ಬ್ರೇಕಿಂಗ್ ನ್ಯೂಸ್
25-01-21 07:34 pm Bangalore Correspondent ಕರ್ನಾಟಕ
ಬೆಂಗಳೂರು, ಜ.25: ಸಿಎಂ ಯಡಿಯೂರಪ್ಪ ಸಂಪುಟ ವಿಸ್ತರಣೆಯೇ ಸರಕಾರದಲ್ಲಿ ಈಗ ತಿಕ್ಕಾಟಕ್ಕೆ ಕಾರಣವಾಗಿದೆ. ಖಾತೆ ಹಂಚಿಕೆಯಲ್ಲಿ ಮತ್ತೆ ಮತ್ತೆ ಕ್ಯಾತೆ ಎತ್ತುತ್ತಿರುವ ಕೆಲವರಿಂದಾಗಿ ಯಡಿಯೂರಪ್ಪ ಇಕ್ಕಟ್ಟಿಗೆ ಬಿದ್ದಿದ್ದು ಅಸಮಾಧಾನಗೊಂಡ ಇಬ್ಬರು ಸಚಿವರು ತಮ್ಮ ಸ್ಥಾನಕ್ಕೇ ರಾಜೀನಾಮೆ ನೀಡಲು ಮುಂದಾಗಿದ್ದಾರೆ.
ಆರೋಗ್ಯ ಸಚಿವ ಸುಧಾಕರ್ ತನ್ನಲ್ಲಿದ್ದ ವೈದ್ಯಕೀಯ ಶಿಕ್ಷಣ ಖಾತೆಯನ್ನು ಹಿಂಪಡೆದಿದ್ದಕ್ಕೆ ಅಸಮಾಧಾನಗೊಂಡು ಅತೃಪ್ತರ ಸಭೆ ನಡೆಸಿದ್ದರು. ಆಮೂಲಕ ಯಡಿಯೂರಪ್ಪ ವಿರುದ್ಧ ಬ್ಲಾಕ್ ಮೇಲ್ ತಂತ್ರ ಹೆಣೆದಿದ್ದರು. ಒತ್ತಡ ತಂತ್ರಕ್ಕೆ ಮಣಿದ ಸಿಎಂ ಯಡಿಯೂರಪ್ಪ ವೈದ್ಯಕೀಯ ಶಿಕ್ಷಣ ಖಾತೆಯನ್ನು ಮತ್ತೆ ಸುಧಾಕರ್ ಕೈಗೆ ವಹಿಸಲು ಮುಂದಾಗಿದ್ದಾರೆ. ಇದು ಹಿರಿಯ ಸಚಿವ ಜೆ.ಸಿ.ಮಾಧುಸ್ವಾಮಿ ಬೇಸರಕ್ಕೆ ಕಾರಣವಾಗಿದೆ.
ಕಳೆದ ಜ.21ರಂದು ಹೊಸ ಸಚಿವರಿಗೆ ಖಾತೆ ಹಂಚಿಕೆ ನಡೆದಾಗ, ಕೆಲವರ ಖಾತೆಗಳನ್ನು ಅದಲು ಬದಲು ಮಾಡಲಾಗಿತ್ತು. ಈ ವೇಳೆ ಸುಧಾಕರ್ ಬಳಿಯಿದ್ದ ವೈದ್ಯಕೀಯ ಶಿಕ್ಷಣ ಖಾತೆಯನ್ನು ಹಿಂಪಡೆದು ಮಾಧುಸ್ವಾಮಿಗೆ ವಹಿಸಲಾಗಿತ್ತು. ಮಾಧುಸ್ವಾಮಿ ಬಳಿಯಿದ್ದ ಸಣ್ಣ ನೀರಾವರಿ ಖಾತೆ ಹಿಂಪಡೆದು ಸಿ.ಪಿ. ಯೋಗೀಶ್ವರ್ ಗೆ ವಹಿಸಲಾಗಿತ್ತು. ನೀರಾವರಿ ಖಾತೆ ಹಿಂತೆಗೆದಿದ್ದಕ್ಕೆ ಆಗಲೇ ಮಾಧುಸ್ವಾಮಿ ಅಸಮಾಧಾನಗೊಂಡಿದ್ದರು. ಬಳಿಕ ಸ್ವತಃ ಸಿಎಂ ಕರೆ ಮಾಡಿ, ಸಮಾಧಾನಿಸಿದ್ದಲ್ಲದೆ ವೈದ್ಯಕೀಯ ಶಿಕ್ಷಣ ಮಹತ್ವದ ಖಾತೆ ಎನ್ನುವ ಮೂಲಕ ಮನವೊಲಿಸಿದ್ದರು.
ಆದರೆ, ವೈದ್ಯಕೀಯ ಶಿಕ್ಷಣ ಕೈತಪ್ಪಿದ್ದಕ್ಕೆ ಬಹಿರಂಗವಾಗೇ ಮಾಧ್ಯಮದಲ್ಲಿ ಅಸಮಾಧಾನ ತೋಡಿಕೊಂಡಿದ್ದ ಸುಧಾಕರ್ ಅಕ್ಷರಶಃ ಬ್ಲಾಕ್ ಮೇಲ್ ತಂತ್ರ ನಡೆಸಿದ್ದರು. ಆನಂತರ ಸಿಎಂ ಯಡಿಯೂರಪ್ಪ ಅವರಿಗೆ ಒತ್ತಡ ಹೇರಿ ಮತ್ತೆ ಅದೇ ಖಾತೆಯನ್ನು ಮರು ಹಂಚಿಕೆ ಮಾಡಿಕೊಳ್ಳಲು ಯಶಸ್ವಿಯಾಗಿದ್ದಾರೆ ಎನ್ನಲಾಗುತ್ತಿದೆ. ಮೂರನೇ ಬಾರಿಗೆ ಖಾತೆ ಮರು ಹಂಚಿಕೆಗೆ ಯಡಿಯೂರಪ್ಪ ಕೈಹಾಕಿದ್ದು ಈಗ ಜೇನು ಗೂಡಿಗೆ ಕೈ ಇಟ್ಟಂತಾಗಿದೆ.
ಮಾಧುಸ್ವಾಮಿ ಕೈಯಿಂದ ವೈದ್ಯಕೀಯ ಶಿಕ್ಷಣ ಖಾತೆಯನ್ನು ಮತ್ತೆ ಹಿಂಪಡೆದು ಸುಧಾಕರ್ ಗೆ ನೀಡಿದ್ದು ಈಗ ಬಿಜೆಪಿ ಶಾಸಕರಲ್ಲೇ ವೈಮನಸ್ಸಿಗೆ ಕಾರಣವಾಗಿದೆ. ಬ್ಲಾಕ್ ಮೇಲ್ ಮಾಡುವವರಿಗೆ ಸಿಎಂ ಮಣೆ ಹಾಕುತ್ತಾರೆ. ನಿಷ್ಠಾವಂತರಿಗೆ ಬೆಲೆ ಇಲ್ಲ ಎಂಬ ಅಸಮಾಧಾನದ ಮಾತನ್ನು ಆಡುತ್ತಿದ್ದಾರೆ. ಇದೇ ವೇಳೆ, ಆನಂದ್ ಸಿಂಗ್ ಗೆ ಹಂಚಿಕೆ ಮಾಡಿದ್ದ ಪ್ರವಾಸೋದ್ಯಮ ಖಾತೆಯನ್ನು ಮತ್ತೆ ಹಿಂಪಡೆದು ಮಾಧುಸ್ವಾಮಿಗೆ ವಹಿಸಲಾಗಿದೆ. ಎರಡೇ ದಿನದಲ್ಲಿ ಹೀಗೆ ಖಾತೆ ಅದಲು ಬದಲು ಮಾಡಿದ್ದು ಮಾಧುಸ್ವಾಮಿ ಮತ್ತು ಆನಂದ್ ಸಿಂಗ್ ಇಬ್ಬರನ್ನೂ ಕೆರಳಿಸಿದ್ದು ತಮ್ಮನ್ನು ಸಂಪುಟದಲ್ಲಿ ನಗಣ್ಯ ಮಾಡಲಾಗುತ್ತಿದೆ ಎಂಬ ಕಾರಣವೊಡ್ಡಿ ಇಬ್ಬರೂ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ನಾಳೆ ತಮ್ಮ ಜಿಲ್ಲೆಗಳಲ್ಲಿ ಗಣರಾಜ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸಿ ರಾಜಿನಾಮೆ ನೀಡಲಿದ್ದಾರೆಂಬ ಪ್ರಬಲ ಮಾತುಗಳು ಪಕ್ಷದ ಒಳಗೇ ಕೇಳಿಬರುತ್ತಿದೆ.
ಸಿಎಂ ಯಡಿಯೂರಪ್ಪ ಜ 21 ರಂದು ಮೊದಲ ಬಾರಿ ಖಾತೆ ಹಂಚಿಕೆ ಮಾಡಿದ್ದರು. ಎಂಟಿಬಿ ಸೇರಿ ಕೆಲವರು ಅಸಮಾಧಾನ ತೋಡಿಕೊಂಡ ಕಾರಣಕ್ಕೆ ಮರುದಿನ 22ರಂದು ಅವರ ಖಾತೆಗಳನ್ನು ಬದಲಾವಣೆ ಮಾಡಲಾಗಿತ್ತು. ಇದೀಗ ಜ.25ರಂದು ಮತ್ತೆ ಖಾತೆಯನ್ನು ಬದಲಿಸಿ, ರಾಜ್ಯಪಾಲರ ಸಹಿಗೆ ಪಟ್ಟಿ ನೀಡಿದ್ದಾರೆ ಎನ್ನಲಾಗಿದೆ. ಸಿಎಂ ಯಡಿಯೂರಪ್ಪರನ್ನೇ ಈಗ ವಲಸಿಗರು ಸೇರಿಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಎಂಬ ಮಾತುಗಳು ಪಕ್ಷದ ಒಳಗೆ ಕೇಳಿಬರುತ್ತಿದ್ದು ಇದು ಯಡಿಯೂರಪ್ಪ ಪಾಲಿಗೆ ದೊಡ್ಡ ಹಿನ್ನಡೆ ಅನ್ನೋದಂತು ಸತ್ಯ.
Karnataka BJP Ministers J C Madhu Swamy and Sudhakar to resign their post.
08-05-25 11:07 pm
Bangalore Correspondent
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
Special Poojas, Indian Army, Minister Ramalin...
07-05-25 04:07 pm
ಭಾರತ - ಪಾಕ್ ಮಧ್ಯೆ ಉದ್ವಿಗ್ನ ಸ್ಥಿತಿ ; ಮೇ 7 ರಂದು...
06-05-25 11:23 pm
09-05-25 06:49 pm
HK News Desk
India Pak War: ಭಾರತ ವಾಯುಪಡೆಯಿಂದ ಭೀಕರ ಪ್ರತಿದಾಳ...
09-05-25 12:33 pm
India - Pak War update: ಪಾಕಿಸ್ತಾನದ ಎಫ್ -16, ಎ...
09-05-25 12:00 am
New Pope, Robert Francis Prevost;140 ಕೋಟಿ ಸದಸ...
08-05-25 11:44 pm
Pak drone-missile attack; ಚೈನಾ ಮೇಡ್ ಲಾಹೋರ್ ಏರ...
08-05-25 04:57 pm
09-05-25 11:07 pm
Mangalore Correspondent
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
Ullal accident, Mangalore: ರಸ್ತೆ ದಾಟುತ್ತಿದ್ದ...
08-05-25 10:54 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm