ಆರ್ ಸಿಬಿ ತಂಡ ಮಾರಾಟಕ್ಕಿಟ್ಟ ಯುನೈಟೆಡ್ ಸ್ಪಿರಿಟ್ಸ್ ; ಆಸಕ್ತಿ ತೋರಿದ ಸೀರಮ್ ಇನ್ಸ್ ಟಿಟ್ಯೂಟ್ ಸಿಇಓ ಆಧಾರ್ ಪೂನಾವಾಲಾ, ಕೊಹ್ಲಿ ಟೀಮಿನ ರೇಟ್ ಎಷ್ಟು ಗೊತ್ತಾ..? ಊಹೆಗೆ ನಿಲುಕದ್ದು ! 

02-10-25 02:28 pm       Bangalore Correspondent   ಕರ್ನಾಟಕ

ಯುನೈಟೆಡ್‌ ಸ್ಪಿರಿಟ್ಸ್‌ ಲಿಮಿಟೆಡ್ ಒಡೆತನದಲ್ಲಿರುವ ಆರ್‌ಸಿಬಿ ತಂಡವನ್ನು ಮಾರಾಟಕ್ಕೆ ಇಡಲಾಗಿದ್ದು, ಔಷಧ ತಯಾರಕ ಕಂಪನಿ ಸೀರಮ್‌ ಇನ್ಸ್‌ಟಿಟ್ಯೂಟ್‌ ಸಿಇಓ ಆಧಾರ್‌ ಪೂನವಾಲಾ ತಂಡವನ್ನು ಖರೀದಿಸಲು ಆಸಕ್ತಿ ತೋರಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಬೆಂಗಳೂರು, ಅ.2 : ಯುನೈಟೆಡ್‌ ಸ್ಪಿರಿಟ್ಸ್‌ ಲಿಮಿಟೆಡ್ ಒಡೆತನದಲ್ಲಿರುವ ಆರ್‌ಸಿಬಿ ತಂಡವನ್ನು ಮಾರಾಟಕ್ಕೆ ಇಡಲಾಗಿದ್ದು, ಔಷಧ ತಯಾರಕ ಕಂಪನಿ ಸೀರಮ್‌ ಇನ್ಸ್‌ಟಿಟ್ಯೂಟ್‌ ಸಿಇಓ ಆಧಾರ್‌ ಪೂನವಾಲಾ ತಂಡವನ್ನು ಖರೀದಿಸಲು ಆಸಕ್ತಿ ತೋರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಆರ್‌ಸಿಬಿ ತಂಡದ ಬಗ್ಗೆ ಆಧಾರ್ ಪೂನಾವಾಲಾ ಪೋಸ್ಟ್ ಹಾಕಿರುವುದು ಖರೀದಿ ಆಸಕ್ತಿ ತೋರಿಸಿದ್ದನ್ನು ತೋರಿಸಿದೆ. 

ಇತ್ತೀಚೆಗಷ್ಟೇ ರಜತ್ ಪಾಟಿದಾರ್ ನಾಯಕತ್ವದಲ್ಲಿ ಆರ್‌ಸಿಬಿ ತಂಡವು ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸಿ ಚೊಚ್ಚಲ ಐಪಿಎಲ್ ಟ್ರೋಫಿಯನ್ನು ಗೆದ್ದುಕೊಂಡಿತ್ತು. ಆದರೆ, ಜೂನ್ 4ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ನಡೆದ ವಿಜಯೋತ್ಸವದಲ್ಲಿ ಕಾಲ್ತುಳಿತ ಉಂಟಾಗಿ 11 ಮಂದಿ ಮೃತಪಟ್ಟ ಘಟನೆ ನಡೆದಿತ್ತು. ಇತ್ತೀಚೆಗೆ ದುರಂತ ಘಟನೆಗೆ ಆರ್‌ಸಿಬಿಯೇ ಹೊಣೆ ಎಂದು ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿ (ಸಿಎಟಿ) ತೀರ್ಪು ನೀಡಿದ್ದು ಆಬಳಿಕ ಫ್ರಾಂಚೈಸಿಯನ್ನು ಮಾರಾಟ ಮಾಡಬಹುದು ಎಂಬ ಮಾತು ಕೇಳಿಬಂದಿತ್ತು. 

ಆರ್ ಸಿಬಿ ತಂಡಕ್ಕೆ ಎರಡು ಬಿಲಿಯನ್ ಡಾಲರ್ ಅಥವಾ 17,762 ಕೋಟಿ ರೂ. ಮೌಲ್ಯ ನಿಗದಿಪಡಿಸಲಾಗಿದೆ ಎಂಬ ವರದಿಗಳಿದ್ದು, ಕೆಲವು ವರದಿಗಳು ಈ ಮೊತ್ತ 1-1.2 ಬಿಲಿಯಲ್‌ ಡಾಲರ್‌ ಅಂದ್ರೆ 9-10 ಸಾವಿರ ಕೋಟಿ ರೂ. ಇರಬಹುದು ಎಂದೂ ಹೇಳುತ್ತಿವೆ. ಒಟ್ಟಿನಲ್ಲಿ ವಿರಾಟ್ ಕೊಹ್ಲಿಯಿಂದಾಗಿ ಬಹು ಖ್ಯಾತಿ ಹೊಂದಿರುವ ಆರ್ ಸಿಬಿ ತಂಡ ಭಾವನಾತ್ಮಕವಾಗಿ ಬೆಂಗಳೂರು ಜೊತೆ ನಂಟು ಹೊಂದಿದೆ. ಆದರೆ ಇನ್ನು ಬೇರೆಯವರ ಪಾಲಾದಲ್ಲಿ ಬೆಂಗಳೂರು ನಗರವನ್ನು ಪ್ರತಿನಿಧಿಸುತ್ತಾ ಇಲ್ಲವೇ ಸೆಂಬ ಕುತೂಹಲ ಇದೆ.‌

Bengaluru’s beloved IPL franchise Royal Challengers Bangalore (RCB), owned by United Spirits Ltd, has reportedly been put up for sale. Pharma giant Serum Institute of India’s CEO, Adar Poonawalla, has expressed interest in buying the team, sparking major buzz online after his recent social media post hinting at the move.