ಶಿಕ್ಷೆ ಪೂರೈಸಿದ ತಮಿಳು ಸೆಲ್ವಿ ಶಸಿಕಲಾ ; ಇಂದೇ ಜೈಲಿನಿಂದ ಬಿಡುಗಡೆ ! ಜಯಾ ಜಾಗಕ್ಕೆ ಎಂಟ್ರಿ ಕೊಡ್ತಾರಾ ಕಲಾ ?

27-01-21 10:47 am       Bangalore Correspondent   ಕರ್ನಾಟಕ

ವಿ.ಕೆ ಶಶಿಕಲಾ, ಅವರ ಸಂಬಂಧಿ ಇಳವರಸಿ ಮತ್ತು ಸಹೋದರ ಸುಧಾಕರ್ ಅವರ ಜೈಲುವಾಸ ಇಂದಿಗೆ ಕೊನೆಗೊಳ್ಳಲಿದೆ.

ಬೆಂಗಳೂರು, ಜ. 27: ಅಕ್ರಮ ಆಸ್ತಿ ಪ್ರಕರಣದಲ್ಲಿ ಐದು ವರ್ಷಗಳ ಶಿಕ್ಷೆ ಪೂರೈಸಿದ ತಮಿಳುನಾಡಿನ ಎಐಎಡಿಎಂಕೆ ಮಾಜಿ ಪ್ರಧಾನ ಕಾರ್ಯದರ್ಶಿ ವಿ.ಕೆ ಶಶಿಕಲಾ, ಅವರ ಸಂಬಂಧಿ ಇಳವರಸಿ ಮತ್ತು ಸಹೋದರ ಸುಧಾಕರ್ ಅವರ ಜೈಲುವಾಸ ಇಂದಿಗೆ ಕೊನೆಗೊಳ್ಳಲಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಿಕ್ಷೆ ಅನುಭವಿಸಿದ್ದ ಮೂವರೂ ಬುಧವಾರ ಬಿಡುಗಡೆಯಾಗಲಿದ್ದಾರೆ.

ಆದರೆ ಕೋವಿಡ್ ಪಾಸಿಟಿವ್‌ಗೆ ಒಳಗಾಗಿರುವ ಶಶಿಕಲಾ ಮತ್ತು ಇಳವರಸಿ ಇಬ್ಬರೂ ಪ್ರಸ್ತುತ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರು ಆಸ್ಪತ್ರೆಯಿಂದಲೇ ಬಿಡುಗಡೆಯಾಗುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. 

ಜೈಲಿನಿಂದ ಬಿಡುಗಡೆ ಮಾಡುವ ಮುನ್ನ ಕೈದಿಗಳಿಂದ ವಿವಿಧ ದಾಖಲೆಗಳಿಗೆ ಸಹಿ ಹಾಕಿಸಿಕೊಳ್ಳುವ ಪ್ರಕ್ರಿಯೆ ನಡೆಯುತ್ತದೆ. ಆದರೆ ಶಶಿಕಲಾ ಮತ್ತು ಇಳವರಸಿ ಅವರು ಆಸ್ಪತ್ರೆಯಲ್ಲಿರುವ ಕಾರಣ ಕಾರಾಗೃಹ ಅಧಿಕಾರಿಗಳು ಮಂಗಳವಾರ ಸ್ವತಃ ಆಸ್ಪತ್ರೆಗೆ ತೆರಳಿ, ಪಿಪಿಇ ಕಿಟ್ ಧರಿಸಿ ಅವರ ಸಹಿ ಸಂಗ್ರಹಿಸಿದ್ದಾರೆ. ಈ ಮೂಲಕ ಬುಧವಾರ ಅವರ ಬಿಡುಗಡೆಗೆ ಬೇಕಾದ ಅಗತ್ಯ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ್ದಾರೆ. 

ಮಾಜಿ ಸಿಎಂ ಜಯಲಲಿತಾ ಆಪ್ತೆಯಾಗಿದ್ದ ಶಶಿಕಲಾ, ಜಯಾ ಜೊತೆಗಿದ್ದುಕೊಂಡೇ ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲು ಸೇರಿದ್ದರು. ಜಯಲಲಿತಾ ಅದೇ ಸಂದರ್ಭದಲ್ಲಿ ಅನಾರೋಗ್ಯಕ್ಕೀಡಾಗಿ ಮೃತಪಟ್ಟಿದ್ದರು. ಈಗ ಚುನಾವಣೆ ಸಂದರ್ಭದಲ್ಲೇ ಶಶಿಕಲಾ ತಮಿಳುನಾಡಿಗೆ ಮರಳುತ್ತಿದ್ದು ಚುನಾವಣೆ ರಾಜಕಾರಣಕ್ಕೆ ಎಂಟ್ರಿ ಕೊಡ್ತಾರೆಯೇ ಎನ್ನುವ ಕುತೂಹಲ ಎದ್ದಿದೆ.

Four years after she was convicted in a disproportionate assets case, V K Sasikala will Wednesday be freed from the Parappana Agrahara prison in Bengaluru. Sasikala, former AIADMK leader and a close aide of ex-Tamil Nadu chief minister late J Jayalalithaa.