ವಿಧಾನಸಭೆ ಅಧಿವೇಶನ ; ಭಾಷಣ ಅರ್ಧಕ್ಕೆ ಬಿಟ್ಟು ತೆರಳಿದ ರಾಜ್ಯಪಾಲರು, ಸದನದಲ್ಲಿ ಕಾಂಗ್ರೆಸ್ ಶಾಸಕರ ಹೈಡ್ರಾಮಾ, ಅಡ್ಡಗಟ್ಟಿ ನಿಂತ ಹರಿಪ್ರಸಾದ್ ಹರಿದ ಬಟ್ಟೆ, ಬಿಜೆಪಿಗರು ಹರಿದರೆಂದು ಆಕ್ರೋಶ 

22-01-26 10:27 pm       Bangalore Correspondent   ಕರ್ನಾಟಕ

ರಾಜ್ಯ ಸರ್ಕಾರದ ವಿಶೇಷ ಅಧಿವೇಶನ ಗುರುವಾರ ಆರಂಭಗೊಂಡಿದ್ದರೆ ರಾಜ್ಯಪಾಲರು ಭಾಷಣ ಅರ್ಧಕ್ಕೆ ಮೊಟಕುಗೊಳಿಸಿ ಹೊರನಡೆದಿದ್ದು ಬಿಜೆಪಿ ಮತ್ತು ಕಾಂಗ್ರೆಸ್ ಶಾಸಕರ ಮಧ್ಯೆ ತೀವ್ರ ವಾಗ್ವಾದಕ್ಕೆ ಕಾರಣವಾಯಿತು. ‌ಈ ವೇಳೆ, ಹಿರಿಯ ವಿಧಾನ ಪರಿಷತ್ ಸದಸ್ಯ ಬಿಕೆ ಹರಿಪ್ರಸಾದ್, ರಾಜ್ಯಪಾಲರನ್ನು ಅಡ್ಡಗಟ್ಟಿ ತಡೆಯೊಡ್ಡಲು ಯತ್ನಿಸಿದ್ದು ಮಾರ್ಷಲ್ ಗಳು ಮತ್ತು ಬಿಜೆಪಿಗರ ಹೊಯ್ದಾಟದಲ್ಲಿ ಹರಿಪ್ರಸಾದ್ ಬಟ್ಟೆ ಹರಿದು ಹೋದ ಪ್ರಸಂಗವೂ ನಡೆಯಿತು. ‌

ಬೆಂಗಳೂರು, ಜ.22 : ರಾಜ್ಯ ಸರ್ಕಾರದ ವಿಶೇಷ ಅಧಿವೇಶನ ಗುರುವಾರ ಆರಂಭಗೊಂಡಿದ್ದರೆ ರಾಜ್ಯಪಾಲರು ಭಾಷಣ ಅರ್ಧಕ್ಕೆ ಮೊಟಕುಗೊಳಿಸಿ ಹೊರನಡೆದಿದ್ದು ಬಿಜೆಪಿ ಮತ್ತು ಕಾಂಗ್ರೆಸ್ ಶಾಸಕರ ಮಧ್ಯೆ ತೀವ್ರ ವಾಗ್ವಾದಕ್ಕೆ ಕಾರಣವಾಯಿತು. ‌ಈ ವೇಳೆ, ಹಿರಿಯ ವಿಧಾನ ಪರಿಷತ್ ಸದಸ್ಯ ಬಿಕೆ ಹರಿಪ್ರಸಾದ್, ರಾಜ್ಯಪಾಲರನ್ನು ಅಡ್ಡಗಟ್ಟಿ ತಡೆಯೊಡ್ಡಲು ಯತ್ನಿಸಿದ್ದು ಮಾರ್ಷಲ್ ಗಳು ಮತ್ತು ಬಿಜೆಪಿಗರ ಹೊಯ್ದಾಟದಲ್ಲಿ ಹರಿಪ್ರಸಾದ್ ಬಟ್ಟೆ ಹರಿದು ಹೋದ ಪ್ರಸಂಗವೂ ನಡೆಯಿತು. ‌

ವಿಬಿ ರಾಮ್ ಜಿ ಯೋಜನೆಯ ಕುರಿತಾಗಿ ರಾಜ್ಯ ಕಾಂಗ್ರೆಸ್ ಸರ್ಕಾರ ಜನವರಿ 22ರಿಂದ 31ರ ವರೆಗೆ ವಿಧಾನ ಮಂಡಲ ವಿಶೇಷ ಅಧಿವೇಶನ ಕರೆದಿತ್ತು. ಅದರ ಪ್ರಕಾರ ಇಂದು ರಾಜ್ಯಪಾಲ ಥ್ಯಾವರ್ ಚಂದ್ ಗೆಹ್ಲೋಟ್ ಜಂಟಿ ಸದನವನ್ನು ಉದ್ದೇಶಿಸಿ ಭಾಷಣ ಮಾಡಿ ಕಲಾಪ ಆರಂಭವಾಗಬೇಕಿತ್ತು. ಆದರೆ ರಾಜ್ಯಪಾಲರು ಮುಖ್ಯಮಂತ್ರಿ, ಸ್ಪೀಕರ್ ಮತ್ತು ಇತರರಿಗೆ ಶುಭಾಶಯ ಹೇಳಿ ಕೇವಲ ಎರಡು ಸಾಲುಗಳನ್ನು ಮಾತನಾಡಿ ಭಾಷಣವನ್ನು ಮೊದಲ ಪ್ಯಾರಾ ಮತ್ತು ಕೊನೆಯ ಪ್ಯಾರಾ ಓದಿ ಹೊರನಡೆದರು. 

ರಾಜ್ಯಪಾಲರ ನಡೆಯನ್ನು ಖಂಡಿಸಿ ಕಾಂಗ್ರೆಸ್‌ ಶಾಸಕರು ಪ್ರತಿಭಟನೆ ನಡೆಸಿದ್ದಾರೆ. ಸದನದಿಂದ ರಾಜ್ಯಪಾಲರು ನಿರ್ಗಮಿಸುತ್ತಿದ್ದಂತೆ ಕಾಂಗ್ರೆಸ್ ಸದಸ್ಯರು ಆಕ್ಷೇಪಿಸಿ ಅಡ್ಡಿ ಪಡಿಸಿದ್ದಾರೆ. ಈ ವೇಳೆ ಬಿ.ಕೆ ಹರಿಪ್ರಸಾದ್ ಅವರು ರಾಜ್ಯಪಾಲರಿಗೆ ಅಡ್ಡಲಾಗಿ ನಿಂತು ಹಿಂದಿಯಲ್ಲಿ "ಮಹಾ ಮಹಿಮ್ ನಿಮ್ಮ ನಡೆ ಅಸಂವಿಧಾನಿಕ ಕೃತ್ಯ. ಗವರ್ನರ್ ಆಗಿ ನೀವು ಭಾಷಣ ಮಾಡಿಯೇ ಹೋಗಬೇಕು. ಭಾಷಣ ಮಾಡದೆ ಕರ್ನಾಟಕವನ್ನು ಅಪಮಾನ ಮಾಡಬೇಡಿರಿ" ಎಂದು ಆಕ್ರೋಶ ವ್ಯಕ್ತಪಡಿಸಿದರು. ಆದರೆ ಜೊತೆಗಿದ್ದ ಮಾರ್ಷಲ್‌ಗಳು ಹರಿಪ್ರಸಾದ್ ಅವರನ್ನು ತಡೆದಿದ್ದು ಜಟಾಪಟಿಯಲ್ಲಿ ಬಿಕೆ ಹರಿಪ್ರಸಾದ್ ಅವರ ಬಟ್ಟೆ ಹರಿದ ಪ್ರಸಂಗವೂ ನಡೆಯಿತು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಹರಿಪ್ರಸಾದ್ "ಹಿಂದಿನಿಂದ ಬಂದು ಬಿಜೆಪಿಗರು ಬಟ್ಟೆ ಹರಿದಿದ್ದಾರೆ" ಎಂದು ಆಕ್ರೋಶ ವ್ಯಕ್ತಪಡಿಸಿದರು. 

ರಾಜ್ಯಪಾಲರು ವಾಪಸ್ ಹೋಗಿದ್ದಕ್ಕೆ ಕಾಂಗ್ರೆಸ್ ಶಾಸಕರು ಧಿಕ್ಕಾರ ಕೂಗಿದರು. ಬಿಜೆಪಿ ಸದಸ್ಯರು, ಕಾಂಗ್ರೆಸ್ ಶಾಸಕರ ವರ್ತನೆಯನ್ನು ಖಂಡಿಸಿದರು. ಹೀಗಾಗಿ ಸದನದಲ್ಲಿ ಕೆಲಹೊತ್ತು ಹೈಡ್ರಾಮಾ ನಡೆದಿದ್ದು ಬಳಿಕ ಗರಂ ಆಗಿಯೇ ಸದನ ಕಲಾಪ ಆರಂಭಗೊಂಡಿತು.

Karnataka Governor Thaawarchand Gehlot left the Assembly after delivering only part of his address, triggering heated protests by Congress legislators. Senior MLC BK Hariprasad attempted to block the Governor’s exit, leading to a scuffle in which his clothes were torn. Congress accused BJP members and marshals, while BJP condemned the disruption, resulting in high drama before the session resumed.