ಬ್ರೇಕಿಂಗ್ ನ್ಯೂಸ್
20-07-25 07:55 pm Bangalore Correspondent ಕರ್ನಾಟಕ
ಬೆಂಗಳೂರು, ಜುಲೈ 20 : ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮದ ಹಗರಣ ರೀತಿಯಲ್ಲೇ ಮತ್ತೊಂದು ಪ್ರಕರಣ ಕೊಪ್ಪಳ ಜಿಲ್ಲೆಯ ಕೆಐಆರ್ಡಿಎಲ್ ನಲ್ಲಿ ನಡೆದಿದೆ. ಹಗರಣದಲ್ಲಿ ಭಾಗಿಯಾದ ಇಬ್ಬರು ಅಧಿಕಾರಿಗಳ ವಿರುದ್ದ ಕೊಪ್ಪಳ ಲೋಕಾಯುಕ್ತರಿಗೆ ದೂರು ನೀಡಲಾಗಿದೆ.
ಕೆಐಆರ್ಡಿಎಲ್ ನಲ್ಲಿ ನಡೆದಿರುವ 96 ಕಾಮಗಾರಿಗಳಲ್ಲಿ 72 ಕೋಟಿ ಸರ್ಕಾರಿ ಹಣವನ್ನ ದುರ್ಬಳಕೆ ಮಾಡಿರುವ ಬಗ್ಗೆ ಅಧಿಕಾರಿಗಳು ದಾಖಲೆಗಳನ್ನ ಸಲ್ಲಿಕೆ ಮಾಡಿದ್ದಾರೆ. 2019 ರಿಂದ 2025 ರ ವರೆಗೆ ಕೊಪ್ಪಳ ಜಿಲ್ಲೆಯ ವಿವಿಧೆಡೆ ನಡೆದ 96 ಕಾಮಗಾರಿಗಳಲ್ಲಿ ಅಂದಿನ ಇಇ ಆಗಿದ್ದ ಝಡ್ ಎಂ ಚಿಂಚೋಳಿಕರ್ ಹಾಗೂ ಹೊರ ಗುತ್ತಿಗೆ ನೌಕರನಾಗಿದ್ದ ಕಳಕಪ್ಪ ನಿಡಗುಂದಿ ಎಂಬವರು 72 ಕೋಟಿ ರೂ. ಹಣವನ್ನ ದುರ್ಬಳಕೆ ಮಾಡಿಕೊಂಡ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ
ಕೆಆರ್ಐಡಿಎಲ್ ಎಂಡಿ ಬಸವರಾಜ ನಿರ್ದೇಶನ ಮೇರೆಗೆ ಕೊಪ್ಪಳ ವಿಭಾಗದ ಇಇ ಅನಿಲ್ಪಾಟೀಲ್, ನೆಲೋಗಿಪುರ ಉಪವಿಭಾಗದ ಆನಂದ ಕಾರ್ಲಕುಂಟಿ ಖುದ್ದಾಗಿ ಕೊಪ್ಪಳದ ಲೋಕಾಯುಕ್ತ ಕಚೇರಿಗೆ ತೆರಳಿ ಆರೋಪಿತ ಇಬ್ಬರು ಅಧಿಕಾರಿಗಳ ವಿರುದ್ಧ ಕೇಸು ದಾಖಲಿಸಿದ್ದಾರೆ.
2019ರಿಂದ 2025ರ ವರೆಗೆ ಕೊಪ್ಪಳ ಜಿಲ್ಲೆಯಲ್ಲಿ ವಿವಿಧ ಗ್ರಾಮಗಳಲ್ಲಿ ಚರಂಡಿ, ರಸ್ತೆ, ಕುಡಿಯುವ ನೀರು ಸೇರಿ 96 ಕಾಮಗಾರಿಗಳನ್ನ ಮಾಡಿರೋದಾಗಿ ನಕಲಿ ಬಿಲ್ ಪಾವತಿ ಮಾಡುವ ಮೂಲಕ 72 ಕೋಟಿ ರೂ. ಹಣವನ್ನ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಮೇಲ್ನೋಟಕ್ಕೆ ಕಂಡುಬಂದ ಹಿನ್ನೆಲೆ ಲೋಕಾಯುಕ್ತ ಪೊಲೀಸರು ಸಂಪೂರ್ಣ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಸದ್ಯ 13 ಅಂಶಗಳನ್ನು ಒಳಗೊಂಡ ಕಾಮಗಾರಿ, ಟೆಂಡರ್ ಮೊತ್ತ, ಟೆಂಡರ್ ದಿನಾಂಕ, ಪೂರ್ಣಗೊಂಡ ಕಾಮಗಾರಿ, ಅರ್ಧ ಮುಗಿಸಿರುವ ಕಾಮಗಾರಿ ಜೊತೆಗೆ ಬಿಲ್ ಪಾವತಿಯಾಗಿರುವ ಮಾಹಿತಿ ಹಾಗೂ ಬಾಕಿ ಇರುವ ಎಲ್ಲ ದಾಖಲೆಗಳನ್ನು ಅಧಿಕಾರಿಗಳು ಲೋಕಾಯುಕ್ತಕ್ಕೆ ನೀಡಿದ್ದಾರೆ.
