ಬ್ರೇಕಿಂಗ್ ನ್ಯೂಸ್
29-05-25 02:19 pm HK News Desk ಕರ್ನಾಟಕ
ಬಾಗಲಕೋಟೆ, ಮೇ 29 : ಕೊರೋನಾ ಆತಂಕದ ಮಧ್ಯೆ ರಾಜ್ಯದಲ್ಲಿ ಆಫ್ರಿಕನ್ ಹಂದಿ ಜ್ವರ ಕಾಣಿಸಿಕೊಂಡಿರುವುದು ದೃಢಪಟ್ಟಿದೆ. ಬಾಗಲಕೋಟೆ ವ್ಯಾಪ್ತಿಯ ಸಾಕಾಣಿಕಾ ಕೇಂದ್ರಗಳ ಹಂದಿಗಳಲ್ಲಿ ಆಪ್ರಿಕನ್ ಹಂದಿ ಜ್ವರ ಕಂಡುಬಂದಿದ್ದು ಸಾಮೂಹಿಕ ಹತ್ಯೆಗೈದು ವಿಲೇವಾರಿ ಮಾಡಲು ರಾಜ್ಯ ಸರ್ಕಾರ ಆದೇಶ ಮಾಡಿದೆ.
ಕೇರಳ ಇಲ್ಲವೇ ಗೋವಾದಿಂದ ತರಿಸಿಕೊಂಡ ಹಂದಿಗಳಿಂದ ಜ್ವರ ಬಂದಿರುವ ಶಂಕೆಯಿದೆ. ಬಾಗಲಕೋಟೆ ಜಿಲ್ಲೆಯ
ಗೊರಬಾಳ ಗ್ರಾಮದ ಹಂದಿಗಳ ಸಾಕಾಣಿಕಾ ಕೇಂದ್ರದಲ್ಲಿ ಜ್ವರ ಪತ್ತೆಯಾಗಿದೆ. ಬಾಗಲಕೋಟೆ ಜಿಲ್ಲೆಯಾದ್ಯಂತ ಈಗಾಗಲೇ 20ಕ್ಕೂ ಅಧಿಕ ಸಾಕಾಣಿಕೆ ಕೇಂದ್ರಗಳಿದ್ದು ಹಂದಿ ಸಾಕಾಣಿಕೆದಾರರು ಆತಂಕಗೊಂಡಿದ್ದಾರೆ.
ಆಫ್ರಿಕನ್ ಜ್ವರ ಕಾಣಿಸಿಕೊಂಡ ಸುತ್ತಮುತ್ತಲಿನ ಪ್ರದೇಶ ನಿಷೇಧಿತ ಪ್ರದೇಶ ಎಂದು ಘೋಷಣೆ ಮಾಡಿದ್ದಾರೆ. ಮೇ 15ರಂದು ಬಾಗಲಕೋಟೆಯಿಂದ ಭೋಪಾಲ್ ನ ಲ್ಯಾಬೊರೇಟರಿಗೆ ಹಂದಿಗಳ ರಕ್ತದ ಮಾದರಿ ರವಾನಿಸಿದ್ದು ಮೇ 22ರಂದು ಬಂದಿರುವ ವರದಿಯಲ್ಲಿ ಹಂದಿಗಳಿಗೆ ಆಫ್ರಿಕನ್ ಜ್ವರ ಇರೋದು ಧೃಢವಾಗಿದೆ. ಇದರ ಬೆನ್ನಲ್ಲೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅಧಿಸೂಚನೆ ಪ್ರಕಟಿಸಿದ್ದು ಸಾಮೂಹಿಕ ವಿಲೇವಾರಿಗೆ ಸೂಚನೆ ನೀಡಿದ್ದಾರೆ.
