ಇಲೆಕ್ಟ್ರಾನಿಕ್ ಸಿಟಿ ಪಕ್ಕದಲ್ಲೇ ಬಾಂಗ್ಲಾ ವಲಸಿಗರ ಅಕ್ರಮ ನೆಲೆ ; ಸ್ಥಳಕ್ಕೆ ಬಿಜೆಪಿ ಕಾರ್ಯಕರ್ತರ ದಾಳಿ, ಹತ್ತು ಕುಟುಂಬಗಳನ್ನು ವಶಕ್ಕೆ ಪಡೆದ ಪೊಲೀಸರು, ಗಡೀಪಾರು ಮಾಡಲು ಆಗ್ರಹ  

13-01-26 03:04 pm       Bangalore Correspondent   ಕರ್ನಾಟಕ

ಅಕ್ರಮ ಬಾಂಗ್ಲಾ ವಲಸಿಗರು ನೆಲೆಸಿದ್ದಾರೆಂದು ಹೇಳಿ ಇಲೆಕ್ಟ್ರಾನಿಕ್ ಸಿಟಿ ಪಕ್ಕದಲ್ಲಿ ಗುಡಿಸಲು ಕಟ್ಟಿ ನೆಲೆಸಿದ್ದ ಹತ್ತಕ್ಕೂ ಹೆಚ್ಚು ಕುಟುಂಬಗಳಿದ್ದ ಜಾಗಕ್ಕೆ ಬಿಜೆಪಿ ಕಾರ್ಯಕರ್ತರು ದಾಳಿ ನಡೆಸಿದ್ದು ಅಧಿಕಾರಿಗಳನ್ನು ಕರೆಸಿ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ. ‌ಸ್ಥಳದಲ್ಲಿ ನೂರಕ್ಕೂ ಹೆಚ್ಚು ಮಂದಿಯಿದ್ದು ಪಶ್ಚಿಮ ಬಂಗಾಳದವರು ಎಂದು ಹೇಳುತ್ತಿದ್ದಾರೆ.

ಬೆಂಗಳೂರು, ಜ.12 : ಅಕ್ರಮ ಬಾಂಗ್ಲಾ ವಲಸಿಗರು ನೆಲೆಸಿದ್ದಾರೆಂದು ಹೇಳಿ ಇಲೆಕ್ಟ್ರಾನಿಕ್ ಸಿಟಿ ಪಕ್ಕದಲ್ಲಿ ಗುಡಿಸಲು ಕಟ್ಟಿ ನೆಲೆಸಿದ್ದ ಹತ್ತಕ್ಕೂ ಹೆಚ್ಚು ಕುಟುಂಬಗಳಿದ್ದ ಜಾಗಕ್ಕೆ ಬಿಜೆಪಿ ಕಾರ್ಯಕರ್ತರು ದಾಳಿ ನಡೆಸಿದ್ದು ಅಧಿಕಾರಿಗಳನ್ನು ಕರೆಸಿ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ. ‌ಸ್ಥಳದಲ್ಲಿ ನೂರಕ್ಕೂ ಹೆಚ್ಚು ಮಂದಿಯಿದ್ದು ಪಶ್ಚಿಮ ಬಂಗಾಳದವರು ಎಂದು ಹೇಳುತ್ತಿದ್ದಾರೆ. ಆದರೆ ಇವರು ಬಾಂಗ್ಲಾದವರು, ಅಲ್ಲಿಯದೇ ಭಾಷೆ ಮಾತನಾಡುತ್ತಾರೆ ಎಂದು ಬಿಜೆಪಿಗರು ಆರೋಪಿಸಿದ್ದಾರೆ. ‌

ಪರಿಶೀಲನೆ ವೇಳೆ ಒಂದೇ ಕಡೇ 10ಕ್ಕೂ ಹೆಚ್ಚು ಕುಟುಂಬಗಳಿದ್ದು‌ ಕೆಲವರ ಬಳಿ ಆಧಾರ್ ಕಾರ್ಡ್ ಇರುವುದು ಪತ್ತೆಯಾಗಿದೆ. ಒಬ್ಬಾತ ‌ಅಕ್ರಮವಾಗಿ ಆಧಾರ್ ಮಾಡಿಸಿ ಬ್ಯಾಂಕ್ ಖಾತೆಯನ್ನೂ ತೆರೆದಿರುವುದು ಪತ್ತೆಯಾಗಿದೆ. ಬಜಾಜ್ ಪೈನಾನ್ಸ್ ನಿಂದ 45 ಲಕ್ಷ ಸಾಲ ಪಡೆದು ಆಟೋ ಖರೀದಿಸಿದ್ದಾನೆಂದು ಪತ್ತೆ ಮಾಡಿದ್ದಾರೆ. ‌ಬಿಜೆಪಿ ಮತ್ತು ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು ಮೂರು ದಿನಗಳಿಂದ ಕಾರ್ಯಾಚರಣೆ ನಡೆಸುತ್ತಿದ್ದಾರೆ. ದಾಳಿ ವೇಳೆ ತಾವು ಬಾಂಗ್ಲಾ ವಲಸಿಗರೆಂದು ಅಲ್ಲಿದ್ದವರು ಒಪ್ಪಿಕೊಂಡಿದ್ದು ಹಿಂದು ಸಂಘಟನೆಯವರನ್ನು ನೋಡಿ ಕೆಲವು ಯುವಕರು ಪರಾರಿಯಾಗಿದ್ದಾರೆ. ಬೆಂಗಳೂರು ಸುತ್ತಮುತ್ತ ಹಲವಾರು ಮಂದಿ ಬಾಂಗ್ಲಾದೇಶಿಗರು ಇರುವುದಾಗಿಯೂ ಅಲ್ಲಿದ್ದವರು ಹೇಳಿಕೊಂಡಿದ್ದಾರೆ. ಬಿಜೆಪಿ ಮಾಜಿ ಸಚಿವ ನಾರಾಯಣಸ್ವಾಮಿ ಭೇಟಿ ನೀಡಿದ್ದು ನಮ್ಮ ದೇಶದವರೇ ಆಗಿದ್ದರೆ ಅವರನ್ನು ಸ್ವಗ್ರಾಮಕ್ಕೆ ತಲುಪಿಸುವ ಕೆಲಸ ನಾವು ಮಾಡುತ್ತೇವೆ, ಬಾಂಗ್ಲಾದವರಾಗಿದ್ದರೆ ಅಧಿಕಾರಿಗಳು ಕೂಡಲೇ ಗಡಿಪಾರು ಮಾಡಬೇಕೆಂದು ಆಗ್ರಹಿಸಿದ್ದಾರೆ. ‌ಬಳಿಕ ಪೋಲಿಸರು ಅಲ್ಲಿದ್ದವರನ್ನು ವಶಕ್ಕೆ ಪಡೆದಿದ್ದಾರೆ.

BJP and Hindu Jagarana Vedike activists conducted a raid on a makeshift settlement near Electronic City, alleging that illegal Bangladeshi migrants were residing there. During the inspection, authorities verified documents and found over ten families living at the site, with some possessing Aadhaar cards allegedly obtained illegally.