ಬ್ರೇಕಿಂಗ್ ನ್ಯೂಸ್
24-06-25 01:53 pm Bangalore Correspondent ಕರ್ನಾಟಕ
ಬೆಂಗಳೂರು, ಜೂ.24 : ಶಿವಮೊಗ್ಗ, ಧಾರವಾಡ, ಬೆಂಗಳೂರು, ಚಿಕ್ಕಮಗಳೂರು, ಗದಗ ಸೇರಿದಂತೆ ಎಂಟಕ್ಕೂ ಹೆಚ್ಚು ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಪರಿಶೀಲನೆ ನಡೆಸಿದ್ದು ದಾಳಿ ವೇಳೆ ಕೋಟಿ ಕೋಟಿ ಆಸ್ತಿ, ಚಿನ್ನಾಭರಣ ಪತ್ತೆಯಾಗಿದೆ.
ಅಕೌಂಟೆಂಟ್ ಮನೆಯಲ್ಲಿ ಕೋಟಿ ಕೋಟಿ ಆಸ್ತಿ!
ಚಿಕ್ಕಮಗಳೂರು ನಗರಸಭೆ ಅಕೌಂಟ್ ಆಫೀಸರ್ ಲತಾಮಣಿ ಮನೆ ಮೇಲೆ ಲೋಕಾ ರೇಡ್ ನಡೆದಿದೆ. ಲತಾಮಣಿ ಮನೆಯಲ್ಲಿ ಕೋಟ್ಯಾಂತರ ಮೌಲ್ಯದ ಆಸ್ತಿ, ಚಿನ್ನಾಭರಣ ಪತ್ತೆಯಾಗಿದೆ. 300 ಗ್ರಾಂ ಚಿನ್ನ ,1 ಕೆ.ಜಿ ಬೆಳ್ಳಿ, ಕೋಟ್ಯಾಂತರ ಮೌಲ್ಯದ ಆಸ್ತಿ ಪತ್ತೆಯಾಗಿರುವ ಬಗ್ಗೆ ಉನ್ನತ ಮೂಲಗಳಿಂದ ಮಾಹಿತಿ ಸಿಕ್ಕಿದೆ. ಜಯನಗರದ ಲತಾಮಣಿ ನಿವಾಸದಲ್ಲಿ ಶೋಧ ನಡೆದಿದ್ದು, ದಾಖಲೆಗಳ ಪರಿಶೀಲನೆ ನಡೆಸಲಾಗ್ತಿದೆ. ಕಳೆದ 8 ವರ್ಷದಿಂದ ನಗರಸಭೆಯಲ್ಲಿ ಲತಾ ಮಣಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಲತಾ ಮಣಿ ಅವರ ಪತಿ ಚಂದ್ರಶೇಖರ್ ಕೂಡ ಸರ್ಕಾರಿ ಅಧಿಕಾರಿ ಆಗಿದ್ದು, ಚಂದ್ರಶೇಖರ್ ನಿರ್ಮಿತಿ ಕೇಂದ್ರದ ಇಂಜಿನಿಯರ್ ಆಗಿದ್ದಾರೆ.
ಟೌನ್ ಸಿಪಿಐ ಮನೆ ಮೇಲೆ ರೇಡ್
ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಗದಗ ಪೊಲೀಸ್ ಠಾಣೆಯ ಟೌನ್ ಸಿಪಿಐ ಡಿ.ಬಿ ಪಾಟೀಲ್ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ಶಹರ ಪೊಲೀಸ್ ಠಾಣೆ ಹಾಗೂ ಮನೆಗಳಲ್ಲಿ ಪರಿಶೀಲನೆ ನಡೆಸಲಾಗ್ತಿದೆ. ಸಿಪಿಐ ಡಿಬಿ ಪಾಟೀಲ ಮನೆಯಲ್ಲಿ ಮೂರು ಲಕ್ಷ ನಗದು ಪತ್ತೆಯಾಗಿದೆ. ಸಿಪಿಐ ಡಿ ಬಿ ಪಾಟೀಲ್ ಗೆ ಸೇರಿದ ಬಾಗಲಕೋಟೆ, ಜಮಖಂಡಿ, ಕೆರೂರ ಮನೆಗಳಲ್ಲೂ ಪರಿಶೀಲನೆ ನಡೆಸಲಾಗ್ತಿದೆ.
