ಬ್ರೇಕಿಂಗ್ ನ್ಯೂಸ್
09-01-21 05:53 pm Headline Karnataka News Network ಕರ್ನಾಟಕ
ಬೆಳಗಾವಿ, ಜ.9: ಜನವರಿ 1ರಂದು ಹೊಸ ವರ್ಷ ಆಚರಣೆ ನಮ್ಮದಲ್ಲ ಎಂದು ನಮ್ಮ ದೇಶದ ಎಲ್ಲರಿಗೂ ಗೊತ್ತಿದೆ. ದುರ್ದೈವ ಅಂದರೆ, ನಮ್ಮ ನಾಡಿನ ಅನೇಕ ದೇವಾಲಯಗಳಲ್ಲಿ ಹೊಸ ವರ್ಷದ ಆಚರಣೆ ಮಾಡಲಾಗಿದೆ. ಧರ್ಮಸ್ಥಳ, ಇಸ್ಕಾನ್ ರೀತಿಯ ಪ್ರಸಿದ್ಧ ದೇವಸ್ಥಾನಗಳಲ್ಲಿ ಹೊಸ ವರ್ಷದ ಆಚರಣೆ ಮಾಡಿದ್ದು ನೋವಿನ ಸಂಗತಿ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮುತಾಲಿಕ್, ಧರ್ಮಸ್ಥಳದಂತಹ ಕ್ಷೇತ್ರಗಳಲ್ಲಿ ಹೊಸ ವರ್ಷವನ್ನು ಹಾರೈಸಿ ಬೋರ್ಡ್ ಹಾಕುತ್ತಾರೆ. ವಿಶೇಷ ಪೂಜೆಗಳನ್ನು ನಡೆಸುತ್ತಾರೆ. ರವಿಶಂಕರ್ ಗುರೂಜಿಯವರು ಏನೋ ವೇಷ ಹಾಕಿಕೊಂಡು ಶುಭಾಶಯ ಹೇಳುತ್ತಾರೆ. ಇವರಿಗೇನಾದ್ರೂ ನಾಚಿಕೆ, ಮಾನ ಮರ್ಯಾದೆ ಇದೆಯಾ? ವಿದೇಶೀಯರ ಹೊಸ ವರ್ಷದ ಆಚರಣೆಗೆ ಪ್ರೇರಣೆ ನೀಡುವುದು, ಅದಕ್ಕೆ ಸಾಥ್ ಕೊಡುವುದು ಅಂದ್ರೆ ಮತಾಂತರಕ್ಕೆ ಸಾಥ್ ನೀಡಿದಂತೆ. ಪಾದ್ರಿಗಳು ಮಾಡುತ್ತಿರುವ ಪ್ರಚಾರಕ್ಕೆ ಬೆಂಬಲ ನೀಡಿದಂತೆ ಎಂದು ಹೇಳಿದರು.
ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರು ಈ ಬಗ್ಗೆ ಹಿಂದು ಸಮಾಜದ ಕ್ಷಮೆ ಕೇಳಬೇಕು. ಮುಂದಿನ ವರ್ಷ ಆಚರಣೆ ಮಾಡಲ್ಲ ಎಂದು ಬಹಿರಂಗವಾಗಿ ಹೇಳಿಕೆ ನೀಡಬೇಕು. ಇಲ್ಲವಾದಲ್ಲಿ ದೇವಾಲಯ, ಹಿಂದು ಮಠಗಳ ಮುಂದೆ ಧರಣಿ ನಡೆಸುತ್ತೇವೆ ಎಂದು ಮುತಾಲಿಕ್ ಹೇಳಿದರು. ನಿಮ್ಮ ಶಾಖೆಗಳು, ನಿಮ್ಮ ಭಕ್ತರು ಹೊರದೇಶಗಳಲ್ಲಿ ಇದ್ದಾರೆಂದು ನಮ್ಮ ದೇಶದಲ್ಲಿ ಅವರ ಆಚರಣೆ ಬೇಡ. ರವಿಶಂಕರ್ ಗುರೂಜಿಗೆ ಹೊರದೇಶದಲ್ಲಿ ಬಹಳಷ್ಟು ಶಾಖೆಗಳು ಇವೆ. ಅಲ್ಲಿ ಭಕ್ತರೂ ಇದ್ದಾರೆ. ಹಾಗಂತ, ಹಿಂದುಗಳ ಮೇಲೆ ವಿದೇಶ ಶೈಲಿಯನ್ನು ಹೇರುವುದು ಬೇಡ. ನಮ್ಮ ಸಂಪ್ರದಾಯಗಳನ್ನು ದೂರಕ್ಕೆ ತಳ್ಳುವುದು ಸರಿಯಲ್ಲ ಎಂದು ಮುತಾಲಿಕ್ ಹೇಳಿದರು.

ಎಸ್ ಡಿಪಿಐ, ಪಿಎಫ್ಐ ಬ್ಯಾನ್ ಯಾಕಿಲ್ಲ ?
ಕರ್ನಾಟಕದಲ್ಲಿ 26 ಮಂದಿ ಹಿಂದುಗಳ ಕೊಲೆಯಲ್ಲಿ ಇವರ ಪಾತ್ರ ಇದೆ. 9 ಕೊಲೆಗಳಲ್ಲಿ ಪಿಎಫ್ಐ ಮತ್ತು ಎಸ್ ಡಿಪಿಐನವರ ನೇರ ಕೈವಾಡ ಇರುವುದು ಸಾಬೀತಾಗಿದೆ. ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತನ ಕೊಲೆಯಲ್ಲಿ ಎಸ್ ಡಿಪಿಐ ಹೆಸರು ಇದೆ. ಸಿಎಎ, ಎನ್ ಆರ್ ಸಿ ವಿರುದ್ಧ ಪ್ರತಿಭಟನೆಗೆ ಆರ್ಥಿಕ ನೆರವು ನೀಡುವುದಕ್ಕಾಗಿ ಈ ಸಂಘಟನೆಗಳಿಗೆ 100 ಕೋಟಿ ಫಂಡಿಂಗ್ ಆಗಿರುವುದರ ಬಗ್ಗೆ ಕೇಂದ್ರ ಸರಕಾರದ ಬಳಿ ದಾಖಲೆ ಇದೆ. ಈಗ ಎಸ್ ಡಿಪಿಐ ವಿಜಯೋತ್ಸವದಲ್ಲಿ ಪಾಕಿಸ್ತಾನದ ಪರ ಜೈಕಾರ ಹಾಕುತ್ತಾರೆ. ಹೀಗಿದ್ದರೂ, ಈ ಸಂಘಟನೆಗಳನ್ನು ನಿಷೇಧ ಮಾಡದಿದ್ದರೆ ನೀವು ಯಾವಾಗ ಮಾಡುವುದು ಎಂದು ಸರಕಾರವನ್ನು ಪ್ರಶ್ನಿಸಿದ ಮುತಾಲಿಕ್, ಈ ಸಂಘಟನೆಗಳ ನಿಷೇಧಕ್ಕಾಗಿ ಆಂದೋಲನ ಮಾಡುತ್ತೇವೆ ಎಂದಿದ್ದಾರೆ.
ಇನ್ನು ಗೋಹತ್ಯೆ ನಿಷೇಧ ಕಾನೂನು ಮಾಡಿದ್ದಾರೆ. ಅದರಲ್ಲೂ ಲೋಪಗಳಿವೆ. 13 ವರ್ಷ ಆದಮೇಲೆ ಗೋವನ್ನು ಕಡಿಯಬಹುದು ಅಂದರೆ ಅದರ ಅರ್ಥ ಏನು ? ಬ್ಯಾನ್ ಅಂದ್ರೆ ಪೂರ್ತಿ ಬ್ಯಾನ್ ಆಗಬೇಕು. ಗೋಹತ್ಯೆಗೆ ಎಲ್ಲಿಯೂ ಆಸ್ಪದ ಇರಬಾರದು ಎಂದು ಮುತಾಲಿಕ್ ಹೇಳಿದರು.
Video:
Pramod Muthalik says new year celebration is not a Hindu culture Dharmasthal temple authority should give an apology
15-01-26 05:56 pm
HK News Desk
ಧರ್ಮಸ್ಥಳ ಎಸ್ಐಟಿ ತನಿಖೆ ; ತನಿಖೆಯ ಮಾಹಿತಿ ಕೇಳಿ ಸರ...
14-01-26 03:34 pm
ಆನೆ ದಂತದಿಂದ ಮಾಡಲ್ಪಟ್ಟ ರಾಧಾ ಕೃಷ್ಣರ ವಿಗ್ರಹ ಮಾರಾ...
14-01-26 02:54 pm
ಧರ್ಮಸ್ಥಳದಲ್ಲಿ 74 ಅಸಹಜ ಸಾವು ಪ್ರಕರಣ ; ಪ್ರತ್ಯೇಕ...
14-01-26 01:34 pm
ಅಕಾಲಿಕ ಮಳೆಗೆ ಕಂಗಾಲಾದ ಕಾಫಿನಾಡು ; ಭಾರೀ ಮಳೆಗೆ ಕೊ...
13-01-26 10:13 pm
16-01-26 02:26 pm
HK News Desk
ಕುಂಬಳೆ ; ಆರಿಕ್ಕಾಡಿ ಟೋಲ್ ಗೇಟ್, ಕ್ಯಾಮರಾ ಕಿತ್ತೆಸ...
15-01-26 12:14 pm
ಆಂತರಿಕ ದಂಗೆಯಲ್ಲಿ ಬೆಂದು ಹೋದ ಇರಾನ್ ; 12 ಸಾವಿರಕ್...
14-01-26 10:08 pm
ಜೀವಂತ ನಾಗರಹಾವನ್ನೇ ಜೇಬಿನಲ್ಲಿಟ್ಟು ಆಸ್ಪತ್ರೆಗೆ ಬಂ...
13-01-26 06:39 pm
ರಷ್ಯಾ ಬಳಿಕ ಇರಾನ್ ಮುಂದಿಟ್ಟು ಟ್ರಂಪ್ ಬೆದರಿಕೆ ; ಇ...
13-01-26 04:21 pm
16-01-26 12:31 pm
Mangalore Correspondent
ಲಕ್ಕಿ ಸ್ಕೀಮ್ ಕಂಪೆನಿಗಳಿಗೆ ಬೀಗ ಜಡಿಯಿರಿ ; ನೂರಕ್ಕ...
15-01-26 10:24 pm
ಗೋ ಸೇವೆಗೆ ಜನಸಾಮಾನ್ಯರು ಕೊಡುಗೆ ನೀಡಲು ವೇದಿಕೆ ; ಕ...
15-01-26 10:07 pm
ದಕ್ಷಿಣ ಕನ್ನಡದ ಸರ್ಕಾರಿ ಶಾಲೆಗಳಿಗೆ ಇಸ್ರೇಲ್ ಡಿಜಿ...
15-01-26 09:04 pm
ಮನರೇಗಾ ಜಾರಿಗೆ ಒತ್ತಾಯಿಸಿ ಸುಳ್ಯದಿಂದ ಮುಲ್ಕಿಗೆ ಪಾ...
15-01-26 08:12 pm
15-01-26 11:07 pm
Bangalore Correspondent
ಬಾಲಕನ ಅಸಹಜ ಸಾವು ಪ್ರಕರಣ ; ಬಾವಿಗೆ ಬಿದ್ದಾಗ ಜೀವಂತ...
15-01-26 03:01 pm
ಹೂಡಿಕೆ ಹೆಸರಿನಲ್ಲಿ ವಂಚಿಸುತ್ತಿದ್ದ ಖದೀಮರ ಜಾಲ ಬಯಲ...
14-01-26 09:49 pm
Karwar Suicide: ಪ್ರೀತಿ ಒಪ್ಪಿಕೊಳ್ಳುವಂತೆ ನಿರಂತರ...
14-01-26 05:22 pm
ಹೆಂಡತಿ ಮೇಲೆ ಕಣ್ಣು ; ಗುತ್ತಿಗೆದಾರನನ್ನು ಕೊಲೆ ಮಾಡ...
13-01-26 05:28 pm