ಇಂಜಿನಿಯರ್ ಚಿಂಚೋಳಿಕರ್ ಅಧಿಕಾರ ಅವಧಿಯಲ್ಲಿ 72 ಕೋಟಿ ದುರ್ಬಳಕೆ ಆದ ವಿಚಾರಕ್ಕೆ ಸರ್ಕಾರ ಇವರನ್ನ ಸಸ್ಪೆಂಡ್ ಮಾಡಿತ್ತು. ಆದ್ರೆ ಇದೇ ಭ್ರಷ್ಟ ಅಧಿಕಾರಿಯನ್ನ ಆಬಳಿಕ ದಾವಣಗೆರೆ ವಿಭಾಗ 2 ರಲ್ಲಿ ನಿಯೋಜನೆ ಮಾಡಲಾಗಿತ್ತು. ಇಷ್ಟೊಂದು ದೊಡ್ಡ ಪ್ರಮಾಣದ ಭ್ರಷ್ಟಾಚಾರ ಮಾಡಿ, ಪ್ರಕರಣ ಲೋಕಾಯುಕ್ತದಲ್ಲಿ ತನಿಖೆ ಹಂತದಲ್ಲಿರುವಾಗಲೇ ಇದೇ ವ್ಯಕ್ತಿಗೆ ಮತ್ತೆ ಆಡಳಿತಾತ್ಮಕ ಹುದ್ದೆ ನೀಡಿರುವುದು ಪ್ರಶ್ನೆ ಮೂಡುವಂತಾಗಿದೆ.
In a scam reminiscent of the infamous Maharshi Valmiki Development Corporation fraud, yet another financial irregularity has surfaced — this time in the Karnataka Infrastructure Development Limited (KIRDCL) operations in Koppal district. A formal complaint, backed by documented evidence, has been lodged with the Koppal Lokayukta against two individuals involved in the alleged embezzlement.
28-08-25 06:23 pm
HK News Desk
Bidar Bus Driver Suicide: ಬೀದರ್ ಬಸ್ ಡಿಪೋ ನಲ್ಲ...
28-08-25 02:41 pm
ಬಿಳಿಯಲ್ಲ ಮಾರಾಯರೇ ನೀಲಿ ಮೊಟ್ಟೆ ಇಟ್ಟ ನಾಟಿ ಕೋಳಿ ;...
28-08-25 11:56 am
Banumustak, DK Shivakumar, Chamundi Hill: ದೇವ...
27-08-25 06:21 pm
Congress, MP Yaduveer, DK Shivakumar: ಕಾಂಗ್ರೆ...
27-08-25 06:17 pm
28-08-25 12:19 pm
HK News Desk
ಕೈ ಗ್ಯಾರಂಟಿಗೆ ಬೊಕ್ಕಸ ಪೂರ ಖಾಲಿ - ಖಾಲಿ ; ತೆಲಂಗಾ...
26-08-25 09:02 pm
ಜಮ್ಮು ಭಾರಿ ಮಳೆಗೆ ಒಂಬತ್ತು ಮಂದಿ ಬಲಿ ; ಹಲವೆಡೆ ಭೂ...
26-08-25 07:39 pm
Trump Immigrant Population: ಟ್ರಂಪ್ ಸಾಮ್ರಾಜ್ಯದ...
24-08-25 01:47 pm
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
28-08-25 11:00 pm
Mangalore Correspondent
Mangalore Rain, School College Holiday: ಭಾರೀ...
28-08-25 10:07 pm
Soujanya Murder Case, Mother SIT: ಸೌಜನ್ಯಾ ಕೊಲ...
28-08-25 08:31 pm
Talapady Accident, Mangalore, Auto bus: ಕೇರಳ...
28-08-25 04:05 pm
Loudspeaker, Punjalkatte,Farangipete: ಪುಂಜಾಲ...
28-08-25 02:51 pm
27-08-25 10:23 pm
HK News Desk
Karkala Murder, Arrest, Crime: ಹೆಂಡ್ತಿ ಮಕ್ಕಳನ...
26-08-25 10:39 pm
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm