ಬ್ರೇಕಿಂಗ್ ನ್ಯೂಸ್
15-07-25 10:35 am Bangalore Correspondent ಕರ್ನಾಟಕ
ಬೆಂಗಳೂರು, ಜುಲೈ 15: ‘ಇ-ಸ್ವತ್ತು' ಸರ್ಟಿಫಿಕೇಟ್ ನೀಡುವುದಕ್ಕಾಗಿ 2,000 ರೂ. ಲಂಚ ಪಡೆದಿದ್ದ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ)ಗೆ ರಾಜ್ಯ ಸರ್ಕಾರ ಕಡ್ಡಾಯ ನಿವೃತ್ತಿ ನೀಡಿ ಶಾಕ್ ಕೊಟ್ಟಿದೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಚನ್ನೇಪುರ ಗ್ರಾಮ ಪಂಚಾಯತ್ ಪಿಡಿಒ ಹನುಮಂತಪ್ಪ ಹಂಚಿನಮನೆ, ಮಂಗಳಾಬಾಯಿ ಎಂಬವರಿಂದ 14x100 ಅಡಿ ಅಳತೆಯ ಮನೆಯೊಂದಿಗೆ ಮನೆ ಖರೀದಿಸಲು ‘ಇ-ಸ್ವತ್ತು’ ಮಂಜೂರಾತಿಗೆ ಲಂಚದ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಮಾವಿನಕಟ್ಟೆ ಗ್ರಾಮದ ನಿವಾಸಿ ರಂಗನಾಥ ಬಿ.ಎಚ್. ಅವರಿಂದ ಪಿಡಿಓ 2,000 ರೂ. ಲಂಚ ಸ್ವೀಕರಿಸುವಾಗಲೇ ಲೋಕಾಯುಕ್ತ ಬಲೆಗೆ ಬಿದ್ದಿದ್ದರು.
ರಾಜ್ಯ ಸರ್ಕಾರವು ಜುಲೈ 31, 2023 ರಂದು ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು, 1957 ರ ನಿಯಮ 14 (ಎ) ಅಡಿಯಲ್ಲಿ ಅವರ ವಿರುದ್ಧದ ತನಿಖೆಯನ್ನು ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ ವೀರಪ್ಪ ಅವರಿಗೆ ವಹಿಸಿತ್ತು. 2024ರ ಫೆಬ್ರವರಿ 18 ರಂದು ಉಪ ಲೋಕಾಯುಕ್ತರು, ಕರ್ನಾಟಕ ನಾಗರಿಕ ಸೇವಾ (ನಡವಳಿಕೆ) ನಿಯಮಗಳು, 1966ರ ನಿಯಮ 3 (1) (i), (ii) ಮತ್ತು (iii) ಅಡಿಯಲ್ಲಿ ಅನುಚಿತ ವರ್ತಿಸಿದ್ದರಿಂದ ಅವರಿಗೆ ಕಡ್ಡಾಯ ನಿವೃತ್ತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ.
ಶಿಫಾರಸನ್ನು ಅಂಗೀಕರಿಸಿದ ರಾಜ್ಯ ಸರ್ಕಾರವು ಮಾರ್ಚ್ 10 ರಂದು ಹನುಮಂತಪ್ಪ ಹಂಚಿನಮನೆ ಅವರಿಗೆ ಶೋಕಾಸ್ ನೋಟಿಸ್ ನೀಡಿತು. ಇದಕ್ಕೆ ಉತ್ತರಿಸಿ ಅವರು ಆರೋಪಗಳನ್ನು ನಿರಾಕರಿಸಿದ್ದಲ್ಲದೆ, ತನಿಖಾಧಿಕಾರಿ ತನ್ನ ವಿರುದ್ಧದ ಆರೋಪಗಳ ಬಗ್ಗೆ ಸರಿಯಾಗಿ ವಿಚಾರಣೆ ನಡೆಸಿಲ್ಲ ಎಂದಿದ್ದರು. ವಿಚಾರಣಾ ವರದಿಯನ್ನು ಪರಿಶೀಲಿಸಿದ ರಾಜ್ಯ ಸರ್ಕಾರ ಆರೋಪ ಸಾಬೀತಾಗಿದ್ದು ಎಂದು ತೀರ್ಮಾನಿಸಿ ಪಿಡಿಓಗೆ ಕಡ್ಡಾಯ ನಿವೃತ್ತಿ ಘೋಷಿಸಿದೆ.
