ಕಾನೂನು, ರಾಜಕೀಯ ಸಲಹೆಗಾರರು ಇದ್ದಾರೆ. ಎಲ್ಲರಿಗೂ ಕ್ಯಾಬಿನೆಟ್ ರ್ಯಾಂಕ್ ಕೊಟ್ಟಿದ್ದಾರೆ. ಎರಡು ಬಾರಿ ಸಿಎಂ ಆಗಿರುವ ಸಿದ್ದರಾಮಯ್ಯ ಯಾವ ಶಾಶ್ವತ ಯೋಜನೆ ಕೊಟ್ಟಿದ್ದಾರೆಂದು ಹೇಳಲಿ? ದುಡಿಯುವ ಕೈಗಳಿಗೆ ಕೆಲಸ ಕೊಡುತ್ತಿಲ್ಲ. ಕುರಿಗಾಹಿಗಳಿಗೆ ಬಜೆಟ್ ನಲ್ಲಿ ಯಾವುದೇ ಅನುದಾನ ನೀಡಿಲ್ಲ. ಏನನ್ನೂ ನೀಡದೇ ಬರೀ ಕಿರುಚಾಡುತ್ತಿದ್ದಾರೆ. ಆಡಳಿತ ಪಕ್ಷದಲ್ಲೇ ನಿಮ್ಮ ಮಾತಿಗೆ ಬೆಲೆ ಇಲ್ಲದಂತಾಗಿದೆ. ಕುಳಿತು ಮಾತನಾಡಲು ನಿಮಗೆ ಅಧಿಕಾರ ಕೊಟ್ಟಿಲ್ಲ ಎಂದು ಎಚ್ ವಿಶ್ವನಾಥ್ ವಾಗ್ದಾಳಿ ನಡೆಸಿದರು.
ನಾನು ಕಾಂಗ್ರೆಸ್ ಗೆ ಕರೆದುಕೊಂಡು ಬರದೇ ಇದ್ದಿದ್ರೆ ನೀನು ಸಿಎಂ ಆಗ್ತಿದ್ಯಾ? ಕಾಂಗ್ರೆಸ್ ಗೆ ನಿನ್ನನ್ನು ಕರೆದುಕೊಂಡು ಬಂದದ್ದೇ ಸಿಎಂ ಮಾಡಲಿಕ್ಕೆ. ನಾವು ನಡೆಸಿದ ಇಲಾಖೆಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದೇವೆ. ನಮ್ಮ ಕೆಲಸಗಳನ್ನು ಸ್ಮರಿಸಿಕೊಳ್ಳುತ್ತಿದ್ದಾರೆ. ಜನ ನೆನಪಿನಲ್ಲಿ ಇಟ್ಟುಕೊಳ್ಳುವ ಯಾವ ಯೋಜನೆ ನೀವು ಕೊಟ್ಟಿದ್ದೀರಾ ಹೇಳಿ. ಅಕ್ಷರ, ಆರೋಗ್ಯ ಚೆನ್ನಾಗಿದ್ದರೆ ರಾಜ್ಯ ಚೆನ್ನಾಗಿರುತ್ತದೆ. ಅಕ್ಷರ ಆರೋಗ್ಯ ಕ್ಷೇತ್ರಕ್ಕೆ ನಿಮ್ಮ ಕೊಡುಗೆ ಏನು?. ರಾಜ್ಯವನ್ನು ಬರ್ಬಾದ್ ಮಾಡಿ ಹೋಗುವುದೇ ನಿಮ್ಮ ಗುರಿ. ಸಿದ್ದರಾಮಯ್ಯ 16ನೇ ಲೂಹಿ ಎಂದು ಸಿದ್ದರಾಮಯ್ಯ ವಿರುದ್ದ ಎಚ್ ವಿಶ್ವನಾಥ್ ಲೇವಡಿ ಮಾಡಿದ್ದಾರೆ.
ನಮ್ಮ ಬಿಜೆಪಿಗೆ ಆಡಳಿತವೂ ಗೊತ್ತಿಲ್ಲ, ವಿರೋಧವೂ ಗೊತ್ತಿಲ್ಲ. ಆಡಳಿತ ಪಕ್ಷವನ್ನು ಕೇಳುವ ತಾಕತ್ತು ಬಿಜೆಪಿಗಿಲ್ಲ. ವಿಜಯೇಂದ್ರ ಶಿಕಾರಿಪುರದಲ್ಲಿ ಗೆದ್ದಿದ್ದು ಸಿದ್ದರಾಮಯ್ಯ, ಯಡಿಯೂರಪ್ಪ ನಡುವಿನ ಹೊಂದಾಣಿಕೆಯಿಂದ. ನಾನು ಕಾಂಗ್ರೆಸ್ ನ ಹಿರಿಯ ನಾಯಕ, ಬಿಜೆಪಿಯ ಕಿರಿಯ ನಾಯಕ ಎಂದರು.
MLC A H Vishwanath on Wednesday hitting out at CM said that he brought Siddaramaiah to the Congress party and it was him, Ramesh Kumar and C M Ibrahim who came up with various schemes in 2013 and they were not the ideas of Siddaramaiah.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:23 am
HK News Desk
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
ಜಮ್ಮು ಗಡಿಯಲ್ಲಿ ಪಾಕ್ ಶೆಲ್ ದಾಳಿ ; ಬಿಎಸ್ಎಫ್ ಯೋಧ,...
11-05-25 01:43 pm
12-05-25 11:26 am
HK News Desk
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm