ಧರ್ಮಸ್ಥಳ ಎಸ್ಐಟಿ ತನಿಖೆ ; ತನಿಖೆಯ ಮಾಹಿತಿ ಕೇಳಿ ಸರ್ಕಾರಕ್ಕೆ ಮಹಿಳಾ ಆಯೋಗದ ಪತ್ರ, ಹಳ್ಳ ಹಿಡಿದ ತನಿಖೆಗೆ ಜೀವ ನೀಡ್ತಾರಾ ನಾಗಲಕ್ಷ್ಮಿ ಚೌಧರಿ 

14-01-26 03:34 pm       Bangalore Correspondent   ಕರ್ನಾಟಕ

ಧರ್ಮಸ್ಥಳದಲ್ಲಿ ಅಸಹಜ ಸಾವು ಪ್ರಕರಣದಲ್ಲಿ ಎಸ್ಐಟಿ ತನಿಖೆಯ ಮಾಹಿತಿ ಕೋರಿ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ‌ ಚೌಧರಿ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್​ ಅವರಿಗೆ ಪತ್ರ ಬರೆದಿದ್ದಾರೆ.

ಬೆಂಗಳೂರು, ಜ.14 : ಧರ್ಮಸ್ಥಳದಲ್ಲಿ ಅಸಹಜ ಸಾವು ಪ್ರಕರಣದಲ್ಲಿ ಎಸ್ಐಟಿ ತನಿಖೆಯ ಮಾಹಿತಿ ಕೋರಿ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ‌ ಚೌಧರಿ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್​ ಅವರಿಗೆ ಪತ್ರ ಬರೆದಿದ್ದಾರೆ.

ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅಸಹಜ ಸಾವುಗಳ ತನಿಖೆಗೆ ಎಸ್ಐಟಿ ರಚನೆಯಾಗಿತ್ತು. ಪ್ರಕರಣದಲ್ಲಿ ಆರು ತಿಂಗಳ ಕಾಲ ತನಿಖೆ ನಡೆಸಿದ ಎಸ್ಐಟಿ ಬಳಿಕ ರಾಜ್ಯ ಸರ್ಕಾರದ ಗೃಹ ಇಲಾಖೆಗೆ ಮತ್ತು ಬೆಳ್ತಂಗಡಿ ಕೋರ್ಟಿಗೆ ವರದಿ ಸಲ್ಲಿಸಿತ್ತು. ಇದೀಗ ತನಿಖೆಯ ಮಾಹಿತಿ ನೀಡುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ‌ ಚೌಧರಿ ಪತ್ರ ಬರೆದಿದ್ದಾರೆ. 

ಪ್ರಕರಣದಲ್ಲಿ ಎಸ್ಐಟಿ ಇದುವರೆಗೆ ತನಿಖೆ ನಡೆಸಿರುವ ಮಾಹಿತಿ ಮತ್ತು ತನಿಖೆಯ ಪ್ರಗತಿ ಬಗ್ಗೆ ಅರಿಯಲು ಮಹಿಳಾ ಆಯೋಗದ ಅಧ್ಯಕ್ಷೆ ಮುಂದಾಗಿದ್ದಾರೆ.  ಧರ್ಮಸ್ಥಳದಲ್ಲಿ ಅಸಹಜ ಸಾವಿನ ಬಗ್ಗೆ ತ‌ನಿಖೆಯಾಗಬೇಕು ಎಂದು ಮೊದಲಿಗೆ ಬೆಳ್ತಂಗಡಿ ಕೋರ್ಟಿಗೆ ದೂರು ಸಲ್ಲಿಕೆಯಾದ ಸಂದರ್ಭದಲ್ಲಿ ಸಮಗ್ರ ತನಿಖೆ ಸಲುವಾಗಿ ಎಸ್​ಐಟಿ ರಚಿಸಬೇಕು ಎಂದು ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಸರ್ಕಾರಕ್ಕೆ ಪತ್ರ ಬರೆದು ಸಿಎಂ ಸಿದ್ದರಾಮಯ್ಯ ಅವರನ್ನು ಆಗ್ರಹಿಸಿದ್ದರು. ಇದರಂತೆ, ಸಿಎಂ ಸಿದ್ದರಾಮಯ್ಯ ಡಿಜಿಪಿ ಪ್ರಣಬ್ ಮೊಹಂತಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚನೆ ಮಾಡಿದ್ದರು. 

