ಡೆಕ್ಕನ್ ಅರ್ಬನ್ ಕೋ ಆಪರೇಟಿವ್ ಬ್ಯಾಂಕಿನ ವಹಿವಾಟುಗಳಿಗೆ ಆರ್ ಬಿಐ ನಿರ್ಬಂಧ ; ಆರು ತಿಂಗಳಲ್ಲಿ ಗ್ರಾಹಕರಿಗೆ ಒಂದು ಸಾವಿರ ಮಾತ್ರ !!

21-02-21 03:50 pm       Headline Karnataka News Network   ಕರ್ನಾಟಕ

ಕರ್ನಾಟಕದ ಡೆಕ್ಕನ್ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್‌ ಆಡಳಿತದಲ್ಲಿ ಅವ್ಯವಹಾರ, ಒಟ್ಟು ಆರ್ಥಿಕ ಸ್ಥಿತಿ ಹದಗೆಟ್ಟ ಹಿನ್ನೆಲೆಯಲ್ಲಿ ಅದರ ಎಲ್ಲ ರೀತಿಯ ವಹಿವಾಟುಗಳನ್ನು ನಿರ್ಬಂಧಿಸಿ ಆರ್ ಬಿಐ ಆದೇಶ ಹೊರಡಿಸಿದೆ.

ಬೆಂಗಳೂರು, ಫೆ.21: ಕರ್ನಾಟಕದ ಡೆಕ್ಕನ್ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್‌ ಆಡಳಿತದಲ್ಲಿ ಅವ್ಯವಹಾರ, ಒಟ್ಟು ಆರ್ಥಿಕ ಸ್ಥಿತಿ ಹದಗೆಟ್ಟ ಹಿನ್ನೆಲೆಯಲ್ಲಿ ಅದರ ಎಲ್ಲ ರೀತಿಯ ವಹಿವಾಟುಗಳನ್ನು ನಿರ್ಬಂಧಿಸಿ ಆರ್ ಬಿಐ ಆದೇಶ ಹೊರಡಿಸಿದೆ. ಇದರಿಂದ ಯಾವುದೇ ರೀತಿಯ ಹೊಸ ಸಾಲ ನೀಡುವಂತಿಲ್ಲ ಹಾಗು ಡಿಪಾಸಿಟ್ ಹಣವನ್ನೂ ಪಡೆಯುವ ಹಾಗಿಲ್ಲ.‌

ಈ ನಡುವೆ, ಇನ್ನು ಆರು ತಿಂಗಳ ಅವಧಿಯಲ್ಲಿ ಗ್ರಾಹಕರು ಕೇವಲ ರೂ.1000 ಮಾತ್ರ ಹಿಂಪಡೆಯಲು ಅವಕಾಶ ನೀಡಲಾಗಿದೆ. ಆದರೆ, ಈ ಆರು ತಿಂಗಳಲ್ಲಿ ಗ್ರಾಹಕರ ಹಣಕ್ಕೆ ಸಂಪೂರ್ಣ ಬಡ್ಡಿ ಪಾವತಿಸಲಾಗುವುದು ಎಂದು ಆರ್ ಬಿಐ ಸ್ಪಷ್ಟಪಡಿಸಿದೆ. ಇನ್ನೊಂದೆಡೆ ಗ್ರಾಹಕರು ತಮ್ಮ ಸಾಲ ತೀರಿಸಲು ಬ್ಯಾಂಕ್ ನಲ್ಲಿರುವ ಹಣವನ್ನು ಬಳಕೆ ಮಾಡಬಹುದು ಎಂದು RBI ಹೇಳಿದೆ. ಆದರೆ ಇದಕ್ಕೆ ಕೆಲ ಷರತ್ತುಗಳನ್ನು ವಿಧಿಸಲಾಗಿದೆ. 

ಗ್ರಾಹಕರು ಆತಂಕ ಪಡಬೇಕಿಲ್ಲ 

ಡೆಕ್ಕನ್ ಸಹಕಾರಿ ಬ್ಯಾಂಕಿನಲ್ಲಿ ತಕ್ಷಣಕ್ಕೆ ಜಾರಿಗೆ ಬರುವಂತೆ ಅಂದರೆ ಫೆಬ್ರುವರಿ 19, 2021 ರಿಂದ ಮುಂದಿನ ಆರು ತಿಂಗಳ ಕಾಲ ಎಲ್ಲ ರೀತಿಯ ವ್ಯವಹಾರಗಳಿಗೆ ತಡೆ ಇರಲಿದೆ. ಆದರೆ ಈ ತಡೆಯ ಅರ್ಥ ಬ್ಯಾಂಕಿನ ಲೈಸನ್ಸ್ ರದ್ದುಗೊಳಿಸಲಾಗಿದೆ ಎಂದು ಭಾವಿಸಬಾರದು ಎಂದು ಆರ್.ಬಿ.ಐ ಸ್ಪಷ್ಟಪಡಿಸಿದೆ. ನಿರ್ಬಂಧಗಳನ್ನು ಪಾಲಿಸಿ ಬ್ಯಾಂಕ್ ಎಂದಿನಂತೆ ತನ್ನ ಕೆಲಸ ಮುಂದುವರೆಸಲಿದೆ. ಈ ಆರು ತಿಂಗಳ ನಿರ್ಬಂಧ ಬಳಿಕ ಪುನಃ ಬ್ಯಾಂಕ್ ಸಮೀಕ್ಷೆ ನಡೆಸಲಾಗುವುದು. ಆದರೆ, ಕೆಲಸದ ಮೇಲಿನ ಬ್ಯಾನ್ ಹೊರತಾಗಿಯೂ ಶೇ.99 ರಷ್ಟು ಗ್ರಾಹಕರು ಆತಂಕಪಡುವ ಅವಶ್ಯಕತೆ ಇಲ್ಲ ಎಂದು RBI ಹೇಳಿದೆ.

ಇದೆ ವೇಳೆ ಗ್ರಾಹಕರಿಗೆ 'ಉಳಿತಾಯ ವಿಮಾ ಹಾಗೂ ಸಾಲ ಗ್ಯಾರಂಟಿ ನಿಗಮ'ದ ವತಿಯಿಂದ ಉಳಿತಾಯದ ಮೇಲೆ ಸಿಗುವ ವಿಮಾ ಲಾಭ ನೀಡಲಾಗುವುದು. ಈ ವಿಮೆಯ ಅಡಿ ಬ್ಯಾಂಕ್ ನಲ್ಲಿ ಗ್ರಾಹಕರು ಮಾಡಿರುವ ಉಳಿತಾಯದ ಮೇಲೆ 5 ಲಕ್ಷ ರೂ.ವಿಮಾ ಕವರೇಜ್ ಸಿಗಲಿದೆ.

The Reserve Bank of India (RBI) has imposed a withdrawal cap of Rs 1,000 on customers of the Deccan Urban Co-operative Bank and has barred the lender from granting new loans or accepting deposits due to its liquidity position.