ಕಾಶ್ಮೀರಿ ಪಂಡಿತರಿಗಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ್ದ ಸಿಖ್ ಗುರು ತೇಜ್ ಬಹಾದ್ದೂರ್ ಸಿಂಗ್ ; ಮತಾಂತರಕ್ಕೆ ಪೀಡಿಸಿ ಶಿರಚ್ಚೇದ ಮಾಡಿದ್ದ ಔರಂಗಜೇಬ, ಇಂದು 350ನೇ ಹುತಾತ್ಮ ದಿನಾಚರಣೆ 

25-11-25 12:19 pm       HK News Desk   ಕರ್ನಾಟಕ

ಶ್ರೀ ಗುರು ತೇಜ್ ಬಹಾದ್ದೂರ್ ಸಿಂಗ್ ಅವರು ಸಿಖ್ ಧರ್ಮದ ಒಂಬತ್ತನೇ ಗುರುವಾಗಿದ್ದವರು. ಔರಂಗಜೇಬನ ಕಾಲದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಮತ್ತು ಮಾನವ ಅಧಿಕಾರ ಉಳಿಸುವುದಕ್ಕಾಗಿ ಅವರು ತಮ್ಮ ಪ್ರಾಣವನ್ನೇ ಬಲಿ ನೀಡಿದ್ದರು. ಇಂದು(ನ.25) ಗುರು ತೇಜ್ ಬಹಾದೂರ್ ಅವರ 350ನೇ ಹುತಾತ್ಮ ದಿನಾಚರಣೆಯ ದಿವಸ. 

ಶ್ರೀ ಗುರು ತೇಜ್ ಬಹಾದ್ದೂರ್ ಸಿಂಗ್ ಅವರು ಸಿಖ್ ಧರ್ಮದ ಒಂಬತ್ತನೇ ಗುರುವಾಗಿದ್ದವರು. ಔರಂಗಜೇಬನ ಕಾಲದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಮತ್ತು ಮಾನವ ಅಧಿಕಾರ ಉಳಿಸುವುದಕ್ಕಾಗಿ ಅವರು ತಮ್ಮ ಪ್ರಾಣವನ್ನೇ ಬಲಿ ನೀಡಿದ್ದರು. ಇಂದು(ನ.25) ಗುರು ತೇಜ್ ಬಹಾದೂರ್ ಅವರ 350ನೇ ಹುತಾತ್ಮ ದಿನಾಚರಣೆಯ ದಿವಸ. 

ಮೊಘಲ್ ರಾಜ ಔರಂಗಜೇಬ್‌ನ ಕಾಲದಲ್ಲಿ ಧಾರ್ಮಿಕ ಸ್ವಾತಂತ್ರ್ಯವಿಲ್ಲದೆ, ಮತಾಂತರದ ಕಿರುಕುಳಕ್ಕೀಡಾಗಿ ಜನರು ಬಳಲುತ್ತಿದ್ದರು. ಮತಾಂತರದ ಪೀಡನೆಗೆ ಒಳಗಾದ ಕಾಶ್ಮೀರದ ಪಂಡಿತರು ಶ್ರೀ ಗುರು ತೇಜ್ ಬಹಾದ್ದೂರ್ ಸಾಹೇಬ್ ಅವರ ಹತ್ತಿರ ಬಂದು ಔರಂಗಜೇಬ್, ತಮ್ಮನ್ನು ಧರ್ಮ ಪರಿವರ್ತನೆಗೊಳ್ಳುವಂತೆ ಕಿರುಕುಳ ನೀಡುತ್ತಿರುವುದಾಗಿ ಅಲವತ್ತುಕೊಂಡರು. ತಮ್ಮನ್ನು ನೀವೇ ರಕ್ಷಿಸಿ ದಾರಿ ತೋರುವಂತೆ ಬೇಡಿಕೊಂಡರು. ಔರಂಗಜೇಬ ತನ್ನ ಬಗ್ಗೆ ಗೌರವ ಇಟ್ಟುಕೊಂಡಿದ್ದಾನೆಂಬ ಭಾವನೆಯಲ್ಲಿದ್ದ ಗುರು ತೇಜ್ ಬಹಾದ್ದೂರ್ ಅವರು 'ಔರಂಗಜೇಬನ ಬಳಿ ತೆರಳಿ ಗುರು ತೇಜ್ ಬಹಾದ್ದೂರ್ ಸಾಹೇಬ್‌ ಧರ್ಮ ಪರಿವರ್ತನೆಯಾದರೆ ನಾವೂ ಧರ್ಮ ಪರಿವರ್ತನೆ ಆಗುತ್ತೇವೆ ಎಂದು ಹೇಳುವಂತೆ ಎಂದು ಸಲಹೆ ನೀಡಿದರು. 

ಇದರಿಂದ ಇಕ್ಕಟ್ಟಿಗೆ ಸಿಲುಕಿದ ಔರಂಗಜೇಬ, ಗುರು ತೇಜ್ ಬಹಾದ್ದೂರ್ ಸಾಹೇಬ್ ರನ್ನು ಕರೆದು ಮುಸ್ಲಿಂ ಆಗಿ ಧರ್ಮ ಪರಿವರ್ತನೆಯಾಗಲು ಒತ್ತಡ ಹೇರಿದ. ಆದರೆ ಗುರುಗಳು ಯಾವುದೇ ಕಾರಣಕ್ಕೂ ಧರ್ಮ ಪರಿವರ್ತನೆಗೆ ಒಪ್ಪಲಿಲ್ಲ. ಧರ್ಮ ಮಾನವನ ಅಧಿಕಾರ, ಯಾರನ್ನೂ ಖಡ್ಗ ತೋರಿಸಿ ಮತಾಂತರ ಮಾಡುವುದು ತರವಲ್ಲ ಎಂದು ಔರಂಗಜೇಬನಿಗೆ ಉಪದೇಶ ಮಾಡಿದರು. ಆದರೆ ಗುರುಗಳ ಮಾತನ್ನು ಒಪ್ಪದ ಔರಂಗಜೇಬ ಬಹಾದ್ದೂರ್ ಜೀ ಅವರನ್ನೇ ಮುಗಿಸಲು ನಿರ್ಧರಿಸಿ ನಿರ್ದಯವಾಗಿ ಕೊಲ್ಲುವಂತೆ ಆಜ್ಞಾಪಿಸಿದ. ದಿಲ್ಲಿಯ ಚಾಂದನಿ ಚೌಕ್‌ ನಲ್ಲಿ ಸಾರ್ವಜನಿಕವಾಗಿ ಗುರು ತೇಜ್ ಬಹದ್ದೂರ್ ಅವರನ್ನು ಸಾರ್ವಜನಿಕವಾಗಿ ಶಿರಚ್ಛೇದನ ಮಾಡಿ ಕೊಲ್ಲಲಾಯಿತು. ಗುರುಗಳ ಬಲಿದಾನ ಮೊಘಲ್ ಸಾಮ್ರಾಜ್ಯದ ವಿರುದ್ಧ ಸಿಬ್ಬರನ್ನು ಒಗ್ಗೂಡಿಸಿತು. 

ಪ್ರತಿ ವರ್ಷ ನವೆಂಬರ್ 25ರಂದು ಗುರು ತೇಜ್ ಬಹಾದ್ದೂರ್ ಸಾಹೇಬ್‌ ಅವರ ಬಲಿದಾನ ದಿವಸವೆಂದು ಸಿಕ್ಖರು ಆಚರಿಸುತ್ತಾರೆ. ಈ ಬಾರಿ 350ನೇ ಬಲಿದಾನ ದಿವಸವಾಗಿದ್ದು ಗುರು ತೇಜ್ ಬಹಾದ್ದೂರ್ ಅವರ ಹುತಾತ್ಮ ದಿನಾಚರಣೆಯಲ್ಲಿ ಪ್ರಧಾನಿ ಮೋದಿ ಭಾಗಿಯಾಗಲಿದ್ದಾರೆ. ತೇಜ್ ಬಹಾದೂರ್ ಅವರ ಸ್ಮರಣಾರ್ಥ ರೂಪಿಸಲಾದ ವಿಶೇಷ ಅಂಚೆ ಚೀಟಿ ಹಾಗೂ ನಾಣ್ಯವನ್ನು ಮೋದಿ ಬಿಡುಗಡೆ ಮಾಡಲಿದ್ದಾರೆ. 

