ಬ್ರೇಕಿಂಗ್ ನ್ಯೂಸ್
09-06-25 02:00 pm HK News Desk ಕರ್ನಾಟಕ
ಹುಬ್ಬಳ್ಳಿ, ಜೂನ್ 9 : ಮಂಗಳೂರು ಎಸ್ಪಿ ಮನಬಂದಂತೆ ವರ್ತಿಸುತ್ತಿದ್ದಾರೆ. ಈ ಅಟಿಟ್ಯೂಡ್ ನಡೆಯಲ್ಲ.. ಮುಂದೆ ನಮ್ಮ ಸರ್ಕಾರ ಬರುತ್ತದೆ. ಕಾಂಗ್ರೆಸ್ ವರ್ಕರ್ ರೀತಿ ವರ್ತಿಸೋದನ್ನು ಮೊದಲು ನಿಲ್ಲಿಸಿ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಕಿಡಿಕಾರಿದ್ದಾರೆ.
ನಾನು ಅಲ್ಲಿಗೆ ಬರ್ತೇನೆ, ಎಷ್ಟು ಜನರ ಮೇಲೆ ಕೇಸ್ ಹಾಕ್ತೀರೋ ಹಾಕಿ. ಕಾನೂನು ಬಿಟ್ಟು ಕೆಲಸ ಮಾಡಬೇಡಿ. ಹೊಸ ಎಸ್ಪಿ ಬಹಳ ಡ್ರಾಮ ಮಾಡ್ತಿದ್ದಾರೆ ಎಂದು ಬಿಜೆಪಿ ಮತ್ತು ಹಿಂದೂ ಕಾರ್ಯಕರ್ತರ ಮೇಲೆ ಕೇಸ್ ಹಾಕ್ತಿರೋದು, ಗಡೀಪಾರು ಮಾಡ್ತಿರೋದಕ್ಕೆ ಸಚಿವ ಜೋಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುಹಾಸ್ ಹತ್ಯೆ ಭಯೋತ್ಪಾದನೆ ಕೃತ್ಯವಿದೆ, ಹೀಗಾಗಿ ಎನ್ ಐ ಎ ಗೆ ನೀಡಲಾಗಿದೆ. ಕಾಂಗ್ರೆಸ್ ಪಾಕಿಸ್ತಾನ ಭಾಷೆಯನ್ನು ಬಳಸುತ್ತದೆ. ಹಾಗಾಗಿ ಯಾಕೆ ಎನ್ಐಎ ಅಂತ ಕೇಳುತ್ತೆ. ಅವರಿಗೆ ಅರ್ಥವಾಗಲ್ಲ. ಓಟಿಗಾಗಿ ದೇಶವನ್ನು ಮಾರಲು ಹಿಂದೇಟು ಹಾಕಲ್ಲಾ ಕಾಂಗ್ರೆಸ್. ಕಾಂಗ್ರೆಸ್ ಮಾನಸಿಕತೆಯೇ ಹಾಗಿದೆ, ಹೀಗಾಗಿ ಅವರು ಈ ರೀತಿ ಮಾತನಾಡುತ್ತಾರೆ ಎಂದು ಪ್ರಹ್ಲಾದ್ ಜೋಶಿ ಹೇಳಿದರು.
ಕಾಲ್ತುಳಿತ ಘಟನೆ ಸಂಬಂಧಿಸಿ ಸಿಎಂ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಡಿಸಿಎಂ ಶಿವಕುಮಾರ್ ಮನೆಗೆ ಹೋಗಬೇಕು ಎಂಬುದು ನಮ್ಮದು ಮೊದಲ ಡಿಮ್ಯಾಂಡ್. ಕಮಿಷನರ್ ದಯಾನಂದ್ ಅವರು ಮಕ್ಕಳು ಸತ್ತಿದ್ದನ್ನು ನಮಗೆ ತಿಳಿಸಿಲ್ಲ ಎಂದು ಮುಖ್ಯಮಂತ್ರಿ ಹೇಳ್ತಿದ್ದಾರೆ. ಇವರಿಗೆ ನಾಚಿಕೆ ಆಗಬೇಕು, ಯೋಗ್ಯತೆ ಇದೆಯಾ ಆಡಳಿತ ನಡೆಸೋದಕ್ಕೆ ಅಂತ ಪ್ರಶ್ನೆ ಮಾಡಿದ್ದಾರೆ. ನಿಂಬಾಳ್ಕರ್ ನಿಮ್ಮದೇ ಅಧಿಕಾರಿ, ಗುಪ್ತಚರ ಮುಖ್ಯಸ್ಥರಾಗಿ ಏನ್ ಮಾಡ್ತಾ ಇದ್ದರು. ನಿಂಬಾಳ್ಕರ್ ನಿಮ್ಮ ಪಕ್ಷದ ಕಾರ್ಯಕರ್ತ, ಅವರನ್ನ ಏಕೆ ಅಮಾನತು ಮಾಡಿಲ್ಲ. ಕೇವಲ ವರ್ಗಾವಣೆ ಮಾಡಿದ್ದಾರೆ.
