ಮೇ 24ರಿಂದ ದ್ವಿತೀಯ ಪಿಯು ಪರೀಕ್ಷೆ ; ಇಲ್ಲಿದೆ ವಿವರ

12-02-21 07:50 pm       Bangalore Correspondant   ಕರ್ನಾಟಕ

ರಾಜ್ಯ ಪದವಿಪೂರ್ವ ಶಿಕ್ಷಣ ಇಲಾಖೆಯು ದ್ವಿತೀಯ ಪಿಯುಸಿ ಪರೀಕ್ಷೆಗಳ ಅಂತಿಮ ಅಧಿಕೃತ ವೇಳಾಪಟ್ಟಿ ಪ್ರಕಟಿಸಿದೆ. ಮೇ 24ರಿಂದ ರಾಜ್ಯಾದ್ಯಂತ ದ್ವಿತೀಯ ಪಿಯುಸಿ ಪರೀಕ್ಷೆಗಳು ನಡೆಯಲಿದೆ.

ಬೆಂಗಳೂರು, ಫೆಬ್ರವರಿ 12: ರಾಜ್ಯ ಪದವಿಪೂರ್ವ ಶಿಕ್ಷಣ ಇಲಾಖೆಯು ದ್ವಿತೀಯ ಪಿಯುಸಿ ಪರೀಕ್ಷೆಗಳ ಅಂತಿಮ ಅಧಿಕೃತ ವೇಳಾಪಟ್ಟಿ ಪ್ರಕಟಿಸಿದೆ. ಮೇ 24ರಿಂದ ರಾಜ್ಯಾದ್ಯಂತ ದ್ವಿತೀಯ ಪಿಯುಸಿ ಪರೀಕ್ಷೆಗಳು ನಡೆಯಲಿದೆ.

ಕೋವಿಡ್ ಸಂಬಂಧಿ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಬೇಕಿರುವುದರಿಂದ ವಿಷಯವಾರು ಪರೀಕ್ಷೆಗಳ ನಡುವೆ ಅಂತರ ಇಡಲಾಗಿದೆ. ಜೂನ್ 16ರಂದು ಪರೀಕ್ಷೆಗಳು ಮುಕ್ತಾಯವಾಗಲಿವೆ. ಎಲ್ಲ ಪರೀಕ್ಷೆಗಳೂ ಬೆಳಿಗ್ಗೆ 10.15ರಿಂದ ಮಧ್ಯಾಹ್ನ 1.30ರವರೆಗೆ ನಡೆಯಲಿದೆ.

ಈ ಹಿಂದೆ ಶಿಕ್ಷಣ ಇಲಾಖೆಯು ತಾತ್ಕಾಲಿಕ ಅಂಕಪಟ್ಟಿಯನ್ನು ಪ್ರಕಟಿಸಿತ್ತು. ಈ ವೇಳಾಪಟ್ಟಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳಿಗೆ ಒಂದು ವಾರ ಸಮಯ ನಿಗದಿಪಡಿಸಿತ್ತು. ದ್ವಿತೀಯ ಪಿಯು ಪರೀಕ್ಷೆ ಸಂಬಂಧ ರಾಜ್ಯದ ವಿವಿಧೆಡೆಯ ಪೋಷಕರು ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು. ಆಕ್ಷೇಪಣೆಗಳು. ಪೋಷಕರ ಅಭಿಪ್ರಾಯಗಳನ್ನು ಪರಿಗಣಿಸಿ ಅಂತಿಮ ವೇಳಾಪಟ್ಟಿ ಸಿದ್ಧಪಡಿಸಲಾಗಿದೆ.

ದೇಶಾದ್ಯಂತ ನೀಟ್, ಜೆಇಇಯಂತಹ ಸ್ಪರ್ಧಾತ್ಮಕ ಪರೀಕ್ಷೆಗಳು ಸಹ ನಡೆಯಲಿರುವುದರಿಂದ ಇವುಗಳನ್ನು ಗಮನದಲ್ಲಿರಿಸಿಕೊಂಡು ದ್ವಿತೀಯ ಪರೀಕ್ಷೆ ವೇಳಾಪಟ್ಟಿ ಸಿದ್ಧಪಡಿಸುವಂತೆ ಶಿಕ್ಷಣ ಇಲಾಖೆಗೆ ಮನವಿ ಮಾಡಲಾಗಿತ್ತು. ಪರೀಕ್ಷೆಯ ದಿನಾಂಕ ಹಾಗೂ ವಿವರಗಳು ಇಲ್ಲಿದೆ.

  • ಮೇ 24ರಂದು ಇತಿಹಾಸ ಪರೀಕ್ಷೆ,
  • ಮೇ 25-ಕರ್ನಾಟಕ ಸಂಗೀತ/ಹಿಂದೂಸ್ತಾನಿ ಸಂಗೀತ
  • ಮೇ 26- ಭೂಗೋಳ ಶಾಸ್ತ್ರ
  • ಮೇ 27- ಮನಃಶಾಸ್ತ್ರ/ಬೇಸಿಕ್ ಮ್ಯಾತ್ಸ್,ಮೇ 28- ತರ್ಕಶಾಸ್ತ್ರ, ಮೇ 29-ಹಿಂದಿ,
  • ಮೇ 31-ಇಂಗ್ಲಿಷ್,
  • ಜೂ.1- ಮಾಹಿತಿ ತಂತ್ರಜ್ಞಾನ/ಹೆಲ್ತ್​ರ್
  • ಜೂ.2- ರಾಜ್ಯಶಾಸ್ತ್ರ/ಗಣಕ ವಿಜ್ಞಾನ,
  • ಜೂ.3- ಜೀವಶಾಸ್ತ್ರ/ಎಲೆಕ್ಟ್ರಾನಿಕ್ಸ್
  • ಜೂ.4-ಅರ್ಥಶಾಸ್ತ್ರ, ಜೂ.5-ಗೃಹ ವಿಜ್ಞಾನ,
  • ಜೂ.7-ವ್ಯವಹಾರ ಅಧ್ಯಯನ/ ಭೌತಶಾಸ್ತ್ರ,
  • ಜೂ.8-ಐಚ್ಛಿಕ ಕನ್ನಡ,
  • ಜೂ.9-ತಮಿಳು/ತೆಲುಗು/ಮಲಯಾಳಂ/ಮರಾಠಿ
  • ಜೂ.10-ಸಮಾಜ ಶಾಸ್ತ್ರ/ ರಸಾಯನಶಾಸ್ತ್ರ
  • ಜೂ.11- ಉರ್ದು/ ಸಂಸ್ಕೃತ,
  • ಜೂ.12- ಸಂಖ್ಯಾಶಾಸ್ತ್ರ,
  • ಜೂ.14-ಲೆಕ್ಕಶಾಸ್ತ್ರ/ ಗಣಿತ/ಶಿಕ್ಷಣ,
  • ಜೂ.15- ಭೂಗರ್ಭಶಾಸ್ತ್ರ,
  • ಜೂ.16- ಕನ್ನಡ

ಕೊರೋನಾ ಹಿನ್ನಲೆ ಸ್ಥಗಿತಗೊಂಡಿದ್ದ ಶಾಲಾ ಕಾಲೇಜುಗಳನ್ನು ಜನವರಿಯಿಂದ ಆರಂಭಿಸಲಾಗಿತ್ತು. ಜನವರಿ 1ರಿಂದ 10 ಹಾಗೂ 12ನೇ ತರಗತಿ ಪ್ರಾರಂಭ ಮಾಡಲು ನಿರ್ಧರಿಸಲಾಯಿತು. 6ರಿಂದ 9ನೇ ತರಗತಿವರೆಗೆ ಪರಿಷ್ಕೃತ ವಿದ್ಯಾಗಮ ಶುರು ಮಾಡಲಾಯಿತು. ಶಾಲೆಗಳಲ್ಲಿ ಸರಾಸರಿ ಹಾಜರಾತಿ  ಶೇ. 75 ರಷ್ಟು ಹಾಜರಾತಿ ಕಂಡು ಬಂದಿತ್ತು.

Department of Karnataka Pre-University Education Board announces the time table for 2nd PUC Exams 2021. PU exams to commence from May 24th, 2021. Read full details.