ಮತ ಎಣಿಕಾ ಕೇಂದ್ರದಲ್ಲಿ ಕುಸಿದು ಬಿದ್ದು ಚುನಾವಣಾಧಿಕಾರಿ ಸಾವು

30-12-20 12:15 pm       Headline Karnataka News Network   ಕರ್ನಾಟಕ

ಮೈಸೂರಿನ ಮತ ಎಣಿಕಾ ಕೇಂದ್ರ ಒಂದರಲ್ಲಿ ಚುನಾವಣಾಧಿಕಾರಿಯೇ ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ.

ಮೈಸೂರು, ಡಿ.30: ಮೈಸೂರಿನ ಮತ ಎಣಿಕಾ ಕೇಂದ್ರ ಒಂದರಲ್ಲಿ ಕರ್ತವ್ಯ ನಿರತ ಚುನಾವಣಾಧಿಕಾರಿಯೇ ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ.

ಪಿರಿಯಾಪಟ್ಟಣ ತಾಲೂಕಿನ ಪುಷ್ಪಾ ಕಾನ್ವೆಂಟಿನಲ್ಲಿ ಮತಎಣಿಕೆ ಕೇಂದ್ರದಲ್ಲಿ ಕರ್ತವ್ಯ ನಿಯೋಜಿತರಾಗಿದ್ದ ಚುನಾವಣಾಧಿಕಾರಿ ಬೋರೇಗೌಡ(52) ಕರ್ತವ್ಯ ನಿರ್ವಹಿಸುತ್ತಲೇ ಎದೆ ನೋವಿನಿಂದ ಕುಸಿದು ಬಿದ್ದಿದ್ದಾರೆ. ಎನ್.ಶೆಟ್ಟಹಳ್ಳಿ ಗ್ರಾಮ ಪಂಚಾಯಿತಿ ಚುನಾವಣಾಧಿಕಾರಿಯಾಗಿದ್ದ ಬೋರೇಗೌಡರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಅಷ್ಟರಲ್ಲೇ ಹೃದಯಾಘಾತದಿಂದ ಸಾವು ಕಂಡಿದ್ದಾರೆಂದು ವೈದ್ಯರು ತಿಳಿಸಿದ್ದಾರೆ.

ಲೋಕೋಪಯೋಗಿ ಇಲಾಖೆಯಲ್ಲಿ ಎಇಇ ಆಗಿದ್ದ ಬೋರೇಗೌಡ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಬೆಳಗ್ಗೆ ಎಂದಿನಂತೆ ಕರ್ತವ್ಯಕ್ಕೆ ಹಾಜರಾಗಿದ್ದ ಬೋರೇಗೌಡರಿಗೆ 8 ಗಂಟೆ ಸುಮಾರಿಗೆ ಎದೆನೋವು ಕಾಣಿಸಿಕೊಂಡಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಿದರೂ ಕೊನೆಯುಸಿರೆಳೆದಿದ್ದಾರೆ. 

While the counting for the Panchayath election was underway in Mysore, an Election officer posted on duty died of Heart Attack on Wednesday 30 December.