ಬ್ರೇಕಿಂಗ್ ನ್ಯೂಸ್
23-11-26 09:23 pm HK News Staffer ಕರ್ನಾಟಕ
ನವದೆಹಲಿ, ನ.23: ಶುದ್ಧ ನೀರು ಎಂದು ಕುಡಿಯುವ ಬಿಸ್ಲರಿಯಲ್ಲಿ ಕ್ಯಾನ್ಸರ್ಕಾರಕ ರಾಸಾಯನಿಕ ಪತ್ತೆಯಾಗಿದೆ. ಹೀಗಾಗಿ 'ಬಿಸ್ಲೆರಿ ಇಂಟರ್ನ್ಯಾಷನಲ್' ಸಂಸ್ಥೆಯ ಕುಡಿಯುವ ನೀರಿನ ಮಾದರಿಯು ಕುಡಿಯಲು ಅಸುರಕ್ಷಿತ ಎಂದು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಹೇಳಿದ್ದಲ್ಲದೆ, ಕಂಪನಿಯ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದೆ.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006ರ (FSS Act, 2006) ಅಡಿಯಲ್ಲಿ, ಅಸುರಕ್ಷಿತ ಕುಡಿಯುವ ನೀರಿನ ಪೂರೈಕೆಗೆ ಸಂಬಂಧಿಸಿದ ಉಲ್ಲಂಘನೆಗಳಿಗಾಗಿ ಕಂಪನಿಯ ವಿರುದ್ಧ ಕ್ರಮಕ್ಕೆ ಮುಂದಾಗಿರುವುದಾಗಿ ಎಫ್ಎಸ್ಎಸ್ಎಐ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿದೆ.
ಬಿಸ್ಲೆರಿ ಇಂಟರ್ನ್ಯಾಶನಲ್ ಗೋವಾ ಘಟಕದಿಂದ 'ಪ್ಯಾಕೇಜ್ಡ್ ಕುಡಿಯುವ ನೀರು ಮಾದರಿಯನ್ನು ಪರೀಕ್ಷೆಗಾಗಿ ಸಂಗ್ರಹಿಸಲಾಗಿತ್ತು. 2025ರಲ್ಲಿ ಸಂಗ್ರಹಿಸಿದ ಮಾದರಿಯಲ್ಲಿ ಬ್ರೋಮೇಟ್ ಅಂಶ ಹೆಚ್ಚಿರುವುದು ಪತ್ತೆಯಾಗಿದ್ದರಿಂದ ಕುಡಿಯಲು ಅಸುರಕ್ಷಿತ ಎಂದು ಘೋಷಿಸಲಾಗಿತ್ತು. ಇದನ್ನು ಪ್ರಶ್ನಿಸಿ ಕಂಪನಿಯು ಮೇಲ್ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ, ಹೆಚ್ಚಿನ ಪರೀಕ್ಷೆಗಾಗಿ ಮಾದರಿಯನ್ನು ರೆಫರಲ್ ಆಹಾರ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಅಲ್ಲಿನ ಪರೀಕ್ಷೆಯಲ್ಲೂ ನೀರಿನಲ್ಲಿ ಪಾಲಿನ್ಯೂಕ್ಲಿಯರ್ ಆರೊಮ್ಯಾಟಿಕ್ ಹೈಡ್ರೋಕಾರ್ಬನ್ಗಳು ಇರುವುದು ಪತ್ತೆಯಾಗಿದ್ದು, ನೀರು ಅಸುರಕ್ಷಿತ ಎಂದು ವರದಿ ನೀಡಿದೆ.
ಅಂತಾರಾಷ್ಟ್ರೀಯ ಕ್ಯಾನ್ಸರ್ ಸಂಶೋಧನಾ ಸಂಸ್ಥೆ (ಐಎಆರ್ಸಿ) ಮತ್ತು ಯುಎಸ್ ಇಪಿಎ (ಯುಸ್ ಇಪಿಎ) ಸೇರಿದಂತೆ ಜಾಗತಿಕ ಆರೋಗ್ಯ ಮತ್ತು ಪರಿಸರ ಸಂಸ್ಥೆಗಳು ಬ್ರೋಮೇಟ್ ಹಾಗೂ ಪಿಎಹೆಚ್ (PAHs) ಎರಡನ್ನೂ ಕ್ಯಾನ್ಸರ್ ಕಾರಕ ಅಂಶಗಳೆಂದು ವರ್ಗೀಕರಿಸಿವೆ. ಪ್ರಯೋಗಾಲಯದ ವರದಿಗಳು ಕಾಯ್ದೆಯ ಉಲ್ಲಂಘನೆಯನ್ನು ದೃಢಪಡಿಸಿದ ಹಿನ್ನೆಲೆಯಲ್ಲಿ ಬಿಸ್ಲೆರಿ ವಿರುದ್ಧ ಕಾನೂನು ಕ್ರಮಕ್ಕೆ ಅನುಮತಿ ನೀಡಲಾಗಿದೆ ಎಂದು ಪ್ರಾಧಿಕಾರ ಸ್ಪಷ್ಟಪಡಿಸಿದೆ. ಬಿಸ್ಲೆರಿ ಮಾತ್ರವಲ್ಲದೆ, ಆಹಾರ ಸುರಕ್ಷತಾ ನಿಯಮಗಳ ಉಲ್ಲಂಘನೆಗಾಗಿ ಪ್ರಾಧಿಕಾರವು ಇತರ ಹಲವು ನೀರಿನ ಕಂಪನಿಗಳ ವಿರುದ್ಧವೂ ಕಾನೂನು ಕ್ರಮಕ್ಕೆ ಅನುಮತಿ ನೀಡಿದೆ. ವಸಂತ್ ಮಸಾಲಾ ಪ್ರೈವೇಟ್ ಲಿಮಿಟೆಡ್, ಟಿಟ್-ಬಿಟ್ ಫುಡ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಮಿಮಾಂಸ ಇಂಡಸ್ಟ್ರೀಸ್ ಮತ್ತು ಆಶಾ ಕನ್ಫೆಕ್ಷನರಿ ವಿರುದ್ಧ ಕ್ರಮಕ್ಕೆ ಅನುಮತಿ ನೀಡಲಾಗಿದೆ.
23-11-26 09:23 pm
HK News Staffer
ಸ್ಟಿಂಗ್ ಹೆಸರಿನಲ್ಲಿ ಬ್ಲ್ಯಾಕ್ ಮೇಲ್, ಜನಪ್ರತಿನಿಧಿ...
23-11-26 12:02 pm
ಬಸವಣ್ಣ ಬಗ್ಗೆ ಅವಹೇಳನ ಆರೋಪ ; 'ಬಸವ ಮಂಟಪ' ಕೃತಿ ಮು...
20-11-26 05:15 pm
2028ರ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ ; ಮಾಜಿ ಸಿಎಂ...
20-11-26 12:04 pm
ಹಿರಿಯೂರು ಅಭ್ಯರ್ಥಿ ; ನಾವು ಕುಮಾರಸ್ವಾಮಿ ಜೊತೆ ಮಾತ...
19-11-26 12:32 pm
21-11-26 11:44 am
HK News Staffer
ಜಾಗತಿಕ ಜನಸಂಖ್ಯೆಯಲ್ಲಿ ಇಸ್ಲಾಂ ಪಾರಮ್ಯ ; 2035ಕ್ಕೆ...
20-11-26 12:58 pm
ಬಾಂಗ್ಲಾದೇಶದಲ್ಲಿ ಮತ್ತೆ ಹಿಂಸಾಚಾರ ; ಮಾಜಿ ಮುಖ್ಯಸ್...
19-11-26 07:30 pm
"ಧರ್ಮ ಯಾವುದೇ ಇರಲಿ, ಪ್ರತಿಯೊಬ್ಬ ಭಾರತೀಯನ ರಕ್ತದಲ್...
19-11-26 01:19 pm
ಸೌದಿಗೆ ನವೆಂಬರ್ 30ರ ವರೆಗೆ ವಿಮಾನ ಸೇವೆ ರದ್ದು ; ಇ...
18-11-26 11:28 pm
23-11-26 09:25 pm
HK News Staffer
ಫೇಕ್ ಜನೌಷಧಿ ಕೇಂದ್ರಗಳ ತಪಾಸಣೆ ಸಮರ್ಥಿಸಿದ ಸಚಿವ ಖಾ...
23-11-26 05:15 pm
ಆಶಾ ಕಾರ್ಯಕರ್ತರಿಗೆ ಅಧಿವೇಶನ ವರೆಗೆ ಕಾಯಿರಿ ಅಂತ ಸಿ...
23-11-26 04:52 pm
ಎಸ್ಐಟಿ ಕಚೇರಿಗೆ ದಾಖಲೆಗಳನ್ನು ಹೊತ್ತು ತಂದ ಗಿರೀಶ್...
23-11-26 02:26 pm
ಡಿಕೆಶಿ ವಿದೇಶಕ್ಕೆ ; ಮಂಗಳೂರಿಗೆ ಹೆಲಿಕಾಪ್ಟರಿನಲ್ಲಿ...
23-11-26 01:13 pm
23-11-26 02:24 pm
HK News Staffer
ತಲೆ ಕಡಿದು ಧ್ವನಿ ಅಡಗಿಸಬಹುದು, ನ್ಯಾಯದ ಧ್ವನಿಯನ್ನಲ...
23-11-26 11:59 am
ಸತ್ತಿದ್ದಾಳೆ ಎಂದ ಮಹಿಳೆ 7 ವರ್ಷಗಳ ಬಳಿಕ ಪ್ರತ್ಯಕ್ಷ...
21-11-26 04:41 pm
ಬೆಳಗಾವಿಯಲ್ಲಿ ಗೃಹಲಕ್ಷ್ಮಿ ಹಣಕ್ಕಾಗಿ ಅಜ್ಜಿಯನ್ನೇ ಕ...
21-11-26 12:41 pm
'ಬಸವ ಮಂಟಪ' ಕೃತಿ ವಿವಾದ ಹಿನ್ನೆಲೆ ; ಲೇಖಕ ರವಿ ಹಂಜ...
21-11-26 12:33 pm