ಬ್ರೇಕಿಂಗ್ ನ್ಯೂಸ್
09-02-21 02:17 pm Headline Karnataka News Network ಕರ್ನಾಟಕ
ಬೆಂಗಳೂರು, ಫೆ.9: ಜೆಡಿಎಸ್- ಬಿಜೆಪಿ ಮೈತ್ರಿಯ ಮೊದಲ ಪರ್ವ ರಾಜ್ಯದಲ್ಲಿ ಆರಂಭಗೊಂಡಿದೆ. ವಿಧಾನ ಪರಿಷತ್ತಿನ ನೂತನ ಸಭಾಪತಿಯಾಗಿ ಜೆಡಿಎಸ್ ಪಕ್ಷದ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಕಾಂಗ್ರೆಸ್ ಸದಸ್ಯರ ಗದ್ದಲದ ನಡುವೆಯೇ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮಂಗಳವಾರ ಕಲಾಪ ಆರಂಭಗೊಳ್ಳುತ್ತಿದ್ದಂತೆ, ಗೋಹತ್ಯೆ ನಿಷೇಧ ಕಾಯ್ದೆ ವಿಚಾರದಲ್ಲಿ ಕಾಂಗ್ರೆಸ್ ಸದಸ್ಯರು ಗದ್ದಲ ಆರಂಭಿಸಿದ್ದರು. ಕಾಯ್ದೆ ಸಂಬಂಧಿಸಿ ಪರಿಷತ್ತಿನಲ್ಲಿ ಮತ ವಿಭಜನೆಗೆ ಹಾಕಬೇಕೆಂದು ನಮ್ಮ ಆಗ್ರಹಕ್ಕೆ ಸ್ಪಂದನೆ ನೀಡಿಲ್ಲ. ಕೂಡಲೇ ಮತ ವಿಭಜನೆಗೆ ಅವಕಾಶ ಮಾಡಿಕೊಡಬೇಕೆಂದು ಉಪ ಸಭಾಪತಿ ಎಂ.ಕೆ. ಪ್ರಾಣೇಶ್ ಅವರಿಗೆ ಆಗ್ರಹಿಸಿದರು.
ಆದರೆ, ಉಪ ಸಭಾಪತಿಯವರು ಮೊದಲು ಧರಣಿ ಕೈಬಿಟ್ಟು ಸಭಾಪತಿ ಆಯ್ಕೆಗೆ ಅವಕಾಶ ಮಾಡಿಕೊಡುವಂತೆ ಕೇಳಿಕೊಂಡರು. ಅಲ್ಲದೆ, ಗೋಹತ್ಯೆ ನಿಷೇಧ ಮಸೂದೆಯನ್ನು ಪಾಸ್ ಮಾಡಿದ ಸಂದರ್ಭವನ್ನು ಮರು ಪರಿಶೀಲಿಸುವುದಾಗಿ ಹೇಳಿದರು. ಆದರೆ ಕಾಂಗ್ರೆಸ್ ಸದಸ್ಯರು ಪಟ್ಟು ಸಡಿಲಿಸದೆ ಧರಣಿ ಮುಂದುವರಿಸಿದರು. ಧರಣಿ ನಡುವೆಯೇ ಉಪ ಸಭಾಪತಿ ಚುನಾವಣೆ ಪ್ರಕ್ರಿಯೆ ನಡೆಸಿದರು.
ಜೆಡಿಎಸ್ ಸದಸ್ಯರಾದ ನಾರಾಯಣ ಸ್ವಾಮಿ ಹಾಗೂ ಅಪ್ಪಾಜಿ ಗೌಡ ಅವರು ಹಿರಿಯ ಮುಖಂಡ ಹೊರಟ್ಟಿ ಅವರನ್ನು ಸಭಾಪತಿ ಸ್ಥಾನಕ್ಕೆ ಆಯ್ಕೆ ಮಾಡುವಂತೆ ಪ್ರಸ್ತಾವನೆ ಮಂಡಿಸಿದರು. ಇದೇ ವೇಳೆ, ಜೆಡಿಎಸ್ ನ ಕೆ.ಟಿ.ಶ್ರೀಕಂಠೇ ಗೌಡ ಮತ್ತು ಕೆ.ಎ. ತಿಪ್ಪೇ ಸ್ವಾಮಿ ಹೊರಟ್ಟಿ ಆಯ್ಕೆ ಪ್ರಸ್ತಾಪಕ್ಕೆ ಅನುಮೋದನೆ ಸೂಚಿಸಿದರು. ಇದಕ್ಕೂ ಮೊದಲೇ ಕಾಂಗ್ರೆಸ್ ಸದಸ್ಯ ನಜೀರ್ ಅಹ್ಮದ್ ಸಭಾಪತಿ ಹುದ್ದೆಗೆ ನಾಮಪತ್ರ ಸಲ್ಲಿಸಿದ್ದರು. ಹೀಗಾಗಿ ಮತ ವಿಭಜನೆ ಆಧಾರದಲ್ಲಿ ಚುನಾವಣಾ ಪ್ರಕ್ರಿಯೆ ನಡೆಸಬೇಕಾಗಿತ್ತು. ಆದರೆ, ಕಾಂಗ್ರೆಸ್ ಸದಸ್ಯರು ಧರಣಿ ಮುಂದುವರಿಸಿದ್ದರಿಂದ ಅವರನ್ನು ಚುನಾವಣಾ ಪ್ರಕ್ರಿಯೆಗೆ ಪರಿಗಣಿಸದೆ ಸಭಾಪತಿ ಆಯ್ಕೆ ಪ್ರಕ್ರಿಯೆ ನಡೆಸಿದರು.
