ಬ್ರೇಕಿಂಗ್ ನ್ಯೂಸ್
06-12-25 12:33 pm HK News Desk ಕರ್ನಾಟಕ
ದಾವಣಗೆರೆ, ಡಿ 06 : ತಾಲೂಕಿನ ಹೊನ್ನೂರು ಗೊಲ್ಲರಹಟ್ಟಿಯಲ್ಲಿ ಎರಡು ನಾಯಿಗಳು ಅನಿತಾ ಎಂಬ ಗೃಹಿಣಿಯ ಮೇಲೆ ದಾಳಿ ನಡೆಸಿ ಬಲಿ ಪಡೆದಿವೆ. ಇದರಿಂದಾಗಿ ಇಡೀ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಕೊನೆಗೂ ಗ್ರಾಮಸ್ಥರು ಹರಸಾಹಸ ಪಟ್ಟು ಎರಡು ಶ್ವಾನಗಳನ್ನು ಸೆರೆ ಹಿಡಿದಿದ್ದಾರೆ. ನಾಯಿಗಳ ದಾಳಿಯಿಂದ ತಾಯಿ ಕಳೆದುಕೊಂಡ ಮಕ್ಕಳು ತಬ್ಬಲಿಗಳಾಗಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 48ರ ಪಕ್ಕ ಕೂಗಳತೆ ದೂರದಲ್ಲಿರುವ ಹೊನ್ನೂರು ಗ್ರಾಮಕ್ಕೆ ತಡರಾತ್ರಿ ನಡೆದುಕೊಂಡು ಹೋಗುತ್ತಿದ್ದ ಅನಿತಾ ಮೇಲೆ 2 ಸಾಕಿದ ಶ್ವಾನಗಳು ದಾಳಿ ನಡೆಸಿ, ಮೊಣಕೈ, ಕಾಲು, ತಲೆ, ಎದೆ ಭಾಗವನ್ನು ಕಚ್ಚಿ ಗಾಯಗೊಳಿಸಿದ್ದವು. ಅಷ್ಟೇ ಅಲ್ಲದೆ ತಲೆಯನ್ನ ಕಚ್ಚಿ ವಿಕಾರಗೊಳಿಸಿದ್ದು, ಗ್ರಾಮಸ್ಥರನ್ನು ಕೆರಳಿಸಿತ್ತು.
ದಾವಣಗೆರೆ ಮೂಲದ ವ್ಯಕ್ತಿಯೊಬ್ಬರು ನಾಯಿಗಳನ್ನು ಸಾಕಲಾಗದೇ ಗುರುವಾರ ರಾತ್ರಿ 10 ಗಂಟೆ ಸುಮಾರಿಗೆ ಅವುಗಳನ್ನು ಆಟೋದಲ್ಲಿ ಕರೆತಂದು ಹೊನ್ನೂರು ಗೊಲ್ಲರಹಟ್ಟಿ ಕ್ರಾಸ್ ಬಳಿ ಬಿಟ್ಟು ಹೋಗಿದ್ದಾನೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.
ಮೃತ ಮಹಿಳೆ ಅನಿತಾಗೆ ಮೂವರು ಮಕ್ಕಳಿದ್ದು, ಪತಿ 5 ವರ್ಷಗಳ ಹಿಂದೆ ಸಾವನ್ನಪ್ಪಿದ್ದರು. ಮಲ್ಲಶೆಟ್ಟಿಹಳ್ಳಿಯಿಂದ ಹೊನ್ನೂರು ಗೊಲ್ಲರಹಟ್ಟಿಗೆ ಬರುವ ಸಂದರ್ಭದಲ್ಲಿ ಮಧ್ಯರಾತ್ರಿ, ಈ ಸಾಕಿದ ಶ್ವಾನಗಳು ದಾಳಿ ನಡೆಸಿವೆ. ಘಟನೆ ನಡೆದ ಸ್ಥಳದ ಸಮೀಪವೇ ಇದ್ದ ನಿವಾಸಿಗಳು ತಡರಾತ್ರಿ ಶ್ವಾನಗಳ ಸದ್ದು ಕೇಳಿ ಹೊರ ಬಂದು ನೋಡಿದಾಗ ಈ ಘಟನೆ ಬೆಳಕಿಗೆ ಬಂದಿದೆ.
ತಕ್ಷಣವೇ ಶ್ವಾನಗಳನ್ನು ಓಡಿಸಿ ಮಹಿಳೆಯನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ. ಪೊಲೀಸರಿಗೂ ಮಾಹಿತಿ ನೀಡಿ, ಆಂಬ್ಯುಲೆನ್ಸ್ನಲ್ಲಿ ಗಾಯಾಳು ಮಹಿಳೆಯನ್ನು ಆಸ್ಪತ್ರೆ ದಾಖಲಿಸಲು ಪ್ರಯತ್ನಿಸಿದ್ದಾರೆ. ಆದರೆ, ಶ್ವಾನಗಳ ಭೀಕರ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಅನಿತಾ ಸಾವನ್ನಪ್ಪಿದ್ದಾರೆ.
ಮಹಿಳೆ ಪ್ರಾಣತೆಗೆದ ಶ್ವಾನಗಳ ಮಾಲೀಕರಿಗಾಗಿ ಹುಡುಕಾಟ:
ಘಟನೆ ಬಳಿಕ ಎಚ್ಚೆತ್ತ ಅಧಿಕಾರಿಗಳು ಶ್ವಾನಗಳನ್ನ ಸೆರೆ ಹಿಡಿಸಿ ಕ್ರಮ ಕೈಗೊಂಡಿದ್ದಾರೆ. ಆದರೆ, ಸೆರೆ ಹಿಡಿದ ಸಾಕಿದ ಶ್ವಾನಗಳು ಯಾರಿಗೆ ಸೇರಿದ್ದು, ಯಾರು ಆ ಶ್ವಾನಗಳನ್ನು ಇಲ್ಲಿಗೆ ತಂದು ಬಿಟ್ಟು ಹೋಗಿದ್ದಾರೆ ಅನ್ನೋದು ಇನ್ನೂ ಗೊತ್ತಾಗಿಲ್ಲ. ಅಮಾಯಕ ಮಹಿಳೆಯ ಪ್ರಾಣ ಹೋಗಲು ಕಾರಣರಾದ ಶ್ವಾನಗಳ ಮಾಲೀಕರ ಹುಡುಕಾಟ ನಡೆದಿದೆ.
ಈ ಕುರಿತು ಪಿಡಿಒ ನಾಗರಾಜ್ ಪ್ರತಿಕ್ರಿಯಿಸಿ, 'ಮಹಿಳೆಯೊಬ್ಬರ ಮೇಲೆ ದಾಳಿ ಮಾಡಿದ ನಾಯಿಗಳನ್ನು ನಾವು ಸೆರೆ ಹಿಡಿಯುವ ಮುನ್ನ ಗ್ರಾಮಸ್ಥರೇ ಸುರಕ್ಷಿತವಾಗಿ ಸೆರೆ ಹಿಡಿದಿದ್ದಾರೆ. ಆ ಶ್ವಾನಗಳನ್ನು ಸಂಬಂಧ ಪಟ್ಟ ಅಧಿಕಾರಿಗಳಿಗೆ ಹಸ್ತಾಂತರ ಮಾಡುವ ಕೆಲಸ ಮಾಡಲಿದ್ದೇವೆ. ಮಹಿಳೆ ಮೇಲೆ ನಾಯಿಗಳು ದಾಳಿ ಮಾಡಿದ ಪರಿಣಾಮ ಅವರು ಸಾವನ್ನಪ್ಪಿದ್ದಾರೆ. ಯಾರೋ ಶಂಕಿತರು ನಾಯಿಗಳನ್ನು ಇಲ್ಲಿ ಬಿಟ್ಟು ಹೋಗಿದ್ದರಿಂದ ಈ ಘಟನೆ ನಡೆದಿದೆ" ಎಂದಿದ್ದಾರೆ.
A horrific incident unfolded in Honnooru Gollarahatti of Davangere district, where a woman was mauled to death by two Rottweiler-type dogs late Thursday night. The victim, identified as Anitha, a mother of three, was attacked while walking back to her village.
17-09-26 04:13 pm
HK News Staffer
ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ನಟ ಅನಂತನಾಗ್ ಗೆ '...
16-09-26 10:40 pm
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
17-09-26 06:29 pm
HK News Staffer
ಸಚಿವ ಸಂಪುಟ ಸಭೆಗೆ ಕ್ಷಣಗಣನೆ ; ಪಡೀಲ್ ಜಿಲ್ಲಾಧಿಕಾರ...
17-09-26 05:12 pm
ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಮಸೀದಿ, ಮದರಸಾ ಮೇಲೆ...
17-09-26 09:41 am
Mangalore Jail, Fight, Crime: ಜೈಲಿನಲ್ಲಿ ಬೀಡಿ...
16-09-26 10:46 pm
ಪುತ್ತೂರಿಗೆ ಮೆಡಿಕಲ್ ಕಾಲೇಜು ಅನುಮೋದನೆ, ತುಳು ಭಾಷೆ...
16-09-26 09:56 pm
17-09-26 02:22 pm
HK News Staffer
Bangalore Murder, Crime: ಪ್ರೀತಿಸಿ ಮದುವೆಯಾಗಿದ್...
17-09-26 01:56 pm
Bangalore kidnap, Crime: ಬೆಂಗಳೂರಿನಲ್ಲಿ ಶಾಕ್...
17-09-26 12:35 pm
Manglore Cyber crime, Stock Market: ಷೇರು ಮಾರ್...
17-09-26 11:45 am
ಬೆಳ್ತಂಗಡಿ; ಗೃಹಪ್ರವೇಶಕ್ಕೆ ಹೋದಾಗ ಮನೆಗೆ ಕನ್ನ, ₹1...
16-09-26 11:18 am