Hanumanthappa Hanchinamane, PDO of Channepura Grama Panchayat in Channagiri taluk of Davanagere District, was trapped by the Lokayukta police while accepting the bribe of Rs 2,000.
19-07-26 08:34 pm
HK News Desk
ಡಿಕೆಶಿ ಸಂಪುಟ ವಿಸ್ತರಣೆಗೆ ಮತ್ತೆ ಬ್ರೇಕ್ ; 55ರ ಒಳ...
17-07-26 02:55 pm
ನಾಲ್ಕು ತಿಂಗಳಲ್ಲೇ ಅಂತ್ಯಗೊಂಡ ನವಜೀವನ! ಅನಾರೋಗ್ಯದ...
13-07-26 10:21 pm
ರಾಜ್ಯದಲ್ಲಿ 72,000ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕ...
13-07-26 02:50 pm
3-4 ತಿಂಗಳಲ್ಲಿ ಗ್ರಾಮ ಪಂಚಾಯತಿ ಚುನಾವಣೆ ; ಕ್ಷೇತ್ರ...
13-07-26 10:32 am
22-07-26 02:32 pm
HK News Staffer
ನೀಟ್ ಅಕ್ರಮ; ಮೋದಿ ರಾಜಿನಾಮೆ ಒತ್ತಾಯಿಸಿ ಪ್ರಧಾನಿ ನ...
21-07-26 09:03 pm
ಧರ್ಮೇಂದ್ರ ಪ್ರಧಾನ್ ರಾಜಿನಾಮೆ ಹೊರತು ಪ್ರತಿಭಟನೆ ನಿ...
21-07-26 06:23 pm
ಮತ್ತೆ ಕೋವಿಡ್ ಸದ್ದು; ಆಂಧ್ರದಲ್ಲಿ RF.5 ರೂಪಾಂತರ ಪ...
20-07-26 03:42 pm
ನೀಟ್ ಪರೀಕ್ಷೆ ಅಕ್ರಮ ; ರಾಜಧಾನಿ ದೆಹಲಿಯಲ್ಲಿ ಬೀದಿಗ...
20-07-26 02:22 pm
21-07-26 11:02 pm
HK News Desk
ಸಾಣೂರು-ಬಿಕರ್ನಕಟ್ಟೆ ಚತುಷ್ಪಥ ರಸ್ತೆ ಕಾಮಗಾರಿ; ಬನ್...
21-07-26 09:41 pm
ನೀಟ್ ಪರೀಕ್ಷೆ ಅಕ್ರಮ ; ಸೋನಂ ವಾಂಗ್ಚುಕ್ ಹೋರಾಟಕ್ಕೆ...
20-07-26 09:32 pm
ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿ ಬಿದ್ದ ಕಾರು; ಅಪಘ...
20-07-26 03:14 pm
ಲಾವಣ್ಯ ಹತ್ಯೆ ; ಅವನನ್ನ ನಮ್ಮ ಕೈಗೆ ಒಪ್ಪಿಸಿ, ಊರಿನ...
17-07-26 10:25 pm
22-07-26 04:21 pm
HK News Staffer
ಮನೆ ರಿಪೇರಿ ಕೆಲಸಕ್ಕೆ ಬಂದಿದ್ದ ವ್ಯಕ್ತಿಯಿಂದ ಕಳ್ಳತ...
22-07-26 10:55 am
₹200 ಕೋಟಿ ಧರ್ಮಸ್ಥಳ ಕ್ಷೇತ್ರದ ವಿರುದ್ಧ ಷಡ್ಯಂತ್ರ...
22-07-26 10:53 am
Lavanya Murder case: ಲಾವಣ್ಯ ಹತ್ಯೆ ಪ್ರಕರಣ ; ಒಂ...
21-07-26 08:03 pm
ಮ್ಯಾಟ್ರಿಮೋನಿ ಆ್ಯಪ್ನಲ್ಲಿ ಶುರುವಾದ ಪ್ರೀತಿ ; ಮದು...
21-07-26 04:54 pm