ಬಳಿಕ ಉಪ ಸಭಾಪತಿಯವರೇ ಬಸವರಾಜ್ ಹೊರಟ್ಟಿ ಆಯ್ಕೆಯನ್ನು ಘೋಷಣೆ ಮಾಡಿದರು. ಪರಿಷತ್ತಿನಲ್ಲಿ ಆಡಳಿತ ಪಕ್ಷ ಬಿಜೆಪಿಯ ಹಿರಿಯ ಸದಸ್ಯ, ಸಭಾನಾಯಕರಾಗಿರುವ ಕೋಟ ಶ್ರೀನಿವಾಸ ಪೂಜಾರಿ ಮತ್ತು ಇತರ ಸಚಿವರು ಹೊರಟ್ಟಿಯನ್ನು ಸಭಾಪತಿ ಪೀಠಕ್ಕೆ ಒಯ್ದು ಕೂರಿಸಿದರು.
ಮಾಜಿ ಸಚಿವ ಬಸವರಾಜ ಹೊರಟ್ಟಿ ಏಳನೇ ಬಾರಿಗೆ ವಿಧಾನ ಪರಿಷತ್ತಿನಲ್ಲಿ ಸದಸ್ಯರಾಗಿದ್ದರು. ಇದೇ ಮೊದಲ ಬಾರಿಗೆ ಜೆಡಿಎಸ್ ಪಕ್ಷದ ಸದಸ್ಯ ವಿಧಾನ ಪರಿಷತ್ತಿನಲ್ಲಿ ಸಭಾಪತಿ ಪೀಠ ಅಲಂಕರಿಸಿದ್ದಾರೆ. ಈ ಮೂಲಕ ಜೆಡಿಎಸ್ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಕಸಿದುಕೊಂಡಿದೆ. ಒಂದು ಕಡೆ ಕೇವಲ 13 ಸ್ಥಾನಗಳನ್ನು ಹೊಂದಿದ್ದರೂ ಸಭಾಪತಿ ಸ್ಥಾನ, ಮತ್ತೊಂದು ಕಡೆ ಆಡಳಿತ ಪಕ್ಷ ಬಿಜೆಪಿಯ ಮೈತ್ರಿಯಿಂದ ತಮ್ಮ ಕ್ಷೇತ್ರಗಳಿಗೆ ಅನುದಾನ ಗಳಿಕೆಯನ್ನೂ ಮಾಡಿಕೊಳ್ಳಲು ತಂತ್ರ ಹೆಣೆದಿದೆ.
ವಿಲೀನಕ್ಕಿಂತ ಮೈತ್ರಿಯಿಂದ ಹೆಚ್ಚು ಬಲ !
ತಿಂಗಳ ಹಿಂದೆ ಜೆಡಿಎಸ್ ಅನ್ನು ಬಿಜೆಪಿ ಜೊತೆ ವಿಲೀನಗೊಳಿಸಲು ಬಿಜೆಪಿ ಹೈಕಮಾಂಡ್ ಆಫರ್ ನೀಡಿತ್ತು. ಆಮೂಲಕ ಪಕ್ಷಕ್ಕೆ ದಕ್ಷಿಣ ಕರ್ನಾಟಕದಲ್ಲಿ ಗಟ್ಟಿ ಹಿಡಿತ ಮತ್ತು ಯಡಿಯೂರಪ್ಪ ಹೊರತಾದ ನಾಯಕತ್ವವನ್ನೂ ಗಳಿಸಿಕೊಳ್ಳುವ ದೂರಾಲೋಚನೆ ಇತ್ತು. ಆದರೆ, ದೇವೇಗೌಡರು ತಮ್ಮ ಪಕ್ಷದ ವಿಲೀನಕ್ಕೆ ಒಪ್ಪಲಿಲ್ಲ. ವಿಲೀನದಿಂದ ತಮ್ಮ ಪಕ್ಷದ ಅಸ್ತಿತ್ವವೇ ಇರಲ್ಲವೆಂದು ನಿರಾಕರಿಸಿದ್ದರು. ಕುಮಾರಸ್ವಾಮಿಗೆ ಮನಸ್ಸಿದ್ದರೂ, ದೇವೇಗೌಡರು ವಿರೋಧಿಸಿದ್ದರು. ಆಬಳಿಕ ಎಚ್ಡಿ ಕುಮಾರಸ್ವಾಮಿ ಮತ್ತು ಬಸವರಾಜ ಹೊರಟ್ಟಿ ಒಂದು ಹೆಜ್ಜೆ ಮುಂದಿಟ್ಟು ದೂರದೃಷ್ಟಿ ಇಟ್ಟುಕೊಂಡೇ ಮೈತ್ರಿಗೆ ಒಪ್ಪಿಗೆ ನೀಡಿದ್ದರು.