ಸಿದ್ದರಾಮಯ್ಯನವರ ಸರ್ಕಾರದಲ್ಲಿ ಬೇಕಾದವರಿಗೆ ಬೆಣ್ಣೆ, ಬೇಡವಾದವರಿಗೆ ಸುಣ್ಣ. "ಬೇಗಾನೇ ಶ್ಯಾದಿ ಮೇ ಅಬ್ದುಲ ದಿವಾನಾ" ಎಂದು ಶಹರಿ ಹೇಳುವ ಮೂಲಕ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದರು. ಆರ್‌ಸಿಬಿ ದೇಶ ಹಾಗೂ ರಾಜ್ಯದ ಟೀಮ್ ಅಲ್ಲ. ಕಾಲ್ತುಳಿತ ಘಟನೆ ನಡೆದಾಗ ಮಕ್ಕಳು, ಮೊಮ್ಮಕ್ಕಳು ಜೊತೆಗೆ ಸೆಲ್ಪಿ ತೆಗೆದುಕೊಳ್ಳಲು ಇವರೆಲ್ಲರೂ ಬ್ಯೂಜಿ ಆಗಿದ್ದರು. ಪೊಲೀಸ್ ಆಯುಕ್ತರು ಕಾರ್ಯಕ್ರಮ ಬೇಡ ಎಂದ್ರೂ ಏಕೆ ಮಾಡಿದ್ರು ಎಂಬುದನ್ನ ಸ್ಪಷ್ಟಪಡಿಸಬೇಕು.
ಐರಾವಣನರು, ಬೈರಾವಣವರು ಗೃಹಲಕ್ಷ್ಮಿ ಪ್ರತಿ ತಿಂಗಳು ಕೊಡುತ್ತೇನೆಂದು ಹೇಳಿದ್ದರು, ಈಗ ನಾವು ಕೊಡುತ್ತೇವೆಂದು ಹೇಳಿಲ್ಲ ಎನ್ನುತ್ತಿದ್ದಾರೆ. ಸಿದ್ದರಾಮಯ್ಯ ಮೂರ್ಖರಂತೆ ಮಾತನಾಡುತ್ತಿದ್ದಾರೆ. ಕುಂಭ ಮೇಳದ ಘಟನೆಗೆ, ಈ ಪ್ರಕರಣವನ್ನ ಹೋಲಿಸಿಕೊಳ್ಳುತ್ತಾರೆ. ನಾಚಿಕೆ, ಮಾನ ಮರ್ಯಾದೆ ಇದೆಯಾ ನಿಮಗೆ, ದಪ್ಪ ಚರ್ಮದವರಿಗೆ ಯಾವುದೇ ಮುಜುಗರ ಆಗುವುದಿಲ್ಲ ಎಂದು ಪ್ರಹ್ಲಾದ್ ಜೋಶಿ ವ್ಯಂಗ್ಯವಾಡಿದರು.
Union Minister Prahlad Joshi has sharply criticized the Mangaluru Superintendent of Police (SP), accusing him of behaving in a highly “dramatic” manner. Joshi urged the SP to stop acting like a Congress party worker, warning that such behavior is unacceptable and must end immediately.
06-09-25 08:28 pm
HK News Desk
Prathap Simha, Mysuru Dasara: ದಸರಾ ಕುಸ್ತಿ ; ಬ...
06-09-25 07:26 pm
Sonia Gandhi, Dharmasthala: Who Killed the Wo...
05-09-25 11:15 pm
ಭೋವಿ ಅಭಿವೃದ್ಧಿ ನಿಗಮದಲ್ಲಿ ಕಮಿಷನ್ ವಸೂಲಿ ; ಅಧ್ಯಕ...
05-09-25 07:55 pm
ಡಿಸಿಎಂ ಡಿಕೆಶಿ ಬೆಂಬಲಿಗರ ಹತ್ತಾರು ಕೇಸು ಸೇರಿದಂತೆ...
05-09-25 05:40 pm
06-09-25 10:34 am
HK News Desk
ಗಣೇಶ ವಿಸರ್ಜನೆ ಸಡಗರ ಹಿನ್ನೆಲೆ ; ಮುಂಬೈ ಮಹಾನಗರದಲ್...
04-09-25 08:47 pm
ಜಿಎಸ್ಟಿ ತೆರಿಗೆಯಲ್ಲಿ ಭಾರೀ ಪರಿಷ್ಕರಣೆ ; ಕಡೆಗೂ ತೆ...
04-09-25 10:54 am
ತಂದೆ ಸ್ಥಾಪಿಸಿದ ಬಿಆರ್ ಎಸ್ ಪಕ್ಷದಿಂದ ಮಗಳಿಗೆ ಗೇಟ್...
03-09-25 10:04 pm
ಹೊಳೆಯಂತಾದ ದೆಹಲಿಯ ಬೀದಿಗಳು, ನೀರಲ್ಲೇ ಮಾರ್ಕೆಟ್!...
03-09-25 09:59 pm
06-09-25 10:59 pm
Mangalore Correspondent
Mangalore, Dharmasthala, Vittal Gowda, Skull:...
06-09-25 10:15 pm
ಗೋಮಾಂಸ ಭಕ್ಷಕರಿಗೆ ರಾಜ್ಯ ಸರ್ಕಾರ ಶಾದಿ ಭಾಗ್ಯ ರೀತಿ...
06-09-25 05:56 pm
Mla Vedavyas Kamath, Mangalore: ಮಳೆಗೆ ಹದಗೆಟ್ಟ...
06-09-25 04:46 pm
Ullal News, Warrant, Video, Mangalore: ಮೊದಲ ಪ...
05-09-25 08:12 pm
06-09-25 08:32 pm
Bangalore Correspondent
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm
Udupi cyber fraud crime; ಷೇರು ಟ್ರೇಡಿಂಗ್ ಹೆಸರಿ...
06-09-25 01:58 pm
ಮುಂಬೈಗೆ 14 ಲಷ್ಕರ್ ಉಗ್ರರ ಎಂಟ್ರಿ ಬೆದರಿಕೆ ! 400...
06-09-25 10:37 am