ಬ್ರೇಕಿಂಗ್ ನ್ಯೂಸ್
25-03-26 09:32 pm HK News Staffer ಕರ್ನಾಟಕ
ಬೆಂಗಳೂರು, ಮಾರ್ಚ್ 25: ಕೇಂದ್ರ ಸರ್ಕಾರ ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆಗೆ ಮುಂದಾಗಿದ್ದು ಈಗ ಇರುವ 543 ಕ್ಷೇತ್ರಗಳನ್ನು 816ಕ್ಕೆ ಹೆಚ್ಚಿಸಲು ಯೋಜನೆ ಹಾಕಿದೆ. ನಿರೀಕ್ಷೆಯಂತೆ ಎಲ್ಲವೂ ನಡೆದರೆ ಮುಂದಿನ ಲೋಕಸಭಾ ಚುನಾವಣೆ ವೇಳೆಗೆ ಬರೋಬ್ಬರಿ 816 ಸ್ಥಾನಗಳಾಗಲಿದ್ದು ಬೃಹತ್ ಲೋಕಸಭೆಯಾಗಲಿದೆ. ಇದರಂತೆ, ಕರ್ನಾಟಕದಲ್ಲಿ ಹಾಲಿ 28 ಇರುವ ಲೋಕಸಭಾ ಕ್ಷೇತ್ರಗಳು 42ಕ್ಕೆ ಹೆಚ್ಚುವ ಸಾಧ್ಯತೆಗಳಿವೆ.
ಲೋಕಸಭಾ ಚುನಾವಣೆಗೆ ಮೂರು ವರ್ಷ ಬಾಕಿಯಿರುವಾಗಲೇ ಪುನರ್ ವಿಂಗಡಣೆಗೆ ಪ್ರಧಾನಿ ಮೋದಿ ಸರ್ಕಾರ ಐತಿಹಾಸಿಕ ನಿರ್ಧಾರಕ್ಕೆ ಕೈಹಾಕಿದೆ. ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ನೀಡುವ ಮಹಿಳಾ ಮೀಸಲಾತಿ ಕಾಯ್ದೆ ಈಗಾಗಲೇ ಸಂಸತ್ತಿನ ಉಭಯ ಸದನಗಳಲ್ಲಿ ಪಾಸ್ ಆಗಿದ್ದರೂ ಜಾರಿಗೆ ಬಂದಿಲ್ಲ. ಪ್ರಸ್ತುತ ಲೋಕಸಭಾ ಸ್ಥಾನಗಳ ಸಂಖ್ಯೆಯನ್ನು 816ಕ್ಕೆ ಏರಿಸಿದಲ್ಲಿ ಮಹಿಳಾ ಮೀಸಲು ಜಾರಿಗೆ ಅನುಕೂಲವಾಗಲಿದೆ.
ಮಸೂದೆ ಪ್ರಕಾರ ಜನಸಂಖ್ಯೆಯ ಅನುಪಾತ ಆಧರಿಸಿ, ಒಟ್ಟು ಸೀಟುಗಳಲ್ಲಿ ಮೂರನೇ ಒಂದರಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡ ಬೇಕಾಗಿದೆ. ಪ್ರಸ್ತುತ ನಡೆಯುತ್ತಿರುವ ಸಂಸತ್ತಿನ ಅಧಿವೇಶನದಲ್ಲೇ ಸರ್ಕಾರ ಈ ಕುರಿತ ಮಸೂದೆಯನ್ನು ಮಂಡಿಸುವ ಸಾಧ್ಯತೆಯಿದ್ದು ಮುಂದಿನ ಲೋಕಸಭೆಗೆ ಇದರ ಜಾರಿಯಾಗಲಿದೆ. ಇದರ ಬಗ್ಗೆ ವಿರೋಧ ಪಕ್ಷಗಳು ಮತ್ತು ಎನ್‌ಡಿಎ ಮೈತ್ರಿಪಕ್ಷಗಳೊಂದಿಗೆ ಒಮ್ಮತ ಮೂಡಿಸುವುದಕ್ಕೂ ಕೇಂದ್ರ ಸರ್ಕಾರ ಕಸರತ್ತು ನಡೆಸಿದೆ.
ಆದರೆ ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆ ಜನಸಂಖ್ಯೆ ಆಧರಿಸಿ ನಡೆಯುವುದರಿಂದ, ಯಾವ ರಾಜ್ಯದಲ್ಲಿ ಜನಸಂಖ್ಯೆ ಹೆಚ್ಚಿದೆಯೋ ಆ ರಾಜ್ಯಗಳಿಗೆ ಹೆಚ್ಚು ಲೋಕಸಭಾ ಕ್ಷೇತ್ರಗಳು ಹೋಗಲಿವೆ. ಇದರಿಂದ ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯ ಆಗಲಿದೆ ಎಂಬ ಕೂಗೆದ್ದಿದೆ. ಇದೇ ವಿಚಾರದಲ್ಲಿ ವಿಪಕ್ಷಗಳು ವಿರೋಧ ವ್ಯಕ್ತಪಡಿಸಿದ್ದು ಭಾರೀ ಚರ್ಚೆಗೂ ಕಾರಣವಾಗಿದೆ. ಯಾಕಂದ್ರೆ ದಕ್ಷಿಣ ರಾಜ್ಯಗಳಲ್ಲಿ ಜನಸಂಖ್ಯಾ ನೀತಿ, ಸಾಕ್ಷರತೆ ಜಾರಿಗೆ ಬಂದು ಅನುಪಾತ ಕಡಿಮೆಯಾಗಿದ್ದರೆ, ಉತ್ತರ ಪ್ರದೇಶ, ಬಿಹಾರದಂತ ರಾಜ್ಯಗಳಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೆಚ್ಚಳವಾಗಿದೆ. ಇದನ್ನೇ ನೀತಿಯಾಗಿಸಿದರೆ ಆ ರಾಜ್ಯಗಳಿಗೆ ಹೆಚ್ಚು ಸ್ಥಾನ ಲಭಿಸಲಿದೆ ಎಂಬ ವಾದ ಇದೆ.
ದಕ್ಷಿಣ ಭಾರತದ ರಾಜ್ಯಗಳ ಪೈಕಿ ತಮಿಳುನಾಡಿನಲ್ಲಿ 20 ಸೀಟು ಹೆಚ್ಚಳದೊಂದಿಗೆ 39 ರಿಂದ 59ಕ್ಕೆ ಏರಿದರೆ, ಕರ್ನಾಟಕದಲ್ಲಿ 14 ಸೀಟು ಹೆಚ್ಚಾಗಲಿದ್ದು, 28 ಲೋಕಸಭಾ ಸ್ಥಾನಗಳು 42 ಆಗಲಿವೆ. ಆಂಧ್ರಪ್ರದೇಶದಲ್ಲಿ 13 ಸೀಟು ಹೆಚ್ಚಾಗಿ 25 ರಿಂದ 38ಕ್ಕೆ ಏರಲಿದೆ. ಕೇರಳದಲ್ಲಿ 20 ರಿಂದ 30ಕ್ಕೆ ಲೋಕಸಭಾ ಸ್ಥಾನಗಳು ಹೆಚ್ಚಾಗಲಿದೆ. ತೆಲಂಗಾಣದಲ್ಲಿ 17 ರಿಂದ 26ಕ್ಕೆ 9 ಸೀಟು ಹೆಚ್ಚಳ ಆಗಲಿದೆ. ಆದರೆ ಉತ್ತರ ಪ್ರದೇಶದಲ್ಲಿ 80 ಇರುವುದು 40 ಸ್ಥಾನ ಹೆಚ್ಚಳಗೊಂಡು 120 ಆಗಲಿದೆ. ಮಹಾರಾಷ್ಟ್ರ 48 ಇರುವುದು 72ಕ್ಕೆ ಹೆಚ್ಚಲಿದೆ. ಪಶ್ಚಿಮ ಬಂಗಾಳ ಹಾಲಿ 42 ಇರುವುದು 63 ಆಗಲಿದೆ. ಬಿಹಾರ 40ರಿಂದ 60 ಆಗಲಿದೆ. ಗುಜರಾತ್ 26 ಇರೋದು 39, ರಾಜಸ್ಥಾನದಲ್ಲಿ 25 ಇರೋದು 38 ಆಗಲಿದೆ. ಮಧ್ಯಪ್ರದೇಶ 29ರಿಂದ 44ಕ್ಕೇರಲಿದೆ ಎಂಬ ಲೆಕ್ಕಾಚಾರ ಇದೆ.
ಪ್ರಸ್ತುತ ನಿಯಮಗಳ ಪ್ರಕಾರ, 2026ರ ನಂತರ ನಡೆಯುವ ಜನಗಣತಿಯ ಆಧಾರದಲ್ಲಿ ಡಿಲಿಮಿಟೇಶನ್ ನಡೆಯಬೇಕು. 2027ರ ವೇಳೆಗೆ ಜನಗಣತಿ ಪೂರ್ಣಗೊಂಡರೆ, ಆನಂತರ ಡಿಲಿಮಿಟೇಶನ್ ಆಯೋಗ ರಚನೆಯಾಗಬೇಕು. ಈ ಪ್ರಕ್ರಿಯೆ ಮುಗಿಯಲು ಮತ್ತೆ ಮೂರು ವರ್ಷ ಬೇಕಾಗಬಹುದು. ಹೀಗಾದರೆ, 2029ರ ಲೋಕಸಭಾ ಚುನಾವಣೆ ಒಳಗಡೆ ಪುನರ್ ವಿಂಗಡಣೆ ಸಾಧ್ಯವಾಗಲ್ಲ. ಇದಕ್ಕಾಗಿ, ಕೇಂದ್ರ ಸರ್ಕಾರ ಈಗ ಹೊಸ ತಿದ್ದುಪಡಿ ಮಸೂದೆ ತರಲು ಯೋಚಿಸುತ್ತಿದೆ. 2011 ರ ಜನಗಣತಿ ಆಧಾರದ ಮೇಲೆಯೇ ಡಿಲಿಮಿಟೇಶನ್ ಪ್ರಕ್ರಿಯೆಯನ್ನು ನಡೆಸುವಂತೆ ಮಸೂದೆಯಲ್ಲಿ ಪ್ರಸ್ತಾಪಿಸುವ ಸಾಧ್ಯತೆಯಿದೆ.
15-10-26 02:30 pm
HK News Staffer
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
15-10-26 10:34 pm
HK News Desk
Sting News, DK Shivakumar in Mangalore: 'ಸ್ಟಿ...
15-10-26 06:46 pm
ನವರಾತ್ರಿ ನೆಪದಲ್ಲಿ ಕುಡ್ಲದ ತುಂಬ ಫ್ಲೆಕ್ಸ್ಗಳದ್ದೇ...
15-10-26 03:30 pm
Sudheer Reddy, Agnes College, ABVP: ಭಾರತ ಮಾತೆ...
15-10-26 12:19 pm
Mangalore Agnes College Protest, ABVP: ಮಂಗಳೂರ...
14-10-26 10:45 pm
15-10-26 05:06 pm
HK News Staffer
Mangaluru Valencia St. Vincent Church Priest...
14-10-26 09:09 pm
Mangalore Valencia Church, Fr Cyprian Pinto:...
14-10-26 08:55 pm
ಒಡಿಶಾದಿಂದ ಕೇರಳಕ್ಕೆ ಡ್ರಗ್ಸ್ ಸಪ್ಲೈ ; ₹1.78 ಕೋಟಿ...
14-10-26 12:23 pm
ಕೌಟುಂಬಿಕ ಕಲಹ ; ಇಬ್ಬರು ಮಕ್ಕಳೊಂದಿಗೆ ತುಂಗಭದ್ರಾ ಕ...
14-10-26 12:21 pm