ಇದರಂತೆ, ಬಾಗಲಕೋಟೆ ಜಿಲ್ಲೆಯಲ್ಲಿ ಮೂರು ರ್ಯಾಪಿಡ್ ಟೀಮ್ ಕಾರ್ಯಾಚರಣೆ ಮಾಡುತ್ತಿದ್ದು ಬಾಗಲಕೋಟೆ ಜಿಲ್ಲೆಯಿಂದ ಮೂರು ತಿಂಗಳ ಕಾಲ ಯಾವುದೇ ರೀತಿಯ ಹಂದಿಗಳನ್ನು ಆಮದು ಅಥವಾ ರಫ್ತು ಮಾಡುವುದು ನಿಷೇಧ ಮಾಡಲಾಗಿದೆ. ರೋಗ ಪತ್ತೆಯಾದ ಜಾಗದಿಂದ 1 ಕಿಮೀ ರೋಗಪೀಡಿತ ವಲಯ, 1 ರಿಂದ 10 ಕಿಮೀ ಜಾಗೃತ ವಲಯ ಎಂದು ಘೋಷಣೆ ಮಾಡಲಾಗಿದೆ.
ರೋಗ ಪೀಡಿತ ವಲಯ ವ್ಯಾಪ್ತಿಯ ಹಂದಿಗಳ ವಿಲೇವಾರಿಗೆ ಸೂಚನೆ ನೀಡಲಾಗಿದೆ. ಎರಡು ಹಂದಿಗಳ ಸಾಕಾಣಿಕೆ ಕೇಂದ್ರದ 130 ಹಂದಿಗಳ ವಧೆ ಮತ್ತು ವೈಜ್ಞಾನಿಕ ವಿಲೇವಾರಿಗೆ ಸೂಚಿಸಲಾಗಿದೆ. ಇದೇ ವೇಳೆ, ಬಾಗಲಕೋಟೆ ಜಿಲ್ಲೆಯ 18 ಸಾಕಾಣಿಕಾ ಕೇಂದ್ರದಲ್ಲಿರುವ 20 ಸಾವಿರ ಹಂದಿಗಳಿಗೆ ಮುಂಜಾಗ್ರತಾ ಕ್ರಮವಾಗಿ ವ್ಯಾಕ್ಸಿನ್ ನೀಡಲಾಗಿದೆ.
Amid COVID Concerns, African Swine Fever Confirmed in Karnataka, Outbreak Detected in Bagalkote District, Ban on Pork Transport Imposed.
16-10-26 09:49 pm
HK News Staffer
ಸ್ಟಿಂಗ್ ಆಪರೇಷನ್ ಕೇಸ್ ನಲ್ಲಿ ನನ್ನನ್ನು ಸಿಲುಕಿಸ...
15-10-26 02:30 pm
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
16-10-26 10:28 pm
HK News Desk
ಸಿಎಂ ಡಿಕೆಶಿ ಕುದ್ರೋಳಿ ದಸರಾಕ್ಕೆ ಆಗಮಿಸಿದ್ದಾಗಲೇ ವ...
16-10-26 01:47 pm
MRPL ಗುತ್ತಿಗೆ ಕಾರ್ಮಿಕರಿಗೆ ₹5 ಲಕ್ಷ ಆರೋಗ್ಯ ವಿಮೆ...
15-10-26 10:34 pm
Sting News, DK Shivakumar in Mangalore: 'ಸ್ಟಿ...
15-10-26 06:46 pm
ನವರಾತ್ರಿ ನೆಪದಲ್ಲಿ ಕುಡ್ಲದ ತುಂಬ ಫ್ಲೆಕ್ಸ್ಗಳದ್ದೇ...
15-10-26 03:30 pm
16-10-26 03:37 pm
HK News Staffer
ಪಿರಿಯಾಪಟ್ಟಣ ಬಳಿ ಸ್ಲೀಪರ್ ಕೋಚ್ ಬಸ್- ಲಾರಿ ಡಿಕ್ಕಿ...
16-10-26 11:04 am
Mangaluru Valencia Church Priest Fr. Cyprian...
16-10-26 10:27 am
Fr. Cyprian Pinto Posco Case, Mangalore: ಅಪ್ರ...
16-10-26 10:03 am
ಕೇರಳದಿಂದ ಲಾಟರಿ ಟಿಕೆಟ್ ತಂದು ಮಾರಾಟ ; ಪುತ್ತೂರಿನ...
15-10-26 05:06 pm