ಬೆಳಗಾವಿಯಲ್ಲಿ ಕರ್ನಾಟಕ ನೀರಾವರಿ ನಿಗಮದ ಮುಖ್ಯ ಇಂಜಿನಿಯರ್ ಅಶೋಕ ವಸಂತ್ ಮನೆ ಮೇಲೆ ಲೋಕಾಯುಕ್ತ ರೇಡ್ ಆಗಿದ್ದು, ಮುಖ್ಯ ಇಂಜಿನಿಯರ್ ಮನೆಯಲ್ಲಿ ವಜ್ರಾಭರಣ, ಚಿನ್ನಾಭರಣ, ಬೆಳ್ಳಿ ಹಾಗೂ ಒಂದೂವರೆ ಲಕ್ಷ ನಗದು ಪತ್ತೆಯಾಗಿದೆ. ಬೆಳಗಾವಿಯ ರಾಮತೀರ್ಥ ನಗರದಲ್ಲಿರುವ ಅಧಿಕಾರಿ ಮನೆ ಹಾಗೂ ಧಾರವಾಡ ಕಚೇರಿ ಮೇಲೆ ದಾಳಿ ನಡೆಸಲಾಗಿದೆ.
In a major crackdown on alleged corruption, Lokayukta officials conducted simultaneous raids across more than eight locations in Karnataka, including Bengaluru, Shivamogga, Dharwad, Chikkamagaluru, Gadag, and Belagavi. The raids targeted the homes and offices of several government officials suspected of possessing disproportionate assets.
03-09-25 09:00 pm
HK News Desk
ಧರ್ಮಸ್ಥಳ ಚಲೋ' ಬಿಜೆಪಿ ನಾಯಕರ ವಿಡಿಯೋ ಬಳಸಿ ಜಾಲತಾಣ...
03-09-25 08:35 pm
ಪ್ರೀಮಿಯಂ ಬ್ರಾಂಡ್ ಮದ್ಯಗಳ ಬೆಲೆ ಇಳಿಕೆಗೆ ಚಿಂತನೆ ;...
03-09-25 02:30 pm
Mangalore, Moodbidri Police, Constable Shanta...
03-09-25 01:36 pm
ಬಿಬಿಎಂಪಿ ಬದಲು ಗ್ರೇಟರ್ ಬೆಂಗಳೂರು ಅಸ್ತಿತ್ವಕ್ಕೆ ;...
02-09-25 11:04 pm
04-09-25 10:54 am
HK News Desk
ತಂದೆ ಸ್ಥಾಪಿಸಿದ ಬಿಆರ್ ಎಸ್ ಪಕ್ಷದಿಂದ ಮಗಳಿಗೆ ಗೇಟ್...
03-09-25 10:04 pm
ಹೊಳೆಯಂತಾದ ದೆಹಲಿಯ ಬೀದಿಗಳು, ನೀರಲ್ಲೇ ಮಾರ್ಕೆಟ್!...
03-09-25 09:59 pm
ಯಮ‘ಕಂಪನ’ ; ತಾಲಿಬಾನಿಗಳ ನೆಲೆ ಈಗ ಗಢಗಢ..ಭೂಕಂಪಕ್ಕೆ...
03-09-25 07:18 pm
ಅಮೆರಿಕನ್ ಕಂಪನಿಗಳನ್ನು ಬಹಿಷ್ಕರಿಸಲು ರಾಮದೇವ್ ಕರೆ...
01-09-25 01:06 pm
04-09-25 07:57 pm
Mangalore Correspondent
Mangalore, Loudspeaker Ban: ರಾತ್ರಿ ವೇಳೆ ಧ್ವನಿ...
04-09-25 07:39 pm
KMC Attavar Performs Rare, Life-Saving Surger...
03-09-25 11:03 pm
Kmc Attavar, Mangalore News: 43 ವರ್ಷದ ಮಹಿಳೆಗೆ...
03-09-25 10:52 pm
Sullia, Sampaje Accident: ಸಂಪಾಜೆ ಬಳಿ ಭೀಕರ ಅಪಘ...
03-09-25 08:09 pm
04-09-25 01:10 pm
Udupi Correspondent
Udupi Crime, Baby Sale Racket: ಮಂಗಳೂರಿನ ಪ್ರತಿ...
04-09-25 12:25 pm
Bagalur Police, Drugs, Crime: ಬ್ಯುಸಿನೆಸ್ ವೀಸಾ...
03-09-25 05:40 pm
Gold Theft, Mangalore, Airport: ವಿಮಾನ ಪ್ರಯಾಣಿ...
02-09-25 07:09 pm
Valachil, Rape, College, Mangalore Crime: ಇನ್...
02-09-25 04:31 pm