ಹೋರಾಟ ದಿಕ್ಕು ತಪ್ಪಿದೆ, ರಾಷ್ಟ್ರ ಧ್ವಜವನ್ನು ಕಾಲಲ್ಲಿ ತುಳಿದವರು, ಸಂವಿಧಾನ ಸುಟ್ಟವರು ರೈತರೇ ; ಪೇಜಾವರ ಸ್ವಾಮೀಜಿ ಪ್ರಶ್ನೆ 

06-02-21 10:13 pm       Headline Karnataka News Network   ಕರ್ನಾಟಕ

ಭಾರತದ ಧ್ವಜವನ್ನು ಕೆಳಗಿಳಿಸುವುದು, ಕಾಲಿನಿಂದ ತುಳಿಯುವುದು, ಸಂವಿಧಾನದ ಪ್ರತಿಯನ್ನು ಸುಡುವುದು ರೈತರೇ ಎನ್ನುವ ಪ್ರಶ್ನೆ ಮೂಡಿದೆ ಎಂದು ಉಡುಪಿಯ ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಮಹಾಸ್ವಾಮೀಜಿ ಹೇಳಿದ್ದಾರೆ.‌

ವಿಜಯಪುರ, ಫೆ.6: ದೆಹಲಿಯಲ್ಲಿ ಹೋರಾಟ ನಡೆಸುತ್ತಿರುವವರು ರೈತರು ಹೌದಾ? ಅಲ್ಲವಾ ಎಂಬುದು ಸ್ಪಷ್ಟವಿಲ್ಲ. ಭಾರತದ ಧ್ವಜವನ್ನು ಕೆಳಗಿಳಿಸುವುದು, ಕಾಲಿನಿಂದ ತುಳಿಯುವುದು, ಸಂವಿಧಾನದ ಪ್ರತಿಯನ್ನು ಸುಡುವುದು ರೈತರೇ ಎನ್ನುವ ಪ್ರಶ್ನೆ ಮೂಡಿದೆ ಎಂದು ಉಡುಪಿಯ ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಮಹಾಸ್ವಾಮೀಜಿ ಹೇಳಿದ್ದಾರೆ.‌

ರೈತರ ಪ್ರತಿಭಟನೆ ವಿಚಾರದಲ್ಲಿ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರತಿಭಟನೆಯಲ್ಲಿ ಖಲಿಸ್ತಾನ ಪರ ಘೋಷಣೆ ಹಾಕಲಾಗಿದೆ. ಇದನ್ನು ಗಮನಿಸಿದರೆ ಹೋರಾಟದ ದಿಕ್ಕು ತಪ್ಪಿದೆ ಅನಿಸುತ್ತಿದೆ. ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿದರೆ ಪ್ರತಿಭಟನಾಕಾರರು ರೈತರಲ್ಲ ಎಂಬ ಸಂಶಯ ಮೂಡಿಸಿದೆ ಎಂದರು. 

ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ಸದ್ಯಕ್ಕೆ ತೆಗೆದುಕೊಂಡಿರುವ ನಿಲುವು ಸರಿಯಾದ ದಿಕ್ಕಿನಲ್ಲಿದೆ‌. ರೈತರೊಂದಿಗೆ ಮಾತುಕತೆಗೆ ಕೇಂದ್ರ ಸರಕಾರ ಸಿದ್ಧವಿದ್ದು ಆಹ್ವಾನ ನೀಡುತ್ತಿದೆ. ಅದರ ಬಗ್ಗೆ ಸ್ಪಷ್ಟ ತಿಳುವಳಿಕೆ ಇಲ್ಲದ ರೀತಿಯಲ್ಲಿ ಹೋರಾಟ ಮುಂದುವರೆಸಿರುವುದು ಸರಿಯಲ್ಲ ಎಂದರು. 

ದೇಶದ ಎಲ್ಲರ ಶ್ರದ್ಧೆ, ಭಕ್ತಿಯ ಪ್ರತೀಕವಾಗಿ ರಾಮ ಮಂದಿರ ನಿರ್ಮಾಣವಾಗಲಿದೆ. ರಾಮ ಮಂದಿರ ಹಿಂದು ಸಂಸ್ಕೃತಿಯ ಪ್ರತೀಕ. ಈ ನಿಟ್ಟಿನಲ್ಲಿ ಎಲ್ಲ ಕಾರ್ಯಕರ್ತರು ಶ್ರಮಿಸುತ್ತಿದ್ದಾರೆ. ಶ್ರೀರಾಮನನ್ನು ಪೂಜಿಸುವವರು ಉದಾರವಾಗಿ ದಾನ ನೀಡುತ್ತಿದ್ದಾರೆ. ಇದು ಅಭಿಮಾನ, ಶ್ರದ್ಧೆಯ ಪ್ರತೀಕವಾಗಿದೆ. ಎಲ್ಲೆಲ್ಲಿ ಸಾಧ್ಯವೋ ಅಲ್ಲಿಗೆಲ್ಲ ತೆರಳಿ ನಿಧಿ ಸಂಗ್ರಹಿಸುತ್ತೇವೆ ಎಂದು ಸ್ವಾಮೀಜಿ ಹೇಳಿದರು.