ಬ್ರೇಕಿಂಗ್ ನ್ಯೂಸ್
06-08-26 03:49 pm HK News Staffer ಕರ್ನಾಟಕ
ಸೋನಿಪತ್ , ಆ. 6: ತಮ್ಮ ಮೂವರು ಪುತ್ರಿಯರಿಗೆ ಉತ್ತಮ ಶಿಕ್ಷಣ ನೀಡಿ, ಜೀವನದಲ್ಲಿ ನೆಲೆಗೊಳಿಸಲು ಬದುಕನ್ನೇ ಮುಡಿಪಾಗಿಟ್ಟಿದ್ದ ತಂದೆಯೊಬ್ಬರು ಕೊನೆಯ ಕ್ಷಣದಲ್ಲಿ ಅನಾಥರಂತೆ ವೃದ್ಧಾಶ್ರಮದಲ್ಲೇ ನಿಧನರಾಗಿದ್ದು, ಅವರ ಅಂತ್ಯಕ್ರಿಯೆಯನ್ನೂ ಪುತ್ರಿಯರು ವಿಡಿಯೊ ಕರೆ ಮೂಲಕವೇ ವೀಕ್ಷಿಸಿದ ಹೃದಯವಿದ್ರಾವಕ ಘಟನೆ ಹರಿಯಾಣದ ಸೋನಿಪತ್‌ನಲ್ಲಿ ನಡೆದಿದೆ.
ಮುಂಬೈ ಮೂಲದ ಮಾಜಿ ಜವಳಿ ವ್ಯಾಪಾರಿ ಶಿವಚರಣ್ ರಾಮ್ ರತನ್ ಗುಪ್ತಾ ಕಳೆದ ಒಂದೂವರೆ ವರ್ಷಗಳಿಂದ ಸೋನಿಪತ್‌ನ ಪಶ್ಚಿಮ ರಾಮ್ ನಗರದಲ್ಲಿರುವ ಸಮಾಜ ಕಲ್ಯಾಣ ಶಿಕ್ಷಣ ಸಮಿತಿ ನಡೆಸುವ ವೃದ್ಧಾಶ್ರಮದಲ್ಲಿ ವಾಸಿಸುತ್ತಿದ್ದರು. ಪತ್ನಿ ಮೀನಾ ಅವರ ನಿಧನದ ಬಳಿಕ ಅವರು ಒಂಟಿಯಾಗಿದ್ದರು.
ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಗುಪ್ತಾ ಮಂಗಳವಾರ ಮುಂಜಾನೆ ಸುಮಾರು 3.30 ಗಂಟೆಗೆ ಕೊನೆಯುಸಿರೆಳೆದರು. ಬಳಿಕ ವೃದ್ಧಾಶ್ರಮದ ಆಡಳಿತ ಮಂಡಳಿ ಅವರ ಮೂವರು ಪುತ್ರಿಯರಿಗೆ ಮಾಹಿತಿ ನೀಡಿತು.ವಿಡಿಯೊ ಕಾಲ್‌ನಲ್ಲೇ ತಂದೆಯ ಅಂತಿಮ ದರ್ಶನ
ತಂದೆಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಪುತ್ರಿಯರಿಗೆ ಸೋನಿಪತ್‌ಗೆ ಬರಲು ಸಾಧ್ಯವಾಗಲಿಲ್ಲ. ಹೀಗಾಗಿ ವೃದ್ಧಾಶ್ರಮದ ಸಿಬ್ಬಂದಿ ಹಾಗೂ ಸ್ಥಳೀಯರ ಸಹಕಾರದಿಂದ ಅಂತ್ಯಕ್ರಿಯೆ ನೆರವೇರಿಸಲಾಯಿತು. ಈ ವೇಳೆ ನೇಪಾಳ, ಉತ್ತರ ಪ್ರದೇಶ ಮತ್ತು ಮುಂಬೈನಲ್ಲಿದ್ದ ಮೂವರು ಪುತ್ರಿಯರು ವಿಡಿಯೊ ಕರೆ ಮೂಲಕವೇ ತಂದೆಯ ಅಂತಿಮ ವಿಧಿವಿಧಾನಗಳನ್ನು ವೀಕ್ಷಿಸಿದರು.
20 ದಿನಗಳ ಹಿಂದೆಯೇ ಆರೋಗ್ಯ ಹದಗೆಟ್ಟಿತ್ತು ;
ವೃದ್ಧಾಶ್ರಮದ ಆಡಳಿತಾಧಿಕಾರಿ ಆನಂದ್ ಕುಮಾರ್ ಅವರ ಪ್ರಕಾರ, ಗುಪ್ತಾ ಅವರು ವೃದ್ಧಾಶ್ರಮದ ಮೊಬೈಲ್ ಮೂಲಕ ಆಗಾಗ ಪುತ್ರಿಯರೊಂದಿಗೆ ಮಾತನಾಡುತ್ತಿದ್ದರು. ಆದರೆ ಆರೋಗ್ಯ ಹದಗೆಟ್ಟ ನಂತರ ಕರೆಗಳು ಕಡಿಮೆಯಾಗಿದ್ದವು. "ಸುಮಾರು 20 ದಿನಗಳ ಹಿಂದೆಯೇ ಅವರ ಆರೋಗ್ಯ ಗಂಭೀರವಾಗಿದೆ ಎಂದು ಪುತ್ರಿಯರಿಗೆ ತಿಳಿಸಿದ್ದೆವು. ಆದರೂ ಯಾರೂ ಅವರನ್ನು ನೋಡಲು ಬರಲಿಲ್ಲ. ನಿಧನದ ಬಳಿಕವೂ ಸೋನಿಪತ್‌ಗೆ ಬಂದರೆ ಎಲ್ಲಾ ವ್ಯವಸ್ಥೆ ಮಾಡುತ್ತೇವೆ ಎಂದು ತಿಳಿಸಿದ್ದರೂ, ಸಮಯವಿಲ್ಲ ಎಂದು ಹೇಳಿದರು" ಎಂದು ಆನಂದ್ ಕುಮಾರ್ ತಿಳಿಸಿದ್ದಾರೆ.

5,100 ರೂ. ಕಳುಹಿಸಿ ಅಂತ್ಯಕ್ರಿಯೆ ನಡೆಸುವಂತೆ ಮನವಿ ;
ನೇಪಾಳದಲ್ಲಿ ಶಿಕ್ಷಕಿಯಾಗಿರುವ ಹಿರಿಯ ಪುತ್ರಿ ಅನಿತಾ ಆನ್‌ಲೈನ್ ಮೂಲಕ ₹5,100 ಕಳುಹಿಸಿ ತಂದೆಯ ಅಂತ್ಯಕ್ರಿಯೆಯನ್ನು ವಿಧಿವತ್ತಾಗಿ ನೆರವೇರಿಸುವಂತೆ ವೃದ್ಧಾಶ್ರಮಕ್ಕೆ ಮನವಿ ಮಾಡಿದರು. ಅಂತ್ಯಕ್ರಿಯೆ ಮುಗಿದ ಬಳಿಕ ಅದರ ವಿಡಿಯೊ ಕಳುಹಿಸುವಂತೆಯೂ ಪುತ್ರಿಯರು ಕೇಳಿಕೊಂಡಿದ್ದಾರೆ. ವಿಡಿಯೊ ಕರೆ ವೇಳೆ ಒಬ್ಬ ಪುತ್ರಿ "ಇನ್ನೆಷ್ಟು ಸಮಯ ಆಗುತ್ತದೆ? ನಮಗೆ ಊಟ ಮಾಡಿ ಸ್ನಾನಕ್ಕೂ ಹೋಗಬೇಕಿದೆ" ಎಂದು ಹೇಳಿರುವುದು ಅಲ್ಲಿದ್ದವರ ಮನಸ್ಸಿಗೆ ನೋವುಂಟು ಮಾಡಿದೆ.
ಪುತ್ರಿಯರ ಭವಿಷ್ಯಕ್ಕಾಗಿ ಬದುಕು ಸಮರ್ಪಿಸಿದ್ದ ತಂದೆ
ಗುಪ್ತಾ ಅವರು ತಮ್ಮ ಮೂವರು ಪುತ್ರಿಯರಿಗೆ ಉತ್ತಮ ಶಿಕ್ಷಣ ನೀಡಲು ಜೀವನವನ್ನೇ ಮುಡಿಪಾಗಿಟ್ಟಿದ್ದರು ಎಂದು ವೃದ್ಧಾಶ್ರಮದ ಆಡಳಿತ ತಿಳಿಸಿದೆ. ಅವರಲ್ಲಿ ಇಬ್ಬರು ಶಿಕ್ಷಕಿಯರಾಗಿದ್ದಾರೆ. ಹಿರಿಯ ಪುತ್ರಿ ಅನಿತಾ – ನೇಪಾಳದಲ್ಲಿ ಶಿಕ್ಷಕಿ, ಎರಡನೇ ಪುತ್ರಿ ನಿಶಾ – ಉತ್ತರ ಪ್ರದೇಶದ ಆಜಂಘಢದಲ್ಲಿ ವಾಸ, ಕಿರಿಯ ಪುತ್ರಿ ಪ್ರಿಯಾ – ಮುಂಬೈ ನಿವಾಸಿ. ಮೂವರೂ ವಿವಾಹಿತರಾಗಿ ತಮ್ಮದೇ ಕುಟುಂಬದೊಂದಿಗೆ ವಾಸಿಸುತ್ತಿದ್ದಾರೆ.
ಅಸ್ಥಿ ವಿಸರ್ಜನೆಯ ಜವಾಬ್ದಾರಿಯೂ ವೃದ್ಧಾಶ್ರಮಕ್ಕೇ
ಮೊದಲಿಗೆ ಅಸ್ಥಿಗಳನ್ನು ಕಾಯ್ದಿರಿಸುವಂತೆ ಪುತ್ರಿಯರು ಕೇಳಿಕೊಂಡಿದ್ದರು. ಬಳಿಕ ತಮಗೆ ಬರಲು ಸಾಧ್ಯವಿಲ್ಲ ಎಂದು ತಿಳಿಸಿ, ಗಂಗಾ ನದಿಯಲ್ಲಿ ಅಸ್ಥಿ ವಿಸರ್ಜನೆ ಮಾಡುವ ಜವಾಬ್ದಾರಿಯನ್ನೂ ವೃದ್ಧಾಶ್ರಮದವರಿಗೆ ವಹಿಸಿದರು.
ಮರಣಾನಂತರವೂ ಬೆಳಕಾದ ಗುಪ್ತಾ;
ಕುಟುಂಬದ ಇಚ್ಛೆಯಂತೆ ಶಿವಚರಣ್ ಗುಪ್ತಾ ಅವರ ನೇತ್ರದಾನ ಮಾಡಲಾಗಿದ್ದು, ಅವರ ಕಣ್ಣುಗಳು ಈಗ ದೃಷ್ಟಿಹೀನರ ಬದುಕಿಗೆ ಬೆಳಕಾಗಲಿವೆ. ಕೊನೆಗೆ, ವೃದ್ಧಾಶ್ರಮದ ಸಿಬ್ಬಂದಿ ಮತ್ತು ಸ್ಥಳೀಯ ನಿವಾಸಿಗಳೇ ಅವರ ಅಂತ್ಯಕ್ರಿಯೆ ನೆರವೇರಿಸಿ ಮಾನವೀಯತೆ ಮೆರೆದರು.
ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ತಂದೆಯ ಕೊನೆಯ ಕ್ಷಣದಲ್ಲೂ ಪುತ್ರಿಯರು ಆಗಮಿಸದಿರುವುದು ಹಾಗೂ ವಿಡಿಯೊ ಕರೆ ಮೂಲಕವೇ ಅಂತ್ಯಸಂಸ್ಕಾರ ವೀಕ್ಷಿಸಿದ ವಿಚಾರಕ್ಕೆ ಅನೇಕ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ಮಕ್ಕಳಿಗಾಗಿ ಬದುಕಿದ ತಂದೆಗೆ ಇಂತಹ ಅಂತ್ಯವೇ?", "ಇದು ಮಾನವೀಯತೆಯ ಸೋಲು" ಎಂದು ಹಲವರು ಪ್ರಶ್ನಿಸಿದ್ದು, ಪುತ್ರಿಯರ ನಡೆಗೆ ತೀವ್ರ ಟೀಕೆ ವ್ಯಕ್ತವಾಗುತ್ತಿದೆ.
06-10-26 06:17 pm
HK News Staffer
AI education, D.K. Shivakumar: ಸರ್ಕಾರಿ ಶಾಲಾ ಮ...
06-10-26 09:32 am
ರಾಜ್ಯಕ್ಕೆ 7,142.64 ಕೋಟಿ ರೂ. ಬರ ಪರಿಹಾರ ನೀಡಿ ;...
03-10-26 05:30 pm
Urdu Habba Row: ವಿಧಾನಸೌಧ ಮೆಟ್ಟಿಲುಗಳಲ್ಲಿ ಉರ್ದು...
01-10-26 10:50 pm
‘ಕನ್ನಡದ ಶಿವಮಣಿ’ ಖ್ಯಾತಿಯ ಡ್ರಮ್ಮರ್ ದೇವ್ ನಿಧನ ;...
27-09-26 03:21 pm
06-10-26 02:46 pm
HK News Staffer
Russia, pneumonic plague: ರಷ್ಯಾದಲ್ಲಿ ಹೊಸ ರೀತಿ...
06-10-26 12:58 pm
ಫ್ಲೈದುಬೈ ಹೈಜಾಕ್ ಯತ್ನದ ಹಿಂದೆ ಇರಾನ್ ಕೈವಾಡ ಎಂದ ಟ...
06-10-26 10:11 am
Nigerian aircraft: ನೈಜೀರಿಯಾದಲ್ಲಿ ವಾಯುಪಡೆ ವಿಮಾ...
06-10-26 09:30 am
Emergency Funds: ಆರ್ಥಿಕ ಸ್ಥಿತಿ ಮತ್ತಷ್ಟು ಹದಗೆಡ...
05-10-26 08:56 pm
06-10-26 09:21 pm
HK News Staffer
Sudhir Kumar Murolli: ಎಸ್ಐಆರ್ ಹೆಸರಲ್ಲಿ ನಿರ್ದಿ...
06-10-26 09:15 pm
ಎಸ್ಐಆರ್ ಫಾರಂ 7 ದುರುಪಯೋಗ ; ಅಲ್ಪಸಂಖ್ಯಾತ ಮತದಾರರ...
05-10-26 10:53 pm
Mangalore News, Ekkaru Temple, Tirupati Templ...
05-10-26 12:35 pm
'ಮುಳಿಯ ಜುವೆಲ್ಲರಿ' ಮಾಲೀಕ ಪುತ್ತೂರಿನ ಮುಳಿಯ ಶ್ಯಾಮ...
05-10-26 11:41 am
06-10-26 05:36 pm
HK News Staffer
DIG Somashekar : ಕೈದಿ ಪತ್ನಿಯನ್ನೇ ಲೈಂಗಿಕ ಶೋಷಣೆ...
06-10-26 03:27 pm
ಹುಲಿವೇಷದ ತರಬೇತಿಗೆ ಬಂದು ಪಣಂಬೂರು ಬೀಚ್ ತೆರಳಿದ್ದ...
06-10-26 01:23 pm
DIG Somashekar: ಸುಪ್ರೀಂ ಕೋರ್ಟ್ ಆದೇಶ ಸೃಷ್ಟಿಸಿ...
05-10-26 08:26 pm
ಪುತ್ತೂರಿನಿಂದ ಕೇರಳಕ್ಕೆ ಹಿಂಸಾತ್ಮಕ ರೀತಿಯಲ್ಲಿ 11...
05-10-26 08:24 pm