ಮೈತ್ರಿಯ ಆರಂಭಿಕ ಲಾಭವನ್ನು ಜೆಡಿಎಸ್ ಗಿಟ್ಟಿಸಿಕೊಂಡಿದ್ದು, ಇನ್ನೆರಡು ವರ್ಷಗಳ ಕಾಲವೂ ಜೆಡಿಎಸ್ ಶಾಸಕರು ಅಧಿಕಾರ ಇಲ್ಲದೆಯೇ ಸರಕಾರದಲ್ಲಿ ತಮ್ಮೆಲ್ಲಾ ಕೆಲಸಗಳನ್ನು ಮಾಡಿಸಿಕೊಳ್ಳಲು ತಯಾರಾಗಿದ್ದಾರೆ. ಆದರೆ, ಮುಂದಿನ ಚುನಾವಣೆಗೆ ಈ ಮೈತ್ರಿ ಮುಂದುವರಿಯುತ್ತಾ ಅನ್ನುವ ಬಗ್ಗೆ ಬಿಜೆಪಿ- ಜೆಡಿಎಸ್ ನಾಯಕರು ಈಗಲೇ ಹೇಳಿಕೊಂಡಿಲ್ಲ.
The ruling BJP and Janata Dal (Secular) coalition has fielded senior JD (S) member Basavaraj Horatti for the post of Chairman of Karnataka Legislative Council.
24-02-25 01:36 pm
HK News Desk
Kumar Bangarappa, BJP President: ಬಿಜೆಪಿ ರಾಜ್ಯ...
23-02-25 06:38 pm
Telangana Model, Pramod Muthalik, CM Siddaram...
21-02-25 10:47 pm
Rohini Sindhuri, Roopa moudgil, latest news:...
21-02-25 10:12 pm
Santosh Lad, Modi, Nitin Gadkari: ಬಿಜೆಪಿ ಅಧಿಕ...
21-02-25 04:36 pm
24-02-25 10:14 pm
HK News Desk
India Pak Match 2025 Live: ಪಾಕ್ ತಂಡವನ್ನು ಚಾಂಪ...
23-02-25 11:22 pm
ಗಂಗಾ ನದಿಗಿದೆ ಸ್ವಯಂ ಶುದ್ಧೀಕರಣದ ಶಕ್ತಿ ; ಕೋಟ್ಯಂತ...
23-02-25 09:52 pm
ದುಬೈನಲ್ಲಿ ಕ್ರಿಮಿನಲ್ ಇನ್ವೆಸ್ಟಿಗೇಶನ್ ಅಧಿಕಾರಿಗಳ...
22-02-25 09:48 pm
ದುಬೈ ಉದ್ಯಮಿ ಬಿ.ಆರ್ ಶೆಟ್ಟಿಗೆ ದುಬೈ ಕೋರ್ಟಿನಿಂದ ಮ...
22-02-25 07:51 pm
24-02-25 02:50 pm
Mangalore Correspondent
Mangalore accident, Surathkal, Raichur: ಸುರತ್...
23-02-25 03:20 pm
Rani Abbakka, Mamata Ballal, Mangalore: ಐನೂರು...
23-02-25 01:12 pm
Siddaramaiah, Priyank Kharge Mangalore, D K S...
22-02-25 05:21 pm
Singari Beedi Robbery, IPS, crime: ಸಿಂಗಾರಿ ಬೀ...
21-02-25 08:22 pm
24-02-25 10:51 pm
HK News Desk
Illegal drug supply, Mangalore: ಮಂಗಳೂರು ಜೈಲಿಗ...
24-02-25 09:43 pm
Bangalore crime, Police constable, Rape, Bomm...
24-02-25 07:08 pm
Sirsi Murder, KSRTC Bus, crime: ಶಿರಸಿ ; ಹತ್ತು...
23-02-25 03:42 pm
Visa fraud, Bangalore crime, Arrest: ವಿದೇಶಿ ವ...
22-02-25 10:36 pm