ಶ್ರೀ ಗುರು ತೇಜ್ ಬಹಾದ್ದೂರ್ ಸಾಹೇಬ್ ಜೀ ಅವರು ದೈವೀ ಶಕ್ತಿಯುಳ್ಳವರಾಗಿದ್ದ ಗುರುಗಳಾಗಿದ್ದರು. ಹದಿನೈದು ರಾಗಗಳಲ್ಲಿ ಗುರುವಾಣಿಗಳ ರಚನೆ ಮಾಡಿದ್ದರು. ಐವತ್ತೇಳು ಶ್ಲೋಕಗಳ ಉಚ್ಚಾರಣೆಯನ್ನೂ ಮಾಡಿದ್ದರು. ಶ್ರೀ ಗುರು ಗೋವಿಂದ ಸಿಂಗ್ ಜೀ ಅವರು, ಈ ಎಲ್ಲಾ ಗುರುವಾಣಿಗಳನ್ನು ಮತ್ತು ಶ್ಲೋಕಗಳನ್ನು 'ಶ್ರೀ ಗುರು ಗ್ರಂಥ ಸಾಹೇಬ'ದಲ್ಲಿ ಸೇರ್ಪಡೆಗೊಳಿಸಿ, ಶ್ರೀ ಗುರು ಗ್ರಂಥ ಸಾಹೇಬವನ್ನು ಜೀವಂತ ಗುರು ಎಂದು ಘೋಷಿಸಿದ್ದರು. ಇಡೀ ಜಗತ್ತು ಶ್ರೀ ಗುರು ತೇಜ್ ಬಹಾದ್ದೂರ್ ಸಾಹೇಬ್ ಜೀ ಅವರನ್ನು ಮಾನವೀಯ ಅಧಿಕಾರಗಳ ಪ್ರತಿಪಾದಕರು ಎಂದರೆ ಹಿಂದೂಸ್ತಾನದ ಜನರು 'ಹಿಂದ್ ದಿ ಚಾದರ್' (ಭಾರತದ ರಕ್ಷಣಾ ಕವಚ) ಎಂದು ಗೌರವಿಸುತ್ತಾರೆ.

ಶ್ರೀ ಗುರು ತೇಜ್ ಬಹಾದ್ದೂರ್ ಸಾಹೇಬ್ ಜೀ ಅವರ ಜೀವನ ಸಂದೇಶ, ಅವರ ಗುರುವಾಣಿ ಮತ್ತು ಶ್ಲೋಕಗಳ ಸಂದೇಶ ಮನೆಬಮನೆಗೆ ತಲುಪಿಸುವುದೇ ಶ್ರೀ ಗುರು ತೇಗ್ ಬಹಾದ್ದೂರ್ ಸಾಹೇಬ್ ಜೀ ಅವರಿಗೆ ಸಲ್ಲಿಸುವ ನಿಜವಾದ ಶ್ರದ್ಧಾಂಜಲಿ. 

ಹಿಂದೂ ಧರ್ಮವನ್ನು ರಕ್ಷಿಸುವುದಕ್ಕೋಸ್ಕರ ತಮ್ಮ ಜೀವನ ಮುಡಿಪಾಗಿಟ್ಟ ಶ್ರೀ ಗುರು ತೇಜ್ ಬಹಾದ್ದೂರ್ ಸಾಹೇಬ್ ಜೀ ಅವರನ್ನು ಶಿರಚ್ಛೇದ ಮಾಡುವ ಮೊದಲು ಜೈಲಿನಲ್ಲಿ ಹಾಕಿ ಚಿತ್ರಹಿಂಸೆ ನೀಡಲಾಗಿತ್ತು. ಆದರೂ ಕೊನೆಯವರೆಗೂ ಅವರು ಕೇವಲ ಕೈಲಾಸನಾಥನನ್ನು ಕೊಂಡಾಡಿದ್ದರು. ಉತ್ತರ ಭಾರತದಲ್ಲಿ ಪ್ರತಿಯೊಬ್ಬ ಹಿಂದೂ ಶ್ರೀ ಗುರು ತೇಜ್ ಬಹಾದ್ದೂರ್ ಸಾಹೇಬ್ ಜೀ ಅವರ ಋಣ ತೀರಿಸಲು ಪ್ರಯತ್ನಿಸುತ್ತಾರೆ. 
(ಸಂಗ್ರಹ)

Guru Tegh Bahadur Singh was the ninth Guru of Sikhism. He sacrificed his life to protect religious freedom and human rights during the reign of Mughal emperor Aurangzeb. Today (Nov 25) marks the 350th Martyrdom Day of Guru Tegh Bahadur.