ಬ್ರೇಕಿಂಗ್ ನ್ಯೂಸ್
18-07-25 03:38 pm Bangalore Correspondent ಕರ್ನಾಟಕ
ಬೆಂಗಳೂರು, ಜುಲೈ 18 : ಯಾದಗಿರಿ ಡಿವೈಎಸ್ಪಿ ಆಗಿ ವರ್ಗಾವಣೆಗೊಂಡಿದ್ದ ವಿಜಯಕ್ರಾಂತಿ ಅವರನ್ನು ಮಂಗಳೂರು ದಕ್ಷಿಣ ಉಪವಿಭಾಗ ಎಸಿಪಿ ಹುದ್ದೆಗೆ ಮರು ವರ್ಗಾವಣೆ ಮಾಡಲಾಗಿದೆ. ಒಂದೂವರೆ ತಿಂಗಳ ಹಿಂದೆ ಮಂಗಳೂರು ದಕ್ಷಿಣ ಎಸಿಪಿಯಾಗಿ ನಿಯೋಜಿಸಲ್ಪಟ್ಟಿದ್ದ ಪ್ರಕಾಶ್ ಸ್ವಂತ ಕೋರಿಕೆಯ ಮೇರೆಗೆ ಅಲ್ಲಿಂದ ಬೆಂಗಳೂರು ಸಿಐಡಿ ವಿಭಾಗಕ್ಕೆ ವರ್ಗ ಮಾಡಲಾಗಿದೆ.
ಯಾದಗಿರಿ ಉಪ ವಿಭಾಗಕ್ಕೆ ಡಿವೈಎಸ್ಪಿ ಆಗಿ ನೇಮಕಗೊಂಡಿದ್ದ ವಿಜಯಕ್ರಾಂತಿ ಅವರು ಅಲ್ಲಿ 20 ದಿನ ಆದರೂ ಅಧಿಕಾರ ಸ್ವೀಕರಿಸಿರಲಿಲ್ಲ. ಇದಕ್ಕೆ ಯಾದಗಿರಿ ಕಾಂಗ್ರೆಸ್ ಶಾಸಕ ಚೆನ್ನಾರೆಡ್ಡಿ ಪಾಟೀಲ್ ಡಿಮ್ಯಾಂಡ್ ಕಾರಣ ಅನ್ನುವ ಆರೋಪ ಕೇಳಿಬಂದಿತ್ತು. ಅಲ್ಲಿಯ ಮಾಜಿ ಶಾಸಕ ರಾಜ್ಕುಮಾರ್ ತೇಲ್ಕೂರ್, ಪಾಟೀಲ್ ವಿರುದ್ಧ ಲಂಚದ ಆರೋಪ ಮಾಡಿದ್ದರು. ಯಾದಗಿರಿ ಡಿವೈಎಸ್ಪಿ ವಿಜಯಕ್ರಾಂತಿಗೆ ಪೋಸ್ಟಿಂಗ್ ಆದರೂ ಕೆಲಸಕ್ಕೆ ಹಾಜರಾಗಲು ಶಾಸಕ ಚೆನ್ನಾರೆಡ್ಡಿ ಪಾಟೀಲ್ ಮತ್ತು ಅವರ ಮಗ ಪಂಪನಗೌಡ ಪಾಟೀಲ್ ಬಿಡುತ್ತಿಲ್ಲ. 50 ಲಕ್ಷ ಹಣಕ್ಕೆ ಡಿಮ್ಯಾಂಡ್ ಇಟ್ಟಿದ್ದಾರೆ ಅಂತ ತೇಲ್ಕೂರ್ ಆರೋಪಿಸಿದ್ದರು. ಪೋಸ್ಟಿಂಗ್ ಆಗಿ 15 ದಿನಗಳಾದ್ರೂ ಡಿವೈಎಸ್ಪಿ ವಿಜಯಕ್ರಾಂತಿಗೆ ಕೆಲಸಕ್ಕೆ ಬರದಂತೆ ಅಡ್ಡಿಪಡಿಸಿರೋದಾಗಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಮತ್ತು ಡಿಜಿಪಿ ಸಲೀಂ ಅಹಮದ್ಗೆ ದೂರನ್ನೂ ನೀಡಿದ್ದರು.
ಆದರೆ ರಾಜಕುಮಾರ್ ತೇಲ್ಕೂರ್ ಆರೋಪವನ್ನ ಶಾಸಕ ಚೆನ್ನಾರೆಡ್ಡಿ ತಳ್ಳಿಹಾಕಿದ್ದಾರೆ. ಎಡಿಜಿಪಿ, ಡಿಐಜಿ ಲೆವೆಲ್ನಲ್ಲಿ ಡಿವೈಎಸ್ಪಿಗಳ ವರ್ಗಾವಣೆ ಆಗುತ್ತದೆ. ವಿನಾಕಾರಣ ನನ್ನ ತೇಜೋವಧೆ ಮಾಡೋದು ಸರಿಯಲ್ಲ. ಡಿವೈಎಸ್ಪಿ ಏನಾದ್ರೂ ಕಂಪ್ಲೆಂಟ್ ಕೊಟ್ಟಿದ್ದಾರಾ.. ಎಂದು ಪ್ರಶ್ನಿಸಿದ್ದರು. ಇದರ ಬೆನ್ನಲ್ಲೇ ವಿಜಯಕ್ರಾಂತಿ ಅವರನ್ನು ಮಂಗಳೂರಿಗೆ ವರ್ಗಾಯಿಸಿ ರಾಜ್ಯ ಸರ್ಕಾರ ಇಬ್ಬರ ಜಗಳದ ವಿವಾದಕ್ಕೆ ಇತಿಶ್ರೀ ಹಾಡಿದೆ.
ಮಂಗಳೂರು ದಕ್ಷಿಣ ಉಪ ವಿಭಾಗದಲ್ಲಿ ಒಂದೂವರೆ ವರ್ಷದಿಂದ ಧನ್ಯ ನಾಯಕ್ ಎಸಿಪಿ ಆಗಿದ್ದರು. ಅದಕ್ಕೂ ಹಿಂದೆಯೂ ಈ ಹುದ್ದೆಯಲ್ಲಿ ಮಹಿಳಾ ಅಧಿಕಾರಿಯೇ ಇದ್ದರು. ಇದೀಗ ಮತ್ತೊಮ್ಮೆ ಲೇಡಿ ಅಧಿಕಾರಿ ವಿಜಯಕ್ರಾಂತಿ ಬಂದಿದ್ದಾರೆ.
In a significant move, the Karnataka government has reappointed IPS officer Vijayakranti as the Assistant Commissioner of Police (ACP) for Mangalore South Sub-Division. This comes after Prakash, who was appointed to the post just over a month ago, sought a transfer and has now been moved to the CID division in Bengaluru.
28-08-25 06:23 pm
HK News Desk
Bidar Bus Driver Suicide: ಬೀದರ್ ಬಸ್ ಡಿಪೋ ನಲ್ಲ...
28-08-25 02:41 pm
ಬಿಳಿಯಲ್ಲ ಮಾರಾಯರೇ ನೀಲಿ ಮೊಟ್ಟೆ ಇಟ್ಟ ನಾಟಿ ಕೋಳಿ ;...
28-08-25 11:56 am
Banumustak, DK Shivakumar, Chamundi Hill: ದೇವ...
27-08-25 06:21 pm
Congress, MP Yaduveer, DK Shivakumar: ಕಾಂಗ್ರೆ...
27-08-25 06:17 pm
28-08-25 12:19 pm
HK News Desk
ಕೈ ಗ್ಯಾರಂಟಿಗೆ ಬೊಕ್ಕಸ ಪೂರ ಖಾಲಿ - ಖಾಲಿ ; ತೆಲಂಗಾ...
26-08-25 09:02 pm
ಜಮ್ಮು ಭಾರಿ ಮಳೆಗೆ ಒಂಬತ್ತು ಮಂದಿ ಬಲಿ ; ಹಲವೆಡೆ ಭೂ...
26-08-25 07:39 pm
Trump Immigrant Population: ಟ್ರಂಪ್ ಸಾಮ್ರಾಜ್ಯದ...
24-08-25 01:47 pm
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
28-08-25 11:00 pm
Mangalore Correspondent
Mangalore Rain, School College Holiday: ಭಾರೀ...
28-08-25 10:07 pm
Soujanya Murder Case, Mother SIT: ಸೌಜನ್ಯಾ ಕೊಲ...
28-08-25 08:31 pm
Talapady Accident, Mangalore, Auto bus: ಕೇರಳ...
28-08-25 04:05 pm
Loudspeaker, Punjalkatte,Farangipete: ಪುಂಜಾಲ...
28-08-25 02:51 pm
27-08-25 10:23 pm
HK News Desk
Karkala Murder, Arrest, Crime: ಹೆಂಡ್ತಿ ಮಕ್ಕಳನ...
26-08-25 10:39 pm
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm