ಬ್ರೇಕಿಂಗ್ ನ್ಯೂಸ್
20-01-21 05:13 pm Bangalore Correspondent ಕರ್ನಾಟಕ
ಬೆಂಗಳೂರು, ಜ.20: ನಕಲಿ ದಾಖಲೆ ಪತ್ರಗಳನ್ನು ಸೃಷ್ಟಿಸಿ, ಬೆಲೆಬಾಳುವ ಜಾಗಗಳನ್ನು ತಮ್ಮ ಹೆಸರಿಗೆ ಬರೆಸಿಕೊಂಡು ಉಪಾಯದಲ್ಲಿ ಮಾರಾಟ ಮಾಡುತ್ತಿದ್ದ ಖದೀಮರ ಜಾಲವನ್ನು ಬೆಂಗಳೂರು ಪೊಲೀಸರು ಪತ್ತೆ ಮಾಡಿದ್ದಾರೆ.
ಆರು ಮಂದಿಯ ತಂಡವನ್ನು ಪತ್ತೆ ಮಾಡಿ ಬಂಧಿಸಿದ್ದು, ಅವರಿಂದ 16.83 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು 35 ಲಕ್ಷ ಬೆಲೆಯ ಮೂರು ಕಾರುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತರನ್ನು ಕೀರ್ತನಾ ಶೇಖರ್ (29), ಶೇಖರ್(36), ಪವನ್ ಕುಮಾರ್ ಅಲಿಯಾಸ್ ಮೈಕಲ್ ಡಿಸೋಜ(36), ಪ್ರಜ್ವಲ್ ರಾಮಯ್ಯ, ಉಮಮಹೇಶ್ ರಾವ್(39), ಜಯಪ್ರಕಾಶ್ ಎಂ.(41) ಎಂದು ಗುರುತಿಸಲಾಗಿದೆ.
ಮೊದಲಿಗೆ, ನಗರದ ಆಯಕಟ್ಟಿನಲ್ಲಿರುವ ಮತ್ತು ಅತಿ ಹೆಚ್ಚು ಬೆಲೆಗೆ ಮಾರಾಟ ಆಗಬಲ್ಲ ಖಾಲಿ ಜಾಗಗಳನ್ನು ಗುರುತಿಸಲಾಗುತ್ತದೆ. ಆಬಳಿಕ ತಂಡದಲ್ಲಿರುವ ವ್ಯಕ್ತಿಯೊಬ್ಬನ ಹೆಸರಿನಲ್ಲಿ ಆ ಜಾಗ ಇರುವಂತೆ ನಕಲಿ ದಾಖಲೆಗಳನ್ನು ಸೃಷ್ಟಿಸುತ್ತಾರೆ. ಮೂರನೇ ಹಂತದಲ್ಲಿ ಆ ಜಾಗವನ್ನು ಮಾರಾಟ ಮಾಡಲು ಇದೇ ತಂಡದ ಒಬ್ಬ ವ್ಯಕ್ತಿ ರಿಯಲ್ ಎಸ್ಟೇಟ್ ಏಜಂಟನ ರೀತಿ ವರ್ತಿಸಿ, ಹಣ ಉಳ್ಳವರನ್ನು ಸಂಪರ್ಕಿಸುತ್ತಾನೆ. ಯಾರಾದ್ರೂ ಮಿಕ ಸಿಕ್ಕಿದ ಕೂಡಲೇ ಖಾಲಿ ಸೈಟ್ ತೋರಿಸಿ, ಇದರ ಜಾಗದ ಮಾಲೀಕರಿಗೆ ಹಣದ ಅಗತ್ಯವಿದೆ. ಕಡಿಮೆ ದರಕ್ಕೆ ತೆಗೆಸಿಕೊಡುತ್ತೇನೆ ಎಂದು ನಂಬಿಸುತ್ತಾನೆ. ಸೈಟ್ ಖರೀದಿಸುವ ವ್ಯಕ್ತಿ ಜಾಗ ನೋಡಲು ಬರುವಾಗ, ತಂಡದಲ್ಲಿ ನಕಲಿ ದಾಖಲೆಗಳನ್ನು ಮಾಡಿಕೊಂಡಿದ್ದ ವ್ಯಕ್ತಿ ಇನ್ನೊಬ್ಬ ಲೇಡಿಯ ಜೊತೆಗೆ ಬಂದು ದಂಪತಿಯ ರೀತಿ ಪೋಸು ಕೊಡುತ್ತಾನೆ. ಅಲ್ಲದೆ, ಹೆಂಡ್ತಿಯಾದವಳು ಹಣದಲ್ಲಿ ಬಾರ್ಗೇನ್ ಮಾಡುತ್ತಾಳೆ. ದಂಪತಿ ತುಂಬ ಕಷ್ಟದಲ್ಲಿ ಇರುವುದರಿಂದ ಸೇಲ್ ಮಾಡುತ್ತಿರುವ ರೀತಿ ನಟಿಸಿ, ಒಂದು ಹಂತಕ್ಕೆ ರೇಟ್ ಕುದುರಿಸಿ ಡೀಲ್ ಸೆಟ್ ಮಾಡುತ್ತಾರೆ.
ಜಾಗ ಖರೀದಿಸುವ ವ್ಯಕ್ತಿ, ಜಾಗದ ದಾಖಲೆ ಪತ್ರಗಳನ್ನು ಬ್ಯಾಂಕಿಗೆ ತೋರಿಸಿ ದೊಡ್ಡ ಮೊತ್ತದ ಸಾಲವನ್ನು ಪಡೆಯುತ್ತಾನೆ. ಕೂಡಲೇ ದಂಪತಿಯ ಸೋಗಿನಲ್ಲಿರುವ ತಂಡದ ವ್ಯಕ್ತಿಗಳು ಸೇರಿ ಹಣ ಪಡೆದು ಅಲ್ಲಿಂದ ಜಾಗ ಖಾಲಿ ಮಾಡುತ್ತಾರೆ. ಆರೋಪಿಗಳ ಪೈಕಿ ಎಲ್ಲರೂ ವೃತ್ತಿಯಲ್ಲಿ ರಿಯಲ್ ಎಸ್ಟೇಟ್ ಏಜಂಟರಾಗಿದ್ದು, ಪವನ್ ಬ್ಯಾಂಕ್ ಲೋನ್ ತೆಗೆಸಿಕೊಡುವ ಏಜಂಟ್ ಆಗಿದ್ದ. ಈತನೇ ಉಳಿದವರಿಗೆ ಬ್ಯಾಂಕ್ ಲೋನ್ ಮತ್ತು ಇತರ ದಾಖಲೆ ಪತ್ರಗಳನ್ನು ಸಂಗ್ರಹಿಸುವ ಬಗ್ಗೆ ಉಪಾಯ ಹೇಳಿಕೊಟ್ಟಿದ್ದ.
ಇದೇ ತಂಡದಿಂದ ವಂಚನೆಗೊಳಗಾಗಿದ್ದ ಬಂಗಾಳ ಮೂಲದ ದಂಪತಿಯಾದ ಚಕ್ರವರ್ತಿ ನಂದು ಪಾಂಡು ಮತ್ತು ರುತಿರಾ ದೇವಿ ಚಕ್ರವರ್ತಿ, ಕಳೆದ ಡಿ.21ರಂದು ತಾವು ಖರೀದಿ ಮಾಡಿದ್ದ ಜಾಗದಲ್ಲಿ ಅದರ ನೈಜ ಮಾಲೀಕರು ಕಟ್ಟಡ ರಚನೆಗೆ ತೊಡಗಿದಾಗ ಪೊಲೀಸ್ ದೂರು ದಾಖಲಿಸಿದ್ದರು. ಈ ದಂಪತಿ ಸೈಟ್ ಖರೀದಿಸಿದ್ದು, ಅದರ ನೈಜ ಮಾಲೀಕರು ಕಟ್ಟಡ ಕಟ್ಟಲು ಆರಂಭಿಸಿದಾಗ ಅವರ ಜೊತೆ ಜಟಾಪಟಿ ನಡೆಸಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಪೊಲೀಸರು ಇಬ್ಬರ ದಾಖಲೆ ಪತ್ರಗಳನ್ನು ಪರಿಶೀಲಿಸಿ ತನಿಖೆ ಕೈಗೊಂಡಾಗ, ಖದೀಮರ ಜಾಲ ಪತ್ತೆಯಾಗಿದೆ.
ಆರೋಪಿಗಳ ವಿರುದ್ಧ ಫೋರ್ಜರಿ ಮತ್ತು ಮೋಸ ನಡೆಸಿರುವ ಬಗ್ಗೆ ಪ್ರಕರಣ ದಾಖಲಿಸಿರುವ ಪೊಲೀಸರು, ಇದೇ ತಂಡ ಬೇರೆ ಎಲ್ಲೆಲ್ಲಿ ಇಂಥದ್ದೇ ಮೋಸ ಮಾಡಿದೆ ಎನ್ನುವ ಬಗ್ಗೆ ತಪಾಸಣೆ ಆರಂಭಿಸಿದ್ದಾರೆ.
Police arrested six members of a gang led by a 29-year-old woman, who operated a fake plot selling racket in the city, said the Bengaluru South Police on Wednesday.
24-02-25 01:36 pm
HK News Desk
Kumar Bangarappa, BJP President: ಬಿಜೆಪಿ ರಾಜ್ಯ...
23-02-25 06:38 pm
Telangana Model, Pramod Muthalik, CM Siddaram...
21-02-25 10:47 pm
Rohini Sindhuri, Roopa moudgil, latest news:...
21-02-25 10:12 pm
Santosh Lad, Modi, Nitin Gadkari: ಬಿಜೆಪಿ ಅಧಿಕ...
21-02-25 04:36 pm
23-02-25 11:22 pm
HK News Desk
ಗಂಗಾ ನದಿಗಿದೆ ಸ್ವಯಂ ಶುದ್ಧೀಕರಣದ ಶಕ್ತಿ ; ಕೋಟ್ಯಂತ...
23-02-25 09:52 pm
ದುಬೈನಲ್ಲಿ ಕ್ರಿಮಿನಲ್ ಇನ್ವೆಸ್ಟಿಗೇಶನ್ ಅಧಿಕಾರಿಗಳ...
22-02-25 09:48 pm
ದುಬೈ ಉದ್ಯಮಿ ಬಿ.ಆರ್ ಶೆಟ್ಟಿಗೆ ದುಬೈ ಕೋರ್ಟಿನಿಂದ ಮ...
22-02-25 07:51 pm
Kerala school teacher suicide, catholic Churc...
22-02-25 03:53 pm
24-02-25 02:50 pm
Mangalore Correspondent
Mangalore accident, Surathkal, Raichur: ಸುರತ್...
23-02-25 03:20 pm
Rani Abbakka, Mamata Ballal, Mangalore: ಐನೂರು...
23-02-25 01:12 pm
Siddaramaiah, Priyank Kharge Mangalore, D K S...
22-02-25 05:21 pm
Singari Beedi Robbery, IPS, crime: ಸಿಂಗಾರಿ ಬೀ...
21-02-25 08:22 pm
24-02-25 07:08 pm
Bangalore Correspondent
Sirsi Murder, KSRTC Bus, crime: ಶಿರಸಿ ; ಹತ್ತು...
23-02-25 03:42 pm
Visa fraud, Bangalore crime, Arrest: ವಿದೇಶಿ ವ...
22-02-25 10:36 pm
Ankola Car Robbery, Rajendra Pawar, Gold Smug...
20-02-25 01:22 pm
Mangalore, Puttur, Cheating, paras traders: ಲ...
19-02-25 09:26 pm