ಬ್ರೇಕಿಂಗ್ ನ್ಯೂಸ್
12-11-25 09:03 pm Bangalore Correspondent ಕರ್ನಾಟಕ
ಬೆಂಗಳೂರು, ನ.12 : ದೆಹಲಿಯ ಕೆಂಪುಕೋಟೆ ಆವರಣದಲ್ಲಿ ನಡೆದ ಕಾರು ಬಾಂಬ್ ಸ್ಫೋಟದ ಕುರಿತು ಶಂಕೆ ವ್ಯಕ್ತಪಡಿಸಿರುವ ಕರ್ನಾಟಕದ ಅಲ್ಪಸಂಖ್ಯಾತ ಕಲ್ಯಾಣ ಮತ್ತು ವಕ್ಫ್ ಇಲಾಖೆ ಸಚಿವ ಜಮೀರ್ ಅಹ್ಮದ್ ಖಾನ್ 'ಬಿಹಾರ ಚುನಾವಣೆಯ ಒಂದು ದಿನ ಮೊದಲು ಏಕೆ ಸ್ಫೋಟ ನಡೆಯಿತು' ಎಂದು ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಜಮೀರ್, 'ಇಸ್ಲಾಂ ಧರ್ಮದಲ್ಲಿ ಭಯೋತ್ಪಾದನೆಗೆ ಅವಕಾಶ ಇಲ್ಲ. ಹಾಗಾಗಿ ಭಯೋತ್ಪಾದಕರು ಮುಸ್ಲಿಮರಾಗಲು ಸಾಧ್ಯವಿಲ್ಲ ಎಂದರು. ದೆಹಲಿ ಕಾರು ಸ್ಫೋಟ ಪ್ರಕರಣ ಹಾಗೂ ಉಗ್ರಗಾಮಿ ಚಟುವಟಿಕೆ ಆರೋಪದಲ್ಲಿ ಬಂಧಿತರಾಗಿರುವ ವೈದ್ಯರ ನೆಟ್ವರ್ಕ್ ಬಗ್ಗೆ ಕೇಳಿದ ಪ್ರಶ್ನೆಗೆ, ಬಿಹಾರ ಚುನಾವಣೆಯ ಒಂದು ದಿನ ಮೊದಲು ಏಕೆ ಸ್ಫೋಟ ನಡೆದಿತ್ತು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
'ಬಿಹಾರ ಚುನಾವಣೆ ಒಂದು ದಿನದ ಮುಂಚೆ ಬ್ಲಾಸ್ಟ್ ಹೇಗಾಯಿತು? ಹಾಗೇನಾದರೂ ರಾಜಕೀಯ ಸಂಬಂಧ ಆಗಿದ್ರೆ ಯಾರಿಗೂ ಒಳ್ಳೆಯದಾಗಲ್ಲ. ಯಾರೂ ಇಲ್ಲಿಯೇ ಗೂಟ ಹೊಡೆದುಕೊಂಡು ಇರುವುದಿಲ್ಲ. ಸಿಎಂ ಆಗ್ಲಿ ಪ್ರಧಾನಿ ಆಗಲಿ ಯಾರೂ ಶಾಶ್ವತವಾಗಿ ಗೂಟ ಹೊಡೆದು ಇರುವುದಿಲ್ಲ ಎಂದು ಹೇಳಿದರು.
