ಬ್ರೇಕಿಂಗ್ ನ್ಯೂಸ್
16-07-25 09:36 pm HK News Desk ಕರ್ನಾಟಕ
ಪುತ್ತೂರು, ಜುಲೈ 16: ನವೆಂಬರ್ ತಿಂಗಳೊಳಗೆ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜಿನಾಮೆ ನೀಡುವುದು ಖಚಿತ ಎಂದು ಮಾಜಿ ಸಚಿವ, ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಕಡಬಕ್ಕೆ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಜನಾರ್ದನ ರೆಡ್ಡಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದು ನವೆಂಬರ್ ತಿಂಗಳೊಳಗೆ ಸಿದ್ಧರಾಮಯ್ಯ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡುವ ಬಗ್ಗೆ ಮಾತುಕತೆ ಹಿಂದೆಯೇ ನಡೆದಿದೆ. ಕಾಂಗ್ರೆಸ್ ಪಕ್ಷದ ಹೈಕಮಾಂಡಿಗೂ ಇದೇ ವಿಚಾರವನ್ನು ಸಿದ್ಧರಾಮಯ್ಯ ತಿಳಿಸಿದ್ದಾರೆ. ದೇವರಾಜ ಅರಸ್ ಆಡಳಿತದ ಅವಧಿಗಿಂತ ಒಂದು ದಿನದ ವರೆಗೆ ಅಧಿಕಾರ ಮಾಡಬೇಕು ಎನ್ನೋದು ಸಿದ್ಧರಾಮಯ್ಯರ ಆಸೆ. ಆ ಬಳಿಕ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡುತ್ತೇವೆ ಎಂದು ಹೈಕಮಾಂಡ್ ಗೆ ಮಾತು ನೀಡಿದ್ದರು. ಈ ವಿಚಾರವನ್ನು ನಾನು ಸಂಡೂರು ಉಪ ಚುನಾವಣೆಯ ಸಂದರ್ಭದಲ್ಲಿ ಹೇಳಿದ್ದೇನೆ. ಅಧಿಕಾರ ಹಂಚಿಕೆಯನ್ನು 50-50 ಮಾದರಿಯಲ್ಲಿ ಮಾಡಿಕೊಂಡಿದ್ದಾರೆ.
ಈ ಕಾರಣಕ್ಕಾಗಿಯೇ ಡಿ.ಕೆ.ಶಿವಕುಮಾರ್ ಅದಕ್ಕೆ ಬುನಾದಿ ಹಾಕಲು ಶುರು ಮಾಡಿದ್ದಾರೆ. ಆ ಕಾರಣಕ್ಕಾಗಿ ದೇವರಾಜ ಅರಸರ ಆಡಳಿತ ಅವಧಿ ಮೀರಿದ ತಕ್ಷಣವೇ ಸಿದ್ಧರಾಮಯ್ಯ ಅಧಿಕಾರ ಬಿಟ್ಟುಕೊಡುವ ಸಾಧ್ಯತೆಯಿದೆ. ಇಲ್ಲದೇ ಹೋದಲ್ಲಿ ಡಿ.ಕೆ.ಶಿ ಬಲವಂತವಾಗಿ ಮುಖ್ಯಮಂತ್ರಿ ಕುರ್ಚಿ ಎಳೆದು ಕುಳಿತುಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ, ಡಿಕೆಶಿ ಅಧಿಕಾರ ಪಡೆಯಲೇಬೇಕೆಂಬ ಆತುರದಲ್ಲಿದ್ದಾರೆ ಎಂದು ಗಾಲಿ ಜನಾರ್ಧನ ರೆಡ್ಡಿ ಹೇಳಿದ್ದಾರೆ.
In a sensational political statement, former minister and Gangavathi MLA Gali Janardhan Reddy has claimed that Karnataka Chief Minister Siddaramaiah will resign from his post by November 2025.
16-07-25 09:36 pm
HK News Desk
ಕೋವಿಡ್ ಮುಗಿದರೂ, ಅದರ ಪರಿಣಾಮ ನಿಂತಿಲ್ಲ..! ನರಮಂಡಲ...
16-07-25 07:05 pm
BESCOM, Cybercrime, Digital Arrest: ಡಿಜಿಟಲ್ ಅ...
16-07-25 03:58 pm
ಕಾವೇರಿ ಆರತಿ ದುಡ್ಡು ಹೊಡೆಯುವ ಸ್ಕೀಮ್, ನೂರು ಕೋಟಿ...
16-07-25 11:47 am
35 IPS Officers Transfer: ರಾಜ್ಯದಲ್ಲಿ 35 ಐಪಿಎಸ...
15-07-25 01:32 pm
16-07-25 09:58 pm
HK News Desk
Changur Baba: ಲವ್ ಜಿಹಾದ್, ಹಿಂದು ಯುವತಿಯರ ಮತಾಂತ...
14-07-25 03:24 pm
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
16-07-25 10:52 pm
Mangalore Correspondent
ಕೆಂಪು ಕಲ್ಲು, ಮರಳು ಸಮಸ್ಯೆಗೆ ಕಾಂಗ್ರೆಸ್ ಸರ್ಕಾರದ...
16-07-25 01:01 pm
Dharmasthala Missing case, Ananya Bhat, Compl...
15-07-25 10:40 pm
Udupi Rain, Fishermen Missing: ಉಡುಪಿ ; ಭಾರೀ ಗ...
15-07-25 10:13 pm
Kmc Manipal Hospital, Mangalore, Health Card:...
15-07-25 07:19 pm
16-07-25 11:04 pm
Mangalore Correspondent
Mangalore Crime, Konaje Murder: ಒಂಟಿ ಮಹಿಳೆಯ ಅ...
16-07-25 09:48 pm
Sexual Harassment Odisha News; ಪ್ರಾಧ್ಯಾಪಕನಿಂದ...
16-07-25 04:37 pm
Kavoor police constable arrest, Mangalore: ದೂ...
16-07-25 11:42 am
ಸುಂದರವಾಗಿದ್ದಕ್ಕೆ ತಲೆ ಬೋಳಿಸಿ ಮನೆಯಲ್ಲಿ ಕೂಡಿಹಾಕಿ...
15-07-25 10:57 pm