ಆಗುಂಬೆ ಘಾಟ್‌ನಲ್ಲಿ ಪ್ರಾಣಿಗಳಿಗೆ ಆಹಾರ ಕೊಟ್ಟರೆ ದಂಡ!

07-02-21 12:25 pm       Mangaluru Correspondent   ಕರ್ನಾಟಕ

ಆಗುಂಬೆ ಘಾಟ್ ರಸ್ತೆಯಲ್ಲಿ ಸಂಚಾರ ನಡೆಸುವ ಪ್ರವಾಸಿಗರು ಆಹಾರ ಎಸೆಯುವುದು, ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಬಿಸಾಡಿದವರೆ ಅರಣ್ಯ ಇಲಾಖೆ ದಂಡ ಹಾಕುತ್ತದೆ.

ಶಿವಮೊಗ್ಗ, ಫೆಬ್ರವರಿ 7: ಆಗುಂಬೆ ಘಾಟ್ ರಸ್ತೆಯಲ್ಲಿ ಸಂಚಾರ ನಡೆಸುವ ಪ್ರವಾಸಿಗರು ಆಹಾರ ಎಸೆಯುವುದು, ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಬಿಸಾಡಿದವರೆ ಅರಣ್ಯ ಇಲಾಖೆ ದಂಡ ಹಾಕುತ್ತದೆ. ಈಗಾಗಲೇ ಈ ಕಾರ್ಯಾಚರಣೆಯನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ಆರಂಭಿಸಿದ್ದಾರೆ.

ಸೋಮೇಶ್ವರ ಅಭಯಾರಣ್ಯ ವ್ಯಾಪ್ತಿಯ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಆಗುಂಬೆ ಘಾಟ್ ರಸ್ತೆ ಹಾದು ಹೋಗುತ್ತದೆ. ಶಿವಮೊಗ್ಗ ಮತ್ತು ಕರಾವಳಿ ಭಾಗವನ್ನು ಈ ರಸ್ತೆ ಸಂಪರ್ಕಿಸುತ್ತದೆ. ಸಾವಿರಾರು ಪ್ರವಾಸಿಗರು ಈ ಮಾರ್ಗದಲ್ಲಿ ಸಂಚಾರ ನಡೆಸುತ್ತಾರೆ.

ಶನಿವಾರದಿಂದ ಅರಣ್ಯ ಇಲಾಖೆ ಸಿಬ್ಬಂದಿ ದಂಡ ಪ್ರಯೋಗದ ಕಾರ್ಯಾರಣೆಯನ್ನು ಆರಂಭಿಸಿದ್ದಾರೆ. ಸೋಮೇಶ್ವರದಿಂದ ಆಗುಂಬೆ ತನಕ ಹೆಬ್ರಿ, ಕಾರ್ಕಳ, ಸಿದ್ದಾಪುರ ವನ್ಯಜೀವಿ ವಿಭಾಗದ ಸುಮಾರು 40 ಸಿಬ್ಬಂದಿಗಳು ಪ್ರಾಣಿಗಳಿಗೆ ಆಹಾರ ಹಾಕುವವರು, ಪ್ಲಾಸ್ಟಿಕ್ ತ್ಯಾಜ್ಯ ಬಿಸಾಡುವವರಿಗೆ ದಂಡ ಹಾಕಿದ್ದಾರೆ.

ನಿಯಮ ಉಲ್ಲಂಘನೆ ಆಧಾರದ ಮೇಲೆ 50 ರೂ. ನಿಂದ 200 ರೂ. ವರೆಗೆ ದಂಡ ಹಾಕಲಾಗಿದೆ. ದಂದಡ ಜೊತೆಗೆ ಘಾಟ್ ರಸ್ತೆಯ ಹಲವು ಕಡೆ ಮಾಹಿತಿ ಫಲಕಗಳನ್ನು ಅಳವಡಿಸಿ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.

ಮನುಷ್ಯರು ಸೇವಿಸುವ ಆಹಾರ ಮತ್ತು ಜಂಡ್ ಫುಡ್‌ಗಳನ್ನು ಪ್ರಾಣಿಗಳಿಗೆ ನೀಡಿದರೆ ಅವುಗಳ ಆರೋಗ್ಯ ಹಾಳಾಗಲಿದೆ. ಮನುಷ್ಯರು ಹಾಕುವ ಆಹಾರಕ್ಕೆ ಹೊಂದಿಕೊಂಡು ಪ್ರಾಣಿಗಳು ರಸ್ತೆ ಬದಿಯಲ್ಲಿಯೇ ನಿಂತು ಜನರ ಮೇಲೆ ದಾಳಿ ಮಾಡುವ ಸಾಧ್ಯತೆಯೂ ಇದೆ.

ಪ್ರಾಣಿಗಳಿಂದ ಮನುಷ್ಯರಿಗೆ ರೋಗ ಹಡುವು ಸಾಧ್ಯತೆಯೂ ಇದೆ. ಆದ್ದರಿಂದ, ವಾಹನ ಸವಾರರು ಘಾಟ್ ರಸ್ತೆಯಲ್ಲಿ ಪ್ರಾಣಿಗಳಿಗೆ ಆಹಾರ ನೀಡದಂತೆ ಅರಿವು ಮೂಡಿಸಲಾಗುತ್ತಿದೆ. ತ್ಯಾಜ್ಯ ಎಸೆದರೆ ದಂಡವನ್ನು ಹಾಕಲಾಗುತ್ತಿದೆ.

The forest officials will now impose fines on those that feed animals at agumbe ghat.