ಸ್ಫೋಟದ ಬಗ್ಗೆ ಅನುಮಾನ ಇದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, 'ಬ್ಲಾಸ್ಟ್ ಕುರಿತಾಗಿ ನನಗೆ ಅನುಮಾನ ಇಲ್ಲ. ಆದರೆ ಇದೇ ಟೈಮಿಂಗ್ ಬಗ್ಗೆ ಪ್ರಶ್ನೆಯನ್ನು ನಾನು ಕೇಳುತ್ತಿದ್ದೇನೆ. ಭಯೋತ್ಪಾದಕರಿಗೆ ಜಾತಿಯೇ ಇಲ್ಲ. ಇಸ್ಲಾಂ ಧರ್ಮದಲ್ಲಿ ಟೆರರಿಸಂಗೆ ಯಾರೂ ಅವಕಾಶ ಕೊಟ್ಟಿಲ್ಲ ಎಂದರು. ಇಸ್ಲಾಂ ಧರ್ಮದ ಪ್ರಕಾರ ಭಯೋತ್ಪಾದನೆ ಮಾಡುವವನು ಮುಸ್ಲಿಂ ಅಲ್ಲ. ಹಾಗೇನಾದರೂ ಇಂತಹ ಕೃತ್ಯ ಎಸಗಿದರೆ ಹುಳ ಬಿದ್ದು ಸಾಯ್ತಾನೆ ಅವನು. ಆದರೆ ಕಾರ್ ಸ್ಫೋಟ ಪ್ರಕರಣದ ಬಗ್ಗೆ ಒಂದಿಷ್ಟು ಪ್ರಶ್ನೆಗಳು ಇವೆ. ನವೆಂಬರ್ 11 ಕ್ಕೆ ಬಿಹಾರ ಚುನಾವಣೆ ನಡೆಯಿತು. ಒಂದು ದಿನದ ಮುಂದೆ ಬ್ಲಾಸ್ಟ್ ಆಗಿದ್ದು ಹೇಗೆ ಎಂದು ಪ್ರಶ್ನಿಸಿದರು.
ಟೆರರಿಸ್ಟ್ ಗಳಿಗೆ ರಾಜಕೀಯ ಸಂಪರ್ಕ ಇತ್ತು ಎನ್ನುವುದನ್ನು ನಾನು ಕೇಳಲ್ಪಟ್ಟಿದ್ದು ಹೇಳ್ತಿದ್ದೇನೆ. ಎಲ್ಲವೂ ಈಗ ಊಹಾಪೋಹಗಳು ಸೃಷ್ಟಿ ಆಗ್ತಿವೆ. ಹಾಗೇನಾದರೂ ಆದ್ರೆ ಯಾರಿಗೂ ಒಳ್ಳೆಯದಾಗಲ್ಲ ಎಂದು ಜಮೀರ್ ಹೇಳಿದರು.
Karnataka Minister for Minority Welfare and Waqf, Zameer Ahmed Khan, has raised questions about the timing of the Delhi car bomb blast, which occurred just a day before the Bihar Assembly elections, suggesting that the incident warrants deeper scrutiny.
15-10-26 02:30 pm
HK News Staffer
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
16-10-26 01:47 pm
HK News Staffer
MRPL ಗುತ್ತಿಗೆ ಕಾರ್ಮಿಕರಿಗೆ ₹5 ಲಕ್ಷ ಆರೋಗ್ಯ ವಿಮೆ...
15-10-26 10:34 pm
Sting News, DK Shivakumar in Mangalore: 'ಸ್ಟಿ...
15-10-26 06:46 pm
ನವರಾತ್ರಿ ನೆಪದಲ್ಲಿ ಕುಡ್ಲದ ತುಂಬ ಫ್ಲೆಕ್ಸ್ಗಳದ್ದೇ...
15-10-26 03:30 pm
Sudheer Reddy, Agnes College, ABVP: ಭಾರತ ಮಾತೆ...
15-10-26 12:19 pm
16-10-26 03:37 pm
HK News Staffer
ಪಿರಿಯಾಪಟ್ಟಣ ಬಳಿ ಸ್ಲೀಪರ್ ಕೋಚ್ ಬಸ್- ಲಾರಿ ಡಿಕ್ಕಿ...
16-10-26 11:04 am
Mangaluru Valencia Church Priest Fr. Cyprian...
16-10-26 10:27 am
Fr. Cyprian Pinto Posco Case, Mangalore: ಅಪ್ರ...
16-10-26 10:03 am
ಕೇರಳದಿಂದ ಲಾಟರಿ ಟಿಕೆಟ್ ತಂದು ಮಾರಾಟ ; ಪುತ್ತೂರಿನ...
15-10-26 05:06 pm