ಈ ನಡುವೆ, ಎಸ್ಐಟಿ ತನಿಖೆ ಆಗುತ್ತಿರುವಾಗಲೇ ಮಹಿಳಾ ಆಯೋಗದ ಅಧ್ಯಕ್ಷರು ಎಸ್​ಐಟಿ ಅಧಿಕಾರಿಗಳು ಸರಿಯಾಗಿ ತನಿಖೆ ನಡೆಸುತ್ತಿಲ್ಲ ಎಂದು ಆಕ್ಷೇಪಿಸಿದ್ದರು. ತನಿಖೆ ನಡೆಯಬೇಕಾಗಿರುವುದು ಕೇವಲ ಸಿಕ್ಕ ಬುರುಡೆ ಬಗ್ಗೆ ಅಲ್ಲ, ಅಲ್ಲಿ ನಡೆದಿದೆ ಎನ್ನಲಾಗ್ತಿರುವ ಅಸಹಜ ಸಾವುಗಳ ಬಗ್ಗೆ. ಅಧಿಕಾರಿಗಳು ಆ ನಿಟ್ಟಿನಲ್ಲಿ ತನಿಖೆ ನಡೆಸುತ್ತಿರುವಂತೆ ತೋರುತ್ತಿಲ್ಲ ಎಂದು ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಗೃಹ ಇಲಾಖೆಗೆ ಪತ್ರ ಬರೆದಿದ್ದರು. ಅಲ್ಲದೆ, ಎಸ್ಐಟಿಯೇ ತನಿಖೆ ದಾರಿ ತಪ್ಪುತ್ತಿದೆ ಎಂದು ಗಂಭೀರ ಆರೋಪಿಸಿದ್ದರು.

ಆದರೆ ಎಸ್ಐಟಿ ತನಿಖೆಯ ಮೇಲೆ ಸರ್ಕಾರದ ಒಳಗಡೆಯಿಂದಲೇ ಒತ್ತಡ ಬಿದ್ದುದರಿಂದ ತನಿಖೆ ಕುಂಠಿತವಾಗಿತ್ತು. ಬೆಳ್ತಂಗಡಿ ಕೋರ್ಟ್ ಮುಂದಿನ ತನಿಖೆಯ ಬಗ್ಗೆ ನಿರ್ದೇಶನ ನೀಡುವ ನಿರೀಕ್ಷೆಯಿತ್ತು. ಆದರೆ ಕೋರ್ಟ್, ಎಸ್ಐಟಿ ಪೂರ್ಣ ತನಿಖೆಯ ವರದಿ ನೀಡಿದ ಬಳಿಕವೇ ತೀರ್ಪು ಪ್ರಕಟಿಸುವುದಾಗಿ ಹೇಳಿರುವುದು ಒಟ್ಟು ತನಿಖೆ ಹಳ್ಳ ಹಿಡಿಯುವಂತಾಗಿದೆ. ಈವರೆಗಿನ ತನಿಖೆ ದೂರುದಾರ ಚಿನ್ನಯ್ಯನಿಗೆ ಮಾತ್ರ ಸೀಮಿತವಾಗಿತ್ತು ಎನ್ನುವ ಆರೋಪಗಳಿವೆ. ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾಗ್ತಿರುವ ಹಲವಾರು ಹೆಣ್ಣು ಮಕ್ಕಳ ಸಾವಿನ ಬಗ್ಗೆ ತನಿಖೆ ಆಗಬೇಕು ಎಂದು ಒತ್ತಾಯಗಳಿದ್ದರೂ, ಎಸ್ಐಟಿ ಆ ಕುರಿತು ತನಿಖೆಗೆ ಮುಂದಾಗಿಲ್ಲ.

Amid concerns over the alleged stagnation of the Special Investigation Team (SIT) probe into unnatural death cases in Dharmasthala, Karnataka State Women’s Commission Chairperson Nagalakshmi Chowdhary has written to Chief Secretary Shalini Rajneesh seeking details on the progress of the investigation.